ನ್ಯೂಜ್ ಡೆಸ್ಕ್: ಭಾರತೀಯ ಜನತಾಪಕ್ಷದ ಎಂಎಲ್ಸಿ ಕೇಶವ ಪ್ರಸಾದ್ ಅವರ ವಾಹನವನ್ನು ಟೋಲ್ ಸಿಬ್ಬಂದಿ ತಡೆದು, ಅವರ ಪಾಸ್ ಮತ್ತು ಮೊಬೈಲ್ ಕಿತ್ತುಕೊಂಡು ಅನುಚಿತವಾಗಿ ವರ್ತಿಸಿ ದರ್ಪ ಮೆರೆದಿರುವ ಘಟನೆ ನಡೆದಿದ್ದು ಸ್ಥಳೀಯ ಪೋಲಿಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸುಮಾರು ಒಂದು ಗಂಟೆ ಕಾಲ ಗೊಂದಲ ಸೃಷ್ಟಿಸಿದ ಟೋಲ್ ಸಿಬ್ಬಂದಿ ವರ್ತನೆಗೆ ಎಂಎಲ್ಸಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಘಟನೆ ಭಾನುವಾರ ಕರ್ನಾಟಕದ ವಿಜಯಪುರ ನಗರದ ಹೊರವಲಯದ ಬೆಂಗಳೂರು-ಸೋಲಾಪುರ ಹೆದ್ದಾರಿಯ ಟೋಲ್ ಗೇಟ್ನಲ್ಲಿ ನಡೆದಿದೆ ಎನ್ನಲಾಗಿದೆ.ಟೋಲ್ ಸಿಬ್ಬಂದಿ ಎಂಎಲ್ಸಿ ಅವರ ಪಾಸ್ ಮತ್ತು ಮೊಬೈಲ್ ಅನ್ನು ದರ್ಪದಿಂದ ಕಸಿದುಕೊಂಡು,ನೀವು ಎಂಎಲ್ಸಿ ಎಂದು ನಾವು ಹೇಗೆ ನಂಬಬೇಕು?ಎಂದು ಪ್ರಶ್ನಿಸಿ ಅನುಚಿತವಾಗಿ ವರ್ತಿಸಿದ್ದು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಟೋಲ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಂಎಲ್ಸಿ ಕೇಶವ ಪ್ರಸಾದ್ ಅವರು ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿಗೆ ಫೋನ್ ಮೂಲಕ ಮಾಹಿತಿ ನೀಡಿದ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಭಾಯಿಸಿದರು. ಟೋಲ್ ಸ್ಥಳೀಯ ಮುಖ್ಯಸ್ಥರು ಆಗಮಿಸಿ ನಡೆದ ಘಟನೆ ಬಗ್ಗೆ ಎಂಎಲ್ಸಿ ಕೇಶವ ಪ್ರಸಾದ್ ವಿಷಾದ ವ್ಯಕ್ತಪಡಿಸಿರುವ ಬಗ್ಗೆ ಹೇಳಲಾಗಿದೆ.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Thursday, April 23



