ನ್ಯೂಜ್ ಡೆಸ್ಕ್:ಆರ್ಥಿಕವಾಗಿ ಸಾಮಾಜಿಕವಾಗಿ ಅನಕೂಲವಂತರಾಗಿದ್ದರು ಉತ್ತಮ ಕುಟುಂಬದ ಹಿನ್ನಲೆ ಇದ್ದು ಯುಕ್ತವಯಸ್ಸು ಎಲ್ಲವೂ ಸರಿಯಿದ್ದರೂ ಯುವಕರಿಗಾಗಲಿ ಯುವತಿಯರಿಗಾಗಲಿ ಮದುವೆ ವಿನಾ ಕಾರಣ ವಿಳಂಬವಾಗುತ್ತಿರುತ್ತದೆ ಇನ್ನೇನೂ ಮದುವೆ ಮಾತುಕತೆ ಎಲ್ಲ ಮುಗಿಯಿತು ಅನ್ನುವ ಸಮಯದಲ್ಲಿ ಎಷ್ಟೋ ಸಂಬಂಧಗಳು ಕ್ಯಾನ್ಸಲ್ ಆಗಿರುವ ಉದಾಹರಣೆಗಳು ಇವೆ ಇದರಿಂದ ಅಂತಹ ಕುಟುಂಬಗಳಲ್ಲಿ ಯುವಕ ಅಥಾವ ಯುವತಿಯೇ ಅಲ್ಲ ಅವರ ಪೋಷಕರು ಮಾನಸಿಕವಾಗಿ ಕ್ಷೋಭೆಗೆ ಒಳಗಾಗುವುದು ಸಾಮನ್ಯ ವಿಚಾರ ಇದಕ್ಕೆ ಒಂದಲ್ಲ ಎರಡಲ್ಲ ಹಲವಾರು ಕಾರಣಗಳು ದೋಷಗಳು ಕಾರಣ ಎನ್ನುತ್ತಾರೆ ಜ್ಯೋತಿಷ್ಯರು ಗ್ರಹ ದೋಷ,ತಾರಬಲ ಕೂಡಿಬಾರದ ದೋಷ, ಜನ್ಮನಕ್ಷತ್ರ ದೋಷ ಒಂದಲ್ಲ ಎರಡಲ್ಲ ಹಲವಾರು ದೋಷಗಳಿಗೂ ವರಾಹರೂಪದ”ನಿತ್ಯ ಕಲ್ಯಾಣ ಪೆರುಮಾಳ್ ದರ್ಶಿಸಿದರೆ ಪರಿಹಾರ ಸಿಗುತ್ತದೆ ಎಂಬುದು ಇಲ್ಲಿ ದರ್ಶನ ಪಡೆದವರ ಅನುಭವದ ಮಾತು.
ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿರುವ ನಿತ್ಯ ಕಲ್ಯಾಣ ಪೆರುಮಾಳ್ ದೇವಸ್ಥಾನದಲ್ಲಿ ಪೆರುಮಾಳ್ ಅಂದರೆ ಶ್ರೀ ಮಹಾ ವಿಷ್ಣು. ಜತೆಗೆ ಲಕ್ಷ್ಮಿ ಇರುವಂತ ವರಾಹ ದೇವರ ಸನ್ನಿಧಿ. ಮದುವೆ ತಡವಾಗುತ್ತಿರುವ ಯುವಕ ಯುವತಿಯರು ಜೀವನ ಸಂಗಾತಿಯನ್ನು ಹುಡುಕುತ್ತಿರುವ ಜನರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲು ದೇವಾಲಯದ ಅವರಣದಲ್ಲಿನ ಕೊಳದಲ್ಲಿ ಸ್ನಾನ ಮಾಡಿ ದೇವಾಲಯದಲ್ಲಿ ನೀಡುವ ಹೂಹಾರವನ್ನು ಧರಿಸಿ ದೇವಾಲಯವನ್ನು ಪ್ರದರ್ಶನ ಮಾಡುವಂತಾಗಬೇಕು ನಂತರ ವಿವಾಹ ಆದ ನಂತರ ಅವರು ಮತ್ತೆ ದೇವಸ್ಥಾನಕ್ಕೆ ಬಂದು ತಮ್ಮ ಪ್ರಾರ್ಥನೆಗಳನ್ನು ಭಗವಂತನಿಗೆ ಸಲ್ಲಿಸಿ ಹೂಹಾರವನ್ನು ಇಲ್ಲಿ ಸಮರ್ಪಸುತ್ತಾರೆ ಎಂದು ಹೇಳಲಾಗುತ್ತದೆ ದೇವಾಲಯದಲ್ಲಿರುವ ಕೊಳದಲ್ಲಿ ಸ್ನಾನ ಮಾಡಿದರೆ ಜೀವನ ಸಂಗಾತಿಯನ್ನು ಹುಡುಕುತ್ತಿರುವ ವ್ಯಕ್ತಿಗಳ ಎಲ್ಲಾ ದೋಷಗಳು ನಿವಾರಣೆಯಾಗಿ ವಿಶೇಷ ಶಕ್ತಿಯನ್ನು ಪಡೆಯುತ್ತಾರೆ ಎಂದು ಹೇಳುತ್ತಾರೆ ಈ ದೇವರಲ್ಲಿ ಪೂಜೆ ಸಲ್ಲಿಸಿ ನಿಯಮಾನುಸಾರ ಪ್ರಾರ್ಥನೆ ಮಾಡಿದರೆ ಶೀಘ್ರ ವಿವಾಹ ನಿಶ್ಚಯವಾಗುತ್ತದೆ ಎಂಬುದು ಪ್ರಚಲಿತದಲ್ಲಿರುವ ನಂಬಿಕೆ.
ಬಹುತೇಕ ಎಲ್ಲಾ ದೇವಾಲಯಗಳಲ್ಲಿ ದೇವರಿಗೆ ವಿಶೇಷ ದಿನಗಳಲ್ಲಿ ಕಲ್ಯಾಣೋತ್ಸವ ಮಾಡಿಸುವುದನ್ನು ನೀವು ಕೇಳಿರುತ್ತೀರಿ. ಆದರೆ ಈ ದೇವಸ್ಥಾನದಲ್ಲಿ ವರ್ಷದ ಎಲ್ಲ ದಿನವೂ ಕಲ್ಯಾಣೋತ್ಸವ ನಡೆಯುತ್ತದೆ.
ದೇವಾಲಯದ ಇತಿಹಾಸ:
ದಂತಕಥೆಯ ಪ್ರಕಾರ, ವಿಷ್ಣುವಿನ ದ್ವಾರಪಾಲಕರಾದ ಜಯ ಮತ್ತು ವಿಜಯ ಅವರು ಋಷಿಗಳಿಂದ ಶಾಪಗ್ರಸ್ತರಾಗಿ ಮುಂದೆ ಅಸುರರಾಗಿ ಭೂಮಿಯ ಮೇಲೆ ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪು ಎಂದು ಸಹೋದರರಾಗಿ ಋಷಿ ಕಶ್ಯಪ ಮತ್ತು ಅವನ ಪತ್ನಿ ದಿತಿಗೆ ಜನಿಸುತ್ತಾರೆ ರಾಕ್ಷಸ ಸಹೋದರರು ತಮ್ಮ ಶಕ್ತಿಗಳಿಂದಾಗಿ ಬ್ರಹ್ಮಾಂಡದ ಮೇಲೆ ಹಿಡಿತ ಸಾಧಿಸುತ್ತಾರೆ. ಹಿರಿಯ ಸಹೋದರ ಹಿರಣ್ಯಾಕ್ಷನು ತಪಸ್ಸು ಮಾಡಿ ಬ್ರಹ್ಮನಿಂದ ವರವನ್ನು ಪಡೆಯುತ್ತಾನೆ, ಅದು ಅವನನ್ನು ಯಾವುದೇ ಪ್ರಾಣಿ ಅಥವಾ ಮಾನವನಿಂದ ಅಜೇಯನನ್ನಾಗಿ ಮಾಡುತ್ತದೆ. ಹಿರಣ್ಯಾಕ್ಷನು ಭೂಮಿಯನ್ನು ವಶಪಡಿಸಿಕೊಂಡವನಾಗಿ ಭೂದೇವಿಯ ರೂಪ ಭೂಮಂಡಲವನ್ನು ವಶಪಡಿಸಿಕೊಂಡು ಅದನ್ನು ತಗೆದುಕೊಂಡು ಹೋಘಿ ಗರ್ಭೋಧಕ ಎಂಬ ಕಾರಣಿಕ ಸಾಗರದ ಅಡಿಯಲ್ಲಿ ಬಚ್ಚಿಡುತ್ತಾನೆ ಇದರಿಂದ ಬೆಚ್ಚಿದ ದೇವತೆಗಳು ಮತ್ತು ಋಷಿಗಳು ಭೂಮಂಡಲವನ್ನು ಸಂರಕ್ಷಣೆ ಮಾಡುವಂತೆ ಶ್ರೀವಿಷ್ಣುವಿನ ಮೋರೆ ಹೋಗುತ್ತಾರೆ ಹಿರಣ್ಯಾಕ್ಷ ವರ ಪಡೆಯುವಾಗ ತನ್ನನ್ನು ಕೊಲ್ಲಬಲ್ಲ ಪ್ರಾಣಿಗಳ ಪಟ್ಟಿಯಲ್ಲಿ ವರಾಹ ರೂಪಂ(ಹಂದಿಯನ್ನು)ಸೇರಿಸದ ಕಾರಣ, ಭಗವಂತ ಶ್ರೀ ವಿಷ್ಣುವು ಹಿರಣ್ಯಾಕ್ಷ ವರದ ಮಾಹಿತಿ ಪಡೆದು ಬೃಹತ್ ದಂತಗಳೊಂದಿಗೆ ವರಾಹ ರೂಪ ಧರಿಸಿ ಆದಿಸಾಗರಕ್ಕೆ ಹೋಗಿ ಹಿರಣ್ಯಾಕ್ಷನೊಂದಿಗೆ ಭಯಾನಕ ಯುದ್ದ ಮಾಡಿ ವಿಜಯಿಶಾಲೆಯಾದ ಶ್ರೀ ಮಹಾವಿಷ್ಣು ವರಾಹರೂಪದಲ್ಲಿನ ತನ್ನ ದಂತದ ಮೇಲೆ ಭೂಂಡಲ(ಭೂಮಿಯನ್ನು) ಎತ್ತಿಕೊಂಡು ಸಾಗರದಿಂದ ಹೋರಬಂದು ಮೂಲ ಸ್ಥಳದಲ್ಲಿ ಭೂಮಿಯನ್ನು ಮರುಸ್ಥಾಪಿಸುತ್ತಾನೆ. (ಭೂ ಮಂಡಲ ಸಾಗರದಲ್ಲಿ ಬಿದ್ದಿತ್ತು ಎಂದು ಖಗೋಳ ಶಾಸ್ತ್ರಙ್ಞರು ಖಚಿತಪಡಿಸಿದ್ದಾರೆ)ನಂತರ ಭೂಮಿ ಅಥಾವ ಭೂದೇವಿಯನ್ನು ವರಾಹ ರೂಪದ ವಿಷ್ಣು ಈ ಸ್ಥಳದಲ್ಲಿಯೇ ಕಲ್ಯಾಣವಾದ ಎಂದು ಹೇಳುತ್ತಾರೆ
108 ವೈಷ್ಣವ ಕ್ಷೇತ್ರಗಳ ಪೈಕಿ 62ನೇ ವರಾಹ ಕ್ಷೇತ್ರವಾಗಿರುವ ದೇವಾಲಯ.
