ಶ್ರೀನಿವಾಸಪುರ:ತಾಲೂಕಿನ ಯದರೂರು ಬಳಿ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡಲು ಸರ್ಕಾರದ ಉದ್ದೇಶವಾಗಿದ್ದು ಕೈಗಾರಿಕಾ ಅಭಿವೃದ್ಧಿ ಮಂಡಳಿ Karnataka Industrial Areas Development Board (KIADB) ವತಿಯಿಂದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ವಿಚಾರದಲ್ಲಿ ರೈತರಿಗೆ ನೊಟೀಸ್ ಸಹ ನೀಡಲಾಗಿದೆ, ರೈತರಿಂದ ಭೂ ಸ್ವಾಧೀನ ಪ್ರಕ್ರಿಯೆಗೆ ವಿರೋಧ ವ್ಯಕ್ತವಾಗಿತ್ತು, ರೈತರ ಅಭಿಪ್ರಾಯ ಸಂಗ್ರಹ ಸಂದರ್ಭದಲ್ಲಿ ಕೆಲ ರೈತರು,ಕೆಐಎಡಿಬಿ ನಿಲವುಗಳನ್ನು ವಿರೋಧಿಸುತ್ತ ಬಂದಿದ್ದು,ಇಂದು ಶುಕ್ರವಾರ ರೈತರ ಅಭಿಪ್ರಾಯ ಸಂಗ್ರಹಕ್ಕೆ ಕೈಗಾರಿಕಾ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಬಂದಿದ್ದರು ಇದೇ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ ಮಾಜಿ ಸ್ಪೀಕರ್ ರಮೇಶಕುಮಾರ್ ರೈತರನ್ನು ಭೇಟಿಯಾದರು ಶಾಮಿಯಾನದ ಕೆಳಗೆ ರೈತರನ್ನು ಕೂರಿಸಿಕೊಂಡು ಅಭಿಪ್ರಾಯಗಳನ್ನು ಪಡೆದು ನಂತರ ಮಾತನಾಡಿದ ಅವರು ರೈತರ ಭೂಮಿಯನ್ನು ಬಲವಂತವಾಗಿ ಸ್ವಾಧೀನ ಪಡಿಸಿಕೊಳ್ಳದಂತೆ ಕೆಐಎಡಿಬಿ ಅಧಿಕಾರಿಗಳಿಗೆ ಹೇಳಿದರು. ರೈತರಿಗೆ ಭೂಮಿಯೊಂದಿಗೆ ಭಾವನಾತ್ಮಕ ಸಂಬಂದ ಇದೆಅತುರಾತುರವಾಗಿ ಫಲವತ್ತಾದ ಕೃಷಿ ಭೂಮಿಯ ಸ್ವಾಧೀನ ಮಾಡಿಕೊಂಡರೆ ರೈತರು ಬಿದಿಪಾಲಾಗುತ್ತಾರೆ ಸಣ್ಣ ಹಿಡುವಳಿದಾರರು ಇದ್ದಾರೆ ಅವರಿಗೆ ಭೂಮಿಯೊಂದಿಗೆ ಭಾವನಾತ್ಮಕ ಸಂಬಂದ ಇರುತ್ತದೆ, ಅವರ ಒಪ್ಪಿಗೆ ಇಲ್ಲದೆ ಜಮೀನು…
Author: Srinivas_Murthy
