ಬೆಂಗಳೂರು: ಅನೆಯೊಂದು ಬೆಂಗಳೂರಿಗೂ ಬಂದು ವ್ಯಕ್ತಿ ಮೇಲೆ ದಾಳಿ ಮಾಡಿ ಸಾವಿಗೆ ಕಾರಣವಾಗಿದೆ. ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಕೆಂಗೇರಿ ಸಮೀಪದ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಹಿಂಭಾಗದಲ್ಲಿ ಆನೆ ದಾಳಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಆನೆ ದಾಳಿಯಲ್ಲಿ ಮೃತ ಪಟ್ಟ ವ್ಯಕ್ತಿಯನ್ನು ಅಂಚೆಪಾಳ್ಯದ ನಾಗರಾಜ್ ಎಂದು ಗುರುತಿಸಲಾಗಿದ್ದು ಇಂದು ಸೋಮವಾರ ಮುಂಜಾನೆ ನಸುಕಿನಲ್ಲಿ 5 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮೃತ ನಾಗರಾಜ್ ವಾಕಿಂಗ್ಗೆ ಹೋಗಿದ್ದಾಗ ವ್ಯಕ್ತಿ ಮೇಲೆ ಆನೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳದಲ್ಲಿ ಎರಡೂ ಕಾಂಪೌಂಡ್ಗಳೂ ಸಹ ಉರುಳಿಬಿದ್ದಿದ್ದು, ಸ್ಥಳೀಯರು ಇದು ಆನೇ ದಾಳಿಯಿಂದಲೇ ಘಟನೆ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಸಿಸಿಟಿವಿಯಲ್ಲಿ ಆನೆ ಓಡಾಟದ ಘಟನೆ ಬೆಳಕಿಗೆ ಬಂದಿದೆ. ಬೆಳಗ್ಗೆ 5 ಗಂಟೆ 11 ನಿಮಿಷಕ್ಕೆ ಆನೆ ವೇಗವಾಗಿ ಓಡುವ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಇನ್ನು ಅದೇ ರಸ್ತೆಯಲ್ಲಿ ಜಾಗಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕೆಲವೇ ಸೆಕೆಂಡ್ಗಳಲ್ಲಿ ಆನೆದಾಳಿಯಿಂದ ಬಚಾವಾಗಿದ್ದಾರೆ ಎನ್ನಲಾಗಿದ್ದು ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಒಂಟಿ ಆನೆ ಸೋಮವಾರ ಬೆಳಗ್ಗೆ ಬೆಂಗಳೂರು ರಾಜರಾಜೇಶ್ವರಿ ನಗರ ಭಾಗದಲ್ಲಿ ಬಂದಿರಬಹುದು ಎನ್ನಲಾಗಿದ್ದು ಈ ಘಟನೆಗಳಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
ರಾಜ್ಯ ಸರ್ಕಾರದಿಂದ ಪರಿಹಾರ
ಘಟನೆಯ ಬಗ್ಗೆ ಮಾಹಿತಿ ನೀಡಿದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಇವತ್ತು ಆನೆ ದಾಳಿಗೆ ನಾಗರಾಜ್ ಮೃತ ಪಟ್ಟಿದ್ದಾರೆ. ಆನೆಗಳು ಬನ್ನೇರುಘಟ್ಟದಿಂದ ಈ ಕಡೆ ಓಡಾಡುತ್ತೆ. ಹೊಸದಾಗಿ ರಸ್ತೆ ಆದ ಬಳಿಕ ಆನೆಗಳ ಓಡಾಟ ಹೆಚ್ಚಾಗಿದೆ. ಬೆಂಗಳೂರಿನ ಹೊರವಲಯದಲ್ಲಿರುವ ಬಿಎಂ ಕಾವಲ್ ಭಾಗದಲ್ಲಿ ಬೃಹತ್ ಅರಣ್ಯ ಪ್ರದೇಶವಿದ್ದು ಇಲ್ಲಿ ಬನ್ನೇರುಘಟ್ಟದಿಂದ ಬಂದಂತ ಅನೆ ಓಡಾಡಿದ್ದು
ಸೋಮವಾರ ಬೆಳಗ್ಗೆ ನಾಗರಾಜ್ ಎಂಬುವವರು ವಾಕಿಂಗ್ ಹೋಗ್ತಿದ್ದ ವೇಳೆ ಆನೆ ಸೊಂಡಿಲಿನಲ್ಲಿ ಎತ್ತಿ ದಾಳಿ ಮಾಡಿದೆ. ಭಾನುವಾರ ರಾತ್ರಿ ಒಂದು ಗಂಟೆಯವರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ಇತ್ತು. ಆದರೆ, ಜನವಸತಿ ಪ್ರದೇಶಕ್ಕೆ ಆನೆ ಬರುತ್ತೆಂದು ಅಂದುಕೊಂಡಿರ್ಲಿಲ್ಲ ಎಂದು ಅವರು ವಿವರ ನೀಡಿದ ಅವರು ಆನೆ ದಾಳಿಯಿಂದ ಮೃತಪಟ್ಟ ನಾಗರಾಜ್ ಕುಟುಂಬಕ್ಕೆ ರಾಜ್ಯ ಸರ್ಕಾರ 20 ಲಕ್ಷ ಹಣ ಪರಿಹಾರ ಘೋಷಣೆ ಮಾಡಿದ್ದಾರೆ.
