ನ್ಯೂಜ್ ಡೆಸ್ಕ್:ಟಮ್ಯಾಟೊ ತುಂಬಿದ್ದ ಕಂಟೈನರ್ ಲಾರಿ ಅತಿವೇಗದ ಚಾಲನೆಯಲ್ಲಿ ಕಾರಿಗೆ ಡಿಕ್ಕಿ ಹೊಡೆದು ಕಾರಿನ ಮೇಲೆ ಬಿದ್ದಪರಿಣಾಮ ಕಾರಿನಲ್ಲಿದ್ದ ನಾಲ್ವವರು ಸ್ಥಳದಲ್ಲಿ ಸಾವನ್ನಪ್ಪಿರುವ ಧಾರುಣ ಘಟನೆ ಆಂಧ್ರ ಪ್ರದೇಶದ ಮದನಪಲ್ಲಿ-ತಿರುಪತಿ ಹೆದ್ದಾರಿಯ ಭಾಕರಪೇಟ್ ಘಾಟ್ ರಸ್ತೆಯಲ್ಲಿ ನಡೆದಿದೆ.
ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಅಪಘಾತಕ್ಕೆ ಕಾರಣವಾದ ಲಾರಿ ಟೊಮೆಟೊ ಲೋಡ್ ಮಾಡಿಕೊಂಡು ಕಲಕಡದಿಂದ ಹೋರಟು ಭಾಕರಪೇಟ್ ಘಾಟ್ ರಸ್ತೆ ತಿರುಪತಿ ಮಾರ್ಗವಾಗಿ ಚನೈಗೆ ಹೋರಟಿತ್ತು ಘಾಟ್ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಂಟೈನರ್ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೋಡೆದು ಕಾರಿನ ಮೇಲೆ ಬಿದ್ದಿದೆ. ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಂಟೈನರ್ ಚಲಾಯಿಸುತ್ತಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಿಯ ಪೊಲೀಸರ ಪ್ರಕಾರ, ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರದ ಹತ್ತಿರ ಇರುವ ಹರಿಸ್ಥಳ ಗ್ರಾಮದ ಕುಟುಂಬವೊಂದರ ಸದಸ್ಯರು ಗುರುವಾರ ತಿರುಮಲ ದರ್ಶನ ಮುಗಿಸಿ ಮಧ್ಯಾಹ್ನ ಕಾರಿನಲ್ಲಿ ಊರಿಗೆ ಹಿಂತಿರುಗುತ್ತಿದ್ದರು ಭಾಕರಪೇಟೆಯ ಘಾಟ್ ರಸ್ತೆಯಲ್ಲಿ ಬರುವಾಗ ಎದರಿಗೆ ಬರುತ್ತಿದ್ದ ಕಂಟೈನರ್ ಡಿಕ್ಕಿ ಹೋಡೆದು ಕಾರು ಚಲಾಯಿಸುತ್ತಿದ್ದ ರಮೇಶ್ ಮೂರ್ತಿ (34), ಕುಟುಂಬದ ಯಜಮಾನ ಎಚ್.ಮುನಿವೆಂಕಟರೆಡ್ಡಿ (55) ಮಗ ತೆಜಸ್ ಕುಮಾರ್(35), ಭಾವಮೈದ ಎಚ್.ಕೆ.ಮಂಜುನಾಥ (38) ಓಟ್ಟು ನಾಲ್ಕು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹರ ಸಾಹಸ ಪಟ್ಟು ಶವಗಳನ್ನು ತಗೆಯಲಾಗಿದೆ
ಅಪಘಾತ ತೀವ್ರವಾಗಿದ್ದು ಕಂಟೈನರ್ ಡಿಕ್ಕಿಯಾಗಿ ಕಾರಿನ ಮೇಲೆ ಬಿದ್ದ ಪರಿಣಾಮ ಕಂಟೈನರ್ ನಡಿ ಸಿಲುಕಿದ ಕಾರು ನಜ್ಜುಗುಜ್ಜಾಗಿದೆ ಇದರಲ್ಲಿ ಸಿಲುಕಿದ ಶವಗಳನ್ನು ಹೊರತಗೆಯಲಾಗದೆ ಪೊಲೀಸರು ಸ್ಥಳಕ್ಕಾಗಮಿಸಿ ಭಾರೀ ಕ್ರೇನ್ ಸಹಾಯದಿಂದ ಕಾರಿನಲ್ಲಿ ಸಿಲುಕಿದ್ದವರನ್ನು ಹೊರತೆಗೆದಿದ್ದಾರೆ.
