Author: Srinivas_Murthy

ಶ್ರೀನಿವಾಸಪುರ:ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತವಾಗಿ ದ್ವಿಚಕ್ರ ವಾಹನ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಅಪಘಾತ ಘಟನೆ ತಾಲೂಕಿನ ಗೌವನಪಲ್ಲಿ ರಸ್ತೆಯ ಕಪ್ಪಲ್ಲಿ ಬಳಿ ನಡೆದಿರುತ್ತದೆ.ಮೃತ ವ್ಯಕ್ತಿಯನ್ನು ಗೌನಿಪಲ್ಲಿಯ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯದ ಸಿಬ್ಬಂದಿ ದೇವರಾಜ್ (50) ಎಂದು ಗುರುತಿಸಲಾಗಿದೆ.ಮೃತ ವ್ಯಕ್ತಿ ಗೌನಿಪಲ್ಲಿ ವಿದ್ಯಾರ್ಥಿ ನಿಲಯದಲ್ಲಿ ಕೆಲಸ ಮುಗಿಸಿ ತನ್ನ ಸ್ವಗ್ರಾಮವಾದ ಯಚ್ಚನಹಳ್ಳಿಗೆ ದ್ವಿಚಕ್ರವಾಹನದಲ್ಲಿ ಹಿಂತಿರುಗುತ್ತಿರುವಾಗ ಕಪ್ಪಲ್ಲಿ ಗ್ರಾಮದ ಬಳಿ ಇರುವ ತಿರುವಿನಲ್ಲಿ ಎದುರಿನಿಂದ ಬಂದ ಕಾರು ಡಿಕ್ಕಿಯಾಗಿ ದ್ವಿಚಕ್ರ ಸವಾರ ಗಂಭೀರವಾಗಿ ಗಾಯಗೊಂಡಿದ್ದು,ಕೋಲಾರ ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ಚಿಕಿಸ್ಥೆಗೆ ರವಾನಿಸಲಾಗಿದೆ ಅಲ್ಲಿ ಚಿಕಿಸ್ಥೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ.ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಶ್ರೀನಿವಾಸಪುರ:ಸುಮಾರು ಅರವತ್ತುಕ್ಕೂ ಹೆಚ್ಚು ಜನ ರಾಮಭಕ್ತರು ಇಂದು ಅಯೋಧ್ಯೆಯ ಶ್ರೀರಾಮಲಲ್ಲಾನ ದರ್ಶನ ಮಾಡಲು ಹೋರಟರು.ಅರವತ್ತುಕ್ಕೂ ಜನರ ತಂಡ ಅಯೋಧ್ಯೆಗೆ ಪ್ರಯಾಣ ಬೆಳಿಸಿದ್ದು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಪೂಜೆ ಸಲ್ಲಿಸಿ ರಾಜ್ಯ ಸಾರಿಗೆ ಸಂಸ್ಥೆ ಬಸ್ ಮೂಲಕ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಚಿರುವುನಹಳ್ಳಿಲಕ್ಷ್ಮಣಗೌಡ ಮಾತನಾಡಿ ರಾಮಲಲ್ಲಾನ ದರ್ಶನಕ್ಕೆ ಹೋಗುತ್ತಿರುವ ನಮಗೆ ಸಂತಸವಾಗುತ್ತಿದೆ ಇಲ್ಲಿಂದ ನಾವು ಬೆಂಗಳೂರಿನ ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣಕ್ಕೆ ಹೋಗಲಿದ್ದು ಅಲ್ಲಿ ವಿಶೇಷ ರೈಲಿನಲ್ಲಿ ಬುಧವಾರ ನಸುಕಿನ ಜಾವದಲ್ಲಿ ಅಯೋಧ್ಯೆಗೆ ತೆರಳಲಿರುವುದಾಗಿ ಹೇಳಿದರು, ಅಯೋಧ್ಯೆಗೆ ಹೋರಟಿರುವ ನಮಗೆ ಊಟ ಉಪಚಾರವನ್ನು ಅತ್ಯಂತ ವ್ಯವಸ್ಥೆವಾಗಿ ಮಾಡಲಾಗಿದೆ ಎಂದು ತಿಳಿಸಿದರು.ಅಯೋಧ್ಯೆ ಯಾತ್ರಾತ್ರಿಗಳು ಸುಖಕರವಾಗಿ ಪ್ರಯಾಣಿಸಲಿ ಎಂದು ಬಿಜೆಪಿ ಹಿರಿಯ ಮುಖಂಡ ಟಿ.ನಾರಯಣಸ್ವಾಮಿ,ವಿಶ್ವಹಿಂದು ಪರಿಷತ್ ಮುಖಂಡ ವೇಮಣ್ಣ,ದಿವಾಕರ್,ಜಯರಾಮರೆಡ್ಡಿ ಶುಭ ಹಾರೈಸಿದರು.

