ಕಳ್ಳತನಕ್ಕಾಗಿ ಚಾಕು, ಗ್ಲೌಸ್ಗಳನ್ನು ಖರೀದಿಸಿ ಮನೆಗೆ ನುಗ್ಗಿದ್ದ ವಿದ್ಯಾರ್ಥಿಗಳು ಒಬ್ಬ ವಿದ್ಯಾರ್ಥಿ ಹೊರಗೆ ಕಾವಲು, ಮತ್ತೊಬ್ಬ ಮನೆಯೊಳಗೆ ಪ್ರವೇಶಿಸಿ ಪ್ರಿನ್ಸಿಪಾಲ್ರನ್ನು 27 ಬಾರಿ ಚಾಕುವಿನಿಂದ ಇರಿದು ಹತ್ಯೆ. ಮನೆಯಿಂದ ₹2.50 ಲಕ್ಷ ನಗದು ದೋಚಿಕೊಂಡು ಪರಾರಿ, ಪೋಲಿಸ್ ತನಿಖೆಯಲ್ಲಿ ಕೊನೆಯ ಕ್ಷಣದಲ್ಲಿ ‘ಬಾಬು… ಏಯ್ ಬಾಬು…’ ಎಂದು ಕೂಗಿದ್ದ ರೂಪಾ ರೆಡ್ಡಿ ಕೊನೆಯ ದೂರವಾಣಿ ಮಾತುಗಳೇ ಪೊಲೀಸರಿಗೆ ಮಹತ್ವದ ಸುಳಿವು ಇಬ್ಬರು ವಿದ್ಯಾರ್ಥಿಗಳ ಬಂಧನ; ₹1.54 ಲಕ್ಷ ನಗದು, ಐಫೋನ್ ಹಾಗೂ ಎರಡು ಸ್ಮಾರ್ಟ್ಫೋನ್ಗಳ ವಶವಶಪಡಿಸಿಕೊಂಡ ಹಣದಲ್ಲಿದ್ದ ಮೂರು ₹500 ನೋಟುಗಳಲ್ಲಿ ರಕ್ತದ ಕಲೆ ಪತ್ತೆಇಬ್ಬರು ಅಪ್ರಾಪ್ತರನ್ನು ಜುವೆನೈಲ್ ಹೋಮ್ಗೆ ಕಳುಹಿಸಿದ ಪೊಲೀಸರು
ಕ್ರೈಮ್ ಡೆಸ್ಕ್:ದುಶ್ಚಟಗಳಿಗೆ ಬಲಿಯಾಗಿದ್ದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು, ತಮಗೆ ಗದರಿಸಿ ಬುದ್ಧಿವಾದ ಹೇಳಿದ್ದ ಪ್ರಿನ್ಸಿಪಾಲ್ ಮೇಲೆ ದ್ವೇಷ ಬೆಳೆಸಿಕೊಂಡು, ಪ್ರಿನ್ಸಿಪಾಲ್ ಒಬ್ಬಂಟಿಯಾಗಿ ಇರುವುದನ್ನು ಖಾತ್ರಿ ಪಡಿಸಿಕೊಂಡು ಅವರ ಮನೆಗೆ ನುಗ್ಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಇದು ಸಾಗರಾದಚೆ ವಿದೇಶದಲ್ಲಿ ನಡೆದಿರುವುದಲ್ಲ ದಕ್ಷಿಣಭಾರತದ ತೆಲಂಗಾಣದ ನಲ್ಲಗೊಂಡ ಜಿಲ್ಲೆಯ ಕೊಂಡಮಲ್ಲೇಪಲ್ಲಿಯಲ್ಲಿ ಆಗಸ್ಟ್ 11ರಂದು ನಡೆದ ಆತಂಕ ಮೂಡಿಸಿದ ಘಟನೆ.
