ಶ್ರೀನಿವಾಸಪುರ : ತಾಲೂಕಿನ ಉತ್ತರ ಭಾಗದ ವಾಣಿಜ್ಯಪೇಟೆ ಎಂದು ಖ್ಯಾತಿ ಪಡೆದು ಪ್ರತಿಷ್ಟಿತ ಪಂಚಾಯಿತಿಯಾಗಿ ಗುರುತಿಸಿಕೊಂಡಿರುವ ಗೌನಿಪಲ್ಲಿ ಗ್ರಾ.ಮಪಂಚಾಯಿತಿ ಎರಡನೆಯ ಅವಧಿಯ ಅಧ್ಯಕ್ಷ ಗಾದಿ ಚುನಾವಣೆಯಲ್ಲಿ ಜೆಡಿಎಸ್ನ ಬೆಂಬಲಿತ ಅಭ್ಯರ್ಥಿ ಶೇಷಾದ್ರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
23 ಸದಸ್ಯರ ಗೌನಿಪಲ್ಲಿ ಪಂಚಾಯಿತಿಯಲ್ಲಿ ಜೆಡಿಎಸ್ ಬೆಂಬಲಿತ 14 ಸದಸ್ಯರು, ಕಾಂಗ್ರೆಸ್ ಬೆಂಬಲಿತ 9 ಸದಸ್ಯರಿದ್ದು, ಜೆಡಿಎಸ್ ಅಧಿಕಾರದಲ್ಲಿದ್ದ ಪಂಚಾಯಿತಿಯಲ್ಲಿ ಹಿಂದಿನ ಅಧ್ಯಕ್ಷರ ರಾಜಿನಾಮೆ ಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು, ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಶೇಷಾದ್ರಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕೆ.ಎಂ ಮುನಿರಾಜು ಸ್ಪರ್ದಿಸಿದ್ದರು ಜೆಡಿಎಸ್ ಶೇಷಾದ್ರಿ 14 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.
ಚುನಾವಣಾ ಅಧಿಕಾರಿಯಾಗಿ ಜಿಲ್ಲಾಪಂಚಾಯಿತಿ ಇಂಜನಿಯರ್ ವಿಭಾಗದ ಎಇಇ ನಾರಾಯಣಸ್ವಾಮಿ ಕಾರ್ಯನಿರ್ವಹಿಸಿದ್ದು ಪಿಡಿಒ ಗೌಸ್ ಪಾಷ ಇದ್ದರು.
ನೂತನ ಅಧ್ಯಕ್ಷನಿಗೆ ಮಾಜಿ ಶಾಸಕ ವೆಂಕಟಶಿವಾರೆಡ್ಡಿಯಿಂದ ಶುಭಾಶಯ.
ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ನೂತನ ಅಧ್ಯಕ್ಷರಿಗೆ ಶುಭ ಕೋರಿ ಮಾತನಾಡಿ ಗ್ರಾಮ ಪಂಚಾಯಿತಿಯಲ್ಲಿ ಪಕ್ಷಾತೀತವಾಗಿ ಕಾರ್ಯನಿರ್ವಸಿ ಜನಸಾಮಾನ್ಯರಿಗೆ ಪ್ರಾಮಾಣಿಕ ಸೇವೆ ನೀಡಿ ಜನಸ್ನೇಹಿ ಅಡಳಿತ ನೀಡುವಂತೆ ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ತೂಪಲ್ಲಿನಾರಾಯಣಸ್ವಾಮಿ, ಮಾಜಿ ಸದಸ್ಯ ಜಿ.ಕೆ.ನಾಗರಾಜ್ ಮುಖಂಡರಾದ ಭೀಮಗುಂಟಪಲ್ಲಿಶಿವಾರೆಡ್ಡಿ, ಎಂ.ರಾಮಮೋಹನ್, ಕೆ.ರಾಜೇಂದ್ರಪ್ರಸಾದ್,ಬುರುಜ ಕೃಷ್ಣಾರೆಡ್ಡಿ, ಎಂ.ಎಸ್.ಶಂಕರಪ್ಪ, ಅಬ್ಬು, ವಿ.ಶ್ರೀನಿವಾಸ್,ಶಾಕೀರ್,ಗ್ರಾ.ಪಂ ಸದಸ್ಯರಾದ ಬಕ್ಷುಸಾಬ್,ವೆಂಕಟಶಿವಾರೆಡ್ಡಿ,ಮಾಜಿ ಅಧ್ಯಕ್ಷೆ ಅರುಣ ರವಿಕುಮಾರ್ ಮುಂತಾದವರು ಇದ್ದರು.
ಜೆಡಿಎಸ್ ಎಚ್ಚರಿಕೆಯ ನಡೆ
ಯಲ್ದೂರು ಹಾಗು ಲಕ್ಷ್ಮೀಸಾಗರ ಪಂಚಾಯಿತಿ ಅಧ್ಯಕ್ಷ ಚುನಾವಣೆಯಲ್ಲಿ ಆದಂತ ಅಡ್ದ ಪರಿಣಾಮಗಳಿಂದ ಎಚ್ಚೆತ್ತುಕೊಂಡಿರುವ ತಾಲೂಕು ಜೆಡಿಎಸ್ ಟೀಂ ಗೌನಿಪಲ್ಲಿ ಪಂಚಾಯಿತಿ ಅಧ್ಯಕ್ಷ ಚುನಾವಣೆಯಲ್ಲಿ ಜಾಗರುಕತೆಯಿಂದ ಚುನಾವಣೆ ಪ್ರಕ್ರಿಯೆಗಳ ನಡೆ ಅನುಸರಿಸಿ ಅಧಿಕಾರ ಉಳಿಸಿಕೊಂಡಿದೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



