ಕೇರಳದ ಕೆಂಪು ಭಾವುಟದ ಅಡಿಯಲ್ಲಿ ನಡೆಯುತ್ತಿದ್ದ ರಾಜಕಾರಣದಲ್ಲಿ ಎಡಪಕ್ಷಗಳ ರಾಜಕಾರಣದ ಪ್ರಾಭಲ್ಯದ ನಡುವೆ ಕೆಸರಿ ಭಾವುಟ ಹಾರಲು ಅವಕಾಶ ಸಿಕ್ಕಿದೆ, ಕೇರಳದ 45 ವರ್ಷಗಳ ರಾಜಕೀಯ ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಎಲ್ಡಿಎಫ್ ಮೈತ್ರಿ ಕೂಟ ದೊಡ್ಡ ಮಟ್ಟದ ಹಿನ್ನಡೆ ಅನುಭವಿಸಿದೆ. ಕೇರಳದಲ್ಲಿ ಬಿಜೆಪಿಯ ಪ್ರಭಾವ ಸೀಮಿತವಾಗಿದ್ದರೂ (25 ಗ್ರಾಮ ಪಂಚಾಯತ್, 2 ಮುನ್ಸಿಪಾಲಿಟಿ), ತನ್ನದಾಗಿಸಿಕೊಂಡಿದೆ.ತಿರುವನಂತಪುರಂ ನಲ್ಲಿ ಬಿಜೆಪಿಗೆ ಸಿಕ್ಕ ಗೆಲುವು ನಗರ ಪ್ರದೇಶಗಳ ಜನರಿಗೆ ಎಡಪಕ್ಷಗಳ ಮೇಲಿನ ಬೇಸರ ಎದ್ದುಕಾಣುತ್ತಿದೆ. ಇದು ಮುಂದಿನ ದಿನಗಳಲ್ಲಿ ಬಿಜೆಪಿಗೆ ನಗರ ಪ್ರದೇಶಗಳಲ್ಲಿ ತನ್ನ ಸ್ವಂತ ಶಕ್ತಿಯ ನೆಲೆ ವಿಸ್ತರಿಸಲು ಸಿಕ್ಕಿರುವಂತ ಅವಕಾಶ ಎನ್ನುತ್ತಾರೆ ರಾಜಕೀಯ ಪಂಡಿತರು.
ನ್ಯೂಜ್ ಡೆಸ್ಕ್:ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಅಚ್ಚರಿಯ ಎನ್ನುವಂತೆ ಭಾರತೀಯ ಜನತಾ ಪಕ್ಷ (BJP) ಅನೇಕ ಕಡೆಗಳಲ್ಲಿ ಗೆಲುವುಗಳನ್ನು ಕಂಡಿದ್ದು ಇದು ಎಡಪಕ್ಷಗಳ ನಿದ್ದೆ ಕೆಡಿಸಿದೆ.
2026ರ ಕೇರಳದ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು 2026ರಲ್ಲಿ ನಡೆಯುವ ಕೇರಳ ವಿಧಾನಸಭಾ ಚುನಾವಣೆಗೆ ಆಡಳಿತ ರೂಡ ಎಡಪಕ್ಷಗಳ ಒಕ್ಕೂಟಕ್ಕೆ ಎಚ್ಚರಿಕೆ ಗಂಟೆ ಎನ್ನುವಂತಾಗಿದೆ.
ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೇರಳದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದರೆ, ಬಿಜೆಪಿ ಕೂಡ ಅನೇಕ ಕಡೆಗಳಲ್ಲಿ ಅಧಿಕಾರದ ಗದ್ದುಗೆ ಹಿಡದಿದೆ,ಕೇರಳದಲ್ಲಿ ಕಮಲದ ಬಾವುಟ ಹಾರುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.
ಕೇರಳದ ರಾಜಧಾನಿ ತಿರುವನಂತಪುರ ಕಾಂಗ್ರೆಸ್ ಪಕ್ಷದ ಪ್ರಭಾವಿ ರಾಷ್ಟ್ರೀಯ ಮುಖಂಡ ಶಶಿ ತರೂರ್ ಭದ್ರ ಕೋಟೆ ಅಲ್ಲಿನ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಐತಿಹಾಸಿಕ ಬಹುಮತ ಸಾಧಿಸಿದೆ. ಬಿಜೆಪಿ ನೇತೃತ್ವದ ಎನ್ಡಿಎ ಕೂಟ 50 ಸ್ಥಾನಗಳನ್ನು ಗಳಿಸಿದ್ದರೆ ಆಡಳಿತ ರೂಡ ಮುಖ್ಯಮಂತ್ರಿ ಪಿಣರಾಯ್ ವಿಜಯ್ ನೇತೃತ್ವದ Left Democratic Front (LDF) ಎಲ್.ಡಿ.ಎಫ್29 ಕಾಂಗ್ರೆಸ್ ನೇತೃತ್ವದ ಯುಡಿಎಫ್ 19 ಮತ್ತು ಇತರರು 02 ಸ್ಥಾನ ಗಳಿಸಿದ್ದು ಈ ಫಲಿತಾಂಶವನ್ನು ಕೇರಳದ ರಾಜಕೀಯದಲ್ಲಿ ಮಹತ್ವದ ತಿರುವು ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಧನ್ಯವಾದಗಳು, ತಿರುವನಂತಪುರಂ!
ತಿರುವನಂತಪುರಂ ಕಾರ್ಪೊರೇಷನ್ನಲ್ಲಿ ಬಿಜೆಪಿ-ಎನ್ಡಿಎ ಪಡೆದ ಬಹುಮತವು ಕೇರಳ ರಾಜಕೀಯದಲ್ಲಿ ಒಂದು ಮಹತ್ವದ ಕ್ಷಣವಾಗಿದೆ.ರಾಜ್ಯದ ಅಭಿವೃದ್ಧಿಯ ಆಕಾಂಕ್ಷೆಗಳನ್ನು ನಮ್ಮ ಪಕ್ಷದಿಂದ ಮಾತ್ರ ಪೂರೈಸಲು ಸಾಧ್ಯ ಎಂದು ಜನರಿಗೆ ಖಚಿತವಾಗಿದೆ. ನಮ್ಮ ಪಕ್ಷ ನಗರದ ಬೆಳವಣಿಗೆಗೆ ರೋಮಾಂಚಕವಾಗಿ ಕೆಲಸ ಮಾಡುತ್ತದೆ ಮತ್ತು ಜನರಿಗೆ ‘ಜೀವನವನ್ನು ಸುಲಭಗೊಳಿಸುವುದು’ ಹೆಚ್ಚಿಸುತ್ತದೆ ಎಂದು ಪ್ರಧಾನಿ ಮೋದಿ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.