Read More

ನ್ಯೂಜ್ ಡೆಸ್ಕ್:ಬಿಜೆಪಿ ಸರ್ಕಾರ ಮಂಡಿಸಿದ ಮಧ್ಯಂತರ ಬಜೆಟ್ ನಲ್ಲಿ ಕೋಲಾರಕ್ಕೆ ಯಾವುದೇ ಹೊಸ ರೈಲು ಮಾರ್ಗದ ಪ್ರಸ್ತಾವನೆ ಇಲ್ಲದ್ದು ವಿಶೇಷ ಎನ್ನಬಹುದು,ಕೋಲಾರ ಜಿಲ್ಲೆಗೆ ಹೊಸ ರೈಲು ಹಾಗೂ ಮಾರ್ಗ ಘೋಷಣೆ ಆಗಬಹುದು ಎಂದು ಅವಿಭಜಿತ ಕೋಲಾರ ಜಿಲ್ಲೆಯ ಜನತೆ ನಿರಿಕ್ಷೆ ಹೊಂದಿದ್ದರು,ಕೋಲಾರ ಕೇಂದ್ರೀಕರಿಸಿ ವಿವಿಧ ನಗರಗಳಿಗೆ ರೈಲು ಮಾರ್ಗಗಳ ನಿರ್ಮಾಣದ ಬಗ್ಗೆ ದೇವೆಗೌಡರು ಪ್ರಧಾನಿಯಾದಾಗಿನಿಂದಲೂ ಹೇಳಲಾಗುತ್ತಿದೆ, ಆದರೂ ಅದು ಕಾರ್ಯಯೋಜನೆ ಆಗಿಲ್ಲ.ಸರ್ಕಾರಗಳು ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಒಂದಾಗಿರುವ ರೈಲು ಸೇವೆ ಕುರಿತಾಗಿ ಜಿಲ್ಲೆಯ ಜನತೆಗೆ ಸೌಕರ್ಯಗಳು ಅಷ್ಟೇನೂ ಸಮಾಧಾನಕರವಲ್ಲ ಎನ್ನಬಹುದು.ವಿಭಜಿತ ಕೋಲಾರ ಜಿಲ್ಲೆಯಲ್ಲಿ ಯಾವುದೆ ನದಿ ನಾಲೆಗಳು ಇಲ್ಲ ಬಯಲುಸೀಮೆ ಜಿಲ್ಲೆಯಾಗಿದ್ದು ಇಲ್ಲಿನ ರೈತರು ಶ್ರಮವಹಿಸಿ ಬಂಗಾರದ ಬೆಳೆ ಬೆಳೆದರು ಉತ್ತಮ ಧರ ಸಿಗದೆ ಪರೆದಾಡುವ ಪರಿಸ್ಥಿತಿ. ಇವರ ಬೇಕು ಬೇಡಗಳ ಅರಿಯದ ರಾಜ್ಯ ಅಥಾವ ಕೇಂದ್ರ ಸರ್ಕಾರಗಳು ಬಜೆಟ್ ಮಂಡಿಸುವಾಗ ಈ ಭಾಗದ ಜನತೆಯ ನಿರೀಕ್ಷೆಗಳೇನು ಎಂಬುದನ್ನು ಪರಿಗಣಿಸದೆ ಇರುವುದು ದುರಂತ ಎಂದು ಜನರ ಆರೋಪ ,ಬೃಹತ್ ಬೆಂಗಳೂರು ಮಹಾನಗರಕ್ಕೆ…

