ನ್ಯೂಜ್ ಡೆಸ್ಕ್:ಛಲ ಇದ್ದರೆ ಮನುಷ್ಯ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಇಲ್ಲೊಬ್ಬ ರೈಲ್ವೆ ಹಮಾಲಿ(ಕೂಲಿ) IAS ಅಧಿಕಾರಿಯಾಗಿರುವುದೆ ಸಾಕ್ಷಿ.ರೈಲ್ವೆ ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕೇರಳದ ಕೂಲಿಯೊಬ್ಬ IAS ಪಾಸ್ ಆದ ಅತ್ಯಂತ ರೊಚಕ ಕಥೆ ಇದು ಇಲ್ಲ ಕೊಡಲಿಲ್ಲ ಸಿಗಲಿಲ್ಲ ಎನ್ನುವ ಯುವ ಸಮುಧಾಯಕ್ಕೆ ಇತನೆ ಪ್ರೇರಣೆ.
ಶ್ರೀನಾಥ್ ಕೇರಳದ ಮುನ್ನಾರ್ ಜಿಲ್ಲೆಯ ನಿವಾಸಿ ಎರ್ನಾಕುಲಂ ರೈಲು ನಿಲ್ದಾಣದಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದ 2018 ರಲ್ಲಿ, ತನ್ನ ಗಳಿಕೆಯಿಂದ ಕುಟುಂಬದ ನಿರ್ವಹಣೆ ಸಾಧ್ಯವಾಗದ್ದನ್ನು ಅರಿತುಕೊಂಡು ತನ್ನ ಆರ್ಥಿಕ ಸ್ಥಿತಿ ಮತ್ತು ತನ್ನ ಕುಟುಂಬದ ಭವಿಷ್ಯತ್ತಿಗಾಗಿ ಎರಡು ಪಾಳಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತಾನೆ ಆದರೂ ದಿನಕ್ಕೆ 400 ರಿಂದ 500 ಮಾತ್ರ ಸಿಗುತಿತ್ತು ಇದು ಸಮಸ್ಯೆಯಾಗಿ ಕಾಡತೊಡಗಿದ್ದರಿಂದ ಶ್ರೀನಾಥ್ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಛಲದಿಂದ ಕೇರಳ ಸರ್ಕಾರದ ನೌಕರಿ ಹಿಡಿಯಬೇಕು ಎಂಬ ಹಠಕ್ಕೆ ಬಿದ್ದವನು ಕೋಚಿಂಗ್ ಮುಂದಾಗಿದ್ದಾನೆ ಅಲ್ಲಿ ಭಾರೀ ಬೋಧನಾ ಶುಲ್ಕವನ್ನು ಭರಿಸಲು ಬಯಪಟ್ಟಿದ್ದಾನೆ ಹಾಗೆ ಅಧ್ಯಯನ ಸಾಮಗ್ರಿಗಳನ್ನು ಕೊಳ್ಳಲು ಸಾಧ್ಯವಾಗದೆ ಕೊನೆಗೆ ಕೂಡಿಟ್ಟ ಹಣದಲ್ಲಿ ಸ್ಮಾರ್ಟ್ ಫೋನ್, ಸಿಮ್ ಖರೀದಿಸಿ ರೈಲ್ವೆ ಸ್ಟೇಷನ್ ನಲ್ಲಿ ಸಿಗುತ್ತಿದ್ದ ಉಚಿತ ಇಂಟರ್ ನೆಟ್ ಅನ್ನೇ ಬಳಸಿಕೊಂಡು ಅಂತರ್ಜಾಲದ ಮೂಲಕ ಕೇರಳ ಪಬ್ಲಿಕ್ ಸರ್ವಿಸ್ ಕಮಿಷನ್ (ಕೆಪಿಎಸ್ಸಿ) ರಾಜ್ಯ ಸೇವೆಗಳು ಮತ್ತು ನಂತರ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಗೆ ಆನ್ಲೈನ್ ಮೂಲಕ ಉಪನ್ಯಾಸಗಳನ್ನು ತೆಗೆದುಕೊಂಡು ಪರೀಕ್ಷೆಗಳಿಗೆ ಬೇಕಾದ ಮುಖ್ಯವಾದ ಎಲ್ಲಾ ವೀಡಿಯೊಗಳು, ಅಧ್ಯಯನ ಸಾಮಗ್ರಿಗಳು ಮತ್ತು ಆಡಿಯೊಗಳನ್ನು ಡೌನ್ಲೋಡ್ ಮಾಡಿಕೊಂಡು ಬೋಧನ ಸಂಪನ್ಮೂಲಗಳನ್ನೂ ಕ್ರೂಡಿಕರಿಸಿಕೊಂಡು ಇಲ್ಲಗಳ ನಡುವೆಯೇ ಗೆದ್ದು ಸಾಧಿಸಿರುತ್ತಾನೆ. ತನ್ನ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಕೆ.ಪಿ.ಎಸ್.ಸಿ. ಪರೀಕ್ಷೆಯನ್ನು ಉತ್ತಮ ಶ್ರೇಣಿಯಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾನೆ ಇದು ಆತನ ಸಾಧನೆಗೆ ಪ್ರೇರಣೆಯಾಗಿ ಐಎಎಸ್ ಅಧಿಕಾರಿಯಾಗಬೇಕು ಮುಖ್ಯ ಗುರಿ ಇಟ್ಟುಕೊಂಡು ತಯಾರಿ ಮುಂದುವರೆಸಿ ಕೇಂದ್ರ ಸರ್ಕಾರದ UPSC ಪರಿಕ್ಷೆ ತಗೆದುಕೊಂಡಿದ್ದಾನೆ ಒಂದು ಎರಡು ಮೂರು ಕೊನೆಗೆ ನಾಲ್ಕನೆ ಪ್ರಯತ್ನದಲ್ಲಿ UPSC ಪರಿಕ್ಷೆಯನ್ನು ತೇರ್ಗಡೆಯಾಗಿ ತಮ್ಮ ಕನಸನ್ನು ನನಸು ಮಾಡಿಕೊಂಡ ಶ್ರೀನಾಥ್ ರೈಲ್ವೆ ನಿಲ್ದಾಣದಲ್ಲಿ ಪೋರ್ಟರ್ ಆಗಿದ್ದವ ಇಂದು ದೇಶದ ಅತ್ಯಂತ ಉನ್ನತ ಹುದ್ದೆಯಾದ ಐಎಎಸ್ ಅಧಿಕಾರಿಯಾಗಿ ಅದ್ಭುತವಾದ ಸಾಧನೆ ಮಾಡಿ ಕೊಟ್ಯಾಂತರ ಯುವಕರಿಗೆ ಸ್ಫೂರ್ತಿಯಾಗಿದ್ದು ಅಂಗ್ಲಭಾಷೆಯಲ್ಲಿ ಹೇಳುವಂತೆ Where there is a will, there is a way ಸಾಧಿಸಿ ತೋರಿಸಿದ್ದಾರೆ.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Tuesday, September 17