ಶ್ರೀನಿವಾಸಪುರ:ಫಸಲ್ ಭೀಮಾ ಯೋಜನೆಯ ಹಣ ನೀಡದೆ ವಿಳಂಬ ನೀತಿ ಅನುಸರಿಸುತ್ತ ಈ ವರ್ಷವೂ ಮಾವು ಬೆಳೆಗಾರರನ್ನು ವಿಮಾ ಸಂಸ್ಥೆ ವಂಚಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿ ನೂರಾರು ರೈತರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಮಾವು ಬೆಳೆಗಾರರು ಕಟ್ಟಿದ್ದ ವಿಮಾ ಕಂತಿನ ಕ್ಲೈಮ್ ಹಣವನ್ನು ಕಳೆದ ಅಕ್ಟೋಬರ್ ನಲ್ಲೆ ನೀಡಬೇಕಾಗಿತ್ತು ಆದರೆ ವಿಮಾ ಕಂತು ಕಟ್ಟಿಸಿಕೊಂಡಿರುವ ಎಚ್ ಡಿ ಎಫ್ ಸಿ ಇರ್ಗೋ ಕಂಪನಿಯವರು ಫೆಬ್ರವರಿ ಬಂದರು ಕ್ಲೈಮ್ ಹಣ ನೀಡದೆ ತಡ ಮಾಡುತ್ತ ರೈತರನ್ನು ಯಾಮಾರಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ಕೋಲಾರ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ ಆರೋಪಿಸಿದರು.ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಘ ಹಾಗು ಇತರೆ ರೈತ ಸಂಘಟನೆಗಳ ಮುಖಂಡರು ಎಚ್ ಡಿ ಎಫ್ ಸಿ ಕಂಪನಿ ವಿರುದ್ಧ ಘೋಷಣೆಗಳನ್ನು ಕೂಗುತ್ತ ವಿಮಾ ಕಂಪನಿಯವರು ವಿಮೆ ಹಣ ನೀಡದೆ ಅನ್ಯಾಯ ಎಸಗುತ್ತಿದ್ದಾರೆ ಎಂದು ಆರೋಪಿಸಿದರು ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ತಹಶೀಲ್ದಾರ್ ಸುಧೀಂದ್ರ…
Author: Srinivas_Murthy
ನ್ಯೂಜ್ ಡೆಸ್ಕ್:ಹಣಕಾಸು ಮಂತ್ರಿಗಳ ಬಹುಪಾಲು ಬಜೆಟ್ ಭಾಷಣಗಳು,ದೇಶದ ಭೌಗೋಳಿಕ ರಾಜಕೀಯ ವಿಷಯಗಳ ಕುರಿತಂತೆ ಉದ್ದುದ್ದ ಭಾಷಣ ಇರುತ್ತದೆ ಆದರೆ ಈ ವರ್ಷದ ಮಧ್ಯಂತರ ಬಜೆಟ್ ಭಾಷಣದಲ್ಲಿ,ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಭಾಷಣದಲ್ಲಿ ಭಾರತ ಕೇಂದ್ರವಾಗಿ ಜಾಗತಿಕಮಟ್ಟದ ಆರ್ಥಿಕ ವ್ಯವಸ್ಥೆಯಲ್ಲಿ ಆಗಬಹುದಾದ ಬದಲಾವಣೆಯ ಹೊಸ ಚಿತ್ರಣದ ಕುರಿತಾಗಿ ಮಂಡಿಸಿದ್ದಾರೆ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (IMEC) ಕುರಿತಂತೆ ನೂತನ ಆರ್ಥಿಕ ನೀತಿ ನಿಯಮಗಳನ್ನು ಪ್ರಸ್ತುತಪಡಿಸಿದ್ದಾರೆ.ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಮಂಡಿಸುವಾಗ ‘ಐಎಂಇಸಿ’ ಯೋಜನೆಯನ್ನು ಪ್ರಸ್ತಾಪಿಸಿದರು. ಈ ಯೋಜನೆಯು ಭಾರತದಲ್ಲಿ ಮುಂದಿನ ನೂರುವರ್ಷಗಳಲ್ಲಿ ಜಾಗತಿಕ ವ್ಯಾಪಾರಕ್ಕೆ ಆಧಾರವಾಗಲಿದೆ ಮತ್ತು ಇದು ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವದಲ್ಲಿ ಗೇಮ್ ಚೇಂಜರ್ ಆಗಲಿದೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ.ಭಾರತದ ನೆಲದಲ್ಲಿ ಈ ಯೋಜನೆಯನ್ನು ಪ್ರಾರಂಭಿಸುವುದು ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಲಿದೆ ಎಂದು ಅವರು ಬಣ್ಣಿಸಿದ್ದಾರೆ. ‘ಐಎಂಇಸಿ’IMEC ಯೋಜನೆ ಏನು?ಪ್ರಪಂಚದ ವ್ಯಾಪಾರದ ಜೀವನಾಡಿ ಆಗುವ ಕುರಿತಂತೆ ಐಮ್ಯಾಕ್ ಯೋಜನೆ IMEC ವಿವರ ಹೀಗಿದೆ ಯೋಜನೆಯು ಮಧ್ಯಪ್ರಾಚ್ಯದ ಮೂಲಕ ಯುರೋಪಿನೊಂದಿಗೆ ಭಾರತವನ್ನು…
ಚಿಂತಾಮಣಿ:ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಬರುವಂತ ಶೈಕ್ಷಣಿಕ ವರ್ಷಕ್ಕೆ ಸರ್ಕಾರಿ ಇಂಜನಿಯರಿಂಗ್ ಕಾಲೇಜು ಕಾರ್ಯರಂಭ ಆಗುವ ಸೂಚನೆ ಕಂಡುಬರುತ್ತಿದೆ.ರಾಜ್ಯದ ಉನ್ನತ ಶಿಕ್ಷಣ ಸಚಿವರು ಚಿಕ್ಕಬಳ್ಳಾಪುರ ಜಿಲ್ಲೆ ಉಸ್ತುವಾರಿ ಸಚಿವ ಹಾಗು ಚಿಂತಾಮಣಿ ಶಾಸಕ ಡಾ.ಎಂ.ಸಿ.ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮಂಜೂರಾತಿ ಪ್ರಕ್ರಿಯೆ ಪೂರ್ಣಗೊಳಿಸಿದ್ದು ಆರಂಭಿಕವಾಗಿ ಖಾಸಗಿ ಕಟ್ಟಡದಲ್ಲಿ ಸರ್ಕಾರಿ ಇಂಜನಿಯರಿಂಗ್ ಕಾಲೇಜು ಆರಂಭವಾಗಲಿದೆ ಎನ್ನುವ ಮಾತು ದಟ್ಟವಾಗಿ ಕೇಳಿಬರುತ್ತಿದ್ದು ಮುಂದಿನ ಜುನ್ ಜುಲೈ ತಿಂಗಳಲ್ಲಿ ದಾಖಲಾತಿಗಳು ಪ್ರಾರಂಭವಾಗಿ ದಿನಗಳಲ್ಲಿ ಕಾಲೇಜಿನ ತರಗತಿಗಳು ಶುರುವಾಗಲಿದೆ ಎನ್ನವಮಾತು ಕೇಳಿಬರುತ್ತಿದೆ.ಸಚಿವ ಡಾ.ಸುಧಾಕರ್ ಹೇಳಿರುವಂತೆ ಚಿಂತಾಮಣಿ ನಗರದ ಬೆಂಗಳೂರು ರಸ್ತೆಯಲ್ಲಿ ಯಾದವ ಹಾಸ್ಟಲ್ ಬಳಿ ಸುಮಾರು ಹತ್ತು ಎಕರೆ ಜಾಗವನ್ನು ಇಂಜನಿಯರಿಂಗ್ ಕಾಲೇಜು ನಿರ್ಮಿಸಲು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗೆ ಮಂಜೂರು ಮಾಡಿದ್ದು ಆರಂಭಿಕ 70 ಕೋಟಿ ಅಂದಾಜು ವೆಚ್ಚದಲ್ಲಿ ಎಂಜಿನಿಯರಿಂಗ್ ಕಾಲೇಜನ್ನು ನಿರ್ಮಿಸುವ ಬಗ್ಗೆ ತಿಳಿಸಿದ್ದಾರೆ, ಕಾಲೇಜು ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಅದರಲ್ಲೂ ವೃತ್ತಿ ಪರ…
