ಶ್ರೀನಿವಾಸಪುರ:ಉದ್ದೇಶಿತ ಯದರೂರು ಕೈಗಾರಿಕೆ ವಲಯ ನಿರ್ಮಾಣ ಸಂಬಂದ ಜಮೀನು ಸರ್ವೆ ಮಾಡಲು ಬಂದಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)Karnataka Industrial Areas Development Board ಅಧಿಕಾರಿಗಳ ವಾಹನ ತಡೆದ ರೈತರ ಗುಂಪು ಸರ್ವೆ ಮಾಡಲು ಅವಕಾಶ ನೀಡದೆ ವಾಪಸ್ಸು ಕಳುಹಿಸಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ಯದರೂರು ಗ್ರಾಮದ ಬಳಿ ಮಂಗಳವಾರ ನಡೆದಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳಾದ ಶ್ರೀನಾಥ್ ಮತ್ತು ಮಂಜುನಾಥ್ ಆಗಮಿಸಿದ ವೇಳೆ ಅವರನ್ನು ಸ್ಥದಲ್ಲಿದ್ದ ಕೆಲ ರೈತರು ಬೈದು ಗಲಾಟೆ ಮಾಡಿ ಒಂದಿಂಚು ಜಮೀನು ಕೊಡಲ್ಲ ಎಂದು ಆಕ್ರೋಶ ಭರಿತರಾಗಿ ಮಾತನಾಡಿ ಬೆದರಿಸಿದ್ದಾರೆ ಎನ್ನಲಾಗಿದ್ದು.ರೈತರಿಗೆ ಯಾವುದೇ ಮಾಹಿತಿ ನೀಡದೆ ಸರ್ವೇ ಮಾಡಲು ಬಂದಿರುವುದು ತಪ್ಪು ಎಂದು ಅಧಿಕಾರಿಗಳನ್ನ ವಾಪಸ್ ಕಳಿಸಿದರು.
ಕೆಐಎಡಿಬಿ ಅಧಿಕಾರಿಗಳನ್ನು ಕಾರಿನಿಂದ ಇಳಿಯಲು ಬಿಡದೆ ವಾಗ್ವಾದಕ್ಕೆ ಇಳಿದ ರೈತರು ಮಾತಿನ ಚಕಮಕಿ ನಡೆಸಿದಲ್ಲದೆ ಪ್ರಾಣ ಬಿಟ್ಟೆವು ಜಮೀನು ಕೊಡುವುದಿಲ್ಲ.ನಿಮ್ಮ ವಾಹನಗಳನ್ನು ಸುಟ್ಟುಹಾಕುತ್ತೇವೆ ಎಂದು ತೀವ್ರವಾಗಿ ಎಚ್ಚರಿಕೆನೀಡಿದ್ದಾರೆ.
ಯದರೂರು ಕಂದಾಯ ವೃತ್ತದಲ್ಲಿ ಕೈಗಾರಿಕ ವಲಯ
ಯದರೂರು ಕಂದಾಯ ವ್ಯಾಪ್ತಿಯಲ್ಲಿ ಕೈಗಾರಿಕಾ ವಲಯ ನಿರ್ಮಿಸಲು ಕೆಐಎಡಿಬಿKIADB Industrial Areas ಯದರೂರು ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರ ಭೂಮಿ ವಶಪಡಿಸಿಕೊಂಡು ಹಾಗೂ ಅಭಿವೃದ್ಧಿ ಮಾಡುವ ಸಂಬಂಧ ನೋಟಿಫಿಕೇಶನ್ ಜಾರಿ ಮಾಡಿದ್ದು ಶ್ರೀನಿವಾಸಪುರದ ಉಪನೋಂಣಾಧಿಕಾರಿಗಳ ಕಚೇರಿಯಲ್ಲಿ ಜಮೀನುಗಳ ಪರಭಾರೆಯನ್ನು ಸ್ಥಗಿತಗೊಳಿಸಿ ಆದೇಶಿಸಿದೆ.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Thursday, April 23



