- ಅತಿಯಾಗಿ ಉಪ್ಪು ಸೇವನೆ
- ರಕ್ತದೊತ್ತಡ ಹೆಚ್ಚುತ್ತದೆ
- ಹೃದಯ ಕಾಯಿಲೆ,ಪಾರ್ಶ್ವವಾಯು
- ಕಿಡ್ನಿ ಸಮಸ್ಯೆ ಕಾಡುತ್ತದೆ
ನ್ಯೂಜ್ ಡೆಸ್ಕ್:ವಿಶ್ವ ಆರೋಗ್ಯ ಸಂಸ್ಥೆ ದಿನಕ್ಕೆ 1 ಟೀಚಮಚ ಉಪ್ಪನ್ನು ಮಾತ್ರ ಶಿಫಾರಸು ಮಾಡುತ್ತದೆ. ಅದಕ್ಕಿಂತ ಹೆಚ್ಚು ತಿಂದರೆ ರಕ್ತದೊತ್ತಡ ಹೆಚ್ಚಾಗಬಹುದು ಎಂದು ಎಚ್ಚರಿಸಿದೆ. ಇದು ಹೃದ್ರೋಗ ಮತ್ತು ಪಾರ್ಶ್ವವಾಯುವಿಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಲಾಗುತ್ತದೆ.
ಉಪ್ಪು ಇಲ್ಲದೆ ಊಟ ರುಚಿಸುವುದಿಲ್ಲ ಆದರೆ ಉಪ್ಪು ಹಿತ ಮಿತವಾಗಿ ಸೇವನೆ ಮಾಡಬೇಕು ಅತಿಯಾಗಿ ಸೇವಿಸಿದರೆ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚುತ್ತದೆ,ಅದು ಹೆಚ್ಚಾದರೆ ಸಾಕಷ್ಟು ಸಮಸ್ಯೆಗಳು ಕಾಡಬಹುದಾಗಿದೆ.
ಮುಖ್ಯವಾಗಿ ರಕ್ತದೊತ್ತಡ,ಹೃದಯದ ಕಾಯಿಲೆ ಮತ್ತು ಕಿಡ್ನಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಉಪ್ಪಿನಾಂಶವನ್ನು ಮಿತವಾಗಿ ಬಳಸಿದರೆ ತುಂಬಾ ಒಳ್ಳೆಯದು ಎಂದು ಅಹಾರ ತಜ್ಞರು ಅಭಿಪ್ರಾಯ ಪಡುತ್ತಾರೆ.
ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಸೇವನೆ ಮಾಡಿದರೆ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ ಪದೇ ಪದೇ ನೀರು ಕುಡಿಯಬೇಕು ಎಂದು ಅನಿಸುತ್ತದೆ ಅತಿಯಾದ ಬಾಯಾರಿಕೆ ಆಗುತ್ತಲಿರುತ್ತದೆ,ದೇಹದಲ್ಲಿ ಅತಿಯಾದ ನೀರು ಶೇಖರಣೆಯಾದರೆ ಹೊಟ್ಟೆಉಬ್ಬರ ಉಂಟಾಗುತ್ತದೆ ಹೊಟ್ಟೆ ಉಬ್ಬರದಿಂದ ಹೊಟ್ಟೆಯಲ್ಲಿ ಬಿಗಿತ್ವ ಉಂಟಾಗುವುದು.
ಶಿಫಾರಸು ಮಾಡಲಾದ ಮಿತಿಗೆ ಉಪ್ಪು ಸೇವನೆಯನ್ನು ಕಡಿಮೆ ಮಾಡುವುದರಿಂದ ವಾರ್ಷಿಕವಾಗಿ 2.5 ಮಿಲಿಯನ್ ಸಾವುಗಳನ್ನು ತಡೆಯಬಹುದು ಎಂದು ಅಂದಾಜಿಸಲಾಗಿದೆ. ಒಂದು ತಿಂಗಳು ಉಪ್ಪು ತಿನ್ನುವುದನ್ನು ನಿಲ್ಲಿಸಿದರೆ ತೂಕ ಕಡಿಮೆಯಾಗುತ್ತದೆ ಎನ್ನುತ್ತಾರೆ ವೈದ್ಯರು.