ನ್ಯೂಜ್ ಡೆಸ್ಕ್: ಶ್ರೀ ವೇದನಾರಾಯಣ ಸ್ವಾಮಿ ದೇವಾಲಯದಲ್ಲಿ ಭಗವಾನ್ ಶ್ರೀ ಮಹಾವಿಷ್ಣುವಿನ ದಶಾವಾತರಗಳಲ್ಲಿ ಒಂದಾದ ಮತ್ಸ್ಯಾವತಾರ (ಮೀನಿನ) ರೂಪದಲ್ಲಿ ದರ್ಶನ ನೀಡುವ ಶ್ರೀ ವೇದನಾರಾಯಣಸ್ವಾಮಿ ದೇವಾಲಯ ಕ್ಷೇತ್ರದ ಇತಿಹಾಸದಲ್ಲಿರುವಂತೆ ಸೋಮಕಾಸುರ ಎಂಬ ರಾಕ್ಷಸನು ಬ್ರಹ್ಮ ದೇವರಿಂದ ವೇದಗಳನ್ನು ಕದ್ದು ಸಮುದ್ರ ಗರ್ಭದಲ್ಲಿ ಬಚ್ಚಿಟ್ಟಿದ್ದಾಗ ಶ್ರೀ ಮಹಾ ವಿಷ್ಣುವು ಮತ್ಸ್ಯಾವತಾರ (ಮೀನಿನ) ರೂಪದಲ್ಲಿ ಹೋಗಿ ಸಮುದ್ರದ ಗರ್ಭದಲ್ಲಿದ್ದ ಸೋಮಕಾಸುರನನ್ನು ಕೊಂದು ಬ್ರಹ್ಮದೇವನಿಗೆ ವೇದಗಳನ್ನು ಪುನಃ ವಾಪಸ್ಸು ತಂದುಕೊಟ್ಟ ಸ್ಥಳ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಇದನ್ನು ವೇದಪುರಿ,ವೇದಾರಣ್ಯ ಕ್ಷೇತ್ರ, ಹರಿಕಂಠಪುರವೆಂದೂ ಕರೆಯಲಾಗುತ್ತಿತ್ತು. ಈ ಸ್ಥಳದಲ್ಲಿ ಪಲ್ಲವರ ಯುಗದ ಆಡಳಿತದಲ್ಲಿ ಭೂದೇವಿ ಶ್ರೀದೇವಿ ಸಮೇತರಾಗಿ ಶ್ರೀ ಕರಿಯ ಮಾಣಿಕ್ಯ ಪೆರುಮಾಳ್ ಎಂಬ ಈ ಸಣ್ಣ ದೇವಾಲಯ ನಿರ್ಮಿಸಲಾಗಿತ್ತು.
ನಂತರದಲ್ಲಿ ವಿಜಯನಗರ ಸಾಮ್ರಾಜ್ಯಾಧಿಶ ಶ್ರೀಕೃಷ್ಣದೇವರಾಯ 1517 ರಲ್ಲಿ ಕುಂಭಕೋಣಂನತ್ತ ಹೋಗುವಾಗ ದಾರಿಯಲ್ಲಿ ತಿರುಮಲ ಶ್ರೀ ವೆಂಕಟೇಶ್ವರನ ದರ್ಶನ ಪಡೆದು ಹರಿಕಂಠಪುರದಲ್ಲಿ ಬಿಡಾರ ಹೂಡಿದನು.ಆಗ ಇಲ್ಲಿನ ದೇವಾಲಯದ ಮಹತ್ವ ಅರಿತು ದೇವಾಲವನ್ನು ಅಭಿವೃದ್ಧಿ ಮಾಡಿ ನಿರ್ಮಾಣಕ್ಕೆ ಸಹಕಾರ ನೀಡಿದ ನಂತರ ಹರಿಕಂಠಪುರ ಗ್ರಾಮವನ್ನು ಹರಿದಾಸ ವಡಮಾಲ ಎಂಬ ವ್ಯಕ್ತಿಗೆ ಪೂಜೆಗಾಗಿ ದಾನವಾಗಿ ನೀಡುತ್ತಾನೆ ಆತ ದೇವಾಲಯ ನಿರ್ಮಾಣವನ್ನು ಹರಿದಾಸರಿಗೆ ವಹಿಸಿದ್ದು, ಅವರು ಶ್ರೀ ಕೃಷ್ಣದೇವರಾಯನ ತಾಯಿ ನಾಗುಲಾಂಬೆಯ ಹೆಸರಿನಿಂದ ಗ್ರಾಮವನ್ನು ನಾಗಲಾಪುರ ಎಂದು ದೇವಾಲಯವನ್ನು ಶ್ರೀ ವೇದನಾರಯಣಸ್ವಾಮಿ ದೇವಾಲಯ ಎಂದು ಪುನಃ ನಾಮಕರಣ ಮಾಡಲಾಯಿತು ಎನ್ನಲಾಗಿದೆ. ತಿರುಪತಿ ಜಿಲ್ಲೆಯ ನಾಗಲಾಪುರದಲ್ಲಿನ ಶ್ರೀ ವೇದನಾರಯಣ ದೇವಾಲಯ 12 ಎಕರೆ ಪ್ರದೇಶದಲ್ಲಿ ಐದು ಪ್ರಾಕಾರಗಳು,ಏಳು ದ್ವಾರಗಳ ಒಳಗೊಂದಂತೆ ಅತ್ಯಂತ ಕಲಾತ್ಮಕವಾಗಿ ನಿರ್ಮಿಸಲಾಗಿದೆ.
