ನೂಜ್ ಡೆಸ್ಕ್:ಎಣ್ಣೆ ಹೊಡೆದವರು ಯಾವುದೆ ಸಾಹಸ ಮಾಡಲು ಹಿಂಜರಿಯುವುದಿಲ್ಲ ತಮಗೆ ತಾವೆ ಮಹಾರಾಜರಂತೆ ವರ್ತಿಸುತ್ತಾರೆ ತೆಲಗು ಸಿನಿಮಾ ಗಬ್ಬರ್ ಸಿಂಗ್ ನ ಹಾಡು “ಮಂದು ಬಾಬುಲಮ್ ಮೆಮು ಮಂದು ಬಾಬುಲಯ್ ಮಂದು ಕೊಡಿತೆ ಮಾಕು ಮೇಮೆ ಮಹಾರಾಜುಲಮ್” ಎನ್ನುವಂತೆ ಮದ್ಯ ಕುಡಿದವರ ವರ್ತನೆಗಳನ್ನು ಡೈಲಾಗ್ ಬಗ್ಗೆ ಹೇಳುತ್ತ ಹೋದರೆ ದಿನ ಸಾಲದು ತಮಗೆ ಇಷ್ಟ ಬಂದಂತೆ ವರ್ತಿಸುತ್ತಾರೆ ಇವರ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಲೆಕ್ಕವಿಲ್ಲದಷ್ಟು ವೀಡಿಯೊಗಳಿವೆ. ಇಷ್ಟೆಲ್ಲ ಯಾಕೆ ಪ್ರಸ್ತಾವನೆ ಅಂದರೆ ಇತ್ತೀಚೆಗೆ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯಲ್ಲಿ ಕುಡುಕನೊಬ್ಬ ಘೋರ ಪ್ರಮಾದ ಮಾಡಿದ್ದಾನೆ ಸದ್ಯ ಯಾವುದೆ ಸಾವು ನೋವು ಆಗಿಲ್ಲ.
ಎಣ್ಣೆ ಹೊಡೆದ ವ್ಯಕ್ತಿಯೊಬ್ಬ ಒಬ್ಬಂಟಿಯಾಗಿ ಬಸ್ ನಿಲ್ದಾಣಕ್ಕೆ ಹೋಗಿ ಕೊತ್ತಚರವು-ಹಿಂದೂಪುರ ಬಸ್ ಹತ್ತಲು ಬಂದಿದ್ದಾನೆ ನಂತರ ಬಸ್ ಕೆಳಗೆ ಹೋಗಿ ಸ್ಟಪನಿ ಟೈರ್ ಹಿಡಿದುಕೊಂಡು ಜೋತಾಡುತ್ತ ಇದ್ದಾನೆ ಬಸ್ ಚಲಿಸಿದೆ ಅದೂ ಕೂಡ ಒಂದು ಎರಡು ಕಿಲೋಮೀಟರ್ ಅಲ್ಲ.ಸುಮಾರು 15 ಕಿಲೋಮೀಟರ್ ಬಸ್ ಚಲಿಸಿದೆ ಬಸ್ ಚಲಿಸುತ್ತಿದ್ದರೆ ಬಸ್ ಹಿಂದೆ ಹೋಗುವರು ಟೈರ್ ಕೆಳಗೆ ಜೋತಾಡುತ್ತ ಇರುವುದನ್ನು ಗಮನಿಸಿ ಅಥವಾ ಕೆಲವು ವಾಹನ ಚಾಲಕರು ಬಸ್ ನಿಲ್ಲಿಸಿ ಚಾಲಕನ ಗಮನಕ್ಕೆ ತಂದಿದ್ದಾರೆ ವಿಷಯ ತಿಳಿದ ಚಾಲಕ ಬಸ್ ನಿಲ್ಲಿಸಿ ಬಸ್ಸಿನ ಕೆಳಗೆ ನೇತಾಡುತ್ತಿದ್ದ ವ್ಯಕ್ತಿ ಬಸ್ಸಿನ ಕೆಳಗಿರುವ ಬಿಡಿ ಟೈರ್ ಹಿಡಿದಿದ್ದು ಬಸ್ ಚಾಲಕ ಅವನನ್ನು ಎಳೆದು ಹಾಕಿದ್ದಾನೆ.ಕುಡುಕನ ಮೋಜೋ ಮಸ್ತಿನೋ ಅದೃಷ್ಟವಶಾತ್,ಬದುಕುಳಿದಿರುವುದೆ ಪವಾಡ ಎನ್ನುತ್ತಾರೆ ಪ್ರತ್ಯಕ್ಷ ದರ್ಶಿಗಳು.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



