ಶ್ರೀನಿವಾಸಪುರ:ಟೆಂಪೋ ಟ್ರಾವಲರ್ ಹಾಗು ಕಾರಿನ ನಡುವೆ ನಡೆದ ಬೀಕರ ರಸ್ತೆ ಅಪಘಾತದಲ್ಲಿ ಮೂರು ಮಂದಿ ಸಾವನಪ್ಪಿದ್ದು ಟೆಂಪೋ ಟ್ರಾವಲರ್ ನಲ್ಲಿದ್ದ 12 ಮಂದಿ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತ ಬೆಂಗಳೂರು-ಮದನಪಲ್ಲಿ ರಸ್ತೆಯಲ್ಲಿ ದಂಡುಪಾಳ್ಯ ಗೇಟ್ ಬಳಿ ಶ್ರೀನಿವಾಸಪುರ ತಾಲೂಕಿನ ಗಡಿಯಂಚಿನಲ್ಲಿ ಬುಧವಾರ ಸಂಜೆ ನಡೆದಿದ್ದು ಆಂಧಪ್ರದೇಶದ ಬಾಯಿಕೊಂಡದಲ್ಲಿ ಪೂಜೆ ಮುಗಿಸಿ ಚಿಂತಾಮಣಿ ಕಡೆಗೆ ಬರುತ್ತಿದ್ದ ಟೆಂಪೋ ಟ್ರಾವಲರ್ ಹಾಗು ಮದನಪಲ್ಲಿಗೆ ಹೋರಟಿದ್ದ ಸ್ಯಾಂಟ್ರೊ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ ಕಾರಿನಲ್ಲಿದ್ದ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಶ್ರೀಕಾಂತ್, ಶ್ರೀನಿವಾಸಲು, ಪುಷ್ಪ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಅಪಘಾತ ಪ್ರಕರಣ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಅಪಘಾತ ಬೀಕರತೆ ಕೀ.ಮಿ ಗಟ್ಟಲೆ ಟ್ರಾಫಿಕ್ ಜಾಮ್
ವಾಹನಗಳ ಮುಖಾಮುಖಿ ಡಿಕ್ಕಿಯಾದ ಬೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಶವಗಳನ್ನು ಹೊರತಗೆಯಲು ಸಾಧ್ಯವಾಗದ ಹಿನ್ನಲೆಯಲ್ಲಿ ಜೆಸಿಬಿ ತರಸಿ ನುಜ್ಜುಗುಜ್ಜಾಗಿದ್ದ ಕಾರಿನ ಬಾಗಿಲುಗಳನ್ನು ಕಿತ್ತು ಹರಸಾಹಸ ಪಟ್ಟು ಮೃತ ದೇಹಗಳನ್ನು ಹೊರಗೆ ತಗೆದಿದ್ದು, ಇದರಿಂದಾಗಿ ಮದನಪಲ್ಲಿ ಹೈವೆ ರಸ್ತೆಯಲ್ಲಿ ಸುಮಾರು ಎರಡು ಗಂಟೆ ಕಾಲ ಎರಡು ಕಡೆ ಕೀ.ಮಿ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.ಅಪಘಾತ ಪ್ರಕರಣ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಘಟನೆ ಕುರಿತು ಮಾಹಿತಿ ಪಡೆಯಲು ಚಿಕ್ಕಬಳ್ಳಾಪುರ ಜಿಲ್ಲಾ ಎಸ್ ಪಿ ಕುಶಾಲ್ ಚೌಕ್ಸೆ, ಎ.ಎಸ್.ಪಿ ಖಾಸಿಂರಜ. ಚಿಂತಾಮಣಿ ಡಿವೈಎಸ್ಪಿ ಮುರಳಿಧರ್.ಸರ್ಕಲ್ ಇನ್ಸಪೇಕ್ಟರ್ ಶಿವರಾಜ್.ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Trending
- ದ್ವೇಷ ಬೇಡ,ಎಲ್ಲರಿಗೂ ಬಾಗಿಲು ತೆರೆದಿದೆ.ಜೆಡಿಎಸ್ ಕಾರ್ಯಕರ್ತರಿಗೆ CM ಡಿಕೆಶಿ ಆಹ್ವಾನ!
- ಕರ್ನಾಟಕದಿಂದ ರಾಜ್ಯಸಭೆಗೆ ಆಂಧ್ರದ ಶರ್ಮಿಳಾ ಹೆಸರು ಪರಿಗಣನೆಗೆ!
- ಶ್ರೀನಿವಾಸಪುರ:ಹೈವೇ ರಸ್ತೆಯಲ್ಲಿ ಬಾರಿ ವಾಹನಗಳ ಅಪಾಯಕಾರಿ ಪಾರ್ಕಿಂಗ್!
- ಶ್ರೀನಿವಾಸಪುರ:ಟಾಟಾ ಇಂಡಿಕಾ ಕಾರು ಡಿಕ್ಕಿ ದ್ವಿಚಕ್ರ ವಾಹನ ಸವಾರರ ಸಾವು!
- social media ದಲ್ಲಿ ಫೇಮಸ್ ಆಯಿತು ಯುವಕನ ಗಹಗಹಿಸಿ ನಗು!
- ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ”ಬೈಕ್ ಟ್ಯಾಕ್ಸಿ”ವಿರುದ್ದ ಕ್ರಮ ಜರುಗಿಸಿ!
- ಶ್ರೀನಿವಾಸಪುರ:ಎಂ.ಜಿ.ರಸ್ತೆ ಅತಿವೇಗದ ಬೈಕ್ ಚಾಲನೆ ಅಪಘಾತ ನಾಲ್ವರಿಗೆ ಗಾಯ!
- ಅಗ್ರಿಗೋಲ್ಡ್ ಸಂತ್ರಸ್ತರಿಗೆ ಆರು ತಿಂಗಳೊಳಗೆ ನ್ಯಾಯ ಒದಗಿಸುವಂತೆ AP ಸಿಎಂ ಸೂಚನೆ!
Monday, June 8



