ಶ್ರೀನಿವಾಸಪುರ:ಶ್ರೀನಿವಾಸಪುರದಲ್ಲಿ ಮಾವುಮಾರುಕಟ್ಟೆಯಲ್ಲಿ ಏನೇನೂ ಸರಿ ಇಲ್ಲಿ ಎಲ್ಲವು ಮೋಸ ರೈತ ತರುವಂತ ಮಾವಿಗೆ 100 ವ್ಯವಹಾರಕ್ಕೆ ಮಂಡಿ ಮಾಲೀಕರು 10 ರೂಪಾಯಿ ಕಮೀಷನ ಪಡೆಯುತ್ತಾರೆ. ಒಂದು ಕ್ವಿಂಟಾಲ್ಗೆ 50 ಕೆ.ಜಿ ತರಗು ತೆಗೆಯುತ್ತಾರೆ. ನಾವು ತಂದಿರುವ ಮಾಲು ಎಷ್ಟು ರೂಪಾಯಿಗೆ ಮಾರಾಟವಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡುವುದಿಲ್ಲ ಎಂದು ಮಾವು ಬೆಳೆಗಾರರು ವಿಶ್ವ ಪ್ರಸಿದ್ಧ ಶ್ರೀನಿವಾಸಪುರದ ಮಾವಿನ ಮಾರುಕಟ್ಟೆಗೆ ಭೇಟಿ ನೀಡಿದ್ದ ಉಪಲೋಕಾಯುಕ್ತ ಬಿ.ವೀರಪ್ಪ ಅವರಲ್ಲಿ ದೂರಿದರು.
ಮಾವು ವಹಿವಾಟು ನಡೆದ ತಕ್ಷಣ ನಮಗೆ ಹಣ ಚುಕ್ತಾ ಮಾಡುವುದಿಲ್ಲ ಕೆಲ ದಿನಗಳು ಬಿಟ್ಟುಕೊಂಡು ಬಂದ ನಂತರ ಬಿಳಿ ಚೀಟಿಯಲ್ಲಿ ವಹಿವಾಟು ವಿವರಗಳನ್ನು ಬರೆದುಕೊಡುತ್ತಾರೆ. ಪ್ರಶ್ನೆ ಮಾಡಿದರೆ ಯಾವುದೆ ಉತ್ತರ ಹೇಳುವುದಿಲ್ಲ ಎಂದು ರೈತರು ಸಾಲು ಸಾಲು ಸಮಸ್ಯೆಗಳ ಬಗ್ಗೆ ಉಪಲೋಕಾಯುಕ್ತರ ಗಮನಕ್ಕೆ ತಂದರು.ಇದಕ್ಕೆ ಸ್ಪಂದಿಸಿದ ಅವರು ಎಪಿಎಂಸಿ ಪ್ರಭಾರೆ ಕಾರ್ಯದರ್ಶಿ ಹರೀಶ್ ಅವರನ್ನು ತರಾಟೆಗೆ ತೆಗೆದುಕೊಂಡು ರೈತರು ಹೇಳುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಬಗೆಹರಿಸುವಂತೆ ಸೂಚಿಸಿದರು.
ಟವಲ್ ಕೆಳಗಿನ ವಹಿವಾಟು ನಿಲ್ಲಿಸಿ
ಉಪ ಲಾಯುಕ್ತ ಬಿ.ವೀರಪ್ಪ ಅವರು ಮಾವು ಮಂಡಿಗೆ ಭೇಟಿ ನೀಡಿದಾಗ ಟವಲ್ ಕೆಳಗೆ ಮಾವು ವ್ಯಾಪಾರ ಮಾಡುತ್ತಿದ್ದು ಕಂಡು ಆಗ ಕೂಡಲೇ ಮಂಡಿ ಮಾಲೀಕನ್ನು ಕರೆಯಿಸಿ ತರಾಟೆಗೆ ತಗೆದುಕೊಂಡು ಇದು ರೈತರ ಜೀವನದ ಪ್ರಶ್ನೆ, ವರ್ಷ ಪೂರ್ತಿ ಬೆಳೆದು ಮಾರುಕಟ್ಟೆಗೆ ತಂದಾಗ ಮಂಡಿ ಮಾಲೀಕರು ಮಾರಾಟ ಮಾಡಿ ಹಣ ಕೊಡಬೇಕು. ಅದು ಬಿಟ್ಟು ಧನಗಳ ವ್ಯಾಪಾರ ರೀತಿ ಟವಲ್ ಕೇಳಕೆ ದರ ನಿಗಧಿ ಮಾಡುವುದು ಇದು ಯಾವು ವ್ಯಾಪಾರದ ಪದ್ದತಿ ಎಂದು ಕಿಡಿಕಾರಿದರು.
