ಶ್ರೀನಿವಾಸಪುರ:-ತಾಲೂಕಿನ ಯಲ್ದೂರು ಗ್ರಾಮ ಪಂಚಾಯಿತಿ ಅದ್ಯಕ್ಷರಾಗಿ ಶ್ರೀರಾಮಬಾಬು ಆಯ್ಕೆಯಾಗಿರುತ್ತಾರೆ.
ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಯಲ್ದೂರು ಗ್ರಾಮ ಪಂಚಾಯಿತಿಯ ಅದ್ಯಕ್ಷ ಗಾದಿ ಏರುವುದು ಇಲ್ಲಿನ ರಾಜಕಾರಣಿಗಳಿಗೆ ಪ್ರತಿಷ್ಠೆಯ ವಿಚಾರ ಇಲ್ಲಿ ಎರಡನೆ ಅವದಿಗೆ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದಲ್ಲಿಯೇ ಸಾಕಷ್ಟು ಮಂದಿ ಆಕಾಂಕ್ಷಿಗಳು ಇದ್ದರೂ ಯಲ್ದೂರಿನ ಪ್ರಭಾವಿ ರಾಜಕಾರಣಿ ಸ್ಥಳೀಯ ಶ್ರೀರಾಮಬಾಬು @ ವೈದ್ಯಬಾಬು ಎಂದು ಖ್ಯಾತರಾಗಿರುವ ಬಾಬು ಅಧ್ಯಕ್ಷ ಸ್ಥಾನದ ಪ್ರಭಲ ಆಕಾಂಕ್ಷಿಯಾಗಿ ಚುನಾವಣೆಗೆ ಸ್ಪರ್ದಿಸಿ ಗೆಲವು ಸಾಧಿಸಿರುತ್ತಾರೆ.
21 ಸದಸ್ಯ ಬಲದ ಯಲ್ದೂರು ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್ ಬೆಂಬಲಿತ 11 ಸದಸ್ಯರು ಕಾಂಗ್ರೇಸ್ ಬೆಂಬಲಿತ 10 ಸದಸ್ಯರು ಇದ್ದು ಅದ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಟಿ.ಎ ಶ್ರೀರಾಮಬಾಬು ಕಾಂಗ್ರೇಸ್ ಬೆಂಬಲಿತ ಅಬ್ಯಾರ್ಥಿಯಾಗಿ ಎಸ್. ಮೋಹನ್ ಬಾಬು ನಾಮಪತ್ರ ಸಲ್ಲಿಸಿದ್ದರು ಚುನಾವಣೆಯಲ್ಲಿ ಯಾವುದೇ ಮ್ಯಾಜಿಕ್ ಲಾಜಿಕ್ ನಡೆಯದೆ ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತಚಲಾಯಿಸಿದ್ದು ಜೆಡಿಎಸ್ ಅಭ್ಯರ್ಥಿ 11 ಮತಗಳು ಹಾಗು ಕಾಂಗ್ರೆಸ್ ಅಭ್ಯರ್ಥಿ 10 ಮತಗಳನ್ನು ಪಡೆದು ಜೆಡಿಎಸ್ ಬೆಂಬಲಿತ ಅಬ್ಯಾರ್ಥಿ ಟಿ.ಎ ಶ್ರೀರಾಮಬಾಬು 1 ಮತದ ಅಂತರದಿಂದ ಗೆಲವು ಸಾಧಿಸಿರುತ್ತಾರೆ.
ಚುನಾವಣಾಧಿಕಾರಿಯಾಗಿ ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೆಶಕ ಕೆ.ಎನ್. ಮಂಜುನಾಥರೆಡ್ಡಿ, ಸಹಾಯಕ ಅಧಿಕಾರಿಯಾಗಿ ಪಿ.ಡಿ.ಓ ಲಕ್ಮೀಶ್ ಕಾಮತ್ ಚುನಾವಣೆ ನಡೆಸಿದರು.
ಹಿತ ವಚನ ನುಡಿದ ಮಾಜಿ ಶಾಸಕ ವೆಂಕಟಶಿವಾರೆಡ್ಡಿ.
