ಶ್ರೀನಿವಾಸಪುರ: ತಾಲೂಕು ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮತ್ತು ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಿಕ್ಷಕ ಭೈರೇಗೌಡ ಚುನಾಯಿತರಾಗಿದ್ದಾರೆ.
ತಮ್ಮ ಸಮೀಪದ ಪ್ರತಿಸ್ಪರ್ಧಿಗಿಂತ 13 ಮತಗಳ ಅಂತರದಿಂದ ಚುನಾಯಿತರಾಗಿದ್ದು, ಖಜಾಂಚಿಯಾಗಿ ಕೈಗಾರಿಕಾ ತರಬೇತಿ ಇಲಾಖೆಯಎಂ.ಎಂ.ವೆಂಕಟೇಶ್ ಹಾಗು ರಾಜ್ಯ ಪರಿಷತ್ ಸ್ಥಾನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೆಂಕಟರೆಡ್ಡಿ ಅವಿರೋಧವಾಗಿ ಅಯ್ಕೆಯಾಗಿದ್ದಾರೆ.
ಸರಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಜರುಗಿದ ಚುನಾವಣೆಯಲ್ಲಿ ಶಿಕ್ಷಕ ಭೈರೇಗೌಡ ಚುನಾಯಿತರಾದ ಬಗ್ಗೆ ಚುನಾವಣಾಧಿಕಾರಿ ತಿಪ್ಪಣ್ಣ ಘೋಷಣೆ ಮಾಡುತ್ತಿದ್ದಂತೆ ಭೈರೇಗೌಡರ ಆಪ್ತರು ಸಹದ್ಯೋಗಿಗಳು ನೌಕರರ ಭವನದ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಭೈರೇಗೌಡ ಮಾತನಾಡಿ ನಾನು ಚುನಾವಣೆ ಕಣದಲ್ಲೆ ಉಳಿಯಬಾರದು ಎಂದು ಷಡ್ಯಂತರ ರೂಪಿಸಿದ್ದರು ಅದನೆಲ್ಲ ಬೇಧಿಸಿ ಭರ್ಜರಿ ಜಯಬೇರಿ ಬಾರಿಸಿದೆ ನಂತರ ಈಗ ಅಧ್ಯಕ್ಷ ಸ್ಥಾನವನ್ನು ಸ್ನೇಹಿತರು ಹಿತೈಶಿಗಳು ಸಹದ್ಯೋಗಿ ಮಿತ್ರರ ಸಹಕಾರದಿಂದ ಗೆದ್ದಿರುವುದಾಗಿ ಹೇಳಿದ ಅವರು ಅಧ್ಯಕ್ಷ ಸ್ಥಾನಕ್ಕೆ ಗೌರವ ಬರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.ನಂತರ ತಾಲೂಕು ಕಚೇರಿ ಆವರಣದಲ್ಲಿರುವ ಡಾ.ಬಾಬಾಸಾಹೇಬ್ ಅಂಭೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಗುಮ್ಮಿರೆಡ್ಡಿಪುರಗೋವಿಂದರೆಡ್ಡಿ,ಹಾಲಿ ಅಧ್ಯಕ್ಷ ಬೈರಾರೆಡ್ಡಿ,ಹಾಲಿ ನಿರ್ದೇಶಕ ಕಾಳಾಚಾರಿ,ಮುನಿವೆಂಕಟಪ್ಪ,ಶಿವಮೂರ್ತಿ,ವೆಂಕಟರಮಣ,ರಾಮಚಂದ್ರೇಗೌಡ,ಶ್ರೀರಾಮೇಗೌಡ ಮುಂತಾದವರು ಇದ್ದರು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



