ಶ್ರೀನಿವಾಸಪುರ: ತಾಲೂಕಿನ ತಾಡಿಗೋಳ್ (ಪೈ ಕ್ರಾಸ್) ಮೂಲಕ ಹಾದುಹೋಗಿರುವ ನೂತನ ರಾಜ್ಯ ಹೆದ್ದಾರಿ ನಿರ್ಮಾಣವಾಗಿ ತಿಂಗಳುಗಳೇ ಕಳೆದರೂ, ಪ್ರಮುಖ ಜಂಕ್ಷನ್ನಲ್ಲಿ ಅಗತ್ಯ ರಸ್ತೆ ಮಾರ್ಗಸೂಚಿ ಫಲಕ ಹಾಗೂ ರಾತ್ರಿ ಸಮಯದಲ್ಲೂ ಸಮರ್ಪಕ ಬೆಳಕಿನ ವ್ಯವಸ್ಥೆ ಕಲ್ಪಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಚಿಂತಾಮಣಿ ತಾಲೂಕಿನ ಮೆಡಿಕೇರಿ (ಮಾಡಿಕೇರಿ) ಕ್ರಾಸ್ನಿಂದ ಆಂಧ್ರಪ್ರದೇಶ ಗಡಿಯವರೆಗೆಸುಮಾರು 47 ಕೀ.ಮಿ ಉದ್ದನೆಯ ರಾಜ್ಯ ಹೆದ್ದಾರಿ-82 ಶ್ರೀನಿವಾಸಪುರ ತಾಲೂಕಿನಲ್ಲಿ ತಾಡಿಗೋಳ್ (ಪೈ ಕ್ರಾಸ್), ಜೋಡಿಕೊತ್ತಪಲ್ಲಿ, ಲಕ್ಷ್ಮೀಪುರ ಕ್ರಾಸ್ ಹಾಗೂ ರಾಯಲ್ಪಾಡು ಸೇರಿದಂತೆ ಪ್ರಮುಖ ಸ್ಥಳಗಳ ಮೂಲಕ ಸಾಗುತ್ತದೆ. ಈ ರಸ್ತೆಯನ್ನು ಕರ್ನಾಟಕ ರಾಜ್ಯ ಹೆದ್ದಾರಿ ಸುಧಾರಣಾ ಯೋಜನೆ–III ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ.
ತಾಡಿಗೋಳ್ (ಪೈ ಕ್ರಾಸ್) ಪ್ರಮುಖ ಜಂಕ್ಷನ್
ತಾಡಿಗೋಳ್ (ಪೈ ಕ್ರಾಸ್) ಶ್ರೀನಿವಾಸಪುರ ಪಟ್ಟಣದ ಸಂಪರ್ಕ ರಸ್ತೆ ಕೂಡುವಂತ ಜಂಕ್ಷನ್ಗೆ ಅಗಿದ್ದು ಹೆಚ್ಚಿನ ಸಂಚಾರ ಮಹತ್ವ ಇದೆ. ತಾಡಿಗೋಳ್ (ಪೈ ಕ್ರಾಸ್) ಜಂಕ್ಷನ್ ಅನು ಉತ್ತರ ಪಿನಾಕಿನಿ ನದಿ ಜಲಾನಯನ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದ್ದು ಬಾರಿ ಪ್ರಮಾಣದ ಸೇತುವೆ ಇರುವ ಪ್ರದೇಶ ಎನ್ನುತ್ತಾರೆ. ಈ ಜಂಕ್ಷನ್ ಮೂಲಕ ಹಾದು ಹೋಗುವ
ವಿಶೇಷವಾಗಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬರುವ ವಾಹನ ಸವಾರರಿಗೆ ಸೂಕ್ತ ಸೂಚನಾ ಫಲಕಗಳಿಲ್ಲದಿರುವುದು ಗೊಂದಲಕ್ಕೆ ಕಾರಣವಾಗುತ್ತಿದೆ.
