ಶ್ರೀನಿವಾಸಪುರ:ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಮಾಂಡೂಸ್ ಚಂಡಮಾರುತದ ಚಳಿ-ಮಳೆಯಲ್ಲಿ ನೆಂದು ಪರೆದಾಡಿದ ವಿದ್ಯಾರ್ಥಿಗಳು!ಇಂದು ವಾರಾಂತ್ಯ ಶನಿವಾರ ಮಾರ್ನಿಂಗ್ ಸ್ಕೂಲ್ ವಿದ್ಯಾರ್ಥಿಗಳ ಕಥೆ ಇದು,ಸುರಿಯುವ ಮಳೆಯಲ್ಲೆ ಶಾಲೆಗೆ ಬಂದ ಮಕ್ಕಳು ಮಳೆಯಲ್ಲಿ ನೆನೆದು ಮುದ್ದೆಯಾದರೂ,ಇದು ಪಟ್ಟಣ ಶಾಲೆಗಳ ಪರಿಸ್ಥಿತಿಯಾದರೆ ಗ್ರಾಮೀಣ ಭಾಗದ ಕೆಲ ಶಾಲೆಯ ಶಿಕ್ಷಕರು ಮನೆಯಲ್ಲೆ ಕುಳಿತು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗು ಸದಸ್ಯರನ್ನು ಫೊನ್ ಮೂಲಕ ಸಂಪರ್ಕಿಸಿ ಅವರ ಒಪ್ಪಿಗೆ ಪಡೆದು ಶಾಲೆಗಳಿಗೆ ರಜೆ ಘೋಷಿಸಿದರೆ, ಇನ್ನೂಳಿದಂತೆ ಶಿಕ್ಷಕರು ಮಳೆ-ಗಾಳಿ ಲೆಕ್ಕಿಸದೆ ಶಾಲೆಗೆ ಹೋಗಿ ಮಕ್ಕಳು ಬಾರದ ಹಿನ್ನಲೆಯಲ್ಲಿ ಊರಿನ ಮುಖಂಡರ,ಶಾಲಾಭಿವೃದ್ಧಿ ಸಮಿತಿಯವರ ಅಭಿಪ್ರಾಯ ಪಡೆದು ಶಾಲೆಗೆ ರಜೆ ಘೋಷಿಸಿ ಬಂದಿರುತ್ತಾರೆ.
ಭಾರತೀಯ ಹವಾಮಾನ ಇಲಾಖೆ (IMD) ಸೂಚಿಸಿರುವಂತೆ ಮಾಂಡೂಸ್ ಚಂಡಮಾರುತ ಎಫೆಕ್ಟ್ ಡಿಸೆಂಬರ್ 14 ರವರೆಗೆ ಭಾರೀ ಮಳೆಯಾಗಲಿದ್ದು ಕೋಲಾರ ಸೇರಿ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಶನಿವಾರ-ಭಾನುವಾರ ಯಲ್ಲೋ ಅಲರ್ಟ್ ಘೋಷಣೆಯಾಗಿದೆ ಇಷ್ಟೆಲ್ಲ ಮುನ್ಸೂಚನೆ ಇದ್ದರು ಕೋಲಾರ ಜಿಲ್ಲಾಡಳಿತ ಹಾಗು ಶಿಕ್ಷಣ ಇಲಾಖೆ ಅಧಿಕಾರಿಗಳು ಯಾವುದೆ ಮುಂಜಾಗ್ರತೆ ವಹಿಸಿ ಕೋಲಾರ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸದೆ ನಿರ್ಲಕ್ಷ್ಯತನ ತೋರಿದೆ ಎಂದು ಪೋಷಕರು ಆಕ್ರೊಶ ವ್ಯಕ್ತಪಡಿಸುತ್ತಾರೆ.
ಕೋಲಾರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಜವಾಬ್ದಾರಿ ರಹಿತ ವರ್ತನೆಯ ಪರಿಣಾಮ ಮಳೆ ಲೆಕ್ಕಿಸದೆ ಶಾಲ ಮಕ್ಕಳು ಶಾಲೆಗೆ ಬಂದು ಚಳಿ ಗಾಳಿಗೆ ತತ್ತರಿಸಿ ಮಳೆಯಲ್ಲಿ ನೆನೆದು ವಿದ್ಯಾರ್ಥಿಗಳು ಮನೆಗೆ ವಾಪಸ್ಸಾಗಿದ್ದಾರೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



