ನ್ಯೂಜ್ ಡೆಸ್ಕ್:ಕರ್ನಾಟಕ ವಿಧಾನಸಭೆ ಚುನಾವಣಾ ವೇಳಾಪಟ್ಟಿಯ ದಿನಾಂಕ ಪ್ರಕಟವಾಗಿದೆ ಎಂದು ಸಾಮಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ಮಾಹಿತಿಯುಳ್ಳ ವೇಳಾಪಟ್ಟಿಯ ಪೋಸ್ಟರ್ ಸತ್ಯಾಸತ್ಯತೆ ಇಲ್ಲಿದೆ.
ಕರ್ನಾಟಕ ವಿಧಾನಸಭೆಗೆ ಚುನಾವಣೆ ಸಿದ್ದತೆಗಳು ನಡೆಯುತ್ತಿದೆ ವೇಳಾ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ವೇಳಾ ಪಟ್ಟಿಯೊಂದನ್ನು ಹಂಚಿಕೊಂಡಿದ್ದು ಎಲ್ಲಡೇ ವೈರಲ್ ಆಗಿದ್ದು ನಕಲಿ ವೇಳಾಪಟ್ಟಿಯಲ್ಲಿರುವಂತೆ ಚುನಾವಣೆ ಮಾರ್ಚ್ 27ರಿಂದ ನೀತಿ ಸಂಹಿತಿ ಜಾರಿ, ಏಪ್ರಿಲ್ 17, ಚುನಾವಣಾ ಅಧಿಸೂಚನೆ ಪ್ರಕಟ, ಏಪ್ರಿಲ್ 26 ರಿಂದ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುತ್ತದೆ, ಏಪ್ರಿಲ್ 27 ರಂದು ನಾಮಪತ್ರಗಳ ಪರಿಶೀಲನೆ ನಡೆಯುತ್ತದೆ,ಮೇ12 ಕ್ಕೆ ಮತದಾನ ನಡೆಯಲಿದ್ದು, ಮೇ 15ಕ್ಕೆ ಮತ ಎಣಿಕೆ ಕಾರ್ಯನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂಬ ಮಾಹಿತಿ ಇರುವಂತ ಪೋಸ್ಟ್ರ್ ಹರಿದಾಡುತ್ತಿದೆ.ನಕಲಿ ವೇಳಾಪಟ್ಟಿಯಂತೆ ಇಡಿ ಕರ್ನಾಟಕದಲ್ಲಿ ಒಂದೇ ಹಂತದ ಚುನಾವಣೆ ನಡೆಯುವ ರಿತಿ ಇದೆ.
ಆದರೆ ಅದರ ಸತ್ಯಾಸತ್ಯತೆ ಇಲ್ಲಿದೆ
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿರುವಂತ 2023ರ ಚುನಾವಣಾ ವೇಳಾ ಪಟ್ಟಿಯ ನಿಜಾಂಶ ಪರಿಶೀಲಿಸಿದರೆ ನಕಲಿ ವೇಳಾ ಪಟ್ಟಿ ಎಂದು ಹೇಳಲಾಗಿದೆ.ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಈ ಹಿಂದಿನ 2018ರ ಹಳೆಯ ವೇಳಾಪಟ್ಟಿಯನ್ನೇ ಎಡಿಟ್(EDIT) ಮಾಡಲಾಗಿದ್ದು ಫೋಟೊದಲ್ಲಿ 2018 ಇರುವ ಕಡೆ 2023 ಎಂದು ನಮೂದಿಸಿ ಎಡಿಟ್ ಮಾಡಲಾಗಿದೆ. ಎಡಿಟ್ ಮಾಡಿದ ಫೋಟೊವನ್ನೇ ಎಲ್ಲೆಡೆ ಶೇರ್ ಮಾಡಿದ ಪರಿಣಾಮ,ನಕಲಿಯನ್ನು ಅಸಲಿ ಎಂದು ನಂಬಿದ ಜನತೆ ಅದನ್ನೇ 2023 ಚುನಾವಣೆ ವೇಳಾಪಟ್ಟಿ ಎಂದು ನಂಬಿ ಜಾಲತಾಣಗಳಲ್ಲಿ ಹಂಚಿಕೊಂಡ ಪರಿಣಾಮ ಓಡಾಡುತ್ತಿದೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



