ಶ್ರೀನಿವಾಸಪುರ:ಶ್ರೀನಿವಾಸಪುರದಲ್ಲಿ ಜನರೊಂದಿಗೆ ಜನತಾದಳ ಪಕ್ಷ ಸಂಘಟನೆ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಶಾಸಕ ವೆಂಕಟಶಿವಾರೆಡ್ಡಿ ಮಾತನಾಡಿ ತಮ್ಮ ರಾಜಕೀಯದ ಮುಂದಿನ ಹಾದಿ ಕುರಿತು ಮಾತನಾಡಿ ನನಗೆ ಈಗ 77 ವರ್ಷ ಆದರೂ ನಾನು ಆರೋಗ್ಯವಾಗಿದ್ದಿನಿ ನನ್ನ ಕಂಠದಲ್ಲಿ ಉಸಿರಿರುವ ತನಕ ನಾನು ರಾಜಕೀಯದಲ್ಲಿ RETIREMENT ಪಡೆಯುವುದಿಲ್ಲವೆಂದು ಹೇಳಿದರು.
ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ನನಗೆ ನೋವು ಕಾಡುತ್ತಿದೆ ಕ್ಷೇತ್ರದಲ್ಲಿ ಸೂರು ರಹಿತರಿಗೆ ಮನೆ ಕೊಡಲು ಸಾಧ್ಯವಾಗಿಲ್ಲ ರಾಜ್ಯದಲ್ಲಿ ಇದುವರಿಗೂ ನಾವು ನೋಡಿರದ ದರಿದ್ರ ಸರ್ಕಾರ ಆಡಳಿತದಲ್ಲಿದೆ ಎಂದು ಆಕ್ರೋಶ ಭರಿತರಾಗಿ ನುಡಿದರು.ನಮ್ಮ ತಾಲೂಕಿನಲ್ಲಿ ಮಂಜೂರಾಗಿರುವ ನಾಲ್ಕು ಪ್ರಮುಖ ರಸ್ತೆಗಳ ಕಾರ್ಯಕ್ರಮಕ್ಕೆ ಟೆಂಡರ್ ಹಾಕುಲು ಗುತ್ತಿಗೆದಾರರು ಬರುತ್ತಿಲ್ಲ ಸರ್ಕಾರ ಹಣಕಾಸು ದುಸ್ಥಿತಿ ಕಾರಣದಿಂದ ಯಾರು ಬರುತ್ತಿಲ್ಲ ಹಾಗೆ ಯಾವುದೇ ಅನುದಾನ ಬರುತ್ತಿಲ್ಲ,ಬಂದಿರುವ ಅನುದಾನದಲ್ಲಿ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಗಳ ಕಾಲೋನಿಗಳ ಮೂಲಭೂತ ಅಭಿವೃದ್ದಿಗೆ ನೀಡಿರುತ್ತೇನೆ ಕೆಲ ದೇವಾಲಯಗಳ ಅಭಿವೃದ್ಧಿಗೂ ಹಣ ತಂದಿರುವುದಾಗಿ ಹೇಳಿದ ಅವರು, ಕ್ಷೇತ್ರದ ಮಾಜಿ ಶಾಸಕರ ಮಾತು ಕೇಳಿ ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಇಲಾಖವಾರು ಅಧಿಕಾರಿಗಳ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುವುದು,ಅನುದಾನ ಬಿಡುಗಡೆಗೆ ಅಡ್ಡಗಾಲು ಹಾಕುವುದು ಇದು ಯಾರಿಗೂ ತರವಲ್ಲ ಎಂದು ದೂರಿದ ಅವರು ನಾನು ಯಾವ ರೀತಿಯಲ್ಲೂ ಯಾರಿಗೂ ತೊಂದರೆ ಮಾಡಿದವನಲ್ಲಾ ಆದರೂ ಕ್ಷೇತ್ರದ ಅಭಿವೃದ್ಧಿಗೆ ತೊಂದರೆ ಮಾಡುತ್ತಿದ್ದಾರೆ ರಸ್ತೆಗಳ ಅನುಧಾನಕ್ಕೆ ಅಡ್ಡಿಪಡಿಸುತ್ತಿದ್ದಾರೆ ಇಲ್ಲಿನ ಯುವ ಸಮುದಾಯಕ್ಕೆ ಸ್ಥಳಿಯ ಜನರಿಗೆ ಇಲ್ಲೆ ಉದ್ಯೋಗ ಅವಕಾಳಗಳು ಸಿಗಲಿ ಎಂಬ ಉದ್ದೇಶದಿಂದ ನೆಲವಂಕಿ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಯೋಜನೆ ರೂಪಿಸಿದ್ದರೆ ಅದನ್ನೂ ತಡೆಯುವಂತ ಪ್ರಯತ್ನ ಮಾಡುತ್ತಿದ್ದಾರೆ ಎಂಬುದಾಗಿ ಇಲಾಖೆ ಮಂತ್ರಿಗಳು ಹೇಳಿದ್ದಾರೆ ಎಂದು ತೀವ್ರಧಾಟಿಯಲ್ಲಿ ಮಾಜಿ ಶಾಸಕರ ವಿರುದ್ದ ಹರಿಹಾಯ್ದರು.