ಕುನಿ ಅನ್ನುವ ಮಹರ್ಷಿಯೊಬ್ಬರು ತಮ್ಮ ಮಗಳ ಜೊತೆಗೂಡಿ ಸ್ವರ್ಗಸೇರಲು ಪ್ರಾರ್ಥನೆ ಮಾಡುತ್ತಾರೆ ಆಗ ಋಷಿ ಮಾತ್ರ ಸ್ವರ್ಗಕ್ಕೆ ಹೋಗಲು ಅವಕಾಶ ಸಿಗುತ್ತದೆ ಋಷಿ ಮಗಳು ಅವಿವಾಹಿತೆ ಅನ್ನೋ ಕಾರಣಕ್ಕೆ ಸಾಧ್ಯವಾಗುವುದಿಲ್ಲ. ಇದರಿಂದ ಋಷಿ ಮಗಳು ಮದುವೆ ಮಾಡಿಸಲು ನಾರದರ ಸಹಾಯ ಕೇಳಿದ್ದು ಅದರಂತೆ ಆಕೆಯನ್ನು ಮದುವೆಯಾಗುವಂತೆ ಹಲವಾರು ಋಷಿ ಮುನಿಗಳನ್ನು ನಾರದರು ಮನವಿ ಮಾಡುತ್ತಾರೆ ಇದರಲ್ಲಿ ಕಲವಮಹರ್ಷಿ ಋಷಿ ಮಗಳನ್ನು ವಿವಾಹ ಆಗುತ್ತಾನೆ. ಆ ದಂಪತಿಗೆ 360 ಜನ ಹೆಣ್ಣುಮಕ್ಕಳು ಹುಟ್ಟುತ್ತಾರೆ ಇದಕ್ಕೆ ಪರಿಹಾರ ಎನ್ನುವಂತೆ ಕಲವ ಋಷಿಯು ತನ್ನ ಮಕ್ಕಳನ್ನು ಮದುವೆ ಆಗುವಂತೆ ವಿಷ್ಣುವನ್ನು ಕುರಿತು ತಪಸ್ಸು ಮಾಡುತ್ತಾನೆ ಇದಕ್ಕೆ ಭಗವಾನ್ ಶ್ರೀವಿಷ್ಣು ಪ್ರತ್ಯಕ್ಷವಾಗುವುದಿಲ್ಲ ಈ ಮದ್ಯೆ ಒಂದು ದಿನ ತೇಜಸ್ವಿಯಾದ ಬ್ರಾಹ್ಮಣ ಯುವಕನೊಬ್ಬ ದಿವ್ಯದೇಶ ಯಾತ್ರೆ ಮಾಡುತ್ತಿರುವುದಾಗಿ ಕಲವ ಋಷಿಗೆ ಸಿಗುತ್ತಾನೆ ಆಗ ಋಷಿ ತನ್ನ ತನ್ನ ಮಕ್ಕಳನ್ನು ಮದುವೆಯಾಘಿ ನನಗೆ ಪರಿಹಾರ ಸಿಗುವಂತೆ ಮಾಡಿ ಎಂದು ಬ್ರಾಹ್ಮಣ ಯುವಕನನ್ನು ಕೇಳಿಕೊಳ್ಳುತ್ತಾನೆ. ಅದಕ್ಕೆ ಒಪ್ಪಿಕೊಳ್ಳುವ ಯುವಕ ದಿನಕ್ಕೆ ಒಬ್ಬರಂತೆ 360 ಹೆಣ್ಣುಮಕ್ಕಳನ್ನು ಮದುವೆಯಾಗುತ್ತಾನೆ. ಕೊನೆಯ ದಿನದಂದು ಬ್ರಾಹ್ಮಣ ಯುವಕ ತನ್ನ ನಿಜ ಸ್ವರೂಪ ತೋರುತ್ತಾನೆ. ಆತನೆ ವರಾಹ ರೂಪದಲ್ಲಿರುವ ಶ್ರೀಮನ್ನಾನಾರಾಯಣ ರೂಪ ದರ್ಶನ ಮಾಡಿಸಿ ಎಲ್ಲ ಹೆಣ್ಣುಮಕ್ಕಳನ್ನು ಒಗ್ಗೂಡಿಸಿ ಸ್ತ್ರೀ ರೂಪ ನೀಡಿ ದೇವಿಗೆ ‘ಅಖಿಲವಲ್ಲಿ’ ಎಂಬ ಹೆಸರು ನೀಡಿ ಭಗವಾನ್ ವಿಷ್ಣುವು ಆ ದೇವಿಯನ್ನು ತನ್ನ ಎಡ ತೊಡೆಯ ಮೇಲೆ ಕುಳಿತುಕೊಳ್ಳುವಂತೆ ಮಾಡಿದ್ದರಿಂದ ಈ ಸ್ಥಳಕ್ಕೆ ‘ತಿರುವಿದಂಡೈ’ ಎಂದು ಹೆಸರು ಬಂದಿತು.ಎಂಬುದು ಇಲ್ಲಿನ ದೇವಾಲಯದ ಪುರಾಣದಲ್ಲಿನ ಇತಿಹಾಸ ಕಥೆ.