ಅಪಘಾತ ಆದ ಸ್ಥಳದಲ್ಲಿ ಕ್ರೇನ್ ಜೆಸಿಬಿ ಕಾರ್ಯಗತವಾದ ಹಿನ್ನಲೆಯಲ್ಲಿ ಭಾಕರಪೇಟೆಯ ಘಾಟ್ ರಸ್ತೆಯಲ್ಲಿ ಕೀ.ಮಿ ಗಟ್ಟಲೆ ವಾಹನಗಳು ನಿಂತು ರಸ್ತೆ ಸಂಚಾರ ಪೂರ್ಣವಾಗಿ ಬಂದ್ ಆಗಿತ್ತು.
ಇದೆ ಸ್ಥಳದಲ್ಲಿ ರಾಜ್ಯ ಸಾರಿಗೆ ಬಸ್ ಅಪಘಾತ ಆಗಿದ್ದು, ಕಳೆದ ತಿಂಗಳು ಬೆಂಗಳೂರಿನಿಂದ ತಿರುಪತಿಗೆ ಹೋರಟಿದ್ದ ಕರ್ನಾಟಕ ರಾಜ್ಯಸಾರಿಗೆ ಸಂಸ್ಥೆ ಬಸ್ ಬ್ರೇಕ್ ವೈಫಲ್ಯದಿಂದ 5 ಜನರು ಗಂಭೀರವಾಗಿ ಗಾಯಗೊಂಡಿದ್ದ ಘಟನೆ ಇದೆ ಭಾಕರಪೇಟ್ ಘಾಟು ರಸ್ತೆಯಲ್ಲಿ ನಡೆದಿತ್ತು.
Breaking News
- ಕೋಲಾರದಲ್ಲಿ ವಿಜಯದಶಮಿಯಂದು RSS ಬೃಹತ್ ಶಕ್ತಿ ಪ್ರದರ್ಶನ
- ಫೋಟೋಗೆ ಅಡ್ಡ ಬಂದಿದ್ದಕ್ಕೆ ಉತ್ತರ ಭಾರತೀಯನ ದೌರ್ಜನ್ಯ ರಕ್ತ ಬರುವಂತೆ ಹಲ್ಲೆ
- ವಿಶ್ವದ ಗಗನಚುಂಬಿ ಕಟ್ಟಡದ ಎತ್ತರ 1 ಕೀ.ಮಿ!
- ಚಾಮುಂಡೇಶ್ವರಿ ಆಶಿರ್ವಾದ ನನ್ನ ಮೇಲೆ ಇದೆ ಸಿದ್ದರಾಮಯ್ಯ
- ಮದನಪಲ್ಲಿ ಜಿಲ್ಲೆ ರಚನೆ ಸದ್ಯಕ್ಕಿಲ್ಲ ಚಂದ್ರಬಾಬು
- ಶ್ರೀನಿವಾಸಪುರ ನೌಕರರ ಸಂಘದ ಮತದಾರ ಪಟ್ಟಿಯಲ್ಲಿ ಅಕ್ರಮ ಅರೋಪ!
- lover Boy ಕಳ್ಳಾಟಕ್ಕೆ ಬೆಸೆತ್ತು ಕಳ್ಳಿ ಹಾಲು ಕುಡಿದ ಯುವತಿ ಆತ್ಮಹತ್ಯೆಗೆ ಯತ್ನ!
- ಶ್ರೀನಿವಾಸಪುರ ಅಪರಿಚಿತ ವಾಹನ ಬಡಿದು ಬೈಕನಲ್ಲಿದ್ದ ತಾಯಿ-ಮಗ ಸಾವು
- ಹರಿಯಾಣದಲ್ಲಿ 200 Days ಮುಖ್ಯಮಂತ್ರಿಯಿಂದ ಬಿಜೆಪಿಗೆ ಹ್ಯಾಟ್ರಿಕ್ ಗೆಲವು!
- ಶ್ರೀನಿವಾಸಪುರ ತಾಡಿಗೋಳ್ RTO ಚೆಕ್ ಪೋಸ್ಟ್ ಲೋಕಾಯುಕ್ತ ದಾಳಿ.
Sunday, October 13