ನಾವು ಸದೃಡವಾಗಿದ್ದಿವಿ
ಕ್ಷೇತ್ರದಲ್ಲಿ ಗ್ರಾಮ ಪಂಚಾಯತಿ,ತಾಲೂಕು ಪಂಚಾಯಿತಿ,ಜಿಲ್ಲಾ ಪಂಚಾಯತಿ ಸ್ಥಳಿಯ ಸಂಸ್ಥೆಗಳ ಚುನಾವಣೆಗೆ ಪಕ್ಷ ಬೂತ್ ಮಟ್ಟದಲ್ಲಿ ನಾವು ಸದೃಡವಾಗಿದೆ ಎಂದ ಅವರು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ಮಾಡಿರುವ ಕೆಲಸಗಳ ಕುರಿತಾಗಿ ಇನ್ನಷ್ಟು ಪರಣಾಮಕಾರಿಯಾಗಿ ಜನರಿಗೆ ತಲುಪಿಸಬೇಕು ಅವರ ಜನಪರ ಯೋಜನೆಗಳೆ ನಮಗೆ ಶ್ರೀರಕ್ಷೆ ಎಂದರು.
Trending
- ದ್ವೇಷ ಬೇಡ,ಎಲ್ಲರಿಗೂ ಬಾಗಿಲು ತೆರೆದಿದೆ.ಜೆಡಿಎಸ್ ಕಾರ್ಯಕರ್ತರಿಗೆ CM ಡಿಕೆಶಿ ಆಹ್ವಾನ!
- ಕರ್ನಾಟಕದಿಂದ ರಾಜ್ಯಸಭೆಗೆ ಆಂಧ್ರದ ಶರ್ಮಿಳಾ ಹೆಸರು ಪರಿಗಣನೆಗೆ!
- ಶ್ರೀನಿವಾಸಪುರ:ಹೈವೇ ರಸ್ತೆಯಲ್ಲಿ ಬಾರಿ ವಾಹನಗಳ ಅಪಾಯಕಾರಿ ಪಾರ್ಕಿಂಗ್!
- ಶ್ರೀನಿವಾಸಪುರ:ಟಾಟಾ ಇಂಡಿಕಾ ಕಾರು ಡಿಕ್ಕಿ ದ್ವಿಚಕ್ರ ವಾಹನ ಸವಾರರ ಸಾವು!
- social media ದಲ್ಲಿ ಫೇಮಸ್ ಆಯಿತು ಯುವಕನ ಗಹಗಹಿಸಿ ನಗು!
- ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ”ಬೈಕ್ ಟ್ಯಾಕ್ಸಿ”ವಿರುದ್ದ ಕ್ರಮ ಜರುಗಿಸಿ!
- ಶ್ರೀನಿವಾಸಪುರ:ಎಂ.ಜಿ.ರಸ್ತೆ ಅತಿವೇಗದ ಬೈಕ್ ಚಾಲನೆ ಅಪಘಾತ ನಾಲ್ವರಿಗೆ ಗಾಯ!
- ಅಗ್ರಿಗೋಲ್ಡ್ ಸಂತ್ರಸ್ತರಿಗೆ ಆರು ತಿಂಗಳೊಳಗೆ ನ್ಯಾಯ ಒದಗಿಸುವಂತೆ AP ಸಿಎಂ ಸೂಚನೆ!
Sunday, June 7