Read More

ಕೋಲಾರ: ಶ್ರೀನಿವಾಸಪುರದ ಯುವಕ,ಮುಳಬಾಗಿಲು ಶಾಸಕ, ಸಮೃದ್ಧಿ ಸಮೂಹ ಸಂಸ್ಥೆಗಳ ಮಾಲಿಕ ಸಮೃದ್ಧಿ ಮಂಜುನಾಥ್ ಅವರು ಬಂಗಾರದ ಅಂಗಡಿ ಸಿರಿ ಸಮೃದ್ಧಿ ಗೋಲ್ಡ್ ಪ್ಯಾಲೆಸ್ ಅನ್ನು ಕೋಲಾರ ನಗರದಲ್ಲಿ ಎರಡನೆಯ ಮಳಿಗೆಯನ್ನು ಸೋಮವಾರ ಆರಂಭಿಸಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ವತಃ ಶಿರಡಿಸಾಯಿನಾಥನಿಗೆ ಪೂಜೆ ಸಲ್ಲಿಸಿ ಉದ್ಘಾಟಿಸಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿ ಮಾತನಾಡಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಾಗೂ ಸಮರ್ಪಕ ತೂಕ, ಕಡಿಮೆ ಬೆಲೆಯ ಹೊಸ ಹೊಸ ವಿನ್ಯಾಸದ ಆಭರಣಗಳನ್ನು ಕೋಲಾರದ ಜನತೆಗೆ ನೀಡುವ ಮೂಲಕ ಉತ್ತಮವಾಗಿ ವ್ಯಾಪಾರ ಮಾಡಲಿ ಎಂದು ಶುಭಕೋರಿದರು.ಸಿರಿಸಮೃದ್ಧಿ ಗೋಲ್ಡ್ ಪ್ಯಾಲೇಸ್ ಮಾಲಿಕ ಸಮೃದ್ಧಿ ಮಂಜುನಾಥ್ ಮಾತನಾಡಿ ಬೆಂಗಳೂರಿನ ಯಲಹಂಕದಲ್ಲಿ ಪ್ರಥಮ ಮಳಿಗೆಯಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿಭಿನ್ನ ಹಾಗೂ ವಿಶೇಷವಾಗಿ ತಯಾರಾದ ಹೊಸ ವಿನ್ಯಾಸದ ಪರಿಶುದ್ಧ ಹಾಗೂ ಬಿಐಎಸ್ ಹಾಲ್‌ಮಾರ್ಕ್ ಒಳಗೊಂಡ ಆಭರಣಗಳು, ಇಂದಿನ ಕಾಲಘಟ್ಟಕ್ಕೆ ತಕ್ಕಂತಹ ವಿನೂತನ ಶೈಲಿಯ ವಿನ್ಯಾಸದ ಆಭರಣಗಳು, ಚಿನ್ನ ಬೆಳ್ಳಿ ಹಾಗೂ ವಜ್ರದ ಆಭರಣಗಳ ಬೃಹತ್ ಭಂಡಾರ, ಕಡಿಮೆ ಬೆಲೆಯ ಹೆಚ್ಚು…

Read More

ನ್ಯೂಜ್ ಡೆಸ್ಕ್: ಶ್ರೀ ಕೃಷ್ಣನ ನಗರ ಗುಜರಾತನ ದ್ವಾರಕದಲ್ಲಿರುವ ಅರಬ್ಬಿ ಸಮುದ್ರದ ಆಳಕ್ಕಿಳಿದ ಪ್ರಧಾನಿ ನರೇಂದ್ರ ಮೋದಿ,ಸಮುದ್ರ ತಟದಲ್ಲಿ ಸಮುದ್ರದೊಳಗಿರುವ ದ್ವಾರಕಾಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ ನವಿಲು ಗರಿಗಳನ್ನು ಸಮುದ್ರದೊಳಗೆ ಒಯ್ದು ಶ್ರೀ ಕೃಷ್ಣನಿಗೆ ಸಮರ್ಪಿಸಿದ್ದಾರೆ.ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಗುಜರಾತ್ ರಾಜ್ಯದಲ್ಲಿರುವ ದ್ವಾರಕ ಅತ್ಯಂತ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ. ಸಮುದ್ರದೊಳಗೆ ಇಳಿದು ದ್ವಾರಕ ದರ್ಶನ ಮಾಡಿ ಪೂಜೆ ಸಲ್ಲಿಸಿರುವ ಮೋದಿಯ ಅತ್ಯಂತ ಕಠಿಣವಾದ ಸಾಧನೆ ಬಗ್ಗೆ ಸರ್ವತಾ ಶ್ಲಾಘನೆಗೆ ವ್ಯಕ್ತವಾಗಿದೆ.ಭಾರತದ ಅತ್ಯಂತ ಪ್ರಾಚೀನ ನಗರಿಗಳಲ್ಲಿ ಒಂದಾಗಿರುವ ದ್ವಾರಕಾಗೆ ಭಾನುವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅರಬ್ಬೀ ಸಮುದ್ರದ ಪಂಚಕುಯಿ ಕರಾವಳಿ ತೀರದ ಬಳಿ ಸ್ಕೂಬಾ ಡೈವಿಂಗ್‌ ಮಾಡಿ ಅಂಡರ್ ವಾಟರ್ ನಲ್ಲಿ ಸಾಹಸಮಯವಾಗಿ ಪೂಜೆ ಸಲ್ಲಿಸಿದ್ದಾರೆ.ಸಮುದ್ರದ ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಮಾಡುವುದು ಅತ್ಯಂತ ದಿವ್ಯವಾದ ಅನುಭವವಾಗಿತ್ತು. ನಾನು ಆಧ್ಯಾತ್ಮಿಕ ಭವ್ಯತೆ ಮತ್ತು ಪ್ರಾಚೀನ ಯುಗಕ್ಕೆ ಹೋದಂತೆ ಭಾಸವಾಯಿತು. ಭಗವಾನ್ ಶ್ರೀ ಕೃಷ್ಣ ನಮ್ಮೆಲ್ಲರನ್ನು…