ನಾಗಾರ್ಜುನ ಕಾನ್ಸೆಪ್ಟ್ ಶಾಲೆಯ ಪ್ರಿನ್ಸಿಪಾಲ್ ರೂಪಾ ರೆಡ್ಡಿ (48) ಅವರ ಹತ್ಯೆ ಪ್ರಕರಣವನ್ನು ಸ್ಥಳೀಯ ಪೊಲೀಸರು ಪ್ರಯಾಸ ಪಟ್ಟು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಅದೇ ಶಾಲೆಯ ಇಬ್ಬರು 10ನೇ ತರಗತಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶರತ್ಚಂದ್ರ ಪವಾರ್ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಗಳಲ್ಲಿ ಒಬ್ಬ ವಿದ್ಯಾರ್ಥಿ ಶಾಲೆಯ ಹಾಸ್ಟೆಲ್ ಇದ್ದ. ಆತನ ಬಳಿ ಮೊಬೈಲ್ ಫೋನ್ ಪತ್ತೆಯಾದ ಹಿನ್ನಲೆಯಲ್ಲಿ ಪ್ರಿನ್ಸಿಪಾಲ್ ರೂಪಾ ರೆಡ್ಡಿ ಅವನನ್ನು ಕರೆದು ಉತ್ತಮವಾಗಿ ನಡೆದುಕೊಳ್ಳುವಂತೆ ಗದರಿಸಿ ಬುದ್ದಿವಾದ ಹೇಳಿದ್ದರು ಇದರಿಂದ ವಿದ್ಯಾರ್ಥಿ ಅವರ ಮೇಲೆ ದ್ವೇಷ ಬೆಳೆಸಿಕೊಂಡಿದ್ದ ಎನ್ನಲಾಗಿದೆ. ಇದಕ್ಕಾಗಿ ಆಕೆಯ ಚಲನ ವಲನಗಳನ್ನು ಗಮನಿಸುತ್ತಿದ್ದು ಮನೆಯಲ್ಲಿ ಪ್ರಿನ್ಸಿಪಾಲ್ ರೂಪಾ ರೆಡ್ಡಿ ಒಬ್ಬರೇ ಇದ್ದಾಗ ಹತ್ಯೆ ಮಾಡಿರುವುದಾಗಿ ಹೇಳುತ್ತಾರೆ. ಆಗಸ್ಟ್ 11ರಂದು ಶಾಲೆಯ ಕೆಲಸ ಮುಗಿಸಿಕೊಂಡ ರೂಪಾ ರೆಡ್ಡಿ ಸಂಜೆ ಸುಮಾರು 5.20ಕ್ಕೆ ಮನೆಗೆ ಬರುತ್ತಾರೆ ಅವರ ಪತಿ ರಾಜೇಂದ್ರ ರೆಡ್ಡಿ ಕೆಲಸದ ನಿಮಿತ್ತ ಹೈದರಾಬಾದ್ಗೆ ಹೋಗಿದ್ದು ಅವರ ಮಗ ಸಹ ಉನ್ನತ ಶಿಕ್ಷಣಕ್ಕಾಗಿ ಅಲ್ಲೆ ಇರುತ್ತಾನೆ ಈ ಸಮಯದಲ್ಲಿ ಅವರು ಮನೆಯಲ್ಲಿ ಒಬ್ಬರೇ ಇದ್ದರು. ಮನೆಗೆ ಬಂದ ಬಳಿಕ ರೂಪಾ ರೆಡ್ಡಿ ತಮ್ಮ ಚಿಕ್ಕಮ್ಮನೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಾ ಅಡುಗೆಮನೆಯಲ್ಲಿ ಟೀ ತಯಾರಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಮನೆಯೊಳಗೆ ನುಗ್ಗಿದ್ದ ಆರೋಪಿಗಳಲ್ಲಿ ಒಬ್ಬ ಆಕೆಯ ಮೇಲೆ ದಾಳಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯಲ್ಲಿ ಒಬ್ಬರೇ ಇದ್ದ ಕಾರಣ ತಕ್ಷಣ ಯಾರಿಗೂ ಹತ್ಯೆ ಘಟನೆ ಅಂದಾಜಿಗೆ ಬರಲಿಲ್ಲ, ಮರುದಿನ ಬೆಳಗ್ಗೆ ಪತಿ ರಾಜೇಂದ್ರ ರೆಡ್ಡಿ ಹಲವು ಬಾರಿ ಪತ್ನಿಗೆ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ಅನುಮಾನಗೊಂಡ ಅವರು ತಮ್ಮ ಮನೆಯ ಮೇಲ್ಭಾಗದಲ್ಲಿ ಬಾಡಿಗೆಗೆ ವಾಸಿಸುತ್ತಿದ್ದವರಿಗೆ ಕರೆ ಮಾಡಿ, ಪತ್ನಿ ಫೋನ್ ಸ್ವೀಕರಿಸುತ್ತಿಲ್ಲ, ಏನಾಗಿದೆ ಎಂದು ನೋಡಲು ಕೇಳಿದ್ದಾರೆ ಬಾಡಿಗೆದಾರ ಕೆಳಗೆ ಬಂದು ಬಾಗಿಲು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದೇ ವೇಳೆ ಆ ಪ್ರದೇಶದಲ್ಲಿ ವಾಕಿಂಗ್ ಮಾಡುತ್ತಿದ್ದ ಪೋಲಿಸ್ ಎಸ್ಐ ಒಬ್ಬರನ್ನು ಕರೆಸಿ ವಿಷಯ ತಿಳಿಸಲಾಯಿಗಿದೆ ಇಬ್ಬರೂ ಸೇರಿ ಅಡುಗೆಮನೆಯ ಕಿಟಕಿಯ ಮೂಲಕ ನೋಡಿದಾಗ ನೆಲದ ಮೇಲೆ ಬಿದ್ದಿದ್ದ ರೂಪಾ ರೆಡ್ಡಿ ಅವರ ಕಾಲು ಕಾಣಿಸಿತು. ಅನುಮಾನಗೊಂಡ ಅವರು ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ರೂಪಾ ರೆಡ್ಡಿ ಅವರ ಮೃತದೇಹ ಪತ್ತೆಯಾಗಿದೆ. ಪತಿಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.
