ಶ್ರೀನಿವಾಸಪುರ:ತಾಲೂಕಿನ ಕಸಬಾ ಹೋಬಳಿ ಪಾಳ್ಯ ಗ್ರಾಮದ ಹಾಲು ಉತ್ಪಾದಕರ ಸಂಘಕ್ಕೆ ಹಿರಿಯ ಸಹಕಾರಿ ಧುರಿಣ ಹಾಗು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಭೈರಾರೆಡ್ಡಿ ಆರನೆಯ ಬಾರಿಗೆ ಆವಿರೋಧವಾಗಿ ಆಯ್ಕೆಯಾಗಿದ್ದಾರೆ.ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಭೈರಾರೆಡ್ಡಿ ಒಬ್ಬರೆ ನಾಮ ಪತ್ರವನ್ನು ಸಲ್ಲಿಸಿದ್ದರು. ಚುನಾವಣಾಧಿಕಾರಿಯಾಗಿದ್ದ ಶಂಕರ ನಾಮಪತ್ರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಪರಿಶೀಲಿಸಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಆಗಿರುವುದನ್ನು ಘೋಷಿಸಿದರು.ಸುಮಾರು 12 ಮಂದಿ ನಿರ್ದೇಶಕರು ಇರುವ ಸಹಕಾರ ಸಂಘದಲ್ಲಿ ಭೈರಾರೆಡ್ಡಿ ಆರನೆಯ ಬಾರಿಗೆ ಅಧ್ಯಕ್ಷರಾಗಿ ಅಯ್ಕೆಯಾಗುವ ಮೂಲಕ ದಾಖಲೆ ಮಾಡಿರುತ್ತಾರೆ.
ಅಧ್ಯಕ್ಷರಾಗಿ ಆಯ್ಕೆಯಾದ ಭೈರಾರೆಡ್ಡಿ ಮಾತನಾಡಿ ಕಸಬಾ ಹೋಬಳಿಯಲ್ಲಿ ಅತಿ ಹೆಚ್ಚುಹಾಲು ಶೇಖರಣೆಯಾಗುತ್ತಿರುವ ಹೆಗ್ಗಳಿಕೆ ಇರುವ ಪಾಳ್ಯ ಹಾಲು ಉತ್ಪಾದಕರ ಸಂಘದ ಅಭಿವೃದ್ಧಿಗಾಗಿ ಸದಸ್ಯರು ಮತ್ತು ನಿರ್ದೇಶಕರ ವಿಶ್ವಾಸ ತೆಗೆದುಕೊಂಡು ಯಾವುದೇ ಪಕ್ಷ ಬೇಧವಿಲ್ಲದೇ ಶ್ರಮಿಸುವುದಾಗಿ ಹೇಳಿದರು. ಹಾಲು ಉತ್ಪಾದಕರಿಗೆ ಸಹಕಾರ ಸಂಘದಿಂದ ಬರುವ ಸವಲತ್ತು ಮತ್ತು ಸಾಲ ಸೌಲಭ್ಯಗಳನ್ನು ನೇರವಾಗಿ ಹಾಲು ಉತ್ಪಾದಕರಿಗೆ ತಲುಪಿಸುವಂತ ಕಾರ್ಯ ಮಾಡುವುದಾಗಿ ಭರವಸೆ ಇತ್ತರು.
ಈ ಸಂದರ್ಭದಲ್ಲಿ ಸಹಕಾರ ಸಂಘದ ನಿರ್ದೇಶಕರಾದ ಪಾಪಿರೆಡ್ಡಿ,ಚೌಡರೆಡ್ಡಿ,ಬಿ.ಕೋದಂಡರೆಡ್ಡಿ, ನಾರಾಯಣಸ್ವಾಮಿ, ವಿ.ಕೋದಂಡರೆಡ್ಡಿ, ಪಿ.ಎಂ.ನಾರಾಯಣರೆಡ್ಡಿ,ಲಕ್ಷ್ಮಣರೆಡ್ಡಿ,ರೆಡ್ಡೆಪ್ಪ,ಜಯಮ್ಮ,ಆಶೋಕನಾಯಕ,ರಾಮಕೃಷ್ಣಪ್ಪ ಸೇರಿದಂತೆ ಸಂಘದ ಕಾರ್ಯದರ್ಶಿ ಪಿ.ಆರ್.ಶ್ರೀನಿವಾಸಶೆಟ್ಟಿ ಇದ್ದರು.ಈ ಸಂದರ್ಭದಲ್ಲಿ ಗ್ರಾಮದ ಯುವ ಮುಖಂಡ ಗೋಪಾಲರೆಡ್ಡಿ ನೂತನ ಅಧ್ಯಕ್ಷರಿಗೆ ಶುಭಕೋರಿದರು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