Read More

ಶ್ರೀನಿವಾಸಪುರ: ಜನರಿಗೆ ಒದಗಿಸುವ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ರಸ್ತೆ ಅಭಿವೃದ್ಧಿ ಮಹತ್ವದ್ದು ಅದನ್ನು ಒದಗಿಸುವಾಗ ಜನತೆ ಯಾಕೆ ಬೇಡ ಅನ್ನುತ್ತಾರೆ,ಅದರಲ್ಲೂ ಪ್ರಮುಖ ರಸ್ತೆಯೊಂದರ ಅಭಿವೃದ್ಧಿಯಿಂದ ಊರಿಗೆ ಎಷ್ಟೆಲ್ಲಾ ಅನಕೂಲ ಅಗುತ್ತದೆ ಎಂದರೆ ಊರಿನ ಜನತೆ ಖುಷಿ ಪಡುತ್ತಾರೆ, ಆದರೆ ಶ್ರೀನಿವಾಸಪುರದ ಪೋಸ್ಟಾಫಿಸ್ ರಸ್ತೆ ನಿರ್ಮಾಣ ಮಾಡುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಶ್ರೀನಿವಾಸಪುರದ ಅಧಿಕಾರಿಗಳ ಎಡವಟ್ಟೊ ಸ್ಥಳೀಯ ರಾಜಕೀಯ ಅಡ್ಡಗಾಲೋ ಅವೈಜ್ಞಾಕವಾದ ರಸ್ತೆ ನಿರ್ಮಾಣದಿಂದಾಗಿ ಮತ್ತಷ್ಟು ಸಮಸ್ಯೆಗಳು ಪೋಸ್ಟಾಫಿಸ್ ರಸ್ತೆಯನ್ನು ಕಾಡುತ್ತದೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇಂತಹ ರಸ್ತೆ ಅಭಿವೃದ್ಧಿ ನಮಗೆ ಬೇಡ ಎನ್ನುತ್ತಿದ್ದಾರೆ.ಮುಂಬರುವ ದಿನಗಳಲ್ಲಿ ವಾಹನ ಸಂಚಾರ ದಟ್ಟನೆ ಹೆಚ್ಚಳ!ಹಿಂದೆಲ್ಲ ರಸ್ತೆಗಳ ನಿರ್ಮಾಣ ಮಾಡಿದರೆ ಮುಂದಿನ ಐವತ್ತು ವರ್ಷಗಳು ಕಾಲ ರಸ್ತೆ ಸಂಚಾರಕ್ಕೆ ಅನಕೂಲವಾಗಿರಬೇಕು ಎನ್ನುವ ಕಾಲ ಇತ್ತು, ಈಗಿನ ಬದಲಾದ ಕಾಲ ಘಟ್ಟದಲ್ಲಿ ಜನ ಸಂಚಾರ ವಾಹನ ಸಂಚಾರ ದಿನೆದಿನೆ ಏರುತ್ತಿರುವ ಹಿನ್ನಲೆಯಲ್ಲಿ ರಸ್ತೆ ಆದಷ್ಟು ವಿಶಾಲವಾಗಿರಬೇಕು ಗುಣಮಟ್ಟದಾಗಿರಬೇಕು ಎನ್ನುವ ಕಾಲ, ಇದಕ್ಕೆ ತದ್ವಿರುದ್ದ ಎನ್ನುವಂತೆ ಪೋಸ್ಟಾಫಿಸ್ ರಸ್ತೆ ನಿರ್ಮಾಣ…