ನೂತನ ಅದ್ಯಕ್ಷರಾಗಿ ಆಯ್ಕೆಯಾದ ಕೂಡಲೇ ಟಿ.ಎ ಶ್ರೀರಾಮಬಾಬು ಅವರನ್ನು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಅಭಿನಂದಿಸಿ ಪಂಚಾಯಿತಿಯಲ್ಲಿ ಪಕ್ಷಾತೀತವಾಗಿ ಕಾರ್ಯನಿರ್ವಹಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ದಿಗೆ ಒತ್ತು ನೀಡಿ ಮೂಲಭೂತ ಸೌಲಬ್ಯಗಳಿಗೆ ಆದ್ಯತೆ ನೀಡಿ ಪಂಚಾಯಿತಿಯಿಂದ ಬರುವ ಸೌಲಬ್ಯಗಳನ್ನು ಪಂಚಾಯಿತಿಯ ಕಟ್ಟಕಡೆಯ ಪ್ರಜೆಗೂ ತಲಪುವಂತೆ ಆಡಳಿತ ನಡೆಸಿ ಯಲ್ದೂರು ಪಂಚಾಯಿತಿಯನ್ನು ತಾಲ್ಲೂಕಿನಲ್ಲೇ ಮಾದರಿ ಪಂಚಾಯಿತಿಯನ್ನಾಗಿ ಮಾಡುವಂತೆ ಹಿತವಚನ ನುಡಿದರು.
ಪಕ್ಷಾತೀತವಾಗಿ ಕಾರ್ಯನಿರ್ವಹಿಸುತ್ತೇನೆ ಶ್ರೀರಾಮಬಾಬು
ಅದ್ಯಕ್ಷ ಶ್ರೀರಾಮಬಾಬು ಮಾತನಾಡಿ ಗೆಲುವಿಗೆ ಪಕ್ಷಾತೀತವಾಗಿ ಸಹಕಾರ ನೀಡಿ ಶ್ರಮಿಸಿದ ಎಲ್ಲಾ ಮುಖಂಡರಿಗೂ ಜೆಡಿಎಸ್ ಪಕ್ಷ ಮುಖಂಡರಿಗೆ ಹಾಗು ಯಲ್ದೂರು ಪಂಚಾಯಿತಿ ಜನತೆಗೆ ವಂದನೆಗಳನ್ನು ತಿಳಿಸಿದ ಅವರು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ನನ್ನ ಮೇಲೆ ವಿಶ್ವಾಸವಿಟ್ಟು ಪಂಚಾಯಿತಿ ಅದ್ಯಕ್ಷರಾಗಲು ಸಹಕರಿಸಿದ್ದಾರೆ ಅವರ ಮಾರ್ಗ ದರ್ಶನದಲ್ಲಿ ಯಾವುದೇ ರಿತಿಯಲ್ಲೂ ಅವರಿಗೆ ಚ್ಯುತಿ ಬಾರದಂತೆ ಪಂಚಾಯಿತಿ ಅಭಿವೃದ್ದಿಗೆ ಶ್ರಮಿಸುತ್ತೇನೆ, ನನ್ನ ಹೆತ್ತಮ್ಮ ಹೇಳಿದಂತೆ ಅಧಿಕಾರ ಶಾಶ್ವತವಲ್ಲ ಅಧಿಕಾರ ಇದ್ದಾಗ ನಾಲ್ಕು ಜನರಿಗೆ ಸಹಾಯವಾಗುವಂತೆ ಕೆಲಸ ಮಾಡುವ ಕುರಿತಾಗಿ ಹೇಳಿದ್ದು ಅದರಂತೆ ಯಾವುದೇ ಪಕ್ಷ ರಾಜಕೀಯಕ್ಕೆ ಅವಕಾಶ ಇಲ್ಲದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನ ಸ್ನೇಹಿ ಆಡಳಿತ ನೀಡುತ್ತೇನೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗೊಟ್ಟುಕುಂಟೆ ಕೃಷ್ಣಾರೆಡ್ಡಿ, ಗ್ರಾಮ ಪಂಚಾಯಿತಿ ಉಪಾದ್ಯಕ್ಷ ಜಿ.ವಿ ರೂಪಾ, ಲಾಯರ್ ಎ.ಮುರಳಿಧರ, ಎಸ್.ಟಿ ನಾರಾಯಣಸ್ವಾಮಿ, ವಿ.ನಾರಾಯಣಸ್ವಾಮಿ, ಹೊಗಳಗೆರೆ ಜಯರಾಮಿರೆಡ್ಡಿ ಮುಂತಾದವರು ಇದ್ದರು.