ಶ್ರೀನಿವಾಸಪುರ:ತಾಲೂಕಿನ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳನ್ನು ಶಾಸಕರ ಅನುಧಾನದಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು. ಅವರು ಇಂದು ಪಟ್ಟಣದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ರಾಜಗೋಪುರ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿದ ನಂತರ ಮಾತನಾಡಿ ಅವರು ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ 1.5 ಕೋಟಿ ವೆಚ್ಚದಲ್ಲಿ ನೂತನವಾಗಿ ರಾಜಗೋಪುರ ನಿರ್ಮಾಣ ಮಾಡಲಾಗುತ್ತದೆ ಹಾಗು ದೇವಾಲಯದ ಸುತ್ತ ಮೂಲಸೌಕರ್ಯ ಕಲ್ಪಿಸಲು ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ದೈವ ಪ್ರೆರಣೆ
ಈ ಕಾಮಗಾರಿಯ ಮಾಡುವಂತೆ ಯಾರು ನನಗೆ ಕೇಳಲಿಲ್ಲ ಭಗವಂತನೆ ನನಗೆ ಪ್ರೇರಣೆ ನೀಡಿ, ನನ್ನಿಂದ ಈ ಕಾಮಗಾರಿ ಮಾಡಿಸಲು ಅವಕಾಶ ಕಲ್ಪಿಸಿದ್ದಾರೆ ಅದಕ್ಕೆ ನಾನು ಧನ್ಯ ಎಂದ ಅವರು. ಪಟ್ಟಣದಲ್ಲಿನ ಇನ್ನಷ್ಟು ಹಳೇಯ ದೇವಸ್ಥಾನಗಳ ಅಭಿವೃದ್ಧಿಗೆ ಆದ್ಯತೆ ಕೊಡಲಾಗುವುದು ಎಂದರು.
ಆರ್ಯ ವೈಶ್ಯ ಮಂಡಳಿ ಮುಖಂಡ ವೈ.ಆರ್.ಎಸ್.ಪ್ರಕಾಶ್ ಮಾತನಾಡಿ ಗುತ್ತಿಗೆದಾರರು ಶಿಲ್ಪಿಗಳು ಹಾಗು ಇದರ ಉಸ್ತುವಾರಿ ವಹಿಸಿಕೊಂಡಿರುವ ಇಲಾಖೆ ಇಂಜಿನೀಯರ್ ಅವರು ಸ್ಥಳೀಯರ ಸಹಕಾರವನ್ನು ಪಡೆದು ಗುಣಮಟ್ಟದ ಕಾಮಗಾರಿ ಮಾಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಪಂ ಇಒ ಸರ್ವೇಶ್, ಪುರಸಭೆ ಮುಖ್ಯಧಿಕಾರಿ ನಾಗರಾಜ್, ಇಂಜಿನೀಯರ್ ಶ್ರೀನಿವಾಸ್, ಜಿ.ಪಂ. ಮಾಜಿ ಅಧ್ಯಕ್ಷ ತೂಪಲ್ಲಿನಾರಾಯಣಸ್ವಾಮಿ,ಮಾಜಿ ಸದಸ್ಯ ಇಂದಿರಾ ಭವನ್ ರಾಜಣ್ಣ, ಶಂಕರಮಠ ವ್ಯವಸ್ಥಾಪಕ ಶಿವಪ್ರಸಾದ್,ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಬಿಜೆಪಿ ಮುಖಂಡ ರೋಣೂರ್ ಚಂದ್ರಶೇಖರ್, ತಾ.ಪಂ ಮಾಜಿ ಸದಸ್ಯ ಹಳೇಪೇಟೆ ಮಂಜುನಾಥ್ರೆಡ್ಡಿ,ಮುಖಂಡ ಬಿ ಎಲ್.ರಾಮಣ್ಣ ,ಎಸ್ಬಿಆರ್ ಅಮರನಾಥ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಲ್ಲೂರು ಶಂಕರ್ರೆಡ್ಡಿ , ಶೇಷಾಪುರ ಗೋಪಾಲ್, ಥೀಯೆಟರ್ ಲಕ್ಷಮಣರೆಡ್ಡಿ, ಅಂಬೇಡ್ಕರ್ಪಾಳ್ಯ ಸಿ.ರವಿ, ಪೊಲುಶಿವಾರೆಡ್ಡಿ,ಎಸ್.ಎನ್.ಆರ್ ಸುಧಾಕರರೆಡ್ಡಿ, ಜನತಾಕ್ಯಾಂಟಿನ್ ಮಂಜುನಾಥ್, ಶ್ರೀನಾಥ್ಬಾಬು,ರಿಲಿಯನ್ಸ್ ಸುಜಯ್, ಜೆರಾಕ್ಸ್ ಬದ್ರಿ, ಬಿಂದು ಶ್ರೀನಿವಾಸರೆಡ್ಡಿ , ಯಲ್ದೂರು ಮಣಿ ಮುಂತಾದವರು ಇದ್ದರು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Wednesday, July 22



