ಶ್ರೀನಿವಾಸಪುರ:ಪ್ರತಿ ಊರು ಹಾಗು ಗ್ರಾಮದ ಹೆಸರಿನ ಹಿಂದೆ ಪ್ರಕೃತಿಯೊಂದಿಗಿನ ನಂಟು ಮತ್ತು ಸ್ಥಳೀಯ ಇತಿಹಾಸ ಅಡಗಿರುತ್ತದೆ ಇದಕ್ಕೆ ಹಲವಾರು ಉದಾಹರಣೆಗಳಿವೆ, ಇಂತಹದೊಂದು ಪ್ರಕೃತಿಯ ನಂಟು ಹೊಂದಿರುವ ಗ್ರಾಮ ಶ್ರೀನಿವಾಸಪುರದಲ್ಲಿ ಇರುವುದೆ ವಿಶೇಷ ತಾಲೂಕಿನ ಕಸಬಾ ಹೋಬಳಿಯಲ್ಲಿ ಹಲಸು ಕೃಷಿಯಿಂದಲೇ ಗ್ರಾಮಕ್ಕೆ ಹೆಸರು ಬಂತು ಎನ್ನುವ ಗ್ರಾಮವೆ ‘ಪನಸಮಾಕಲಹಳ್ಳಿ’ ಈ ಗ್ರಾಮ ಶ್ರೀನಿವಾಸಪುರ-ಕೋಲಾರ ರಸ್ತೆಯಲ್ಲಿ ಶ್ರೀನಿವಾಸಪುರ ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಸಣ್ಣ ಗ್ರಾಮ ‘ಪಣಸಮಾಕಲಹಳ್ಳಿ.
ಈ ಹಿಂದೆ ಗ್ರಾಮದಲ್ಲಿ ಹಲಸಿನ ಮರಗಳ ಕೃಷಿ ಇದ್ದು ಹೆರಳವಾಗಿ ಗ್ರಾಮದಲ್ಲಿ ಹಲಸಿನ ಮರಗಳನ್ನು ಬೆಳಸಲಾಗಿತ್ತು ಅದರ ಹಿನ್ನಲೆಯಲ್ಲಿ ಗ್ರಾಮವನ್ನು ಸ್ಥಳೀಯ ಆಡು ಭಾಷೆಯಲ್ಲಿ ಪನಸಮಾಕಲಪಲ್ಲಿ ಎಂದು ಗುರುತಿಸಲಾಗುತಿತ್ತು ಮುಂದೆ ಕಾಲಕ್ರಮೇಣ ಗ್ರಾಮದ ಹೆಸರು ಸರ್ಕಾರಿ ದಾಖಲೆಗಳಲ್ಲಿ ‘ಪಣಸಮಾಕಲಹಳ್ಳಿ’ ಎಂದು ನಮೂದಾಗಿದ್ದು, ಪ್ರಸ್ತುತ ‘ಪಣಸಮಾಕಲಹಳ್ಳಿ’ ಎಂದು ಬಳಕೆಯಲ್ಲಿದೆ ಎಂದು ಗ್ರಾಮದ ಹಿರಿಯರು ಹಾಗು ಸಾಹಿತಿಯೂ ಆದ ಚೌಡರೆಡ್ಡಿ ಹೇಳುತ್ತಾರೆ,
‘ಪನಸ’ ಎಂಬುದು ಸಂಸ್ಕೃತದಲ್ಲಿ ಹಲಸು ಎಂದು ಅರ್ಥ. ಆದ್ದರಿಂದ ಗ್ರಾಮದ ಹೆಸರಿನ ಮೊದಲ ಭಾಗಕ್ಕೂ ಹಲಸಿನ ಹಣ್ಣಿಗೂ ಭಾಷಿಕ ಸಂಬಂಧದ ಪರಿಣಾಮ ಗ್ರಾಮದ ಹೆಸರಿಗೂ ಇಲ್ಲಿನ ನೈಸರ್ಗಿಕ ಸಂಪತ್ತಿಗೂ ಸಂಬಂಧವಿದೆ ಎನ್ನಲಾಗುತ್ತದೆ. ಒಂದು ಕಾಲದಲ್ಲಿ ಗ್ರಾಮದಲ್ಲಿ ಸಮೃದ್ಧವಾಗಿದ್ದ ಹಲಸಿನ ಮರಗಳೇ ಊರಿನ ಹೆಸರಿನ ಮೂಲವಾಗಿರಬಹುದು ಎಂಬ ಈ ಸ್ಥಳೀಯ ಐತಿಹ್ಯ, ಗ್ರಾಮದ ನಾಮಕರಣದ ಹಿಂದಿನ ಕುತೂಹಲಕಾರಿ ಸಂಗತಿಯಾಗಿ ಇಂದಿಗೂ ಜನರ ಮಾತಿನಲ್ಲಿ ಉಳಿದಿದೆ. ಗ್ರಾಮದ ಹೆಸರಿನ ಹಿಂದಿರುವ ಈ ಐತಿಹ್ಯವು ಸ್ಥಳೀಯ ಪ್ರಕೃತಿ ಸಂಪತ್ತು ಮತ್ತು ಜನಜೀವನದ ನಡುವಿನ ನಂಟನ್ನು ನೆನಪಿಸುತ್ತದೆ.