ಶ್ರೀನಿವಾಸಪುರ:ಸಾಮಜಿಕ ಜಾಲತಾಣಗಳಲ್ಲಿ ಲವ್ ಪ್ರಕರಣಗಳು ಇತ್ತಿಚಿಗೆ ಹೆಚ್ಚಾಗುತ್ತಿದ್ದು ವಂಚನೆಗೆ ಒಳಗಾಗುತ್ತಿರುವ ಸಂಖ್ಯೆ ಏರುತ್ತಿದೆ ಅಂತಹ instagram ಲವ್ ವಂಚನೆಯಲ್ಲಿ ಶ್ರೀನಿವಾಸಪುರದ ಯುವಕನೊರ್ವ ಮೋಸದ ಬಲೆಗೆ ಸಿಲುಕಿ ಹಣ ಪ್ರೀತಿ ಕಳೆದುಕೊಂಡಿದ್ದಾನೆ.ಮಾವಿನೂರು ಶ್ರೀನಿವಾಸಪುರದ ದ್ವಾರಸಂದ್ರ ಗ್ರಾಮದ ಯುವಕನಿಗೆ instagram ಮೂಲಕ ಕಾಫಿನಾಡಿನ ಹುಡುಗಿಯ ಮೋಹದ ಬಲೆಗೆ ಬಿದಿದ್ದಾನೆ ಪ್ರೀತಿ ಪ್ರೇಮದ ಮಾತು ಸಲ್ಲಾಪ ಆಗಿದೆ ದಿನಗಟ್ಟಲೆ ಚಾಟಿಂಗ್ ಮಾತು ಮಂಥನ ನಡೆದಿದೆ ಹುಡುಗಿ ಕೇಳಿದ ಮೇಲೆ ಯಾವ ಹುಡುಗ ತಾನೆ ಹಣ ಕೊಡದೆ ಇರ್ತಾನೆ ಹಣವನ್ನು ಕೊಟ್ಟಿದ್ದಾನೆ ನಂಬಿಕೆ ಪ್ರೀತಿ ಜಾಸ್ತಿಯಾಗಿ ಮದುವೆಯಾಗಲೂ ನಿರ್ಧರಿಸಿದ್ದಾರೆ,ಮುಂದೆ ಮುಖಾಮುಖಿ ಭೇಟಿ ಅಗಲು ಯುವಕನಿಕೆ ಕಾತುರ ಹೆಚ್ಚಾಗಿದೆ ಅದಕ್ಕೆ ಹುಡಗಿ ಅವಕಾಶ ನೀಡದೆ ಸಬೂಬು ಹೇಳುತ್ತ ಮುಂದೂಡತ್ತ ಬಂದಿದ್ದಾಳೆ ಇದನ್ನು ವಿರೋಧಿಸಿದ ಯುವಕನ ಮೊಬೈಲ್ ನಂ ಬ್ಲಾಕ್ ಮಾಡಿದ್ದಾಳೆ,ಕಂಗಲಾದ ಯುವಕ ಹುಡಗಿಯನ್ನು ಹುಡುಕುತ್ತ ಕಾಫಿನಾಡು ಚಿಕ್ಕಮಂಗಳೂರು ಜಿಲ್ಲೆಯ ಮೂಡುಗೆರೆಯ ಅಕೆಯ ಗ್ರಾಮಕ್ಕೆ ಹೋಗಿದ್ದಾನೆ ಅಲ್ಲಿ ಆಕೆಯ ಪರಿಸ್ಥಿತಿ ನೋಡಿ ಕಂಗಾಲಾಗಿ ಬೆಚ್ಚಿಬಿದ್ದಿದ್ದಾನೆ ಹುಡಗಿ ಎಂದು ನಂಬಿ ಹೋದ…
ಶ್ರೀನಿವಾಸಪುರ:ಊರೊಳಗೆ ಹಾದು ಹೋಗಿರುವ ಹೈವೆ ರಸ್ತೆಯಾದ ರಾಜಾಜಿರಸ್ತೆ ಸಂಪೂರ್ಣವಾಗಿ ಹಾಳಾಗಿದೆ ರೀಪೇರಿ ನೆಪದಲ್ಲಿ ರಸ್ತೆಯಲ್ಲಿ ಡಾಂಬರಿನ ಪ್ಯಾಚ್ ಹಾಕಿದ್ದು ರಸ್ತೆ ಸಮತಟ್ಟು ಇಲ್ಲದೆ ಎಗ್ಗಾ-ದಿಗ್ಗ ಆಗಿದೆ ರಸ್ತೆಯ ಎರಡೂ ಬದಿ ಇರುವ ಚರಂಡಿಗಳು ಒಡೆದು ಹೋಗಿವೆ,ಹಲವು ವರ್ಷಗಳಿಂದಲೂ ಈ ಸಮಸ್ಯೆ ಇದ್ದರು,ರಸ್ತೆ ಅಭಿವೃದ್ಧಿ ಮಾಡುವ ಬಗ್ಗೆ The National Highways Authority of India (NHAI) ಹೈವೆ ಪ್ರಾಧಿಕಾರ ಮುಂದಾಗಿಲ್ಲ,ಸಣ್ಣ ಪ್ರಮಾಣದಲ್ಲಿ ಮಳೆಯಾದರೂ ಚರಂಡಿ ನೀರು ರಸ್ತೆ ಮೇಲೆ ಹರಿದು ನೇರವಾಗಿ ಮನೆಗಳಿಗೆ ನುಗ್ಗುತ್ತದೆ,ರಸ್ತೆಯಲ್ಲಿ ಎದರು-ಬದರು ವಾಹನಗಳು ಬಂದಾಗ ಪಾದಚಾರಿಗಳು ಹಾಗು ದ್ವಿಚಕ್ರ ವಾಹನ ಸವಾರರ ಪಾಡು ಹೇಳತೀರದು ಯಾಮಾರಿದರೆ ಎಲ್ಲಿ ಚರಂಡಿಗೆ ಬಿಳುತ್ತೆವೊ ಎಂಬ ಆತಂಕ ಇದು ಇಲ್ಲಿನ ನಿವಾಸಿಗರ ಪಾಡು ಎನ್ನುತ್ತಾರೆ ಇಮದಾಪಾಷ.ಮೂರು ರಾಜ್ಯಗಳ ಸಂಪರ್ಕದ ಹೆದ್ದಾರಿ.ಶ್ರೀನಿವಾಸಪುರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ National highways 69 ಹಿಂದೆ ಇದನ್ನು ರಾಷ್ಟ್ರೀಯ ಹೆದ್ದಾರಿ NH 234 ಎಂದು ಕರೆಯುತ್ತಿದ್ದರು.ಆದಕ್ಕೂ ಮುಂಚಿತವಾಗಿ ಇದು ಮುಳಬಾಗಿಲು-ಮೂಡಗೆರೆ ರಾಜ್ಯ ಹೆದ್ದಾರಿ ಆಗಿತ್ತು ತಮಿಳುನಾಡು-ಕರ್ನಾಟಕ ಸಂಪರ್ಕದ…
ಶ್ರೀನಿವಾಸಪುರ:ಕೆ ಎಸ್ ಆರ್ ಟಿ ಸಿ ಉದ್ಯೋಗಿ ಎಂ.ಡಿ.ಬಾಬಾಜಾನ್(53) ಇಂದು ಮುಂಜಾನೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.ಶ್ರೀನಿವಾಸಪುರ ಘಟಕದಲ್ಲಿ ಚಾಲಕನಾಗಿದ್ದ ಅವರು ಅಪಘಾತದಲ್ಲಿ ಕಾಲುಗಳಿಗೆ ತೀವ್ರಗಾಯವಾದ ಹಿನ್ನಲೆಯಲ್ಲಿ ಕಚೇರಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಅವರು 26ವರ್ಷಗಳಿಂದ ರಾಜ್ಯಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.ಮೂಲತಃ ತಾಲೂಕಿನ ಮುತ್ತಕಪಲ್ಲಿ ಗ್ರಾಮದವರಾಗಿದ್ದು ಶ್ರೀನಿವಾಸಪುರ ಪಟ್ಟಣದಲ್ಲಿ ಕುಟುಂಬ ಸಮೇತರಾಗಿ ವಾಸವಾಗಿದ್ದರು, ಸದಾ ಹಸನ್ಮುಖಿಯಾಗಿ ಸಮಾಜದಲ್ಲಿ ಎಲ್ಲರೊಂದಿಗೂ ಸೌಹಾರ್ದತೆಯಿಂದ ಬೆರೆಯುತ್ತಿದ್ದರು ಎಂದು ಸ್ನೇಹಿತರು ಹೇಳುತ್ತಾರೆ.ಮೃತ ಬಾಬಾಜಾನ್ ಪತ್ನಿ ಒರ್ವಪುತ್ರ ಒರ್ವಪುತ್ರಿ ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.