ನ್ಯೂಜ್ ಡೆಸ್ಕ್:ನಟಸಿಂಹ ನಂದಮೂರಿ ಬಾಲಕೃಷ್ಣ ನಾಯಕನಾಗಿ ಸ್ಟಾರ್ ಡೈರೆಕ್ಟರ್ ಬಾಬಿಕೊಲ್ಲಿ (ಕೆ.ಎಸ್.ರವೀಂದ್ರ) ನಿರ್ದೇಶನದಲ್ಲಿ ಸಿತಾರಾ ಎಂಟರ್ಟೈನ್ಮೆಂಟ್ಸ್ ಬ್ಯಾನರ್ನಡಿಯಲ್ಲಿ ಸೂರ್ಯದೇವರ ನಾಗವಂಶಿ ನಿರ್ಮಿಸುತ್ತಿರುವ ಚಿತ್ರವನ್ನು ಫಾರ್ಚೂನ್ ಫೋರ್ ಸಿನಿಮಾಸ್ ಮತ್ತು ಶ್ರೀಕರ ಸ್ಟುಡಿಯೋಸ್ ಪ್ರಸ್ತುತಪಡಿಸುತ್ತಿದೆ.ಇದು ಬಾಲಕೃಷ್ಣ ಅವರ ವೃತ್ತಿ ಜೀವನದ 109ನೇ ಸಿನಿಮಾ ‘ಅಖಂಡ’, ‘ವೀರಸಿಂಹ ರೆಡ್ಡಿ’, ‘ಭಗವಂತ ಕೇಸರಿ’ಯಂತಹ ಕಂಟಿನ್ಯೂ ಹಿಟ್ಗಳ ಮೂಲಕ ಬಾಲಯ್ಯ ಸೂಪರ್ ಫಾರ್ಮ್ನಲ್ಲಿದ್ದರೆ. ಮೆಘಾಸ್ಟಾರ್ ಚಿರಂಜಿವಿ ನಟನೆಯ ‘ವಾಲ್ತೇರು ವೀರಯ್ಯ’ ಸಿನಿಮಾ ನಿರ್ದೇಶನ ಮಾಡಿದ ಬಾಬಿಕೊಲ್ಲಿ ಕೂಡ ದೊಡ್ಡ ಬ್ಲಾಕ್ಬಸ್ಟರ್ ಸಾಧನೆಯ ಸಾಲಿನಲ್ಲಿದ್ದಾರೆ ಹಾಗಾಗಿ ಬಾಬಿ ಕೊಲ್ಲಿ ನಿರ್ದೇಶದಲ್ಲಿ ಬಾಲಕೃಷ್ಣ ಅವರ 109ನೇ ಸಿನಿಮಾ ಬಾಲಯ್ಯನ ಅಭಿಮಾನಿಗಳಲ್ಲಿ ಭಾರಿ ನೀರಿಕ್ಷೆಗಳನ್ನು ಹುಟ್ಟುಹಾಕಿದೆ.
ಶಿವರಾತ್ರಿ ವಿಶೇಷ ಸಂದರ್ಭದಲ್ಲಿ ಬಾಲಕೃಷ್ಣ 109ನೇ ಸಿನಿಮಾದ ಝಲಕ್ ಬಿಡುಗಡೆಯಾಗಿದ್ದು ಇದು 1 ನಿಮಿಷ 24 ಸೆಕೆಂಡುಗಳ ಗ್ಲಿಂಪ್ಸ್ ನಲ್ಲಿ ಉರಿಯುತ್ತಿರುವ ಕಾಡು,ನೀರು ಹರಿಯುವ ಡ್ಯಾಮನಲ್ಲಿ ನೀರಿನ ಬದಲು ಬೆಂಕಿ ಜರಿಯಂತೆ ದುಮ್ಮಿಕ್ಕುವ ದೃಶ್ಯಗಳನ್ನು ತೋರಿಸಲಾಗಿದೆ.ಜೊತೆಗೆ ಬಾಲಕೃಷ್ಣ ಅವರ ಫಸ್ಟ್ ಲುಕ್ ನಲ್ಲಿ ಕತ್ತಿ ಹಿಡಿದಿರುವ ಸ್ಟಿಲ್ಗಳು. ಬಾಲಯ್ಯನನ್ನು ಸ್ಟೈಲಿಶ್ ಆಗಿ ತೋರಿಸುವ ಪ್ರಯತ್ನವನ್ನು ಬಾಬಿ ಮಾಡಿದ್ದಾರೆ ಇದರಲ್ಲಿ ಖಳನಾಯಕನಾಗಿ ಖ್ಯಾತ ನಟ ಬಾಬಿ ಡಿಯೋಲ್ ನಟಿಸಿದ್ದು ‘ఏంట్రా వార్ డిక్లేర్ చేస్తున్నావా?’ అంటూ విలన్ గ్యాంగ్లోని వ్యక్తి అంటే.. దానిని బాలయ్య ‘సింహం.. నక్కల మీదకు వస్తే వార్ అవ్వదురా లఫూట్’ ‘ఇట్స్ కాల్డ్ హంటింగ్’ ವಿಲನ್ ಗ್ಯಾಂಗಿನ ವ್ಯಕ್ತಿ ‘ಯಾವಾಗ ಯುದ್ಧ ಘೋಷಿಸುತ್ತೀಯ’ ಎಂದಾಗ ಅದಕ್ಕೆ ಬಾಲಯ್ಯ ನರಿಗಳ ಮೇಲೆ ಸಿಂಹ ಬಂದರೆ ಅಲ್ಲಿ ಯುದ್ಧ ನಡೆಯುವುದಿವೊ ಲಫೂಟ್ ಅದನ್ನು ಬೇಟೆ ಎನ್ನುತ್ತಾರೆ’ ಎಂದು ಬಾಲಯ್ಯ ಹೇಳುವ ಜಬರದಸ್ತ್ ಡೈಲಾಗ್ ಅಭಿಮಾನಿಗಳಿಗೆ ಹುರುಪು ತರುವುದಲ್ಲದೆ ಸಿನಿಮಾ ಮೇಲೆ ನೀರಿಕ್ಷೆಗಳನ್ನು ಹೆಚ್ಚಿಸಿದೆ. ಈ ಗ್ಲಿಂಪ್ಸ್ ಗಳಿಗೆ ತಮನ್ ನೀಡಿರುವ ಹಿನ್ನೆಲೆ ಸಂಗೀತಕ್ಕೂ ಮೆಚ್ಚುಗೆ ಸಿಕ್ಕಿದೆ.
ನಿರ್ದೇಶಕ ಬಾಬಿ ಸೈಲೆಂಟ್ ಆಗಿ ಈ ಸಿನಿಮಾ ಮಾಡುತ್ತಿದ್ದು ಸದ್ಯದಲ್ಲೇ ಚಿತ್ರ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂಬ ಮಾತು ಕೇಳಿ ಬರುತ್ತಿದೆ ಆದರೂ ಸಿನಿಮಾ ಶೂಟಿಂಗ್ ಎಲ್ಲಿ ನಡೆಯುತ್ತಿದೆ ಎಂಬ ಗುಟ್ಟು ಬಿಟ್ಟುಕೊಡದೆ ಸಿನಿಮಾ ತಂಡ ಗೌಪ್ಯತೆಯನ್ನು ಅನುಸರಿಸುತ್ತಿದೆ ಮಾಹಿತಿ ಪ್ರಕಾರ ಈ ಚಿತ್ರದ ಅರ್ಧಕ್ಕೂ ಹೆಚ್ಚು ಚಿತ್ರೀಕರಣ ಈಗಾಗಲೇ ಮುಗಿದಿದ್ದು ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಒಂದು ಹೇಳಲಾಗುತ್ತಿರುವ ಮಾಹಿತಿಯಂತೆ ಬೇಸಿಗೆಯ ರಜೆಯಲ್ಲಿ ಚಿತ್ರ ಬಿಡುಗಡೆ ಮಾಡಲು ಯೋಜಿಸುತ್ತಿರುವುದಾಹಿ ಹೇಳಲಾಗುತ್ತಿದೆ ಇದಕ್ಕೂ ಮೊದಲು ಚಿತ್ರವನ್ನು ದಸರಾಕ್ಕೆ ಬಿಡುಗಡೆ ಮಾಡಲು ಬಯಸಿದ್ದರಾದರೂ ಚಿತ್ರೀಕರಣ ಮುಗಿದಿರುವ ಹಿನ್ನೆಲೆಯಲ್ಲಿ ಮೊದಲೇ ಬಿಡುಗಡೆ ಮಾಡಲು ಮುಂದಾಗಿದ್ದಾರೆ ಎಂಬ ಸಮಾಚಾರ ಕೇಳಿಬರುತ್ತಿದೆ ಈ ಎಲ್ಲಾ ಹಿನ್ನಲೆಯಲ್ಲಿ ಚಿತ್ರವನ್ನು ಬೇಸಿಗೆಯಲ್ಲಿ ಅಂದರೆ ಮೇ ತಿಂಗಳಲ್ಲಿ ಬಿಡುಗಡೆ ಮಾಡಲು ತಯಾರಕರು ಸಿದ್ಧತೆ ನಡೆಸಿದ್ದಾರಂತೆ.