ಹೀಗೆ ನಿತ್ಯವೂ ಕಲ್ಯಾಣ ಮಾಡಿಕೊಳ್ಳುವ ಶ್ರೀ ವಿಷ್ಣು, ಬೇರೆಲ್ಲೂ ಇಲ್ಲವಂತೆ. ನಂಬಿಕೆಯಿಂದ ದರ್ಶಿಸಿ, ಭಕ್ತಿಯಿಂದ ಆರಾಧಿಸಿದರೆ ಈ ಕಲ್ಯಾಣ ಪೆರುಮಾಳ್ ಬದುಕಿನಲ್ಲಿ ಕಲ್ಯಾಣಕ್ಕೆ ಅನಕೂಲ ಉಂಟು ಮಾಡುತ್ತಾನೆ ಎಂಬುದು ಜನಜನಿತ ನಂಬಿಕೆ.
ಇಲ್ಲಿ ಮೂಲವಿರಾಟ್ ಶ್ರೀ ನಿತ್ಯಕಲ್ಯಾಣ ಪೆರುಮಾಳ್ ಮತ್ತು ಅಖಿಲವಲ್ಲಿ ಅಮ್ಮನವರು,ಗರ್ಭಗುಡಿಯ ಬಲಭಾಗದಲ್ಲಿ ಕೋಮಲವಲ್ಲಿ ಅಮ್ಮನವರ ಸನ್ನಿಧಿ ಮತ್ತು ಎಡಭಾಗದಲ್ಲಿ ಆಂಡಾಳಮ್ಮವಾರಿಯ ಸನ್ನಿಧಿಯಿದೆ.
ದೇವಾಲಯ ನಿರ್ಮಾಣ
7ನೇ ಶತಮಾನದಲ್ಲಿ ಪಲ್ಲವರ ಆಳ್ವಿಕೆಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದ್ದು ಪಲ್ಲವರು 6 ರಿಂದ 9 ನೇ ಶತಮಾನದ ಅವಧಿಯಲ್ಲಿ ಕಾಂಚೀಪುರಂ ರಾಜಧಾನಿಯಾಗಿತ್ತು. ಅವರು ಮಾಮಲ್ಲಪುರಂ ಮತ್ತು ತಿರುವಿದಂತೈಗಳನ್ನು ತಮ್ಮ ಬಂದರು ಪಟ್ಟಣಗಳಾಗಿ ಅಭಿವೃದ್ದಿ ಪಡಿಸಿದ್ದರು ಈ ಎರಡು ಪಟ್ಟಣಗಳು ಬಲವಾದ ಬಂದರುಗಳಾಗಿ ಖ್ಯಾತಿಯಾಗಿತ್ತು ಹಲವಾರು ಸ್ಮಾರಕ ದೇವಾಲಯಗಳನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ.
