ಶ್ರೀನಿವಾಸಪುರ:ಮಹಿಳೆಯ ಕಾಮಪಾಶಕ್ಕೆ ಸಿಲುಕಿದ ಯುವಕನೊರ್ವ ಮಹಿಳೆಯೊಂದಿಗೆ ನೇಣಿಗೆ ಶರಣಾಗಿರುವ ಘಟನೆ ಶ್ರೀನಿವಾಸಪುರ ತಾಲೂಕಿನಲ್ಲಿ ನಡೆದಿದೆ.
ಶ್ರೀನಿವಾಸಪುರ ತಾಲ್ಲೂಕಿನ ಎಸ್.ಜಿಡಿಮಾಕಲಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದ್ದು ಘಟನೆಯಲ್ಲಿ ಮೃತಪಟ್ಟ ಯುವಕನನ್ನು ವಿಜಯ್ ಕುಮಾರ್(26)ಹಾಗು ಮಹಿಳೆಯನ್ನು ಅನುಸೂಯ(35)ಎಂದು ಗುರುತಿಸಲಾಗಿದೆ.
ರಾಯಲ್ಪಾಡು ಹೋಬಳಿ ಸುಣ್ಣಕಲ್ಲು ಪ್ರಕೃತಿಯ ಪರಿಸರದಲ್ಲಿರುವ ಎಸ್.ಜಿಡಿಮಾಕಲಪಲ್ಲಿ ಗ್ರಾಮದ ವಿಜಯ್ ಕುಮಾರ್ ತನ್ನ ಕುಟುಂಬದ ಹತ್ತಿರದ ಸಂಬಂದಿ ಎರಡು ಮಕ್ಕಳ ತಾಯಿ ಅನುಸೂಯ ಎಂಬ ವಿವಾಹಿತೆ ಜತೆಗೆ ಸಲುಗೆಯಿಂದ ಇದ್ದು ಅನೈತಿಕ ಸಂಬಂಧವನ್ನು ಹೊಂದಿದ್ದನಂತೆ,ಇದೇ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಹಲವು ಬಾರಿ ಗಲಾಟೆಗಳು ನಡೆದು ಪಂಚಾಯತಿಗಳಾಗಿರುತ್ತದೆ ಆದರೂ ಇಬ್ಬರ ನಡುವಿನ ಅನೈತಿಕ ಸಂಬಂದ ಮುಂದುವರೆದಿದ್ದು ಈಗ್ಗೆ ಎರಡು ತಿಂಗಳ ಹಿಂದೆ ಅನಸೂಯ ಎರಡು ಮಕ್ಕಳು ಹಾಗು ಗಂಡನನ್ನು ತೊರೆದು ಕೊನೆಗೂ ಪ್ರಿಯಕರನ ಹಿಂದೆ ಹೋರಟು ಹೋದಾಗ ಅನಸೂಯಳ ಗಂಡ ಮಂಜುನಾಥ್ ರಾಯಲ್ಪಾಡು ಠಾಣೆಯಲ್ಲಿ ಹೆಂಡತಿ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸುತ್ತಾರೆ.
ಈ ಎಲ್ಲಾ ಬೆಳವಣಿಗೆಗಳ ಮದ್ಯೆ ಗಂಡನ ಮನೆ ತೊರೆದ ಮಹಿಳೆ ಅನಸೂಯ ಬತ್ತಲಗುಟ್ಲಪಲ್ಲಿನ ತನ್ನ ತವರು ಮನೆ ಸೇರಿದ್ದರೆ ಇತ್ತ ಪ್ರಿಯಕರ ವಿಜಯಕುಮಾರ್ ಆಂಧ್ರದ ಮದನಪಲ್ಲಿಯಲ್ಲಿರುವ ತನ್ನ ಮಾವನ ಮನೆ ಸೇರಿದ್ದ,ಎರಡು ದಿನಗಳ ಹಿಂದೆ ವಿಜಯಕುಮಾರ್ ತಾಯಿಗೆ ಹಾವು ಕಚ್ಚಿದೆಯಂಬ ಮಾಹಿತಿಯ ಹಿನ್ನಲೆಯಲ್ಲಿ ತಾಯಿಯನ್ನು ನೋಡಲು ಜಿಡಿಮಾಕಲಪಲ್ಲಿ ಗ್ರಾಮಕ್ಕೆ ಬಂದಿರುತ್ತಾನೆ ಆದರೆ ಇಂದು ಬೆಳಿಗ್ಗೆ ನೋಡಿದರೆ ಗ್ರಾಮದ ಹೊರವಲಯದ ಕೆರೆ ಅಂಗಳದಲ್ಲಿರುವ ಹೊಂಗೆ ಮರದಲ್ಲಿ ವಿಜಯಕುಮಾರ್ ಹಾಗು ಅನಸೂಯಾರ ಶವಗಳು ನೇತಾಡುತ್ತಿದ್ದು ಇಬ್ಬರು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ ಆದರೆ ಇದು ಆತ್ಮಹತ್ಯೆ ಅಲ್ಲ ಎನ್ನುತ್ತಾರೆ.ಈ ಬಗ್ಗೆ ಘಟನಾ ರಾಯಲ್ಪಾಡು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಯಲ್ಪಾಡು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Friday, April 24