ಏಳು ದ್ವಾರಗಳನ್ನು ಆದ್ಯಾತ್ಮಿಕ ರಹಸ್ಯಗಳ ರೂಪುಕಲ್ಪನೆಯಲ್ಲಿ ಸುಂದರವಾಗಿ ವೈಙ್ಞಾನಿಕವಾಗಿ ರೂಪಿಸಲಾಗಿದೆ. ಐದು ಪ್ರಕಾರಗಳನ್ನು ಪ್ರದಕ್ಷೀಣ ಪಥಗಳನ್ನಾಗಿ ವಿಂಘಡಿಸಿದ್ದು ಅನ್ನಮಯ(ದೇಹ),ಪ್ರಾಣಮಯ (ಉಸಿರು),ಮನೋಮಯ(ಮನಸ್ಸು), ವಿಜ್ಞಾನಮಯ (ಜ್ಞಾನ) ಆನಂದಮಯ(ಸಂತೋಷ) ಎಂದು ಮನುಷ್ಯನ ಪಂಚ ಕೋಶಗಳ ಪ್ರತಿಬಿಂಬವಾಗಿ ಗುರುತಿಸಲಾಗುತ್ತದೆ ಇನ್ನು ಏಳು ದ್ವಾರಗಳಲ್ಲಿ ಪ್ರಧಾನ ದ್ವಾರವನ್ನು ಮೋಕ್ಷದ್ವಾರವನ್ನಾಗಿ ಗುರುತಿಸಿದರೆ ಉಳಿದ ಅರು ದ್ವಾರಗಳನ್ನು ಶಟ್ ಚಕ್ರಗಳಾಗಿ ಬಿಂಬಿಸಿ ಮೂಲಾಧಾರ ಚಕ್ರ,ಸ್ವಾಧಿಷ್ಠಾನ ಚಕ್ರ ,ಮಣಿಪೂರಕ ಚಕ್ರ,ಅನಾಹತ ಚಕ್ರ ,ವಿಶುದ್ಧಿ ಚಕ್ರ ವಾಗಿ ಪ್ರದರ್ಶಸುತ್ತದೆ. ಶಿಲ್ಪಕಲೆಯನ್ನು ಕೆತ್ತಲಾಗಿದೆ.ದೇವಾಲಯದ ಮುಖ್ಯ ಗೋಪುರದ ಬಾಗಿಲು ತುಂಬಾ ವಿಶಾಲವಾಗಿದೆ. ಮುಖ್ಯ ಗೋಪುರದ ಎಡ ಮತ್ತು ಬಲಭಾಗದಲ್ಲಿ ಇನ್ನೂ ಎರಡು ಗೋಪುರಗಳಿವೆ. ಶಿಥಿಲಾವಸ್ಥೆ ತಲುಪಿದ ಹಿನ್ನಲೆಯಲ್ಲಿ ಕಬ್ಬಿಣದ ಕಂಬಗಳನ್ನು ಹಾಕಿ ಭದ್ರಪಡಿಸಲಾಗಿದೆ, ದೇವಾಲಯದ ಪ್ರಾಕಾರದಲ್ಲಿ ತೆಂಗಿನ ತೋಟಗಳು ಮತ್ತು ಹೂವಿನ ತೋಟಗಳಿವೆ. ಆವರಣದ ಹಿಂಭಾಗದಲ್ಲಿರುವ ಚಿಕ್ಕ ದ್ವಾರದ ಮೇಲೆ ಮತ್ಸ್ಯಾವತಾರದ ಚಿತ್ರವನ್ನು ಕಾಣಬಹುದು. ಇದು ದೇವಾಲಯದ ಮುಖ್ಯ ಕಂಬದ ಪ್ರತಿರೂಪವಾಗಿದೆ. ನಂತರ ಎರಡನೇ ಗೋಪುರದಿಂದ ಸುತ್ತುವರೆದಿರುವ ಪ್ರಹರಿಯೊಳಗೆ ಮುಖ್ಯ ದೇವಾಲಯವಿದೆ. ಮದುವೆ ಮಂಟಪ ಮತ್ತು ಇತರ ದೇವತೆಗಳ ವಿಗ್ರಹಗಳಿವೆ.ಈ ಪ್ರಾಕಾರದಿಂದ ಗರ್ಭಗುಡಿಯೊಳಗೆ ಹೋಗಬಹುದು. ಅನತಿ ದೂರದಲ್ಲಿ ಸ್ವಾಮಿಯ ಜನ್ಮಸ್ಥಳ ವಿರಟ್ಟು ಇದೆ. ಮೂಲ ವಿರಟ್ಟು ಸೊಂಟದಿಂದ ಪಾದದವರೆಗೆ ಮೀನಿನ ರೂಪದಲ್ಲಿದ್ದರೆ, ದೇವತೆಗಳ ಜೊತೆಗೆ ಶಂಖ ಮತ್ತು ಚಕ್ರಗಳನ್ನು ಧರಿಸಿರುವ ಆಕೃತಿಯನ್ನು ಕಾಣಬಹುದು. ಈ ಗರ್ಭಗುಡಿಯ ಸುತ್ತಲೂ ಇನ್ನೊಂದು ಪ್ರಾಂಗಣವಿದೆ. ಪ್ರಾಂಗಣದಲ್ಲಿ ಅನೇಕ ಉಪ-ದೇವಾಲಯಗಳಿವೆ, ದೇವತೆಗಳ ವಿಗ್ರಹಗಳಿಂದ ಅಲಂಕರಿಸಲಾಗಿದೆ. ಇದು ಗರ್ಭಗುಡಿಗೆ ಪ್ರದಕ್ಷಿಣೆ ಹಾಕುವ ಮಾರ್ಗವಾಗಿದೆ. ಈ ದೇವಾಲಯದ ರಕ್ಷಣಾತ್ಮಕ ಗೋಡೆಗಳು ಅಲ್ಲೊಂದು ಇಲ್ಲೊಂದು ಕುಸಿದು ಬಿದ್ದಿದ್ದರಿಂದ ಪುನರ್ ನಿರ್ಮಾಣ ಮಾಡಲಾಗಿದೆ. ಮುಖ್ಯ ಗೋಪುರಗಳಲ್ಲಿನ ಶಿಲ್ಪಕಲೆ ವಿಕ್ಷಿಸುತ್ತಿದ್ದರೆ ವಿಜಯನಗರ ಸಾಮ್ರಾಜ್ಯದ ಕಲಾ ವೈಭವ ಹೆಜ್ಜೆ ಹೆಜ್ಜೆಗೂ ಕಾಣ ಸಿಗುತ್ತದೆ.
