ಶ್ರೀನಿವಾಸಪುರ:ಜಗತ್ತಿಗೆ ಕಾಲಜ್ಞಾನ ಹೇಳುವ ಮೂಲಕ ಜಗತ್ತಿನ ಆಗುಹೋಗುಗಳ ಕುರಿತಾಗಿ ಹೆಚ್ಚರಿಕೆ ನೀಡಿದ ಮಹಾನ್ ಪುರುಷ ಪೋತುಲೂರು ವೀರಬ್ರಹ್ಮೇಂದ್ರ ಸ್ವಾಮಿಗಳು ಎಂದು ಶ್ರೀನಿವಾಸಪುರ ತಾಲೂಕು ವಿಶ್ವಕರ್ಮ ಸಮುದಾಯದ ಅಧ್ಯಕ್ಷ ಮೋಹನಾಚಾರಿ ಹೇಳಿದರು.
ಅವರು ಶ್ರೀನಿವಾಸಪುರ ಪಟ್ಟಣದ ಶ್ರೀ ಕಾಳಿಕಕಮಟೇಶ್ವರಿ ದೇವಾಲಯದಲ್ಲಿ ಕಾಲಜ್ಞಾನಿ ವೀರಬ್ರಹ್ಮೇಂದ್ರ ಸ್ವಾಮಿಯವರ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ 17ನೇ ಶತಮಾನಕ್ಕೆ ಸೇರಿದವರಾದ ಶ್ರೀ ಮದ್ವಿರಾಟ್ ಪೋತುಲೂರಿ ವೀರಬ್ರಹ್ಮೇಂದ್ರಸ್ವಾಮಿಗಳು ತಮ್ಮ ಮಹಾನ್ ಕಂಠದಿಂದ ಜಗತ್ತಿಗೆ ತತ್ವಜ್ಞಾನವನ್ನು ಬೋಧಿಸಿದ ಮಹಾನ್ ಯೋಗಿಗಳು ಜಗತ್ತಿಗೆ ಶಾಂತಿ ಬಯಸಿ ಸರ್ವಜನರ ಶ್ರೆಯಸ್ಸು ಕೋರಿ ಅವರು ಹೇಳಿದಂತ ಕಾಲಜ್ಞಾನದ ವಿಚಾರಗಳು ಇಂದು ಜಗತ್ತಿನಲ್ಲಿ ನಡೆದಿರುತ್ತದೆ ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ವಿಶ್ವಕರ್ಮ ಸಮುದಾಯದ ಕಾರ್ಯದರ್ಶಿ ರವಿಚಂದ್ರಾಚಾರಿ, ಜಂಟಿ ಕಾರ್ಯದರ್ಶಿ ರಾಮಚಂದ್ರಾಚಾರಿ, ಸದಸ್ಯರಾದ ನಾರಾಯಣಚಾರಿ, ಮಹಿಳಾ ಘಟಕದ ಅಧ್ಯಕ್ಷೆ ಕೆ.ರಾದಮ್ಮ, ಸದಸ್ಯೆ ವಿಜಯಮ್ಮ ಮಂಜುನಾಥಚಾರಿ, ರಮೇಶ್ ಹಾಗು ಮುಂತಾದವರು ಇದ್ದರು
Trending
- ದ್ವೇಷ ಬೇಡ,ಎಲ್ಲರಿಗೂ ಬಾಗಿಲು ತೆರೆದಿದೆ.ಜೆಡಿಎಸ್ ಕಾರ್ಯಕರ್ತರಿಗೆ CM ಡಿಕೆಶಿ ಆಹ್ವಾನ!
- ಕರ್ನಾಟಕದಿಂದ ರಾಜ್ಯಸಭೆಗೆ ಆಂಧ್ರದ ಶರ್ಮಿಳಾ ಹೆಸರು ಪರಿಗಣನೆಗೆ!
- ಶ್ರೀನಿವಾಸಪುರ:ಹೈವೇ ರಸ್ತೆಯಲ್ಲಿ ಬಾರಿ ವಾಹನಗಳ ಅಪಾಯಕಾರಿ ಪಾರ್ಕಿಂಗ್!
- ಶ್ರೀನಿವಾಸಪುರ:ಟಾಟಾ ಇಂಡಿಕಾ ಕಾರು ಡಿಕ್ಕಿ ದ್ವಿಚಕ್ರ ವಾಹನ ಸವಾರರ ಸಾವು!
- social media ದಲ್ಲಿ ಫೇಮಸ್ ಆಯಿತು ಯುವಕನ ಗಹಗಹಿಸಿ ನಗು!
- ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ”ಬೈಕ್ ಟ್ಯಾಕ್ಸಿ”ವಿರುದ್ದ ಕ್ರಮ ಜರುಗಿಸಿ!
- ಶ್ರೀನಿವಾಸಪುರ:ಎಂ.ಜಿ.ರಸ್ತೆ ಅತಿವೇಗದ ಬೈಕ್ ಚಾಲನೆ ಅಪಘಾತ ನಾಲ್ವರಿಗೆ ಗಾಯ!
- ಅಗ್ರಿಗೋಲ್ಡ್ ಸಂತ್ರಸ್ತರಿಗೆ ಆರು ತಿಂಗಳೊಳಗೆ ನ್ಯಾಯ ಒದಗಿಸುವಂತೆ AP ಸಿಎಂ ಸೂಚನೆ!
Monday, June 8