ಪೋಲಿಸರು ತನಿಖೆ ಆರಂಭಿಸಿದರು ಅವರಿಗೆ ಹಂತಕರ ಯಾವುದೆ ಸಿಕ್ಕಿಲ್ಲ ಎಷ್ಟೆ ಶತಪ್ರಯತ್ನ ಪಟ್ಟರು ಸಾಧ್ಯವಾಗಿಲ್ಲ ರೂಪಾ ರೆಡ್ಡಿ ತಮ್ಮ ಚಿಕ್ಕಮ್ಮನೊಂದಿಗೆ ಮಾತನಾಡುವಾಗ ಬಾಬು… ಏಯ್ ಬಾಬು…’ ಎಂಬ ಕೊನೆಯದಾಗಿ ಚಿಕ್ಕಮ್ಮ ಕೇಳಿಸಿಕೊಂಡಿದ್ದ ಆಧಾರದ ಮೇಲೆ ಪೊಲೀಸರು ಪರಿಶೀಲಿಸಿದ್ದಾರೆ ರೂಪಾ ರೆಡ್ಡಿ ದೂರವಾಣಿಯಲ್ಲಿ ಮಾತನಾಡುತ್ತಿದ್ದ ವೇಳೆ ಏಕಾಏಕಿ ‘ಬಾಬು… ಏಯ್ ಬಾಬು…’ ಎಂದು ಕೂಗಿದ್ದು ನಂತರ ಕರೆ ಕಡಿತಗೊಂಡಿತ್ತು. ಚಿಕ್ಕಮ್ಮ ಮರುಕರೆ ಮಾಡಿದರೂ ರೂಪಾ ರೆಡ್ಡಿ ಪ್ರತಿಕ್ರಿಯಿಸಿರಲಿಲ್ಲ. ಈ ಮಾಹಿತಿ ಪೊಲೀಸರಿಗೆ ಮಹತ್ವದ ಸುಳಿವು ನೀಡಿತು. ರೂಪಾ ರೆಡ್ಡಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಸಾಮಾನ್ಯವಾಗಿ ‘ಬಾಬು’ ಎಂದು ಕರೆಯುತ್ತಿದ್ದರು ಎಂಬುದು ಪೊಲೀಸರ ಗಮನಕ್ಕೆ ಬಂತು. ಹೀಗಾಗಿ ಶಾಲೆಯ ವಿದ್ಯಾರ್ಥಿಗಳು, ವಿಶೇಷವಾಗಿ ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿಗಳ ಬಗ್ಗೆ ಪೊಲೀಸರು ವಿಚಾರಣೆ ಆರಂಭಿಸಿದರು. ಈ ವೇಳೆ ಇಬ್ಬರು ವಿದ್ಯಾರ್ಥಿಗಳು ಶಾಲೆಗೆ ಬರುತ್ತಿಲ್ಲ ಹಾಗೂ ಅವರು ಇತ್ತೀಚೆಗೆ ಹಣವನ್ನು ಮನಬಂದಂತೆ ಖರ್ಚು ಮಾಡುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರ ತನಿಖೆಗೆ ಸುಳಿವು ಸಿಕ್ಕಿತು.

ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಸಿಕ್ಕಿಬಿದ್ದ ಆರೋಪಿಗಳು ಪೊಲೀಸರು ಇಬ್ಬರು ವಿದ್ಯಾರ್ಥಿಗಳಿಗಾಗಿ ಹುಡುಕಾಟ ತೀವ್ರಗೊಳಿಸಿದರು. ಅಂತಿಮವಾಗಿ ದೋನಿಯಾಲ ಕ್ರಾಸ್ರೋಡ್ ಬಳಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಅವರ ಬಳಿ ಇದ್ದ ₹1.54 ಲಕ್ಷ ನಗದು, ಒಂದು ಐಫೋನ್ ಮತ್ತು ಎರಡು ಸ್ಮಾರ್ಟ್ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ ಅವರ ಬಳಿ ಇದ್ದ ₹500 ಬೆಲೆಯ ಮೂರು ನೋಟುಗಳ ಮೇಲೆ ರಕ್ತದ ಕಲೆಗಳು ಕಂಡುಬಂದಿದೆ ಇದರಿಂದ ಪೊಲೀಸರ ಅನುಮಾನ ಮತ್ತಷ್ಟು ಬಲಗೊಂಡಿತು. ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳ ಪಡಿಸಿದಾಗ ರೂಪಾ ರೆಡ್ಡಿ ಹತ್ಯೆ ಮಿಸ್ಟರಿ ಹೊರಬಂದಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಒಂದು ವಾರದಿಂದಲೇ ಹತ್ಯೆಗೆ ಸ್ಕೇಚ್ 27 ಬಾರಿ ಇರಿತ
ಒಂದು ವಾರದಿಂದಲೇ ಹತ್ಯೆಗೆ ರೂಪಿಸಿದ್ದು ರೂಪಾ ರೆಡ್ಡಿ ಶಾಲಾ ವಿದ್ಯಾರ್ಥಿಗಳಿಂದ ನಗದು ರೂಪದಲ್ಲಿ ಪಡೆಯುಬ ಹಣವನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ವಿದ್ಯಾರ್ಥಿಗಳು ಗ್ರಹಿಸಿದ್ದಾರೆ ಆ ಹಣವನ್ನು ಕದಿಯಲು ಇಬ್ಬರೂ ಯೋಜನೆ ರೂಪಿಸಿದ್ದು ಆಗಸ್ಟ್ 11ರಂದು ಸಂಜೆ ಸುಮಾರು 4 ಗಂಟೆಗೆ ಒಬ್ಬ ವಿದ್ಯಾರ್ಥಿ ಶಾಲೆಯಿಂದ ಮನೆಗೆ ತೆರಳಿ ಕೆಂಪು ಬಣ್ಣದ ಟೀ-ಶರ್ಟ್ ಮತ್ತು ಪ್ಯಾಂಟ್ ತೆಗೆದುಕೊಂಡು ಬಂದಿದ್ದಾನೆ. ನಂತರ ತನ್ನ ಸ್ನೇಹಿತನೊಂದಿಗೆ ಪಕ್ಕದ ಪಟ್ಟಣಕ್ಕೆ ತೆರಳಿ ಚಾಕು ಮತ್ತು ಗ್ಲೌಸ್ಗಳನ್ನು ಖರೀದಿಸಿದ್ದಾರೆ ಅಲ್ಲಿಂದ ರೂಪಾ ರೆಡ್ಡಿ ಅವರ ಮನೆ ಇರುವ ಪ್ರದೇಶಕ್ಕೆ ತೆರಳಿ ಸಮೀಪದ ನೀರಿನ ಟ್ಯಾಂಕ್ ಬಳಿ ಕಾದಿದ್ದು ಒಬ್ಬ ಹೊರಗೆ ಕಾವಲು ಕಾಯುತ್ತ, ಮತ್ತೊಬ್ಬ ಮನೆಯೊಳಗೆ ಯಾರಾದರೂ ಬರುತ್ತಿದ್ದಾರೆಯೇ ಎಂದು ಒಬ್ಬ ವಿದ್ಯಾರ್ಥಿ ಹೊರಗೆ ನಿಂತು ಗಮನಿಸುತ್ತಿದ್ದಾಗ, ಮತ್ತೊಬ್ಬ ಮಾಸ್ಕ್ ಧರಿಸಿ ಮನೆಯ ಹಿಂಭಾಗದಿಂದ ಒಳಗೆ ಪ್ರವೇಶಿಸಿದ್ದಾನೆ. ಅಡುಗೆಮನೆಯ ಬಾಗಿಲು ತೆರೆದಿದ್ದುದನ್ನು ಬಳಸಿಕೊಂಡು ಮನೆಯೊಳಗೆ ಪ್ರವೇಶಿಸಿ ಹಣ ಕದಿಯಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ರೂಪಾ ರೆಡ್ಡಿ ಆತನನ್ನು ಗುರುತಿಸಿದರೆಂದು ಪೊಲೀಸರು ಅಂದಾಜಿಸಿದ್ದಾರೆ. ತಕ್ಷಣ ಆತ ಚಾಕುವಿನಿಂದ ಅವರ ಮೇಲೆ ದಾಳಿ ಮಾಡುತ್ತಾನೆ, 27 ಬಾರಿ ಇರಿದಿದ್ದಾನೆ ಎನ್ನಲಾಗಿದ್ದು ರೂಪಾ ರೆಡ್ಡಿ ಮೃತಪಟ್ಟ ಬಳಿಕ ಬೆಡ್ರೂಮ್ನಲ್ಲಿದ್ದ ಸುಮಾರು ₹2.50 ಲಕ್ಷ ನಗದನ್ನು ತೆಗೆದುಕೊಂಡು ಹೊರಗೆ ಕಾದಿದ್ದ ತನ್ನ ಸ್ನೇಹಿತನೊಂದಿಗೆ ಪರಾರಿಯಾಗಿದ್ದಾನೆ.
ಸಾಕ್ಷ್ಯ ನಾಶಪಡಿಸಲು ಯತ್ನ ಹತ್ಯೆಗೆ ಬಳಸಿದ್ದ ಚಾಕು, ಗ್ಲೌಸ್, ಮಾಸ್ಕ್ ಹಾಗೂ ರೂಪಾ ರೆಡ್ಡಿ ಅವರ ಐಫೋನ್ನ್ನು ಆರೋಪಿಗಳು ಪೊದೆಗಳಲ್ಲಿ ಎಸೆದಿದ್ದು ಸ್ವಲ್ಪ ದೂರ ತೆರಳಿದ ಬಳಿಕ ಬಟ್ಟೆ ಬದಲಿಸಿಕೊಂಡು, ಹತ್ಯೆ ವೇಳೆ ಧರಿಸಿದ್ದ ಕೆಂಪು ಬಣ್ಣದ ಹುಡಿ ಟೀ-ಶರ್ಟ್ನ್ನು ತೆಗೆದು ಚರಂಡಿಯಲ್ಲಿ ಎಸೆದಿರುತ್ತಾರೆ.
ಪೋಲಿಸರು ಪ್ರಕರಣವನ್ನು ಭೇದಿಸಲು ಐದು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು ಪೊಲೀಸರು ತನಿಖೆ ಸಂದರ್ಭದಲ್ಲಿ ಸುಮಾರು 70 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದರು. ಈ ವೇಳೆ ಕೆಂಪು ಬಣ್ಣದ ಶರ್ಟ್ ಧರಿಸಿ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದ ವ್ಯಕ್ತಿಯ ಚಲನವಲನ ಪೊಲೀಸರ ಗಮನಕ್ಕೆ ಬಂದಿತು. ರೂಪಾ ರೆಡ್ಡಿ ಅವರ ಪತಿ ಸೇರಿದಂತೆ ಸುಮಾರು 80 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿತ್ತು ಸಿಸಿಟಿವಿ ದೃಶ್ಯಗಳು, ಮೊಬೈಲ್ ಫೋನ್ ಮಾಹಿತಿ, ವಶಪಡಿಸಿಕೊಂಡ ಹಣ ಹಾಗೂ ಇತರ ವೈಜ್ಞಾನಿಕ ಸಾಕ್ಷ್ಯಗಳನ್ನು ಆಧರಿಸಿ ಪೊಲೀಸರು ಅಂತಿಮವಾಗಿ ಅಪ್ರರಾಪ್ತ ಇಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದು ಬಳಿಕ ಅವರನ್ನು ಬಾಲಾಪರಾಧಿಗಳ ಕೇಂದ್ರಕ್ಕೆ (juvenile home) ಕಳುಹಿಸಿದ್ದಾರೆ.