ಸಾರಿಗೆ ಸಂಸ್ಥೆ ವತಿಯಿಂದ ಗೌರವಮೃತ ಬಾಬಾಜಾನ್ ಅವರಿಗೆ ರಾಜ್ಯ ಸಾರಿಗೆ ಸಂಸ್ಥೆ ವತಿಯಿಂದ ಗೌರವ ಸಲ್ಲಿಸಲಾಯಿತು ಸಾರಿಗೆ ಸಂಸ್ಥೆ ಶ್ರೀನಿವಾಸಪುರ ಘಟಕದ ವ್ಯವಸ್ಥಾಪಕ ವೆಂಕಟೇಶ್ ಹಾಗು ಸಂಸ್ಥೆ ಕಾರ್ಮಿಕ ಕಲ್ಯಾಣಾಧಿಕಾರಿ ನಾಗರಾಜ್ ಅವರು ಮುತ್ತಕಪಲ್ಲಿಗೆ ಭೇಟಿಕೊಟ್ಟು ಶ್ರದ್ಧಾಂಜಲಿ ಸಲ್ಲಿಸಿ ಕಾರ್ಮಿಕ ಕಲ್ಯಾಣ ನಿಧಿಯನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಿರುತ್ತಾರೆ.ಇಲಾಖೆ ಉದ್ಯೋಗಿಗಳು ಮುನಿರೆಡ್ಡಿ,ರೋಣೂರುಮಂಜು,ಸತೀಶ್,ನಾರಯಣಸ್ವಾಮಿ ಭೇಟಿಕೊಟ್ಟಿದ್ದರು.
ಸಿನಿ ನ್ಯೂಜ್:ತೆಲುಗು ಚಲನಚಿತ್ರರಂಗದ ಅಪ್ರತಿಮ ಪ್ರತಿಭೆಯ ವಿಲಕ್ಷಣ ನಟ ಕೋಟ ಶ್ರೀನಿವಾಸ ರಾವ್ ಇನ್ನಿಲ್ಲ. 83 ನೇ ವಯಸ್ಸಿನಲ್ಲಿ, ಅವರು ಜುಲೈ 13, 2025 ರ ಮುಂಜಾನೆ ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಇತ್ತಿಚಿಗೆ ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಸಾವಿನ ಸುದ್ದಿ ತೆಲುಗು ಚಿತ್ರಪರಿಶ್ರಮ ಹಾಗು ಸಿನಿಮಾ ಪ್ರೇಕ್ಷಕರನ್ನು ತೀವ್ರ ದುಃಖದಲ್ಲಿ ಮುಳುಗಿಸಿದೆ. ಚಲನಚಿತ್ರ ಪ್ರಯಾಣಕನ್ನಡ ಸೇರಿದಂತೆ ವಿವಿಧ ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಕೋಟ ಶ್ರೀನಿವಾಸರಾವ್ ತೆಲುಗು,ತಮಿಳು ಮತ್ತು ಹಿಂದಿ ಸೇರಿದಂತೆ ಭಾರತೀಯ ಭಾಷೆಯ 750 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ತಮ್ಮ ವಿಶಿಷ್ಟ ನಟನೆಯೊಂದಿಗೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. 1997 ರಲ್ಲಿ ಮಾಲಾಶ್ರಿ ಅಭಿನಯದ ‘ಲೇಡಿ ಕಮಿಷನರ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು 2023 ರಲ್ಲಿ ಬಿಡುಗಡೆಯಾದ ‘ಕಬ್ಬಾ’ ಅವರ ಕೊನೆಯ ಕನ್ನಡ ಚಿತ್ರವಾಗಿದೆ.2003 ರಲ್ಲಿ ‘ಸಾಮಿ’ ಚಿತ್ರದ ಮೂಲಕ ತಮಿಳು ಸಿನಿಮಾ ರಂಗ ಪ್ರವೇಶಿಸಿ ಅಲ್ಲಿಯೂ ಉತ್ತಮ ಮನ್ನಣೆ ಗಳಿಸಿದರು.…
