ಬೆಂಗಳೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ, ಪತ್ರಕರ್ತರಿಗೆ ಈ ಹಿಂದೆ ನೀಡಲಾಗುತ್ತಿದ್ದ ರೈಲ್ವೆ ಪಾಸ್ ಸೌಲಭ್ಯವನ್ನು ಮರುಪ್ರಾರಂಭಿಸುವಂತೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಪತ್ರಕರ್ತರು ರಾಜ್ಯದ ವಿವಿಧ ಭಾಗಗಳಿಗೆ ತೆರಳಿ ತಮ್ಮ ವೃತ್ತಿ ನಿರ್ವಹಿಸುವ ಸಂದರ್ಭದಲ್ಲಿ ರೈಲ್ವೆ ಪಾಸ್ ಸೌಲಭ್ಯ ಬಹಳ ಅನುಕೂಲವಾಗಿತ್ತು. ಆದ್ದರಿಂದ ಈ ಸೌಲಭ್ಯವನ್ನು ಪುನಃ ಜಾರಿಗೆ ತರಲು ಕ್ರಮ ಕೈಗೊಳ್ಳುವಂತೆ ಶಿವಾನಂದ ತಗಡೂರು ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಸಚಿವ ವಿ.ಸೋಮಣ್ಣ ಅವರು, ಪತ್ರಕರ್ತರ ರೈಲ್ವೆ ಪಾಸ್ ಬೇಡಿಕೆ ವಿಚಾರ ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಸೋಮಶೇಖರ ಗಾಂಧಿ ಉಪಸ್ಥಿತರಿದ್ದರು.
Trending
- ಶ್ರೀನಿವಾಸಪುರ: ಭೂ ಸಂತ್ರಸ್ತರ ಧರಣಿಗೆ ಬೆಂಬಲ ಸೂಚಿಸಿದ ರಮೇಶ್ ಕುಮಾರ್!
- ಆಧಾರ್ ಕಾರ್ಡ್ ಬದಲು VOTER ಐಡಿ ತರಲು ಕೇಂದ್ರ ಸರ್ಕಾರದ ಚಿಂತನೆ!
- KSRTC ಟಿಕೆಟ್ ದರ ಹೆಚ್ಚಳಕ್ಕೆ ಜನಸಾಮಾನ್ಯರ ಆಕ್ರೋಶ!
- ಶ್ರೀನಿವಾಸಪುರ: ತಾಲೂಕು ಆಡಳಿತಕ್ಕೆ ಶಿಷ್ಟಾಚಾರದ ಅರಿವು ಇಲ್ಲ ಆರೋಪ!
- ಶ್ರೀನಿವಾಸಪುರದಲ್ಲಿ ಅರಣ್ಯ ಅಧಿಕಾರಿಗಳ ಮೇಲೆ ಮಚ್ಚಿನಿಂದ ಹಲ್ಲೆ ಯತ್ನ!
- vcsnewz ಸುದ್ದಿEffect:ಕೊಳವೆ ಬಾವಿ ಸುತ್ತ,ಕಸ ಸ್ವಚ್ಛ ಮಾಡಿದ ಶ್ರೀನಿವಾಸಪುರ ಪುರಸಭೆ!
- ಸೀಗರೇಟ್ ಸಾಲ ನೀಡದ ಅಂಗಡಿ ಮಾಲೀಕನ ಕೊಚ್ಚಿ ಕೊಲೆ!
- Municipal:34 ವರ್ಷ ದಿನಗೂಲಿ ಟೈಪಿಸ್ಟ್ ಆಗಿದ್ದ ಮಹಿಳೆ ಸೇವೆ ಖಾಯಂಗೆ ಹೈಕೋರ್ಟ್ ಸೂಚನೆ.
Friday, November 13



