ಶ್ರೀನಿವಾಸಪುರ:ವರ್ಷಪೂರ್ತಿ ಕಾದು ಕುಳತಿದ್ದ ಮಾವಿನ ಬೆಳೆಗಾರರನ ಪರಿಸ್ಥಿತಿ ಚಿಂತಾಜನಕವಾಗಿದೆ ಮಾರುಕಟ್ಟೆಯಲ್ಲಿ ಈ ಬಾರಿ ಮಾವಿಗೆ ಕನಿಷ್ಠ ಹಣ ಬರುವ ಭರವಸೆ ಇಲ್ಲವಾಗಿದೆ.
ಶ್ರೀನಿವಾಸಪುರ ಕೇಂದ್ರಿಕೃತವಾಗಿ ಜಿಲ್ಲಾದ್ಯಂತ ಬೆಳೆಯುವ ಜೀವನಾಡಿ ಬೆಳೆ ಮಾವಿನ ಸಿಸನ್ ಅನ್ನು ನಂಬಿಕೊಂಡಿದ್ದ ಸಣ್ಣ-ಪುಟ್ಟ ಮಾವು ರೈತಾಪಿ ಕುಟುಂಬಗಳು ಮಾವಿಗೆ ದರ ಇಲ್ಲದೆ ಬೆಳೆಗಾರರಿಗೆ ಬರಸಿಡಿಲು ಬಡೆದಂತಾಗಿದೆ.ಮಾವು ಕೊಯ್ಲು ಮಾಡಿಕೊಂಡು ಬಂದು ಮಂಡಿಗಳಿಗೆ ಹಾಕಿದರೆ ಟ್ರ್ಯಾಕ್ಟರ್ ಬಾಡಿಗೆ ಕೂಲಿ ಸಹ ಗಿಟ್ಟಲ್ಲ ಎನ್ನುತ್ತಾರೆ ರೈತ ಶ್ರೀರಾಮಯ್ಯ.
ಕಣ್ಣಿರೇ ದರ
ಈ ವರ್ಷ ಮಾವಿನ ರೈತರು ಕಣ್ಣೀರು ಹಾಕುವಂತಾಗಿದೆ ಹಲವು ವರ್ಷಗಳಿಂದ ತಮ್ಮ ಬದುಕಿಗೆ ಜೀವನಾಧಾರ ಎಂದು ತೋಟಗಳಲ್ಲಿ ಮಾವಿನ ಮರಗಳನ್ನು ಮಕ್ಕಳನ್ನು ಆರೈಕೆ ಮಾಡುವಂತೆ ಮಾವು ಕೃಷಿ ಮಾಡಿಕೊಂಡು ಬಂದಿದ್ದ ರೈತಾಪಿ ಜನಕ್ಕೆ ಮಾವಿನ ಬೆಳೆ ಇಳುವರಿಯೋ ಇಲ್ಲ ಬೆಲೆನೂ ಇಲ್ಲದಂತಾಗಿ ನಿರಾಶೆ ಉಳಿದಿದೆ ತೊತಾಪುರಿ ಮಾವಿನ ಕಾಯಿ ಕೇವಲ 4 ರಿಂದ 5 ರೂಪಾಯಿಗೆ ಮಾರಾಟವಾಗುತ್ತಿದ್ದು ಇದರಿಂದ ಮಾವಿನ ರೈತ ತೀವ್ರ ನಷ್ಟ ಅನುಭವಿಸುವಂತಾಗಿದೆ ಬೆಲೆ ಇಲ್ಲ ಎಂದು ಮಾವು ಕೊಯ್ಲು ಮಾಡದೆ ಅಲ್ಲಿಯೇ ಬಿಟ್ಟರೆ ಕೊಳೆತು ಗಬ್ಬು ನಾರುತ್ತದೆ.