ಹಲಸಿನ ಕಾಲ ಹೋಗಿ ಮಾವಿನ ಕಾಲ ಬಂತು
ಒಂದು ಕಾಲದಲ್ಲಿ ಸ್ವಾಭಾವಿಕವಾಗಿ ಹಲಸಿನ ಮರಗಳ ಸಮೃದ್ಧಿಯಿಂದ ಗುರುತಿಸಿಕೊಂಡಿದ್ದ ಪಣಸಮಾಕನಹಳ್ಳಿ ಗ್ರಾಮದಲ್ಲಿ ಇಂದು ಕಾಲ ಬದಲಾಗಿ, ಕೃಷಿಯ ಸ್ವರೂಪ ಬದಲಾಗಿದೆ. ಹಿಂದೆ ಹಲಸಿನ ಮರಗಳಿಂದ ಕಂಗೊಳಿಸುತ್ತಿದ್ದ ಗ್ರಾಮದಲ್ಲಿ ಈಗ ಮಾವಿನ ಮರಗಳ ತೋಟಗಳು ಎದ್ದು ನಿಂತಿವೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಕೃಷಿ ಪದ್ಧತಿಗಳು ಬದಲಾಗುವ ಮೂಲಕ ರೈತಾಪಿ ಜನರಲ್ಲಿ ಆರ್ಥಿಕ ಬದಲಾವಣೆಯನ್ನೂ ತರುತ್ತದೆ. ರೈತರು ಆರ್ಥಿಕವಾಗಿ ಲಾಭದಾಯಕವೆಂದು ಪರಿಗಣಿಸಿದ ಮಾವಿನ ಕೃಷಿಯತ್ತ ಹೆಚ್ಚು ಆಸಕ್ತಿ ತೋರಲಾರಂಭಿಸಿದ್ದಾರೆ.
ಮಾವಿನ ಬೆಳೆಗೆ ದೊರೆಯುವ ಮಾರುಕಟ್ಟೆ ಅವಕಾಶಗಳು ಹಾಗೂ ವಾಣಿಜ್ಯ ಕೃಷಿಯ ಮೂಲಕ ಆದಾಯ ಗಳಿಸುವ ಉದ್ದೇಶದಿಂದ ರೈತರು ಮಾವಿನ ತೋಟಗಳ ನಿರ್ವಹಣೆ ಮತ್ತು ಆರೈಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇದರ ಪರಿಣಾಮವಾಗಿ ಹಿಂದೆ ಹಲಸಿನ ಮರಗಳು ಬೆಳೆದಿದ್ದ ಕೆಲವು ಪ್ರದೇಶಗಳಲ್ಲಿ ಮಾವಿನ ಮರಗಳು ಸ್ಥಾನ ಪಡೆದಿವೆ. ಹೀಗಾಗಿ ಗ್ರಾಮದ ಪರಿಸರದಲ್ಲಿ ಹಲಸಿನ ಮರಗಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತ ಆಲ್ಲೊಂದು ಇಲ್ಲೊಂದು ಕಾಣಸಿಗುತ್ತದೆ. ಸಮೃದ್ಧ ಹಲಸಿನ ಕೃಷಿ ಈಗ ನೆನಪಾಗಿ ಉಳಿದಿದೆ ಎಂಬುದು ಸ್ಥಳೀಯರ ಅಭಿಪ್ರಾಯ.
Trending
- ಹಣ್ಣಿನ ಹೆಸರಿನಿಂದ ಆರಂಭವಾಗುವ ಅಪರೂಪದ ಗ್ರಾಮ ‘ಪಣಸಮಾಕಲಹಳ್ಳಿ’!
- ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಬಿಜೆಪಿಗೆ ಸೇರುತ್ತಾರ?
- ಪುಲಗೂರುಕೋಟೆಯಲ್ಲಿ ಖತರ್ನಾಕ್ ಕಳ್ಳರ ಹಾವಳಿ!
- ಮದನಪಲ್ಲಿಯಲ್ಲಿ “ಅನಂತ ಅಂಬಾನಿ” ತೆಲುಗಲ್ಲಿ ಹೇಳಿದ್ದು ಆಂಧ್ರದ ಮಗ ಅಂತ ಭಾವಿಸಿ!
- ಧಾರ್ಮಿಕ ಪ್ರವಚನಕಾರರು ಶಿಕ್ಷಕ ವೈಕುಂಠವಾಸ ರೆಡ್ಡಿ VVR ಮೇಷ್ಟ್ರು ಇನ್ನಿಲ್ಲ
- ಶ್ರೀನಿವಾಸಪುರ ಹಳೇ ಊರಿನ ನೆನಪು ಟೆಂಟ್ ಸಿನಿಮಾ,ಇಂದಿರಾ ಚಿತ್ರಮಂದಿರ!
- Philips ನಿಂದ ಮೊದಲ 5G ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆ!
- ಸಹಪಾಠಿಯಿಂದ ಚಾಕು ಇರಿತಕ್ಕೊಳಗಾಗಿ Bcom ವಿದ್ಯಾರ್ಥಿ ಸಾವು!
Friday, October 9



