ನ್ಯೂಜ್ ಡೆಸ್ಕ್: ತಮಿಳುನಾಡಿನ ಮಧುರೈ ಜಿಲ್ಲೆಯ ಐತಿಹಾಸಿಕ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ವಿವಾದಿತ ಕಲ್ಲಿನ ಸ್ತಂಭದ (ದೀಪತೂಣ್ – Deepathoon) ಮೇಲೆ ಕಾರ್ತಿಕ ದೀಪ ಬೆಳಗುವ ಕುರಿತು ಸುಪ್ರೀಂ ಕೋರ್ಟ್ ನೀಡಿದ್ದ ಮಧ್ಯಂತರ ಆದೇಶದ ಇದ್ದರೂ ಬೆಟ್ಟದ ಮೇಲಿರುವ ಕಲ್ಲಿನ ಸ್ತಂಭದಲ್ಲಿ (ದೀಪತೂಣ್) ದೀಪ ಬೆಳಗಬೇಕಿತ್ತು. ಆದರೆ ಕಲ್ಲಿನ ಕಂಬದ (ದೀಪಸ್ತಂಭ) ಬದಲಿಗೆ ಎಂದಿನಂತೆ ಉಚ್ಚಿ ಪಿಳ್ಳೈಯಾರ್ ದೇವಾಲಯದ ಮೇಲ್ಭಾಗದಲ್ಲಿ ದೀಪವನ್ನು ಬೆಳಗಿಸಲಾಗಿದೆ. ಇದರಿಂದಾಗಿ ಮಧುರೈನಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ.
ಮಂಗಳವಾರ (ನವೆಂಬರ್ 24) ಬೆಟ್ಟದಲ್ಲಿ ದೀಪ ಬೆಳಗಿಸಲಾಯಿತು. ಆದರೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದ ದೀಪಸ್ತಂಭದಲ್ಲಿ ದೀಪ ಬೆಳಗಿಸದೆ, ಉಚ್ಚಿ ಪಿಳ್ಳೈಯಾರ್ ದೇವಸ್ಥಾನದ ಸ್ಥಳದಲ್ಲೇ ದೀಪ ಬೆಳಗಿಸಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.
ತಿರುಪ್ಪರಂಕುಂದ್ರಂ ಬೆಟ್ಟದಲ್ಲಿರುವ ಪುರಾತನ ದೀಪಸ್ತಂಭದಲ್ಲಿ ಕಾರ್ತಿಕ ದೀಪ ಬೆಳಗಿಸಲು ಅನುಮತಿ ಕೋರಿ ನಡೆದ ಕಾನೂನು ಹೋರಾಟದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿತ್ತು. ನವೆಂಬರ್ 24ರಂದು ದೇವಸ್ಥಾನದ ಆಡಳಿತ ಮಂಡಳಿ ನೇಮಿಸುವ ಸೀಮಿತ ತಂಡವು ದೀಪಸ್ತಂಭದಲ್ಲಿ ದೀಪ ಬೆಳಗಿಸಲು ಅನುಮತಿ ನೀಡಲಾಗಿತ್ತು. ಸಾರ್ವಜನಿಕರ ಗುಂಪು ಸೇರುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠವೂ ಆದೇಶವನ್ನು ಪಾಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಆದರೂ ಸಾಂಪ್ರದಾಯಿಕ ದೀಪಸ್ತಂಭದಲ್ಲಿ ದೀಪ ಬೆಳಗಿಸುವ ಕಾರ್ಯ ನಡೆಯದಿರುವುದು ಭಕ್ತರು ಹಾಗೂ ಹಿಂದೂ ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವ.