ಒಂಟಿ ಸಲಗ ಸೆರೆಗೆ ಕಾರ್ಯಾಚರಣೆ
ಒಂಟಿ ಸಲಗದ ಸೆರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು. ಈ ನಿಟ್ಟಿನಲ್ಲಿ ಶಿವಮೊಗ್ಗದ ದುಬಾರೆ ಕ್ಯಾಂಪ್ ನಿಂದ ನಾಲ್ಕು ಅನೆಗಳು ತರಿಸಲು ತೀರ್ಮಾನ ಮಾಡಲಾಗಿದ್ದು ಮಂಗಳವಾರ ಬೆಳಗ್ಗೆ ದುಬಾರೆಯಿಂದ ಆನೆಗಳು ಆಗಮಿಸಲಿವೆ. ಆನೆ ಸೆರೆಗೆ ಒಟ್ಟು 100 ಜನ ಸಿಬ್ಬಂದಿಗಳು ನೇಮಕ ಮಾಡಲಾಗಿದೆ. ಇವತ್ತಿನಿಂದಲೇ ಸೆರೆ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
Trending
- ಪ್ರತಿಷ್ಠಿತ FKCCI ಸಂಸ್ಥೆ ಅಧ್ಯಕ್ಷರಾಗಿ ಸಾಯಿ ರಾಮ್ ಪ್ರಸಾದ್ ಆಯ್ಕೆ
- ಬೆಂಗಳೂರಿಗೂ ಬಂದ ಆನೆ, ವ್ಯಕ್ತಿ ಮೇಲೆ ದಾಳಿ ಸಾವು!
- ಪತ್ರಕರ್ತರಿಗೆ ರೈಲ್ವೆ ಪಾಸ್ ಜಾರಿಗೊಳಿಸಲು ಸಚಿವ ಸೋಮಣ್ಣಗೆ ಪತ್ರಕರ್ತರ ಸಂಘ ಮನವಿ!
- ಶ್ರೀನಿವಾಸಪುರ:ಭಗತ್ ಸಿಂಗ್ ಜಯಂತಿ ಯಲ್ದೂರು ಯುವಕರಿಂದ ದೇಶಭಕ್ತಿ ಓಟ
- ವಿಧ್ವಂಸಕ ಕೃತ್ಯಗಳಿಗೆ ಸಂಚು, ಇಬ್ಬರು ಶಂಕಿತ ಉಗ್ರರ ಬಂಧನ!
- ಪದವೀಧರ ಚುನಾವಣೆ ನೀತಿ ಸಂಹಿತೆ ಪಾಲಿಸಲು DC ಸೂಚನೆ.
- ಚಿರಂಜೀವಿ”ಕಾಕಾ”ಸಿನಿಮಾ ಪಾತ್ರದ ಹೆಸರು”ಕದರಿ ಕಾಳಿದಾಸು”!
- ಚಿಂತಾಮಣಿ ತಾಲೂಕಿನ ಜೀಡರಹಳ್ಳಿಯಲ್ಲಿ ಡ್ರೋನ್ ಟೆಸ್ಟಿಂಗ್ ಹಬ್!
Monday, September 28