ದೇವಾಲಯವು 24 ಸೆಪ್ಟೆಂಬರ್ 1967 ರಿಂದ ತಿರುಮಲ ತಿರುಪತಿ ದೇವಸ್ಥಾನದ ಒಡೆತನಕ್ಕೆ ಒಳಪಟ್ಟಿದ್ದು ಅಂದಿನಿಂದ ವೈಖಾಸನ ಆಗಮ ಶಾಸ್ತ್ರದ ಪ್ರಕಾರ ಪ್ರತಿ ದಿನ ತ್ರಿಕಾಲ ಪೂಜೆ ನಿತ್ಯ,ವಾರ,ಪಕ್ಷ, ಮಾಸ, ಸಂವತ್ಸರದ ಉತ್ಸವಗಳು ಕಣ್ಣುಗಳ ಹಬ್ಬವಾಗಿ ನಡೆಯುತ್ತವೆ. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ 25, 26, 27/26, 27 ಮತ್ತು 28 ರಂದು ಸಂಜೆ ಸೂರ್ಯನ ಕಿರಣಗಳು ನೇರವಾಗಿ ಮೂಲ ವಿರಾಟ್ ವಿಗ್ರಹದ ಮೇಲೆ 630 ಅಡಿ ದೂರದಲ್ಲಿರುವ ರಾಜಗೋಪುರದಿಂದ ಮತ್ತು ಮೊದಲ ದಿನ ಭಗವಂತನ ಪಾದದ ಮೇಲೆ ಬರುತ್ತವೆ. ಎರಡನೇ ದಿನ, ಭಗವಂತನ ಹೊಕ್ಕುಳಿನ ಮೇಲೆ, ಮತ್ತು ಮೂರನೇ ದಿನ, ಭಗವಂತನ ಮುಖದ ಮೇಲೆ. ಈ ಕಾರಣಕ್ಕಾಗಿಯೇ ಆ ಮೂರು ದಿನಗಳ ಕಾಲ ಸೂರ್ಯ ಪೂಜೋತ್ಸವವನ್ನು ಆಚರಿಸಲಾಗುತ್ತದೆ.
ಚೈತ್ರ ಶುದ್ಧ ಹುಣ್ಣಿಮೆಯಿಂದ ಹತ್ತು ದಿನಗಳ ಕಾಲ ಬ್ರಹ್ಮೋತ್ಸವ ನಡೆಯಲಿದ್ದು ಗರುಡಸೇವೆ ಮತ್ತು ರಥೋತ್ಸವವನ್ನು ಕಣ್ಣುಗಳ ಹಬ್ಬವಾಗಿ ಆಚರಿಸಲಾಗುತ್ತದೆ. ಇವುಗಳಲ್ಲದೆ ವೈಕುಂಠ ಏಕಾದಶಿ, ರಥಸಪ್ತಮಿ,ಆಂಡಾಳ್ ರಿಟ್ಟು ಉತ್ಸವ, ನವರಾತ್ರಿ ಉತ್ಸವಗಳು ವಿಶೇಷವಾಗಿ ನಡೆಯುತ್ತದೆ.
ಮಕ್ಕಳಿಲ್ಲದ ದಂಪತಿ ಪತಿ ಪತ್ನಿ ಸಮೇತರಾಗಿ ಶ್ರೀ ವೇದನಾರಯಣ ಸ್ವಾಮಿಯನ್ನು ದರ್ಶನ ಮಾಡಿದರೆ ಫಲ ಸಿಗುತ್ತದೆ ಎಂಬ ನಂಬಿಕೆ ಕ್ಷೇತ್ರದಲ್ಲಿದೆ.
ಚಿತ್ತೂರು ಜಿಲ್ಲೆಯ ಪುತ್ತೂರಿನಿಂದ 35 ಕಿಮೀ ಮತ್ತು ತಿರುಪತಿಯಿಂದ 75 ಕಿಮೀ ದೂರದಲ್ಲಿ ಚೆನ್ನೈ-ತಿರುಪತಿ ಹೆದ್ದಾರಿಯಲ್ಲಿದೆ.ತಿರುಪತಿ ದೇವಾಲಯದಿಂದ ಪ್ರತಿದಿನ ಬಸ್ ಸೌಕರ್ಯ ಇರಲಿದೆ ಎನ್ನಲಾಗಿದೆ.
ಶ್ರೀನಿವಾಸಪುರ,ಕೋಲಾರ,ಚಿಂತಾಮಣಿ ಭಾಗದಿಂದ ಹೋಗಲಿಚ್ಚಿಸುವರು ನಾಲ್ಕು ಗಂಟೆ ಪ್ರಯಾಣದಲ್ಲಿ ಮುಳಬಾಗಿಲು ಮಾರ್ಗವಾಗಿ ಚಿತ್ತೂರು ಪುತ್ತೂರು ಮೂಲಕ ನಾಗಲಪುರಂ ತಲುಪಬಹುದಾಗಿದೆ.ಕ್ಷೇತ್ರದಲ್ಲಿ ಉಳಿದುಕೊಳ್ಳಲು ದೇವಾಲಯದ ಬಳಿಯಲ್ಲಿಯೇ ಖಾಸಗಿ ವಸತಿ ಗೃಹಗಳು ಇದೆ