ತಿರುಪ್ಪರಂಕುಂದ್ರಂ ಬೆಟ್ಟವು ಸುಬ್ರಮಣೇಶ್ವರ ದೇವರ ಆರು ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಅರುಳ್ಮಿಗು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನವಾಗಿದೆ. ಇದೇ ಬೆಟ್ಟದ ತುದಿಯಲ್ಲಿ ಸಿಕಂದರ್ ಬಾದುಶಾ ದರ್ಗಾ ಕೂಡ ಇದ್ದು, ದರ್ಗಾದಿಂದ ಸುಮಾರು 50 ಮೀಟರ್ ದೂರದಲ್ಲಿ ‘ದೀಪತೂಣ್’ ಎಂಬ ಕಲ್ಲಿನ ಸ್ತಂಭವಿದೆ ಸಂಪ್ರದಾಯದಂತೆ ಅಲ್ಲಿ ಬೇಳಬೇಕಿದ್ದ ದೀಪವನ್ನು ತಮಿಳುನಾಡು ಸರ್ಕಾರ ನಿರ್ದೇಶನದಂತೆ ಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ ಮಧುರೈನಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಸುಮಾರು 6,000 ಪೊಲೀಸರನ್ನು ನಿಯೋಜಿಸಿ ಇಂದು ನವೆಂಬರ್ 24ರ ಮಂಗಳವಾರ ಸಂಜೆ ಸಾಂಪ್ರದಾಯಿಕ ಉಚ್ಚಿ ಪಿಳ್ಳಯಾರ್ ದೇವಸ್ಥಾನದ ಬಳಿ ದೀಪವನ್ನು ಬೆಳಗಲಾಗಿದ್ದು, ದೀಪತೂಣ್ ಬಳಿ ದೀಪ ಬೆಳಗಲಾಗಿಲ್ಲ ದಶಕಗಳಿಂದ ಕಾರ್ತಿಕ ಮಹಾದೀಪವನ್ನು ಬೆಟ್ಟದ ಮೇಲಿರುವ ಉಚ್ಚಿ ಪಿಳ್ಳಾಯಾರ್ ದೇವಸ್ಥಾನದ ದೀಪ ಮಂಟಪದಲ್ಲಿ ಬೆಳಗಲಾಗಿದೆ. ಇದನ್ನು ಸ್ಥಳೀಯ ಹಿಂದೂ ಸಂಘಟನೆಗಳು ಮತ್ತು ಭಕ್ತರು ವಿರೋಧಿಸಿದ್ದಾರೆ
ಈ ಬೆಳವಣಿಗೆಯಿಂದ ಬೆಟ್ಟದ ಸುತ್ತಮುತ್ತ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತಳ್ಳಾಟ ನೂಕಾಟ ವಾಗ್ವಾದ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು
ತಿರುಪ್ಪರಂಕುಂದ್ರಂ ಬೆಟ್ಟದ ದೀಪಸ್ತಂಭದಲ್ಲಿ ದೀಪ ಬೆಳಗಿಸುವ ಹಕ್ಕಿನ ವಿಚಾರ ಹಲವು ವರ್ಷಗಳಿಂದ ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಆಚರಣೆ, ಐತಿಹಾಸಿಕ ಸಂಪ್ರದಾಯ ಮತ್ತು ಕಾನೂನು ಹಕ್ಕುಗಳ ಸುತ್ತ ನಡೆಯುತ್ತಿರುವ ಈ ಸಂಘರ್ಷಕ್ಕೆ ಇನ್ನೂ ಅಂತಿಮ ತೆರೆ ಬಿದ್ದಿಲ್ಲ.
ಒಟ್ಟಿನಲ್ಲಿ, ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಗೈ ದೀಪ ಬೆಳಗಿದರೂ, ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದ ದೀಪಸ್ತಂಭದಲ್ಲಿ ದೀಪ ಬೆಳಗದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನ್ಯಾಯಾಲಯದ ಆದೇಶದ ಅನುಷ್ಠಾನದ ವಿಚಾರ ಈಗ ಮತ್ತೆ ಸಾರ್ವಜನಿಕ ಚರ್ಚೆಯ ಕೇಂದ್ರವಾಗಿದೆ.
ರಾಜಕೀಯ ಮತ್ತು ಕಾನೂನು ಪ್ರತಿಕ್ರಿಯೆ
ಸುಪ್ರೀಂ ಕೋರ್ಟ್ ಆದೇಶದ ಇದ್ದರು ದೀಪತೂಣ್ ಮೇಲೆ ದೀಪ ಬೆಳಗದಿರುವುದಕ್ಕೆ ಬಿಜೆಪಿ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿವೆ. ಈ ವೇಳೆ ಹಲವು ಪ್ರತಿಭಟನಾಕಾರರು ಮತ್ತು ರಾಜಕೀಯ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸರ್ಕಾರದ ಈ ನಡೆಯ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ (Contempt of Court) ಅರ್ಜಿ ಸಲ್ಲಿಸಲು ಭಕ್ತರು ಹಾಗೂ ಅರ್ಜಿದಾರರು ಮುಂದಾಗಿದ್ದಾರೆ.
ಮಧುರೈ ಹೊರವಲಯದಲ್ಲಿರುವ ತಿರುಪ್ಪರಂಕುಂದ್ರಂ ಬೆಟ್ಟವು ಸುಮಾರು 1,050 ಅಡಿ ಎತ್ತರವಿದೆ. ಇದರ ತಪ್ಪಲಿನಲ್ಲಿ ಶತಮಾನಗಳಿಂದ ಹಿಂದೂಗಳ ಆರಾಧನಾ ಕೇಂದ್ರವಾಗಿರುವ ಅರುಲ್ಮಿಗು ಸುಬ್ರಹ್ಮಣ್ ಸುಬ್ರಹ್ಮಣ್ಯ ಸ್ವಾಮಿ ಗುಹಾಂತರ ದೇವಾಲಯವಿದೆ. ಈ ದೇವಾಲಯ ತಮಿಳುನಾಡಿನ ಆರು ಪ್ರಖ್ಯಾತ ಮುರುಗನ್ ಪವಿತ್ರ ಕ್ಷೇತ್ರಗಳಲ್ಲಿ ಒಂದು ಎಂದು ಗುರುತಿಸಲಾಗಿದೆ.
Trending
- ತಿರುಪ್ಪರಂಕುಂದ್ರಂ ದೀಪ:ಕೋರ್ಟ್ ಮುಂದೆ ತಪ್ಪೊಪ್ಪಿಕೂಂಡು ಕ್ಷಮೆ ಯಾಚಿಸಿದ ತಮಿಳುನಾಡು ಸರ್ಕಾರ!
- Tamil Nadu:ತಿರುಪ್ಪರಂಕುಂದ್ರಂ ಕೊನೆಗೂ ಬೆಳಗಿದ ಕಾರ್ತಿಕ ದೀಪ!
- ತಾಲೂಕು ಆಡಳಿತ,ಪೊಲೀಸ್ ಇಲಾಖೆ ವಿರುದ್ಧ ಶಾಸಕ ವೆಂಕಟಶಿವಾರೆಡ್ಡಿ ಧರಣಿ!
- ಶ್ರೀನಿವಾಸಪುರ: ಸಿರಿಧ್ಯಾನ ರತ್ನಮ್ಮನಿಗೆ FKCCI ಯಶಸ್ವಿ ಮಹಿಳಾ ಉದ್ಯಮಿ ಪ್ರಶಸ್ತಿ!
- ಶ್ರೀನಿವಾಸಪುರ: ಕೀರ್ತಿ ವಿಶ್ವಮಟ್ಟದಲ್ಲಿ ಹೆಚ್ಚಿಸಿದ ಚಿನ್ನದ ಪದಕ ವಿಜೇತೆ ತಾಡಿಗೋಳ್ ದಿವ್ಯಾ!
- ಖ್ಯಾತ ಟಾಲಿವುಡ್ ನಟ ಮತ್ತೆ villain ಪಾತ್ರ ಮಾಡುತ್ತಾರ?
- ಕಚೇರಿ ನೌಕರನ ಅಂತ್ಯಕ್ರಿಯೆಗೆ ಹೆಗಲು ಕೊಟ್ಟು ಮಾನವೀಯತೆ ಮೆರೆದ ಸಾಹುಕಾರ!
- ಶ್ರೀನಿವಾಸಪುರ:ವೈದ್ಯರ ಸಂಘ ಆಯೋಜಿಸಿದ್ದ ಆರೋಗ್ಯ ಜಾಥಾಗೆ ಉತ್ತಮ ಪ್ರತಿಕ್ರೀಯೆ!
Wednesday, November 25