ಪಲ್ಲವರ ಕಾಲದಲ್ಲಿಯೇ ದೇವಾಲಯ ನಿರ್ಮಾಣ ಮಾಡಿದ ಬಗ್ಗೆ 959 CE ದಿನಾಂಕದ ಶಾಸನಗಳನ್ನು ಹೊಂದಿದ್ದು. 959 AD ಯ ಅವಧಿಯಲ್ಲಿ ರಾಷ್ಟ್ರಕೂಟ ರಾಜ ಕೃಷ್ಣ III (939-67) ನಿಂದ ದೇವಾಲಯಕ್ಕೆ ದೀಪವನ್ನು ಉಡುಗೊರೆಯಾಗಿ ನೀಡಿದ್ದನ್ನು ಹೇಳಿತ್ತದೆ. 1115 ಸೆಂಚೂರಿ ಸಮಯದಲ್ಲಿ ದೇವಾಲಯಕ್ಕೆ ಕುಲೋತ್ತುಂಗ ಚೋಳ ಹಿತಚಿಂತಕ ಕೊಡುಗೆಗಳನ್ನು ನೀಡಿದ ಬಗ್ಗೆ ಸೂಚಿಸುವ ಶಾಸನಗಳಿವೆ.ದೇವಾಲಯದಲ್ಲಿರುವ ಶಾಸನಗಳ ಕಾರಣಗಳಿಂದಾಗಿ ದೇವಾಲಯವನ್ನು ಭಾರತೀಯ ಪುರಾತತ್ವ ಇಲಾಖೆಯ ಸರ್ವೇಕ್ಷಣೆಯ ಪ್ರದೇಶ ಎಂದು ಘೋಷಿಸಲಾಗಿದೆ.
ದೇವಾಲಯಕ್ಕೆ ಹೋಗುವ ಮಾಹಿತಿ
ಮುಂಜಾನೆ 6 ರಿಂದ 12 ರವರೆಗೆ ಮತ್ತು ಮತ್ತೆ ಮಧ್ಯಾಹ್ನ 3 ರಿಂದ ರಾತ್ರಿ 8 ರವರೆಗೆ ತೆರೆದಿರುತ್ತದೆ. ಚೆನ್ನೈನಿಂದ ಇಸಿಆರ್ ಮತ್ತು ಮಹಾಬಲಿಪುರಂಗೆ ಹೋಗುವ ಎಲ್ಲಾ ಬಸ್ಸುಗಳು ತಿರುವಿಂಡೈ ಮೂಲಕ ಹಾದು ಹೋಗುತ್ತವೆ.
ಚನೈ ನಗರದ ಕೋವಲಂಗೆ ಹತ್ತಿರದಲ್ಲಿರುವ ಈ ದೇವಾಲಯ ಕಾಂಚೀಪುರಂ ಜಿಲ್ಲೆಯಲ್ಲಿದೆ ಬೆಂಗಳೂರಿನಿಂದ 360 ಕಿ.ಮೀ ದೂರದಲ್ಲಿರುವ ಇಲ್ಲಿಗೆ ಕಾರಿನಲ್ಲಿ ಹೋಗುವುದಾದರೆ ಆರೇಳು ಗಂಟೆಗಳ ಪ್ರಯಾಣ.ಬಸ್ಸಿನಲ್ಲಿ ಹೋಗಬೇಕಾದವರು ಚನೈ ನಗರದಿಂದ ಮಹಾಬಲಿಪುರಂಗೆ ಹೋಗುವ ಬಸ್ಸಿನಲ್ಲಿ ಹೋಗಬಹುದಾಗಿದೆ.
ದೇವಾಲಯಕ್ಕೆ ಹತ್ತಿರದ ವಿಮಾನ ನಿಲ್ದಾಣವು ಚೆನ್ನೈನಲ್ಲಿದೆ,ಇದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.ರೈಲು ಮೂಲಕ
ದೇವಾಲಯಕ್ಕೆ ಹೋಗುವಂತವರು ಚೆನ್ನೈಗೆ ಹೋಗಿ ಹೋಗಬಹುದಾಗಿದೆ.