ಶ್ರೀನಿವಾಸಪುರ:ಶ್ರೀನಿವಾಸಪುರದಲ್ಲಿ ಜನರೊಂದಿಗೆ ಜನತಾದಳ ಪಕ್ಷ ಸಂಘಟನೆ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಶಾಸಕ ವೆಂಕಟಶಿವಾರೆಡ್ಡಿ ಮಾತನಾಡಿ ತಮ್ಮ ರಾಜಕೀಯದ ಮುಂದಿನ ಹಾದಿ ಕುರಿತು ಮಾತನಾಡಿ ನನಗೆ ಈಗ 77 ವರ್ಷ ಆದರೂ ನಾನು ಆರೋಗ್ಯವಾಗಿದ್ದಿನಿ ನನ್ನ ಕಂಠದಲ್ಲಿ ಉಸಿರಿರುವ ತನಕ ನಾನು ರಾಜಕೀಯದಲ್ಲಿ RETIREMENT ಪಡೆಯುವುದಿಲ್ಲವೆಂದು ಹೇಳಿದರು.ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ನನಗೆ ನೋವು ಕಾಡುತ್ತಿದೆ ಕ್ಷೇತ್ರದಲ್ಲಿ ಸೂರು ರಹಿತರಿಗೆ ಮನೆ ಕೊಡಲು ಸಾಧ್ಯವಾಗಿಲ್ಲ ರಾಜ್ಯದಲ್ಲಿ ಇದುವರಿಗೂ ನಾವು ನೋಡಿರದ ದರಿದ್ರ ಸರ್ಕಾರ ಆಡಳಿತದಲ್ಲಿದೆ ಎಂದು ಆಕ್ರೋಶ ಭರಿತರಾಗಿ ನುಡಿದರು.ನಮ್ಮ ತಾಲೂಕಿನಲ್ಲಿ ಮಂಜೂರಾಗಿರುವ ನಾಲ್ಕು ಪ್ರಮುಖ ರಸ್ತೆಗಳ ಕಾರ್ಯಕ್ರಮಕ್ಕೆ ಟೆಂಡರ್ ಹಾಕುಲು ಗುತ್ತಿಗೆದಾರರು ಬರುತ್ತಿಲ್ಲ ಸರ್ಕಾರ ಹಣಕಾಸು ದುಸ್ಥಿತಿ ಕಾರಣದಿಂದ ಯಾರು ಬರುತ್ತಿಲ್ಲ ಹಾಗೆ ಯಾವುದೇ ಅನುದಾನ ಬರುತ್ತಿಲ್ಲ,ಬಂದಿರುವ ಅನುದಾನದಲ್ಲಿ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಗಳ ಕಾಲೋನಿಗಳ ಮೂಲಭೂತ ಅಭಿವೃದ್ದಿಗೆ ನೀಡಿರುತ್ತೇನೆ ಕೆಲ ದೇವಾಲಯಗಳ ಅಭಿವೃದ್ಧಿಗೂ ಹಣ ತಂದಿರುವುದಾಗಿ ಹೇಳಿದ ಅವರು, ಕ್ಷೇತ್ರದ ಮಾಜಿ ಶಾಸಕರ ಮಾತು ಕೇಳಿ ವಿಧಾನ…
ಚಿಂತಾಮಣಿ ಮೂಲಕ ಬಂದಂತ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ತಾಲೂಕಿನ ಕಲ್ಲೂರು ಗ್ರಾಮದ ಬಳಿ ಜೆಡಿಎಸ್ ಕಾರ್ಯಕರ್ತರು ಬೃಹತ್ ಗಾತ್ರದ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತಿಸಿದರು ಅಲ್ಲಿಂದ ಅವರನ್ನು ಬೈಕ್ ರ್‍ಯಾಲಿ ಮೂಲಕ ಪಟ್ಟಣದ ಚಿಂತಾಮಣಿ ವೃತ್ತ ಮುಳಬಾಗಿಲುವೃತ್ತ ಎಂ.