ಮೂವರು ನಾಯಕಿಯರು
ಈ ಸಿನಿಮಾದಲ್ಲಿ ಮೂವರು ನಾಯಕಿಯರು ನಟಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ತ್ರಿಷಾ, ಪ್ರಿಯಾಮಣಿ, ಊರ್ವತಿ ರೌಟೇಲಾ ಹೆಸರುಗಳು ಕೇಳಿಬಂದಿದೆ ಆಕ್ಷನ್ ಡ್ರಾಮಾದ ಕಥಾ ಹಂದರವನ್ನು ಹೊಂದಿದೆ ಸಿನಿಮಾದಲ್ಲಿ ಶೂಟಿಂಗ್ ಸೆಟ್ ನಲ್ಲಿದ್ದ ಬಾಲಯ್ಯ ಅವರ ಲುಕ್ ಇತ್ತೀಚೆಗೆ ಲೀಕ್ ಆಗಿದ್ದು ಯಂಗ್ ಎನರ್ಜಿಟಿಕೆ ಆಗಿ ಯುವಕನಂತೆ ತಲೆಗೆ ಕ್ಯಾಪ್ ಹಾಕಿಕೊಂಡು ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿ ಸ್ಟೈಲಿಶ್ ಲುಕ್ನಲ್ಲಿ ಬಾಲಯ್ಯ ಕಾಣುತ್ತಾರೆ ಎಂಬ ಕಾಮೆಂಟ್ಗಳು ಕೇಳಿ ಬರುತ್ತಿವೆ. ಬಲ್ಲ ಮೂಲಗಳಂತೆ ಚಿತ್ರದ ಚಿತ್ರೀಕರಣ ಆಂಧ್ರದ ರಾಜಮಂಡ್ರಿಯ ಮಾರೇಡಿಮಿಲ್ಲಿ ಪ್ರಾಂತ್ಯದಲ್ಲಿ ನಡೆಯುತ್ತಿದೆ ಎನ್ನತ್ತಾರೆ.
Breaking News
- ಶ್ರೀನಿವಾಸಪುರ ಅಪರಿಚಿತ ವಾಹನ ಬಡಿದು ದ್ವಿಚಕ್ರದಲ್ಲಿದ್ದ ತಾಯಿ-ಮಗ ಸಾವು
- ಹರಿಯಾಣದಲ್ಲಿ 200 Days ಮುಖ್ಯಮಂತ್ರಿಯಿಂದ ಬಿಜೆಪಿಗೆ ಹ್ಯಾಟ್ರಿಕ್ ಗೆಲವು!
- ಶ್ರೀನಿವಾಸಪುರ ತಾಡಿಗೋಳ್ RTO ಚೆಕ್ ಪೋಸ್ಟ್ ಲೋಕಾಯುಕ್ತ ದಾಳಿ.
- ಮುತ್ತಕಪಲ್ಲಿ ಪಂಚಾಯಿತಿ ಅಕ್ರಮಗಳ ತನಿಖೆಗೆ ಆಗ್ರಹ
- ಶ್ರೀನಿವಾಸಪುರ ಕೈಗಾರಿಕೆಗಳಿಗೆ ವಿರೋಧ ಮಾಡಬೇಡಿ ಸಂಘಟನೆಗಳ ಅಗ್ರಹ
- ಯದರೂರು ಕೈಗಾರಿಕೆ ಶೇಷಾಪುರ & ಬೇಟಪ್ಪ ನಡುವೆ ಮಾತಿನ ಜಟಾಪಟಿ!
- ಶ್ರೀನಿವಾಸಪುರದಲ್ಲಿ ಫುಟ್ ಪಾತ್ ಅತಿಕ್ರಮಿಸಿದ್ದ ಅಂಗಡಿಗಳ ತೆರವು
- SHOCKING ತಿನ್ನುವ ಕೇಕ್ನಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ!
- ಯದರೂರಿನಲ್ಲಿ ಸ್ಥಾಪಿಸುವ ಕೈಗಾರಿಕೆ ಬೇರೆಡೆಗೆ ವರ್ಗಾಯಿಸಿ ರೈತರ ಅಗ್ರಹ
- ಕರ್ನಾಟಕದಲ್ಲಿ ಹಿಂದೂ ಹೆಸರಲ್ಲಿ ನೆಲೆಸಿದ್ದ ಪಾಕಿಸ್ತಾನದವರ ಬಂಧನ
Wednesday, October 9