ಶ್ರೀನಿವಾಸಪುರ ಹಾಗು ಚಿಂತಾಮಣಿ ನಗರಗಳಿಂದ ತಾಡಿಗೋಳ್ (ಪೈ ಕ್ರಾಸ್) ಜಂಕ್ಷನ್ ಮೂಲಕ ಆಂಧ್ರಪ್ರದೇಶದ ಪ್ರಮುಖ ನಗರಗಳಾದ ಮದನಪಲ್ಲೆ ಕಡಪಾ ಸೇರಿದಂತೆ ತಿರುಪತಿ ಮಹಾನಗರಕ್ಕೆ ಓಡಾಡುವ ಪ್ರಮುಖ ರಸ್ತೆಯಾಗಿದ್ದು ಇಂತಹ ಮಹತ್ತರ ರಸ್ತೆಯಲ್ಲಿ ನಿರ್ಮಾಣದಲ್ಲೂ ಹಲವಾರು ನ್ಯೂನ್ಯತೆಗಳು ಅದರಲ್ಲೂ ತಾಡಿಗೋಳ್ (ಪೈ ಕ್ರಾಸ್) ಆಗಿರುವ ನ್ಯೂನ್ಯತೆಗಳು ಎದ್ದು ಕಾಣುತ್ತಿದೆ ಎನ್ನುವುದು ಸ್ಥಳೀಯರ ಆರೋಪ.
‘ಕಾರ್ಗತ್ತಲ’ ಜಂಕ್ಷನ್
ತಾಡಿಗೋಳ್ (ಪೈ ಕ್ರಾಸ್) ಜಂಕ್ಷನ್ ಮಾರ್ಗಸೂಚಿ ಇಲ್ಲದೆ ಹೊಸದಾಗಿ ರಸ್ತೆ ಬಳಸುವಂತ ವಾಹನ ಚಾಲಕರಿಗೆ ದೊಡ್ಡ ಸಮಸ್ಯೆಯಾದರೆ ರಾತ್ರಿ ವೇಳೆ ದೀಪಗಳ ವ್ಯವಸ್ಥೆಯೂ ಇಲ್ಲದಿರುವುದು ವಾಹನ ಸವಾರರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಬೆಳಕಿನ ಕೊರತೆ ಹಾಗೂ ಮಾರ್ಗಸೂಚಿ ಫಲಕಗಳ ಅಭಾವದಿಂದ ಜಂಕ್ಷನ್ನಲ್ಲಿ ರಸ್ತೆಯ ದಿಕ್ಕು ಗುರುತಿಸಲು ತೊಂದರೆಯಾಗುತ್ತಿದ್ದು, ಸಂಚಾರ ಸುರಕ್ಷತೆಯ ಬಗ್ಗೆಯೂ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಾರೆ.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ತಾಡಿಗೋಳ್ (ಪೈ ಕ್ರಾಸ್)ನಲ್ಲಿ ಅಗತ್ಯವಿರುವ ಮಾರ್ಗಸೂಚಿ ಫಲಕಗಳು, ದಿಕ್ಕು ಸೂಚನಾ ಫಲಕಗಳು, ರಸ್ತೆ ಸುರಕ್ಷತಾ ಸೂಚನೆಗಳು ಹಾಗೂ ಸಮರ್ಪಕ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಭಾರತೀಯ ರಸ್ತೆ ಕಾಂಗ್ರೆಸ್ (IRC) ಮಾರ್ಗಸೂಚಿಗಳ ಪ್ರಕಾರ, ಪ್ರಮುಖ ಜಂಕ್ಷನ್ಗಳು, ತಿರುವುಗಳು ಜಂಕ್ಷನ್ ಸೂಚಿಸುವ ರಸ್ತೆಗೆ ಬಿಳಿ ಬಣ್ಣದ ಮಾರ್ಕಿಂಗ್ ಇಲ್ಲ ಹಾಗೂ ರಸ್ತೆ ವಿಭಜನೆಗಳ ಬಳಿ ವಾಹನ ಸವಾರರಿಗೆ ಮುಂಚಿತವಾಗಿ ದಿಕ್ಕು ತಿಳಿಸುವ ಮಾರ್ಗಸೂಚಿ ಮತ್ತು ಎಚ್ಚರಿಕೆ ಫಲಕಗಳನ್ನು ಅಳವಡಿಸುವುದು ರಸ್ತೆ ಸುರಕ್ಷತೆಯ ಪ್ರಮುಖ ಅಂಶವಾಗಿದೆ. ಆದರೆ ತಾಡಿಗೋಳು (ಪೈ ಕ್ರಾಸ್)ನಂತಹ ಪ್ರಮುಖ ಜಂಕ್ಷನ್ನಲ್ಲಿ ಅಗತ್ಯ ದಿಕ್ಕು ಸೂಚನಾ ಫಲಕಗಳ ಕೊರತೆ ಇರುವುದರಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬರುವ ವಾಹನ ಸವಾರರಿಗೆ ಗೊಂದಲ ಉಂಟಾಗುತ್ತಿದೆ ಎಂಬುದು ಸ್ಥಳೀಯರ ಆರೋಪ.