ಅಧಿಕಾರಿಗಳು ಸಕಾಲಕ್ಕೆ ಮಂಡಿಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದರೆ ಇಂತಹ ಸಮಸ್ಯೆಗಳು ಇರುವುದಿಲ್ಲ. ಕಚೇರಿಯಲ್ಲೇ ಕುಳಿತಿದ್ದರೆ ಇಂತಹ ಸಮಸ್ಯೆಗಳು ಜಾಸ್ತಿಯಾಗುತ್ತಲೇ ಇರುತ್ತವೆ ಎಲ್ಲರಿಗೂ ತಿಳಿಯುವಂತೆ ಹರಾಜು ಪ್ರಕ್ರಿಯೆ ಮೂಲಕ ವಹಿವಾಟು ನಡೆಸಬೇಕು, ಇದಕ್ಕೆ ಮಾರುಕಟ್ಟೆಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಎಪಿಎಂಸಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ರೈತರು ದೂರು ಹೇಳುತ್ತಿದ್ದಂತೆ ಅಲ್ಲಿದ್ದ ಮಂಡಿಮಾಲಿಕರು ಮಂಡಿಬಿಟ್ಟು ಜಾಗಕಾಲಿಮಾಡಿದರು
ಹಿಂದೆ ಭೇಟಿನೀಡಿದ್ದಾಗ ಇದ್ದ ಸಮಸ್ಯೆಗಳಿಗೆ ಪರಿಹಾರ
ಉಪಲೋಕಾಯುಕ್ತರು ಕೆಲ ದಿನಗಳ ಹಿಂದೆ ಭೇಟಿನೀಡಿದ್ದಾಗ ಎಪಿಎಂಸಿ ಆವರಣದಲ್ಲಿ ಇದ್ದ ಸಮಸ್ಯೆಗಳನ್ನು ಬಗೆಹರಿಸಿರುವುದಾಗಿ ರೈತರಿಗೆ, ವ್ಯಾಪರಸ್ಥರಿಗೆ ವಿಶ್ರಾಂತಿ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಲೈಟಿಂಗ್, ನಾಮ ಫಲಕಗಳ ಅಳವಡಿಕೆಯಾಗಿದೆ ಎಂದು ಎಪಿಎಂಸಿ ಪ್ರಭಾರೆ ಕಾರ್ಯದರ್ಶಿ ಹರೀಶ್ ತಿಳಿಸಿದರು.
ಮಾರುಕಟ್ಟೆ ಆವರಣದಲ್ಲಿರುವ ಶೌಚಾಲಯದಲ್ಲಿ 10 ಚಾರ್ಜ್ ಮಾಡುತ್ತಾರೆ ಎಂದು ವ್ಯಕ್ತಿಯೊಬ್ಬರು ದೂರಿದರು. ಅಲ್ಲಿದ್ದ ನಿರ್ವಹಣಾ ಸಿಬ್ಬಂದಿ ಶೌಚಾಲಯ ಸ್ವಚ್ಚತೆಗೆ ಸಮರ್ಪಕವಾಗಿ ನೀರು ಬರುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಏನು ಪ್ರಯೋಜನವಾಗುತ್ತಿಲ್ಲ ಎಂದು ಸಿಬ್ಬಂದಿ ತಿಳಿಸಿದರು. ಹಾಗೆಲ್ಲ ವಸೂಲಿ ಮಾಡುವಗಿಲ್ಲ, ಕಾನೂನು ಪ್ರಕಾರ ೫ ರೂ. ಹಣ ತೆಗೆದುಕೊಳ್ಳಬೇಕು ಎಂದು ಬಿ.ವೀರಪ್ಪ ಸೂಚಿಸಿದರು.
ಮಂಡಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಮಾಹಿತಿ ಪಡೆದ ಉಪ ಲೋಕಾಯುಕ್ತರು ಕಾರ್ಮಿಕ ಕಾಯ್ದೆಯಡಿ ಸೌಲಭ್ಯಗಳನ್ನ ದೊರಕಿಸದೆ ಇರುವುದು ಅಪರಾಧ ಈ ತಕ್ಷಣದಿಂದ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ದೊರೆಯುವಂತೆ ಮಾಡಲು ಹೇಳಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ್ ಸುಧೀಂದ್ರ, ಲೋಕಾಯುಕ್ತ ಪಿಎಸ್ಐಗಳಾದ ಯಶ್ವಂತ್, ರೇಣುಕಾ, ಆಂಜಿನಪ್ಪ ಮತ್ತಿತರರು ಇದ್ದರು.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Thursday, April 23