ಮಾವು ಖರೀದಿಸದ ಸಂಸ್ಕ್ರರಣ ಘಟಕಗಳು ಮಾವು ಸಂಸ್ಕ್ರರಣ ಘಟಕಗಳವರು ಈ ವರ್ಷ ಮಾವು ಖರಿದಿಗೆ ಇದುವರಿಗೂ ಮುಂದಾಗಿಲ್ಲ, ಕಳೆದ ವರ್ಷದ ಮಾವು ತಿರುಳು ಖರ್ಚಾಗದೆ ಸಂಸ್ಕ್ರರಣ(ತಿರಳು) ಘಟಕಗಳ ಗೋದಾಮುಗಳಲ್ಲಿ ಹಾಗೆ ಉಳಿದಿರುವ ಕಾರಣ ಈ ವರ್ಷ ಮಾವು ಖರಿದಿ ಮಾಡುವುದು ಬೇಡ ಎನ್ನುತ್ತಿದ್ದಾರಂತೆ ಸಂಸ್ಕ್ರರಣ ಘಟಕಗಳವರು ತೊತಾಪುರಿ ಕಾಯಿಯನ್ನು ಕೊಳ್ಳದೆ ಹೋದರೆ ಮಾರುಕಟ್ಟೆಯಲ್ಲಿ ದರ ಕುಸಿತವಾಗುತ್ತದೆ ಇದು ಮಾವು ಬೆಳೆಗಾರನಿಗೆ ಮಾರಕ ಎನ್ನುತ್ತಾರೆ.
ಆಂಧ್ರದಲ್ಲಿ ತೊತಾಪುರಿ ಕೆಜಿಗೆ 12/-
ದಕ್ಷಿಣ ಭಾರತದಲ್ಲಿ ಬಹುತೇಕ ಮಾವು ಸಂಸ್ಕ್ರರಣ ಘಟಕಗಳು ಇರುವುದು ಆಂಧ್ರದ ಚಿತ್ತೂರು ಜಿಲ್ಲೆಯಲ್ಲಿ ಅದರಲ್ಲೂ ಚಿತ್ತೂರು ಸುತ್ತಮುತ್ತ ಹಾಗಾಗಿ ಆಂಧ್ರದ ಚಿತ್ತೂರು ಜಿಲ್ಲೆ ತಿರುಪತಿಜಿಲ್ಲೆ ಅನ್ನಮಯ್ಯ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಾವು ಬೆಳೆಯುತ್ತಾರೆ ಅಲ್ಲಿ ಸಹ ಮಾವಿಗೆ ದರ ಇಲ್ಲದೆ ಅಲ್ಲಿನ ರೈತರು ಕಂಗಾಲಾಗಿ ಕುಳತಿದ್ದರು ಇದನ್ನು ಅಲ್ಲಿನ ಸ್ಥಳಿಯ ಶಾಸಕರು ಆಂಧ್ರ್ತಸರ್ಕಾರದ ಗಮನಕ್ಕೆ ಮಾವು ಬೆಳೆಗಾರರ ಪರಿಸ್ಥಿತಿ ತಂದ ಹಿನ್ನಲೆಯಲ್ಲಿ ಸ್ಪಂದಿಸಿರುವ ಅಲ್ಲಿನ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಇದನ್ನು ಬಗೆ ಹರಿಸುವಂತೆ ತಮ್ಮ ವಿಶೇಷ ಕಾರ್ಯದರ್ಶಿ ರಾಜಮೌಳಿ ಅವರಿಗೆ ಸೂಚಿಸಿದ್ದು ಅದರಂತೆ ರಾಜಮೌಳಿ ಅವರು ಶನಿವಾರ