ಜಿರಸ್ತೆ ಮೂಲಕ ಕಾರ್ಯಕರ್ತರ ಸಭೆ ನಡೆದ ಪುಂಗನೂರು ಕ್ರಾಸ್ ಸೀತಾರಾಮ ಕಲ್ಯಾಣಮಂಟಪಕ್ಕೆ ಕರೆತರಲಾಯಿತು. ಶ್ರೀನಿವಾಸಪುರ:ಅನುದಾನದ ಹೆಸರಲ್ಲಿ ಜೆಡಿಎಸ್ ಶಾಸಕರನ್ನು ಸೇಳೆಯಲು ರಾಜ್ಯದ ಉಪಮುಖ್ಯಮಂತ್ರಿಗಳು ನಡೆಸಿದ ಸಭೆಯಲ್ಲಿ ಅನುಧಾನ ಬಿಟ್ಟು ರಾಜಕೀಯ ಮಾತನಾಡುತ್ತ ಆಮಿಷ ಒಡ್ಡುತ್ತ ಶಾಸಕರಿಗೆ ಗಾಳ ಹಾಕುವ ಪ್ರಯತ್ನ ಮಾಡಿದ್ದು ವಿಫಲವಾಗಿದೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ದೂರಿದರು.ಅವರು ಶ್ರೀನಿವಾಸಪುರದಲ್ಲಿ ಶುಕ್ರವಾರ ಜನರೊಂದಿಗೆ ಜನತಾದಳ ಸದಸ್ಯತ್ವ ಅಭಿಯಾನದ ಕಾರ್ಯಕ್ರಮದ ಅಂಗವಾಗಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿರು.ಕಾಂಗ್ರೆಸ್ ಶಾಸಕರಿಗೆ ಅನುದಾನ ಕೊಡುವಲ್ಲಿ ವಿಫಲರಾಗಿರುವ ರಾಜ್ಯ ಸರ್ಕಾರ ಅವರಿಂದಲೆ ನಿಂದನೆಗೆ ಒಳಗಾಗುತ್ತಿದ್ದಾರೆ ಇನ್ನೂ ಜೆಡಿಎಸ್ ಶಾಸಕರಿಗೆ ಎಲ್ಲಿಂದ ಅನುದಾನ ತಂದುಕೊಡ್ತಾರೆ ಎಂದು ವ್ಯಂಗ್ಯವಾಡಿದರು.ಕುಮಾರಣ್ಣ ಸಿಎಂ ಆಗಿದ್ದಾಗ…
ನ್ಯೂಜ್ ಡೆಸ್ಕ್:ವಿಭಜಿತ ಕೋಲಾರ ಜಿಲ್ಲೆಯ ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಮನೆ ಹಾಗೂ ಕಚೇರಿಯ ಮೇಲೆ ಗುರುವಾರ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಶಾಸಕರಿಗೆ ಸಂಬಂಧಿಸಿದ ಐದು ಕಡೆಗಳಲ್ಲಿ ಇ.ಡಿ ದಾಳಿ ನಡೆದಿದ್ದು ವಿದೇಶದಲ್ಲಿ ಹಣ ಹೂಡಿಕೆ ವಿಚಾರವಾಗಿ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ ದಾಳಿಯ ವೇಳೆ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು ದಾಳಿಗೆ ನಿಖರವಾದ ಮಾಹಿತಿ ಹೊರಬರಬೇಕಿದೆ.