ಶ್ರೀನಿವಾಸಪುರ: ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ,ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸನ್ ಹತ್ಯೆ ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಶ್ರೀನಿವಾಸಪುರ ಬಂದ್ ಸಂಪೂರ್ಣವಾಗಿ ಯಶಸ್ವಿಯಾಯಿತು.
ಪಟ್ಟಣದ ವ್ಯಾಪಾರಸ್ಥರು,ಹೋಟೆಲ್ ಮಾಲಿಕರು ಮುಂಜಾನೆಯಿಂದಲೆ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚಿ ಬಂದ್ ಬೆಂಬಲಿಸಿದ್ದರು,ಆಟೋ ಚಾಲಕರು ಮತ್ತು ಖಾಸಗಿ ವಾಹನಗಳ ಚಾಲಕರು ಮಾಲಿಕರು ತಮ್ಮ ವಾಹನಗಳನ್ನು ಬೀದಿಗಿಳಿಸದೆ ಬಂದ್ ಗೆ ಸಹಕಾರ ನೀಡಿದ್ದರು,ಬಂದ್ ಅಂಗವಾಗಿ ಬಹುತೇಕ ಶಾಲಾಕಾಲೇಜುಕಳಿಗೆ ರಜಾ ಘೋಷಿಸಲಾಗಿತ್ತು,ರಾಷ್ಟ್ರೀಕೃತ ಬ್ಯಾಂಕುಗಳು ಸೇರಿದಂತೆ ಖಾಸಗಿ ಬ್ಯಾಂಕುಗಳು ವಾಣಿಜ್ಯ ಸಂಸ್ಥೆಗಳು ಬಾಗಿಲು ತೆಗೆದಿದ್ದಾದರೂ ಪ್ರತಿಭಟನಾಕಾರರು ಅವುಗಳ ಬಾಗಿಲು ಹಾಕಿಸಿದರು.ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಮುಳಬಾಗಿಲು.ಕೋಲಾರ,ಚಿಂತಾಮಣಿಗೆ ಒಡಾಡಿತಾದರು ಪಟ್ಟಣದ ಒಳಗೆ ಬಾರದೆ ಹೊರ ವಲಯದ ಸುಮಾರು 1-2 ಕೀ.ಮಿ ದೂರದಿಂದ ಬಸ್ಸುಗಳನ್ನು ಆಪರೇಟ್ ಮಾಡಿದರು,ಬಂದ್ ಬೆಂಬಲಿಸಿ ಪ್ರತಿಭಟನೆಯಲ್ಲಿ ಪುರಷರು ಅಷ್ಟೆ ಅಲ್ಲದೆ ಮಹಿಳೆಯರು ಯುವತಿಯರು ಸ್ವಯಂ ಪ್ರೇರಿತರಾಗಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಬಂದ್ ಗೆ ಕರೆ ನೀಡಿದ್ದ ವಿವಿಧ ಸಂಘಟನೆಗಳ ಕಾರ್ಯಕರ್ತರು ಇಂದಿರಾಭವನ್ ವೃತ್ತದಲ್ಲಿ ಕೆಲ ಕಾಲ ಮಾನವ ಸರಪಳಿ ರಚಿಸಿ ಹತ್ಯೆ ಮಾಡಿದವರನ್ನು ಉಗ್ರ ಶಿಕ್ಷೆಗೆ ಒಳಪಡಿಸುವಂತೆ ಅಗ್ರಹಿಸಿ, ಕ್ರಾಂತಿಗೀತೆಗಳನ್ನು ಹಾಡಿದರು.ನಂತರ ಪಟ್ಟಣದ ಮುಖ್ಯ ರಸ್ತೆ, ಎಂ.ಜಿ.ರಸ್ತೆ,ರಾಜಾಜಿ ರಸ್ತೆ ವಲ್ಲಭಾಯಿ ರಸ್ತೆ, ಅಜಾದ್ ರಸ್ತೆಗಳಲ್ಲಿ ಮುಖ್ಯರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.ನಂತರ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಹತ್ಯೆಯಲ್ಲಿ ಭಾಗಿಯಾಗಿ ಬಂಧನಕ್ಕೆ ಒಳಗಾಗಿರುವ ಎಲ್ಲಾ ಆರೋಪಿಗಳನ್ನು ಮಂಪರು ಪರಿಕ್ಷೆಗೆ ಒಳಪಡಿಸಬೇಕು,ಪ್ರಕರಣವನ್ನು ಸಿಒಡಿ ತನಿಖೆಗೆ ನೀಡಬೇಕು,ಕೊಲೆ ಪ್ರಕರಣ ಸಂಬಂದಿಸಿದಂತೆ ಉಚ್ಛಾ ನ್ಯಾಯಲಯದ ಪ್ರಾಸಿಕ್ಯೂಟರ್ ನೇಮಕ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.
ಬಂದ್ ಬೆಂಬಲಿಸಿ ರಿಪಬ್ಲಿಕ್ ಪಾರ್ಟಿ,ಕಾಂಗ್ರೆಸ್ ಪಕ್ಷದ,ದಲಿತ ಸಂಘಟನೆಗಳ,ಪ್ರಗತಿಪರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



