ನ್ಯೂಜ್ ಡೆಸ್ಕ್:ಕೇಂದ್ರ ಸರ್ಕಾರ ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕಚ್ಚಾ ಮತ್ತು ಸಂಸ್ಕರಿಸಿದ ಖಾದ್ಯ ತೈಲಗಳ ಮೇಲಿನ ಮೂಲ ಆಮದು import ತೆರಿಗೆಯನ್ನು 20% ರಷ್ಟು ಹೆಚ್ಚಿಸಿದೆ. ಇದರಿಂದಾಗಿ ಖಾದ್ಯ ತೈಲ ಬೆಲೆಗಳನ್ನು ಹೆಚ್ಚಿಸಿ, ಬೇಡಿಕೆ ತಗ್ಗಿಸಬಹುದು ಎಂಬ ಅಂದಾಜಿನೊಂದಿಗೆ ತಾಳೆ ಎಣ್ಣೆ, ಸೋಯಾಬಿನ್ ಮತ್ತು ಸೂರ್ಯಕಾಂತಿ ಎಣ್ಣೆಯ ಸಾಗರೋತ್ತರ (ವಿದೇಶಿ) ಖರೀದಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು ಇದರಿಂದಾಗಿ ಚಿಕಾಗೋ ಬೋರ್ಡ್ ಆಫ್ ಟ್ರೇಡ್ ಸೋಯಾ ಎಣ್ಣೆ ನಷ್ಟ ಅನುಭವಿಸಿ ಶೇ 2ರಷ್ಟು ವ್ಯಪಾರ ಕುಸಿತ ಕಂಡಿದೆ. ಕಚ್ಛಾ ತಾಳೆ ಎಣ್ಣೆ, ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆ ಮೇಲಿನ ಶೇ 20ರಷ್ಟು ಕನಿಷ್ಠ ಸೀಮಾ ಸುಂಕವನ್ನು ಏರಿಕೆ ಮಾಡಿದೆ. ಇದು ಮೂರು ಖಾದ್ಯ ತೈಲಗಳ ಮೇಲಿನ ಒಟ್ಟಾರೆ ಆಮದು ತೆರಿಗೆಯನ್ನು 5.5ರಷ್ಟು 27.5ರಷ್ಟು ಹೆಚ್ಚಿಸಲಿದೆ ಈ ಹಿನ್ನಲೆಯಲ್ಲಿ ಭಾರತದ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಹಾಗು ಸಮಾಜ ಕಲ್ಯಾಣ ಸರ್ಚಾರ್ಜ್ ಗೆ ಇದು ಒಳಪಟ್ಟಿರುತ್ತದೆ.
ಸರ್ಕಾರ ಗ್ರಾಹಕರು ಮತ್ತು ರೈತರ ಹಿತಾಸಕ್ತಿಗಳನ್ನು ಸಮತೋಲನಗೊಳಿಸುವ balancing ಮಾಡುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿದ್ದು ಇದರಿಂದ ರೈತರು ಸೋಯಾಬೀನ್ ಮತ್ತು ಎಣ್ಣೆ ಬೀಜಗಳ ಬೆಳೆಗಳಿಗೆ ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆ ಪಡೆಯುವ ಸಾಧ್ಯತೆ ಇದೆ ಎನ್ನುವ ಮಾತು ಕೇಳಿಬರುತ್ತಿದೆ.
ದೇಶಿಯ ಸೋಯಾಬೀನ್ ದರ 100 ಕೆಜಿಗೆ 4,600 ರೂ ಇದ್ದು, ಇದು ರಾಜ್ಯ ನಿಗದಿಪಡಿಸಿರುವ ಬೆಂಬಲ ಬೆಲೆ 4,892ಕ್ಕಿಂತ ಕಡಿಮೆಯಾಗಿದೆ. ಭಾರತವೂ ಶೇ 70ರಷ್ಟು ಸಸ್ಯಜನ್ಯ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದೆ.
ಇಂಡೊನೇಷ್ಯಾ, ಮಲೇಷ್ಯಾ ಮತ್ತು ಥಾಯ್ಕೆಂಡ್ನಿಂದ ತಾಳೆ ಎಣ್ಣೆಯನ್ನು ಖರೀದಿಸುತ್ತಿದೆ. ಸೋಯಾ ಮತ್ತು ಸೂರ್ಯಾಕಾಂತಿ ಎಣ್ಣೆಯನ್ನು ಅರ್ಜೆಂಟಿನಾ, ಬ್ರೆಜಿಲ್, ರಷ್ಯಾ ಮತ್ತು ಉಕ್ರೇನ್ನಿಂದ ತರಿಸಿಕೊಳ್ಳುತ್ತಿದೆ. ಭಾರತದ ಖಾದ್ಯ ತೈಲ ಶೇ 50ರಷ್ಟು ತಾಳೆ ಎಣ್ಣೆ ಆಮದು ಮಾಡಲಾಗುತ್ತಿದ್ದು, ಇದೀಗ ಸುಂಕ ಹೆಚ್ಚಳವು ಮುಂದಿನ ವಾರದಿಂದ ತಾಳೆ ಎಣ್ಣೆ ಬೆಲೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಲಾಗುತ್ತಿದೆ.
ಸುಂಕದರ ಏರಿಕೆ ಘೋಷಣೆ ಬೆನ್ನಲ್ಲೆ ಎಲ್ಲ ಬಗೆಯ ಅಡುಗೆ ಎಣ್ಣೆಗಳ ಬೆಲೆ ಲೀಟರ್ ಗೆ 15 ರಿಂದ 20 ರೂ ಏರಿಕೆಯಾಗಿದೆ ಇದು ಗ್ರಾಹಕರಿಗೆ ಹೊರೆ ಎನ್ನಬಹುದಾಗಿದ್ದು ತಾಳೆ ಎಣ್ಣೆ ₹100ರಿಂದ ₹115ಕ್ಕೆ, ಸೂರ್ಯಕಾಂತಿ ಎಣ್ಣೆ ₹115ರಿಂದ ₹130-140ಕ್ಕೆ, ಶೇಂಗಾ ಎಣ್ಣೆ ₹155ರಿಂದ ₹165ಕ್ಕೆ ಏರಿಕೆಯಾಗಿದೆ. ಪೂಜೆಗೆ ಬಳಸುವ ಎಣ್ಣೆಯನ್ನು ₹110ರಿಂದ ₹120ಕ್ಕೆ ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದಾರೆ
ನವದೆಹಲಿ: ಶೇ. 20 ರಷ್ಟು ಹೆಚ್ಚಿಸಿದೆ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