ವಿದೇಶಗಳಲ್ಲಿನ ಬ್ಯಾಂಕ್ ಖಾತೆಗಳು, ವಿದೇಶಿ ವಹಿವಾಟುಗಳಲ್ಲಿನ ಹೂಡಿಕೆಗಳು ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ದಾಳಿ ನಡೆದಿರಬಹುದು ಎನ್ನಲಾಗುತ್ತಿದೆ.ಸುಬ್ಬಾರೆಡ್ಡಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದು, ಹಾಂಗ್ ಕಾಂಗ್, ಮಲೇಷ್ಯಾ ಮತ್ತು ಜರ್ಮನಿಯಾದ್ಯಂತ ಬ್ಯಾಂಕ್‌ಗಳಲ್ಲಿ ಕಪ್ಪು ಹಣ ಹೊಂದಿದ್ದಾರೆ, ಸರ್ಕಾರಕ್ಕೆ ದಾಖಲೆಗಳನ್ನು ತಿಳಿಸದೆ ವಾಹನಗಳು ಮತ್ತು ಆಸ್ತಿಗಳನ್ನು ಖರೀದಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ. ಎನ್ನಲಾಗುತ್ತಿದೆ.
ನ್ಯೂಜ್ ಡೆಸ್ಕ್: ತಿರುಪತಿಯ ವೆಂಕಟೇಶ್ವರಸ್ವಾಮಿ ದೇವಸ್ಥಾನದ ಆಡಳಿತದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಟಿಟಿಡಿಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಯನ್ನು ಅಮಾನತ್ತು ಮಾಡಲಾಗಿದೆ.ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಎ.ರಾಜಶೇಖರ್ ಬಾಬು ತಮ್ಮ ಅವರು ತಮ್ಮ ಹುಟ್ಟೂರು ತಿರುಪತಿ ಜಿಲ್ಲೆಯ ಪುತ್ತೂರಿನಲ್ಲಿ ಪ್ರತಿ ಭಾನುವಾರ ಚರ್ಚ್ ನ ಪ್ರಾರ್ಥನೆಗಳಲ್ಲಿ ಭಾಗವಹಿಸುತ್ತಿದ್ದರು ಎಂಬ ಆರೋಪವಿದೆ. ಟಿಟಿಡಿ ಹಿಂದೂ ಧಾರ್ಮಿಕ ಸಂಸ್ಥೆಯಾಗಿರುವುದರಿಂದ, ಇದು ಉದ್ಯೋಗಿಗಳಿಗೆ ನಿಗದಿಪಡಿಸಿರುವ ನೀತಿ ಸಂಹಿತೆಯ(Violation Of Hindu Code) ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದೆ.ಈ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನ ಆಧಾರದಲ್ಲಿ ತಿರುಮಲ ತಿರುಪತಿ ದೇವಸ್ಥಾನದ (TTD) ಜಾಗ್ರತ ದಳದ ಅಧಿಕಾರಿಗಳು AEOಎ. ರಾಜಶೇಖರ್ ಬಾಬು ಅವರ ಚಲನವಲನದ ಮೇಲೆ ನಿಗಾ ವಹಿಸಿ ವಿಚಾರಣೆ ನಡೆಸಿ ಟಿಟಿಡಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಈ ಕ್ರಮವು ಟಿಟಿಡಿ ಜಾಗೃತ ಇಲಾಖೆಯ ವರದಿಯ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ನೂತನ ಆಡಳಿತ ಮಂಡಳಿ ರಚನೆಯಾದ ಮೇಲೆ ಅನ್ಯಧರ್ಮ ಪಾಲನೆ ಮಾಡುತ್ತಿದ್ದ ಹಲವು ಸಿಬ್ಬಂದಿಗೆ ಬೇರೆ…
ಶ್ರೀನಿವಾಸಪುರ:ಮನೆಗೆ ಬಂದು ಹೋಗುತ್ತಿದ್ದ ಗಂಡನ ಸ್ನೇಹಿತನೊಂದಿಗೆ ಸಲುಗೆ ಏರ್ಪಟ್ಟು ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಸುತ್ತಾಡಿ ಗಂಡನಿಂದ ದೂರವಾಗಿದ್ದಾಳೆ ನಂತರ ಪ್ರಿಯಕರನಿಗೂ ಸಾಕಾದ ಮೇಲೆ ಮಹಿಳೆಯೊಬ್ಬಳು ಪ್ರಿಯಕರ ಮೋಸ ಮಾಡಿದ್ದಾನೆ ಎಂದು ಪೊಲೀಸ್ ಠಾಣೆಗೆ ಮೆಟ್ಟಿಲೇರಿ ನ್ಯಾಯಕ್ಕಾಗಿ ಮೊರೆ ಹೋಗಿ ಪ್ರಿಯಕರನ ಮನೆ ಮುಂದೆ ಮಹಿಳೆ ಧರಣಿ ಕುಳಿತ ಘಟನೆ ಪಟ್ಟಣದ ವಲ್ಲಭಾಯ್ ರಸ್ತೆಯಲ್ಲಿ ನಡೆದಿದೆ.ಈ ಸಂಬಂದ ಮಹಿಳೆ ದೂರಿನನ್ವಯ ಅಮರ್ ಎಂಬಾತನನ್ನು ಶ್ರೀನಿವಾಸಪುರ ಪೋಲಿಸರು ವಶಕ್ಕೆ ಪಡೆದಿದ್ದಾರೆ.ತಿಳಿದವರು ಹೇಳಿದಂತೆಸುಖವಾಗಿ ಸಂಸಾರ ಮಾಡಿಕೊಂಡಿದ್ದ ಮಹಿಳೆ ಗಂಡನ ಸ್ನೇಹಿತನ ಸಹವಾಸಕ್ಕೆ ಬಿದ್ದು ಗಂಡನನ್ನು ಕಡಗಣಿಸಿ ಪ್ರಿಯಕರನೊಂದಿಗೆ ಸುತ್ತಾಡಿಕೊಂಡಿದ್ದಳು ಕಾಲ ಕಳೆದಂತೆ ಪ್ರಿಯಕರನಿಗೆ ಮಹಿಳೆ ಮೇಲಿನ ಮೋಹ ಕಡಿಮೆಯಾಗಿ ಕೊನೆಗೆ ಮಹಿಳೆಯನ್ನು ದೂರಮಾಡುವ ಪ್ರಯತ್ನಮಾಡಿದ್ದಾನೆ ಇದರ ಅರಿವು ಮಹಿಳೆಗೆ ಬರುವಷ್ಟರಲ್ಲಿ ಆಕೆ ಆರು ತಿಂಗಳ ಬಸುರಿಯಾಗಿದ್ದಾಳೆ ಮುಂದೆ ತುರ್ತಾಗಿ ನಿರ್ಧಾರ ಮಾಡುವ ಪ್ರಯತ್ನದಲ್ಲಿ ಹಳೆ ಗಂಡನನ್ನು ಬಿಟ್ಟಿದ್ದೀನಿ ಈಗ ನನ್ನ ಮದುವೆ ಆಗುವಂತೆ ಪ್ರಿಯಕರನನ್ನು ಒತ್ತಾಯಿಸಿದ್ದಾಳೆ ಮದುವೆ ವಿಚಾರ ಪ್ರಸ್ತಾವನೆ ಆಗುತ್ತಿದ್ದಂತೆ ಆಕೆಯೊಂದಿಗೆ ಪ್ರಿಯಕರ ಬಹು…


