ಶ್ರೀನಿವಾಸಪುರ:ಮಾಲೂರು ರಾಜಕೀಯ ತಿಕ್ಕಾಟದಲ್ಲಿ ಕೋಲಾರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೋಮುಲ್)ನ ಆಡಳಿತ ಮಂಡಳಿ ಮೇಲೆ ಅಕ್ರಮದ ಆರೋಪ ಮಾಡುವುದು ಸೂಕ್ತ ಅಲ್ಲ ಎಂದು ಕೋಮುಲ್ ನಿರ್ದೇಶಕ ಕಲ್ಲೂರುಮಂಜು ಹೇಳಿದರು.
ಅವರು ಶ್ರೀನಿವಾಸಪುರದ ಕೋಮುಲ್ ಶಿಭಿರದ ಕಚೇರಿಯಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದರು ಮಾಜಿ ಶಾಸಕ ಮಂಜುನಾಥಗೌಡ ಅವರು ಮಾಲೂರು ಹಾಲಿ ಶಾಸಕ ಮತ್ತು ಕೋಮುಲ್ ಅಧ್ಯಕ್ಷ ನಂಜೇಗೌಡ ಅವರುಗಳ ನಡುವಿನ ರಾಜಕೀಯ ದ್ವೇಷಕ್ಕಾಗಿ ಪದೇ ಪದೇ ಕೋಮುಲ್ ಹೇಸರು ಉಲ್ಲೇಖಿಸಿ ಅಕ್ರಮ ನಡೆಯುತ್ತಿದೆ ಎಂದು ಆರೋಪ ಮಾಡುತ್ತಿರುವುದು ಸೂಕ್ತ ಅಲ್ಲ ಇದರಿಂದ ಒಕ್ಕೂಟದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂದರು.ನಿಮ್ಮ ರಾಜಕೀಯ ಆರೋಪ ಪ್ರತ್ಯಾರೋಪ ಮಾಲೂರಿಗೆ ಸೀಮಿತವಾಗಿರಲಿ ಹಾಗೆ ಸಾಮಾಜಿಕ ಕಾರ್ಯಕರ್ತ ಗೂಳಿಗಾನಹಳ್ಳಿ ನಾಗರಾಜ್ ಹಾಗು ವಕೀಲ ವೆಂಕಟಾಚಲಪತಿ ಮಾಡಿರುವ ಕೋಮೂಲ್ ಮೇಲಿನ ಆರೋಪದಲ್ಲಿ ಯಾವುದೆ ಉರಳಿಲ್ಲ.
ನೇಮಕಾತಿ ವಿಚಾರವಾಗಿ ಇಡಿ ತನಿಖೆಯಾಗಿದೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ ವಿಚಾರಣೆ ನಡೆಯುತ್ತಿದೆ.ಈಗಾಗಲೆ ಹನ್ನೇರಡು ವರ್ಷಗಳ ಹಣದ ವಹಿವಾಟಿನ ಆಡಿಟ್ ಬಹಿರಂಗ ಮಾಡಲಾಗಿದೆ ಎಲ್ಲಾ ಪಾರದರ್ಶಕವಾಗಿದೆ ಚಿಂತಾಮಣಿ ಐಸ್ ಕ್ರೀಮ್ ತಯಾರಿಕ ಘಟಕಕ್ಕೆ ಕೋಚಿಮೂಲ್ ಇದ್ದಾಗ ನಡೆದಿರುವುದು ಇಲ್ಲದ ಆರೋಪ ಈಗ ಹೊರೆಸುವುದು ಸರಿಯಲ್ಲ ಎಂದರು.
ಕೋಮುಲ್ ರೈತರ ಸಂಸ್ಥೆ ಹಾಲು ಉತ್ಪಾದಕರಿಗೆ ಸೇರಿದ್ದಾಗಿದೆ.ಜಿಲ್ಲೆಯ ರೈತಾಪಿ ಕುಟುಂಬಗಳನ್ನು ಇವತ್ತು ಕಾಪಾಡುತ್ತಿರುವುದು ಹೈನೋದ್ಯಮ ಇಲ್ಲಿ ರಾಜಕೀಯ ಲಾಭಕ್ಕಾಗಿ ದ್ವೇಷಕ್ಕೆ ಇಲ್ಲಸಲ್ಲದ ಆಕ್ರಮದ ಆರೋಪ ಹೊರೆಸುತ್ತ ಹಾಲು ಉತ್ಪಾದಕರ ಹಿತಾಸಕ್ತಿ,ನಿರ್ಲಕ್ಷ್ಯಸಿವುದು ತರವಲ್ಲ ಇದು ಹಾಲಿನ ಸಂಗ್ರಹಣೆ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ,ಕೋಲಾರ ಹಾಲು ಒಕ್ಕೂಟವನ್ನು ಕಾಪಾಡಿಕೊಂಡು ಹಾಲು ಉತ್ಪಾದಕರ ಹಿತ ಕಾಯುವ ಜವಬ್ದಾರಿ ಎಲ್ಲಾ ಜನಪ್ರತಿನಿಧಿಗಳ ಮೇಲಿದೆ ಎಂದರು.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