ಸರ್ಕಾರದ ನೀಲುವುಗಳನ್ನು ಪ್ರಕಟಿಸಿ ಅದರಂತೆ ಅವರು ತಿರುಪತಿ, ಚಿತ್ತೂರು ಮತ್ತು ಅನ್ನಮಯ ಜಿಲ್ಲೆಗಳ ಜಿಲ್ಲಾಧಿಕಾರಿಗಳಾದ ವೆಂಕಟೇಶ್ವರ್, ಸುಮಿತ್ ಕುಮಾರ್ ಮತ್ತು ಶ್ರೀಧರ್ ಅವರೊಂದಿಗೆ ತೋತಾಪುರಿ ಮಾವಿನ ಹಣ್ಣುಗಳ ಖರೀದಿಯ ಕುರಿತು ವಿಶೇಷ ಮಾತುಕತೆ ನಡೆಸಿ, ನಿಮ್ಮ ಹಂತದಲ್ಲಿ ಮಾವು ಸಂಸ್ಕ್ರಣ ಘಟಕಗಳ ಮಾಲಿಕರನ್ನು ಸಂಪರ್ಕಿಸಿ ಮಾತನಾಡಿಸಿ ಕನಿಷ್ಟ 8 ರೂಪಾಯಿಯಂತೆ ಮಾವು ಖರೀದಿಮಾಡುವ ಖಡಕ್ಕಾಗಿ ಸೂಚಿಸಿದ್ದಾರೆ ಉಳಿದಂತೆ ಆಂಧ್ರ ಸರ್ಕಾರ 4 ರೂಪಾಯಿ ಬೆಂಬಲ ಬೆಲೆ ನೀಡಲಿದಿಯಂತೆ ತೊತಾಪುರಿ ಮಾವಿಗೆ ಅಂದಾಜು ಕೆ,ಜಿಗೆ 12 ಸಿಕ್ಕಿದಂತಾಗುತ್ತದೆ. ಭಾನುವಾರದಿಂದ ಕೆಜಿಗೆ 12 ರೂ.ಗೆ ತೋತಾಪುರಿ ಮಾವಿನ ಹಣ್ಣುಗಳನ್ನು ಖರೀದಿಸಲು ಆದೇಶಿಸಿದೆ ಆದರೆ ಮಾವು ತಿರಳು ಫ್ಯಾಕ್ಟರಿಗಳು ಸೋಮವಾರದಿಂದ ತೋತಾಪುರಿ ಮಾವಿನ ಹಣ್ಣುಗಳ ವಹಿವಾಟು ಮಾಡುವುದಾಗಿ ಹೇಳಿದ್ದು ಟೊಕನ್ ನೀಡಿ ಅದರಂತೆ ವ್ಯಾಪಾರ ಮಾಡುವುದಾಗಿ ತಿಳಿಸಿದ್ದಾರೆ.ಯಾರು ಮೊದಲು ಟೊಕನ್ ಪಡೆದಿದ್ದಾರೋ ಅವರು ಅವರ ಮಾವನ್ನು ಮೊದಲು ಖರೀದಿ ಮಾಡುವುದಾಗಿ ಹೇಳಲಾಗಿದೆ.
ಮಾವಿನ ಹಣ್ಣುಗಳ ತಿರುಳು ಫ್ಯಾಕ್ಟರಿಗಳು ಪ್ರತಿ ಕೆಜಿಗೆ 8 ರೂ.ಗಳನ್ನು ಪಾವತಿಸಿದರೆ, ಸರ್ಕಾರವು ಸಬ್ಸಿಡಿಯಾಗಿ 4 ರೂ.ಗಳನ್ನು ಪಾವತಿಸುತ್ತದೆ. ಇದು ಸರ್ಕಾರಕ್ಕೆ 160 ಕೋಟಿಗಳಷ್ಟು ಹೊರೆ ಬೀಳಬಹುದು ಎಂದು ಅಂದಾಜಿಸಲಾಗಿದೆ.
ಆಂಧ್ರಕ್ಕೆ ಕಾಯಿ ತಗೊಂಡು ಬರಬೇಡಿ
ಶ್ರೀನಿವಾಸಪುರ ಕೇಂದ್ರಿಕೃತವಾಗಿ ಅವಿಭಜಿತ ಕೋಲಾರ ಜಿಲ್ಲಾದ್ಯಂತ ಬೆಳೆಯುವ ತೋತಾಪುರಿ ಮಾವನ್ನು ಖರೀದಿ ಮಾಡುವುದು ಆಂಧ್ರದ ಚಿತ್ತೂರು ಜಿಲ್ಲೆಯಲ್ಲಿರುವ ಮಾವು ತಿರಳು ಫ್ಯಾಕ್ಟರಿಗಳು ಆದರೆ ಹಳೆ ತಿರಳು ಖರ್ಚಾಗದೆ ಉಳದಿದೆ ಎಂದು ಬಹುತೇಕ ಫ್ಯಾಕ್ಟರಿಗಳು ಈ ವರ್ಷ ಮಾವು ಖರೀದಿ ಮಾಡದೆ ಹಿಂದೆ ಸರಿದಿದ್ದವು ಆದರೆ ಅಲ್ಲಿನ ಸರ್ಕಾರ ಸೂಚಿಸಿದಂತೆ ಸ್ಥಳೀಯ ರೈತರಿಂದ ಖರೀದಿ ಮಾಡಲು ಮುಂದಾಗಿರುವ ಫ್ಯಾಕ್ಟರಿಗಳು ಹೊರ ರಾಜ್ಯಗಳಿಂದ ಮಾವು ತರುವುದು ಬೇಡ ನಾವು ಖರೀದಿ ಮಾಡುವುದಿಲ್ಲ ಎನ್ನುತ್ತಿದ್ದಾರಂತೆ ಈ ಬಗ್ಗೆ ಮಾವು ಉದ್ಯಮಕ್ಕೆ ಮತ್ತಷ್ಟು ಸಂಕಷ್ಟ ಎದುರಾಗುತ್ತದೆ ಎಂದು ಮಂಡಿ ಮಾಲಿಕ ಫಯಾಜ್ ಹೇಳುತ್ತಾರೆ.
Trending
- ದ್ವೇಷ ಬೇಡ,ಎಲ್ಲರಿಗೂ ಬಾಗಿಲು ತೆರೆದಿದೆ.ಜೆಡಿಎಸ್ ಕಾರ್ಯಕರ್ತರಿಗೆ CM ಡಿಕೆಶಿ ಆಹ್ವಾನ!
- ಕರ್ನಾಟಕದಿಂದ ರಾಜ್ಯಸಭೆಗೆ ಆಂಧ್ರದ ಶರ್ಮಿಳಾ ಹೆಸರು ಪರಿಗಣನೆಗೆ!
- ಶ್ರೀನಿವಾಸಪುರ:ಹೈವೇ ರಸ್ತೆಯಲ್ಲಿ ಬಾರಿ ವಾಹನಗಳ ಅಪಾಯಕಾರಿ ಪಾರ್ಕಿಂಗ್!
- ಶ್ರೀನಿವಾಸಪುರ:ಟಾಟಾ ಇಂಡಿಕಾ ಕಾರು ಡಿಕ್ಕಿ ದ್ವಿಚಕ್ರ ವಾಹನ ಸವಾರರ ಸಾವು!
- social media ದಲ್ಲಿ ಫೇಮಸ್ ಆಯಿತು ಯುವಕನ ಗಹಗಹಿಸಿ ನಗು!
- ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ”ಬೈಕ್ ಟ್ಯಾಕ್ಸಿ”ವಿರುದ್ದ ಕ್ರಮ ಜರುಗಿಸಿ!
- ಶ್ರೀನಿವಾಸಪುರ:ಎಂ.ಜಿ.ರಸ್ತೆ ಅತಿವೇಗದ ಬೈಕ್ ಚಾಲನೆ ಅಪಘಾತ ನಾಲ್ವರಿಗೆ ಗಾಯ!
- ಅಗ್ರಿಗೋಲ್ಡ್ ಸಂತ್ರಸ್ತರಿಗೆ ಆರು ತಿಂಗಳೊಳಗೆ ನ್ಯಾಯ ಒದಗಿಸುವಂತೆ AP ಸಿಎಂ ಸೂಚನೆ!
Sunday, June 7