ನ್ಯೂಜ್ ಡೆಸ್ಕ್: ಭಾರತದ ರಾಜಕೀಯದ ಲೋಹದ ಪುರುಷ ಬಿಜೆಪಿ ಭೀಷ್ಮ ಎಂದೇ ಜನಪ್ರಿಯರಾದ ಮಾಜಿ ಉಪ ಪ್ರಧಾನಿ, ಅಪ್ರತಿಮ ಹೋರಾಟಗಾರ, ಹಿರಿಯ ಮುತ್ಸದ್ದಿ ರಾಜಕಾರಣಿ, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಟ್ಟಾಳು,ಸಂಘಟನೆಗಾರ, ಲಾಲ್ ಕೃಷ್ಣ ಅಡ್ವಾಣಿ (ಎಲ್ ಕೆ ಅಡ್ವಾಣಿ 96) ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಅನ್ನು ಭಾರತ ಸರ್ಕಾರ ಘೋಷಣೆ ಮಾಡಿದೆ.ಭಾರತದ ರಾಜಕೀಯ ಇತಿಹಾಸದಲ್ಲಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಪ್ರತ್ಯಕ ಹೆಸರು ಇದೆ ಕೇವಲ ಎರಡು ಸ್ಥಾನಗಳಿದ್ದ ಬಿಜೆಪಿ ಇಂದು ಪೂರ್ಣಪ್ರಮಾಣದ ಅಧಿಕಾರದಲ್ಲಿ ಇದೆ ಎನ್ನುವುದಾದರೆ ಅದಕ್ಕೆ ಎಲ್ ಕೆ ಅಡ್ವಾಣಿ ರಾಜಕೀಯ ಕೃಷಿ ಸಾಕಷ್ಟು ಇದೆ 1980 ಮತ್ತು 1990 ರ ದಶಕದಲ್ಲಿ, ಅಡ್ವಾಣಿ ಅವರು ಬಿಜೆಪಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ರಾಜಕೀಯ ಶಕ್ತಿಯನ್ನಾಗಿಸಿದ ಅಡ್ವಾನಿ ಸ್ವಾತಂತ್ರ್ಯ ನಂತರದಲ್ಲಿ ಕಾಂಗ್ರೆಸ್ ನಂತಹ ಪ್ರಬಲ ರಾಷ್ಟ್ರೀಯ ಪಕ್ಷದ ಎದರು ಮತ್ತೊಂದು ರಾಷ್ಟ್ರೀಯ ಪಕ್ಷವನ್ನಾಗಿಸಿ ಲೋಕಸಭೆಯಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವನ್ನಾಗಿಸಲು ಕಾರಣಿಭೂತರಾಗಿದ್ದಾರೆ. ಇಂದು…
ಶ್ರೀನಿವಾಸಪುರ:ತಾಲೂಕಿನ ಕಸಬಾ ಹೋಬಳಿ ಪಾಳ್ಯ ಗ್ರಾಮದ ಹಾಲು ಉತ್ಪಾದಕರ ಸಂಘಕ್ಕೆ ಹಿರಿಯ ಸಹಕಾರಿ ಧುರಿಣ ಹಾಗು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಭೈರಾರೆಡ್ಡಿ ಆರನೆಯ ಬಾರಿಗೆ ಆವಿರೋಧವಾಗಿ ಆಯ್ಕೆಯಾಗಿದ್ದಾರೆ.ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಭೈರಾರೆಡ್ಡಿ ಒಬ್ಬರೆ ನಾಮ ಪತ್ರವನ್ನು ಸಲ್ಲಿಸಿದ್ದರು. ಚುನಾವಣಾಧಿಕಾರಿಯಾಗಿದ್ದ ಶಂಕರ ನಾಮಪತ್ರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಪರಿಶೀಲಿಸಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಆಗಿರುವುದನ್ನು ಘೋಷಿಸಿದರು.ಸುಮಾರು 12 ಮಂದಿ ನಿರ್ದೇಶಕರು ಇರುವ ಸಹಕಾರ ಸಂಘದಲ್ಲಿ ಭೈರಾರೆಡ್ಡಿ ಆರನೆಯ ಬಾರಿಗೆ ಅಧ್ಯಕ್ಷರಾಗಿ ಅಯ್ಕೆಯಾಗುವ ಮೂಲಕ ದಾಖಲೆ ಮಾಡಿರುತ್ತಾರೆ.ಅಧ್ಯಕ್ಷರಾಗಿ ಆಯ್ಕೆಯಾದ ಭೈರಾರೆಡ್ಡಿ ಮಾತನಾಡಿ ಕಸಬಾ ಹೋಬಳಿಯಲ್ಲಿ ಅತಿ ಹೆಚ್ಚುಹಾಲು ಶೇಖರಣೆಯಾಗುತ್ತಿರುವ ಹೆಗ್ಗಳಿಕೆ ಇರುವ ಪಾಳ್ಯ ಹಾಲು ಉತ್ಪಾದಕರ ಸಂಘದ ಅಭಿವೃದ್ಧಿಗಾಗಿ ಸದಸ್ಯರು ಮತ್ತು ನಿರ್ದೇಶಕರ ವಿಶ್ವಾಸ ತೆಗೆದುಕೊಂಡು ಯಾವುದೇ ಪಕ್ಷ ಬೇಧವಿಲ್ಲದೇ ಶ್ರಮಿಸುವುದಾಗಿ ಹೇಳಿದರು. ಹಾಲು ಉತ್ಪಾದಕರಿಗೆ ಸಹಕಾರ ಸಂಘದಿಂದ ಬರುವ ಸವಲತ್ತು ಮತ್ತು ಸಾಲ ಸೌಲಭ್ಯಗಳನ್ನು ನೇರವಾಗಿ ಹಾಲು ಉತ್ಪಾದಕರಿಗೆ ತಲುಪಿಸುವಂತ ಕಾರ್ಯ ಮಾಡುವುದಾಗಿ ಭರವಸೆ…
ನ್ಯೂಜ್ ಡೆಸ್ಕ್: ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಮದ್ಯಂತರ ಬಜೆಟ್ ನಲ್ಲಿ ಮೂಲಭೂತ ಸೌಕರ್ಯಗಳು ಸೇರಿದಂತೆ ವರ್ಗವಾರು ವಿಂಗಡನೆ ಮಾಡಲಾಗಿದೆ. ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಇರುವ ಕಾರಣ ಮೋದಿ ಸರ್ಕಾರದ 2ನೇ ಅವಧಿಯ ಹಾಗೂ ನೂತನ ಸಂಸತ್‌ನ ಭವನದದಲ್ಲಿ ಮೊದಲ ಬಾರಿಗೆ ಮಂಡಿಸಿರುವ ಬಜೆಟ್ ನಲ್ಲಿ ಟಾರ್ಗೆಟ್ 2047 ಎಂಬ ಪರಿಕಲ್ಪನೆ ಸ್ಪಷ್ಟವಾಗಿದೆ.ದೇಶದ ಆರ್ಥಿಕತೆಯಲ್ಲಿ ಅಗಾಧ ಬೆಳವಣಿಗೆಯಾಗಿದ್ದು ಜಾಗತಿಕ ಮಟ್ಟದಲ್ಲಿ ಆರ್ಥಿಕ ಸಂಕಷ್ಟ ಇದೆಯಾದರು ಭಾರತ ದೇಶ ಆರ್ಥಿಕತೆಯಲ್ಲಿ ಸ್ಥಿರವಾಗಿದೆ,ಮೋದಿ ಸಾರಥ್ಯದ ಆಡಳಿತದಲ್ಲಿ ಭಾರತ ಆರ್ಥಿಕಾಭಿವೃದ್ದಿ ಕಂಡಿದೆ ಎಂದು ಆರ್ಥಿಕ ಮಂತ್ರಿ ನಿರ್ಮಲಾ ಸೀತಾರಾಮನ್ ಬಜೆಟ್ ವೇಳೆ ಪ್ರಸ್ತಾಪಿಸಿದ್ದಾರೆ. ರೈತಾಪಿವರ್ಗ,ಬಡವರು,ಯುವಕರು ಹಾಗು ಮಹಿಳೆಯರು ಎಂದು ವರ್ಗವಾರು ವಿಂಗಡನೆ ಮಾಡುವುದರೊಂದಿಗೆ ಜಾತಿ, ಧರ್ಮ, ಆರ್ಥಿಕ ಭೇದವಿಲ್ಲದೆ ಎಲ್ಲ ಸಮುದಾಯದವರಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ 2047 ಹೊತ್ತಿಗೆ ದೇಶವನ್ನು ಬಡತನ ಮುಕ್ತ ಮಾಡುವ ಗುರಿ ಹೊಂದಲಾಗಿದ್ದು,ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ನಾನ್ನೂಡಿಯಂತೆ ‘ಜೈ…
ನ್ಯೂಜ್ ಡೆಸ್ಕ್: ಸ್ವಾತಂತ್ರ್ಯ ಹೋರಾಟಗಾರ ಸಮಾಜವಾದಿ ಆಂದೋಲನಕಾರ ಮಾಜಿ ಮುಖ್ಯಮಂತ್ರಿ ದಿವಂಗತ ಕರ್ಪೂರಿ ಠಾಕೂರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ಘೋಷಿಸಿ ಭಾರತ ಸರ್ಕಾರ ಗೌರವಿಸಿದೆ.ಅವರ ಜನ್ಮ ಶತಮಾನೋತ್ಸವದ ಹಿನ್ನಲೆಯಲ್ಲಿ ಭಾರತ ಸರ್ಕಾರ ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಲು ನಿರ್ಧರಿಸಿರುವುದು ಸರ್ವತಾ ಹರ್ಷ ವ್ಯಕ್ತವಾಗಿದೆ.ಹಿಂದುಳಿದ ಮತ್ತು ಅವಕಾಶ ವಂಚಿತರ ಉನ್ನತಿಗಾಗಿ ಕರ್ಪೂರಿ ಅವರು ಬದ್ಧತೆ ಮತ್ತು ದೂರದೃಷ್ಟಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದು ಭಾರತದ ಸಾಮಾಜಿಕ ಹಾಗು ರಾಜಕೀಯದಲ್ಲಿ ಅಳಿಸಲಾಗದಂತಹ ಛಾಪು ಮೂಡಿಸಿದ್ದಾರೆ.ರಾಜಕೀಯ ವ್ಯವಸ್ಥೆಯಲ್ಲಿ ಯಾರಾದರೂ ಸಾಮಾಜಿಕ ನ್ಯಾಯ ಪ್ರತಿಪಾದಿಸಿದರೆ ಅದಕ್ಕೆ ಪ್ರೇರಣೆ ಕರ್ಪೂರಿ ಠಾಕೂರ್ ಎನ್ನಬಹುದು.ಇಂದು ಅವರು ಇಲ್ಲ ಆದರೆ ಅವರ ಸಮಾಜವಾದಿ ಚಿಂತನೆಗಳು ಜೀವಂತವಾಗಿದೆ ಅತ್ಯಂತ ಸರಳ ಜೀವಿಯಾಗಿದ್ದ ಕರ್ಪೂರಿ ಠಾಕೂರ್ ಹೃದಯವಂತ ನಾಯಕ,ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಭೂ ಸುಧಾರಣೆಗಳನ್ನು ಜಾರಿಗೆ ತಂದು ಜಮೀನ್ದಾರರಿಂದ ಭೂರಹಿತ ದಲಿತರಿಗೆ ಭೂಮಿಯನ್ನು ಮರುಹಂಚಿಕೆ ಮಾಡಲು ಕಾರಣಕರ್ತರಾಗಿ ಜನರಿಂದ ಜನನಾಯಕ ಪೀಪಲ್ಸ್ ಹೀರೋ ಎಂದು…
