ಶ್ರೀನಿವಾಸಪುರ:ಶ್ರೀನಿವಾಸಪುರ ತಾಲ್ಲೂಕು ಬಯಲು ಸೀಮೆ ಪ್ರದೇಶವಾಗಿದ್ದು ಇಲ್ಲಿ ಶಾಶ್ವತ ನೀರಾವರಿ ಸೌಲಭ್ಯವಿಲ್ಲದೆ ರೈತರು ತಮ್ಮ ಸ್ವಾಭಿಮಾನದ ಬದುಕಿಗಾಗಿ ಮಳೆಯಾಧಾರಿತ ಕೃಷಿಯನ್ನು ಮಾಡುತ್ತ ಎಣಗಾಡುತ್ತಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ಗ್ರಾಮೀಣ ಜನರ ಜೀವನಕ್ಕೆ ಅಧಾರವಾಗಿರಲು ಉದ್ಯೋಗ ಸೃಷ್ಠಿಸಲು ಶ್ರೀನಿವಾಸಪುರ ತಾಲೂಕಿನ ಎರಡು ಕಡೆ ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸಲು ಉದ್ದೇಶಿಸಿರುವುದಾಗಿ ಶಾಸಕ ವೆಂಕಟಶಿವಾರೆಡ್ಡಿ ಪತ್ರಿಕಾ ಪ್ರಕಟಣೆ ಮೂಲಕ ಹೇಳಿದ್ದಾರೆ.
ಶ್ರೀನಿವಾಸಪುರ-ಮುಳಬಾಗಲು ರಸ್ತೆಯ ಯದರೂರು ಭಾಗದಲ್ಲಿ 2000 ಎಕರೆ ಹಾಗೂ ಮದನಪಲ್ಲಿ ರಸ್ತೆಯ ಲಕ್ಷ್ಮಿಪುರ ಭಾಗದಲ್ಲಿ 3000 ಎಕರೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಕೈಗಾರಿಕಾ ಪ್ರದೇಶಗಳಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಇಟ್ಟುಕೊಂಡು ಯೋಜನೆ ರೂಪಿಸಿದ್ದು ಕಾರ್ಯೋನ್ಮುಖವಾಗಿದೆ ಶ್ರೀನಿವಾಸಪುರ-ಮುಳಬಾಗಿಲು ರಸ್ತೆಯ ಎದುರೂರು ಗ್ರಾಮದ ಆಸುಪಾಸಿನಲ್ಲಿ 2,000 ಎಕರೆ ಕೈಗಾರಿಕಾ ಅಭಿವೃದ್ಧಿಗೆ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ ಈಗಾಗಲೆ ಅನುಮೋದನೆ ಸಹ ನೀಡಿದೆ ಜಮೀನು ಸ್ವಾಧೀನ ಪ್ರಕ್ರಿಯೆಗಾಗಿ ಪ್ರಾಥಮಿಕ ನೋಟಿಫಿಕೇಶನನ್ನು ನೀಡಿದ್ದು ಇಲ್ಲಿ ಕೆಲ ಸಣ್ಣ-ಪುಟ್ಟ ಸಮಸ್ಯೆಗಳು ಇದೆ ಆದನ್ನು ನಿವಾರಿಸುವ ಪ್ರಯತ್ನ ಮಾಡಲಾಗುತ್ತಿದ್ದು ಅಷ್ಟರಲ್ಲಿ ಜಮೀನು ಸ್ವಾಧೀನ ಪಡಿಸಿಕೊಳ್ಳುವ ವಿಚಾರವನ್ನು ದುರ್ಭಳಕೆ ಮಾಡಿಕೊಂಡ ಕೆಲ ಬಡಾ ಜಮೀನ್ದಾರರು ಹಾಗೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಜನತೆಗೆ ತಪ್ಪು ಸಂದೇಶ ರವಾನಿಸುವ ಕೆಲಸವನ್ನು ಮಾಡುತ್ತಿದ್ದಾರೆ ಇದು ಕೆಲ ರೈತರಲ್ಲಿ ಆತಂಕ ಮೂಡಿಸಿದ್ದು ಇಂತಹ ಉಹಾಪೋಹಗಳನ್ನು ಜನರು ನಂಬಬಾರದು ಎಂದು ವಿನಂತಿಸಿದ್ದಾರೆ.
ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಈ ಭಾಗದ ರೈತರ ಹಾಗೂ ಅವರ ಮುಂದಿನ ಪೀಳಿಗೆಯ ಒಳಿತಿಗಾಗಿಯೇ ಹೊರತು ಯಾರೊಬ್ಬರ ಹಿತಾಸಕ್ತಿಗಾಗಿ ಅಲ್ಲವೇ ಅಲ್ಲ.ಕೈಗಾರಿಕಾ ಪ್ರದೇಶದ ಅಭಿವೃದ್ಧಿಗಾಗಿ ಜಮೀನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ಯಾವುದೇ ದೌರ್ಜನ್ಯ ಅಥಾವ ಏಕಮುಖವಾಗಿರುವುದಿಲ್ಲ. ಈಗ ಆಗಿರುವುದು ಪ್ರಾಥಮಿಕ ನೋಟಿಫಿಕೇಶನ್ ಅಷ್ಟೇ. ಮುಂದಿನ ಪ್ರಕ್ರಿಯೆಗಳು ನಡೆಯುವುದಕ್ಕೆ ಮೊದಲು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಈ ಭಾಗದಲ್ಲಿ ಖುದ್ದಾಗಿ ಬಂದು ಮಹಜರು ಮಾಡಿ ಎಲ್ಲಾ ರೈತರು ಹಾಗೂ ರೈತ ಪ್ರತಿನಿಧಿಗಳ ಜೊತೆ ಕೂತು ಮಾತನಾಡಿ ಅವರ ಅಹವಾಲುಗಳನ್ನು ಸ್ವೀಕರಿಸಿ ಸಮಾಧಾನಕರವಾದ ಅಭಿವೃದ್ಧಿ ಯೋಜನೆಯನ್ನು ರೂಪಿಸಲಾಗುತ್ತದೆ ಹೊರತು ರೈತರಿಗೆ ಮೋಸ ಮಾಡುವಂತ ಅಭಿವೃದ್ಧಿ ಮಾಡುವುದಿಲ್ಲ ಕೈಗಾರಿಕಾ ಪ್ರದೇಶಗಳು ಸ್ಥಾಪನೆಯಾಗಿ ಅಭಿವೃದ್ಧಿ ಆಗುವುದರಿಂದ ನಮ್ಮ ರೈತರಿಗೆ ಹಾಗೂ ರೈತ ಮಕ್ಕಳಿಗೆ ಉದ್ಯೋಗ ಆಗಬಹುದು ಮತ್ತು ಅವರು ಬೆಳೆಯುವಂತ ಕೃಷಿ ಪದಾರ್ಥಗಳಿಗೆ ಸ್ಥಳೀಯವಾಗಿ ಉತ್ತಮ ಮಾರುಕಟ್ಟೆ ಸಿಗಲಿದೆ ಇದು ಕೃಷಿ ವ್ಯವಸ್ತೆಗೆ ಅನಕೂಲ ವಾತವರಣ ನಿರ್ಮಾಣವಾಗುತ್ತದೆ.
ಶ್ರೀನಿವಾಸಪುರ ಕ್ಷೇತ್ರದ ಜನತೆ ನನ್ನನ್ನು ಸಾರ್ವಜನಿಕವಾಗಿ ಬೆಳಸಿ 5 ಬಾರಿ ಶಾಸಕರನ್ನಾಗಿ ಚುನಾಯಿಸಿರುತ್ತಿರ ನಾನು ನಿಮ್ಮ ಋಣ ತೀರಿಸುವ ಸಲುವಾಗಿ ನನ್ನ ರಾಜಕೀಯ ಜೀವನದ ಆರಂಭದಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತ ಬಂದಿದ್ದು ಇದರಂತೆ ಕೈಗಾರಿಗಳನ್ನು ಸ್ಥಾಪಿಸುವ ಮೂಲಕ ಶಾಶ್ವತ ಕಾರ್ಯಮಾಡಲು ಮುಂದಾಗಿರುವುದಾಗಿ ಇಲ್ಲಿ ನನ್ನ ವೈಯುಕ್ತಿಕ ಹಿತಾಸಕ್ತಿ ಯಾವುದು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Monday, September 16