ಶ್ರೀನಿವಾಸಪುರ:ಕೋಲಾರ,ಬೆಂಗಳೂರು ಗ್ರಾಮಾಂತರ,ಹಾಸನ, ಮಂಡ್ಯ,ತುಮಕೂರು, 5+23 ಸೀಟು ಹಂಚಿಕೆಯ ಸೂತ್ರದ ಅಡಿಯಲ್ಲಿ ವನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಬಹುತೇಕ ಫೈನಲ್ ಎನ್ನುವ ಮಾತು ಕೇಳಿಬರುತ್ತಿದೆ.ಜೆಡಿಎಸ್ ಭದ್ರಕೋಟೆಯಾಗಿರುವ ಕೋಲಾರ ಮೀಸಲು ಕ್ಷೇತ್ರ ಸೇರಿದಂತೆ ಮಂಡ್ಯ, ಬೆಂಗಳೂರು ಗ್ರಾಮಾಂತರ, ಹಾಸನ,ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳಲ್ಲಿ ತನ್ನ ಸಾಂಪ್ರದಾಯಿಕ ಪ್ರಾಭಲ್ಯ ಹೊಂದಿರುವ ಜೆಡಿಎಸ್ ಐದು ಕ್ಷೇತ್ರಗಳನ್ನು ಉಳಸಿಕೊಳ್ಳಲು ಜೆಡಿಎಸ್ ಶತಾಯಗತಾಯ ಪ್ರಯತ್ನ ನಡೆಸಿ ಅದನ್ನು ಮೈತ್ರಿ ಧರ್ಮದಲ್ಲಿ ಬಿಜೆಪಿ ವರಿಷ್ಟರ ಬಳಿ ಕೇಳಿತ್ತು ಅದರಂತೆ ರಾಜ್ಯ ಬಿಜೆಪಿ ನಾಯಕರ ಅಭಿಪ್ರಾಯವನ್ನು ಪಡೆದಂತ ಬಿಜೆಪಿ ವರಿಷ್ಠರು, ಕೇಂದ್ರ ಗೃಹಮಂತ್ರಿ ಅಮಿತ್ ಷಾ ಗಮನಕ್ಕೆ ತಂದಿದ್ದರು ಅದರಂತೆ ಅಮಿತ್ ಷಾ ತಾವೆ ಆಸಕ್ತಿ ತೋರಿ ದೆಹಲಿಯ ಪೊಲಿಟಿಕಲ್ ಅನಾಲಿಸ್ಟ ತಂಡದ ಕೈಯಲ್ಲಿ ಸರ್ವೆ ಮಾಡಿಸಿದ್ದು ಒಂದು ತಿಂಗಳ ಅವಧಿಯಲ್ಲಿ ಮಾಡಿಸಿರುವ ಸರ್ವೆಯಲ್ಲಿ ಐದು ಕ್ಷೇತ್ರಗಳಲ್ಲಿ ಜೆಡಿಎಸ್ ಗೆ ಅನಕೂಲಕರವಾದ ವಾತವರಣ ಇದೆ ಎನ್ನವ ಮಾಹಿತಿ ಲಭ್ಯವಾಗಿದಿಯಂತೆ,ಸರ್ವೆ ವರದಿಯಂತೆ ಐದು ಕ್ಷೇತ್ರಗಳನ್ನು ಜೆಡಿಎಸ್ ಗೆ ನೀಡಲಾಗುತ್ತಿದೆ ಎನ್ನುವ ಮಾಹಿತಿ ಹೊರ ಬಿದಿದ್ದೆ.ಬೆಂಗಳೂರು ಗ್ರಾಮಾಂತರ ಅಥಾವ…
ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕಿನ ನಿರುದ್ಯೋಗ ಯುವಕರ ಸಮಸ್ಯೆ ನಿವಾರಿಸಲು ತಾಲೂಕಿನ ಎರಡು ಕಡೆ ಕೈಗಾರಿಕಾ ಪ್ರದೇಶಗಳ ಸ್ಥಾಪನೆ ಮಾಡಿ ಕೈಗಾರಿಗಳನ್ನು ತರುಲು ತಾವು ಶ್ರಮಿಸುತ್ತಿರುವುದಾಗಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು.ಅವರು ಇಂದು ತಾಲೂಕು ಆಡಳಿತ ಆಯೋಜಿಸಿದ್ದ ಎಪ್ಪತೈದನೆ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ಅನುಕೂಲ ಆಗುವ ದಿಸೆಯಲ್ಲಿ ಮುಳಬಾಗಿಲು ರಸ್ತೆಯಲ್ಲಿನ ಯದರೂರು ಬಳಿ ಹಾಗು ಮದನಪಲ್ಲಿ ರಸ್ತೆಯಲ್ಲಿ ಕೈಗಾರಿಕಾ ಪ್ರದೇಶಗಳನ್ನು ಸ್ಥಾಪನೆಗೆ ಆದ್ಯತೆ ನೀಡುವುದಾಗಿ ತಿಳಿಸಿದರು ಜನರ ನೀರಿಕ್ಷೇಗಳಂತೆ ತಾಲೂಕಿನ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತಿರುವೆ ಶಿಕ್ಷಣ,ಆರೋಗ್ಯ ಕ್ಷೇತ್ರಗಳ ಆಭಿವೃದ್ಧಿಗೂ ಆದ್ಯತೆ ನೀಡಿದ್ದು ಕ್ಷೇತ್ರದಲ್ಲಿ ಅಭಿವೃದ್ಧಿಯೇ ಧ್ಯೆಯವಾಗಿ ಶ್ರೀನಿವಾಸಪುರ ಪಟ್ಟಣವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಹೇಳಿದರು.ವಿಧಾನಪರಿಷತ್ ಸದಸ್ಯ ವೈ.ಎ.ನಾರಯಣಸ್ವಾಮಿ ಮಾತನಾಡಿ 1950 ಜನವರಿ 26 ಭಾರತ ತನ್ನ ಸಂವಿಧಾನವನ್ನು ಜಾರಿಗೊಳಿಸಿದ ದಿನ.ರಾಜಾಡಳಿತವನ್ನು ಅಂತ್ಯಗೊಳಿಸಿ ಪ್ರಜಾಪ್ರಭುತ್ವದ ಅಸ್ಥಿತ್ವವನ್ನು ಸ್ಥಾಪಿಸಿದ ದಿನವಾದ ಗಣರಾಜ್ಯೋತ್ಸವ ಭಾರತೀಯರ ಪಾಲಿಗೆ ಅತ್ಯಂತ ಮಹತ್ವ ಹಾಗು ಹೆಮ್ಮೆಯ ದಿನವಾಗಿದ್ದು,ಇವತ್ತು ಭಾರತ ದೇಶದ ಅಭಿವೃದ್ಧಿ ಪ್ರಪಂಚದ ಎಲ್ಲಾ…
ನ್ಯೂಜ್ ಡೆಸ್ಕ್: ಭಾರತದ ರೈಲು ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಕಾಣಸಿಗುತ್ತಿದೆ ಸಾಂಪ್ರದಾಯಿಕ ರೈಲು ಮಾರ್ಗಗಳಲ್ಲಿ ವಂದೇಭಾರತ ಸೆಮಿ ಸ್ಪೀಡ್ ರೈಲು ಸಾಗುತ್ತಿದೆ, ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಭಾರತ ವಿದೇಶಿ ಸಹಯೋಗದಲ್ಲಿ ಹೈಸ್ಪೀಡ್ ರೈಲುಗಳ ಸಂಚರಾಕ್ಕೆ ಅನವು ಮಾಡಿಕೊಡಲು ನ್ಯಾಶನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಮುಂದಾಗಿದೆ ಇದರಂತೆ ಮೊದಲ ದಕ್ಷಿಣ ಭಾರತದ ಎರಡು ಪ್ರಮುಖ ರಾಜ್ಯಗಳ ರಾಜಧಾನಿಗಳು ಹಾಗು ಪ್ರಧಾನ ವ್ಯಾಪಾರಿ ಕೇಂದ್ರಗಳಾಗಿರುವ ಬೆಂಗಳೂರು ಹಾಗೂ ಚೆನ್ನೈ ನಡುವೆ ಈಗಾಗಲೇ ಸೆಮಿ ಹೈಸ್ಪೀಡ್ ರೈಲು ಎಂದು ಖ್ಯಾತಿಪಡೆದಿರುವ ವಂದೇ ಭಾರತ್ ರೈಲು ಸಂಚಾರ ಆರಂಬವಾಗಿರುವ ಬೆನ್ನಲ್ಲೇ ಮೈಸೂರು-ಬೆಂಗಳೂರು-ಚೆನ್ನೈ ಬುಲೆಟ್ ರೈಲು ಯೋಜನೆ ಕುರಿತಂತೆ ಯೋಜನೆಯ ಕಾಮಗಾರಿಗೆ ದಿನಗಣನೆ ಆರಂಭವಾಗಿದೆ ಈ ಸಂಬಂಧ ಭೂಮಾಪನ ಕಾರ್ಯ ನಡೆಯುತ್ತಿದ್ದು,ದಕ್ಷಿಣ ಭಾರತದಲ್ಲಿಯೇ ಪ್ರಥಮ ಎನ್ನುವಂತೆ ಮೈಸೂರು-ಬೆಂಗಳೂರು ಮತ್ತು ಚೆನ್ನೈ ನಗರಗಳನ್ನು ಸಂಪರ್ಕಿಸುವ ಬುಲೆಟ್ ಟ್ರೈನ್ ಎಂದು ಕರೆಯಲ್ಪಡುವ ಹೈಸ್ಪೀಡ್ ರೈಲು ಯೋಜನೆ ಇದಾಗಿದ್ದು ನ್ಯಾಶನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL)…