Read More

ಶ್ರೀನಿವಾಸಪುರ:ಶಾಲಾ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಕಾರ್ಯಕ್ರಮ ಇದೊಂದು ಉತ್ತಮ ಕಾರ್ಯಕ್ರಮವಾಗಿದೆ ಎಂದು ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು ಅವರು ಶ್ರೀನಿವಾಸಪುರ ಪಟ್ಟಣದ ತ್ಯಾಗರಾಜ ಬಡಾವಣೆಯಲ್ಲಿರುವಂತ ಕರ್ನಾಟಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ(ಬೈರೆಡ್ಡಿ ಸ್ಕೂಲ್)ಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ,ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಹಾಗು ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಮತ್ತು ಕೆ ಎಂ ಎಫ್ ಇವರ ಸಹಯೋಗದಲ್ಲಿ ಮದ್ಯಾಹ್ನ ಉಪಹಾರ ಯೋಜನೆಯಡಿ ತಾಲ್ಲೂಕು ಹಂತದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ 1 ರಿಂದ 10 ನೇ ತರಗತಿ ಎಲ್ಲಾ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರವಾಗಿ ಬಿಸಿ ಹಾಲಿನೊಂದಿಗೆ ಮಿಶ್ರಣಗೊಳಿಸಿ ಶಾಲಾ ಮಕ್ಕಳಿಗೆ ವಿತರಣೆ ಮಾಡುವಂತ ಕಾರ್ಯಕ್ರಮವನ್ನು ಸಧ್ಯ ಈಗ ವಾರಕ್ಕೆ ಮೂರು ದಿನ ನೀಡುತ್ತಿದ್ದು ಅದನ್ನು ವಾರದ 6 ದಿನಗಳು ನೀಡಿದರೆ ಒಳ್ಳೆಯದು ಎಂದು ಹೇಳಿದ ಅವರು ಸರ್ಕಾರಿ ಶಾಲೆಗಳ ಮಕ್ಕಳು ಯಾವುದೇ ರೀತಿಯ ಆಪೌಷ್ಠಿಕತೆಯಿಂದ ಬಳಲಬಾರದು ಎಂದು ಕೇಂದ್ರ ಸರ್ಕಾರ ಅತುತ್ಯಮವಾದ ಕಾರ್ಯಕ್ರಮ ರೂಪಿಸಿದೆ…

Read More

ಶ್ರೀನಿವಾಸಪುರ: ತಾಲೂಕಿನ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯ ರಾಯಲ್ಪಾಡು ಹೋಬಳಿ ಸುಣ್ಣಕಲ್ಲು ಗ್ರಾಮದ ಕೋಟೆ ಜಾಗದಲ್ಲಿದ್ದ ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನ ದೇವಾಲಯಕ್ಕೆ ಸೇರಿರುವಂತ ಸ್ಥಳವನ್ನು ಖಾಸಗಿ ವ್ಯಕ್ತಿಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಖಾತೆ ಮಾಡಿಕೊಟ್ಟಿದ್ದಾರೆ ಎಂದು ಸಂಸದ ಮುನಿಸ್ವಾಮಿ ಆರೋಪಿಸಿದರು.ಅಕ್ರಮವಾಗಿ ಒತ್ತುವರಿಯಾಗಿರುವಂತ ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನದ ಜಾಗಕ್ಕೆ ಸಂಸದ ಮುನಿಸ್ವಾಮಿ ಭೇಟಿ ನೀಡಿ ಅಲ್ಲಿದ್ದ ದೇವರ ಮೂರ್ತಿಗಳಿಗೆ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕಂದಾಯ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡ ಸಂಸದ ಮುನಿಸ್ವಾಮಿ ಸುಮಾರು 11 ಎಕರೆ ಜಾಗ ಒತ್ತುವರಿಯಾಗಿದ್ದು ಇದಕ್ಕೆ ಕಂದಾಯ ಅಧಿಕಾರಿಗಳು ಸಹಕಾರ ನೀಡಿದ್ದಾರೆ ಹಣ ನೀಡಿದರೆ ದೇವಸ್ಥಾನದ ಜಾಗವನ್ನು ಖಾತೆ ಮಾಡಿಕೊಡ್ತೀರಾ? ದೇವಸ್ತಾನದ ಜಾಗ ಹದ್ದುಬಸ್ತು ಮಾಡದೆ ಹೋದರೆ ನಾನು ಸುಮ್ಮನೆ ಕೂರುವುದಿಲ್ಲ ಎಂದು ಅಧಿಕಾರಿಯ ವಿರುದ್ದ ಹರಿಹಾಯ್ದರು. ಈ ಸಂದರ್ಭದಲ್ಲಿ ರಾಯಲ್ಪಾಡು ಹೋಬಳಿಯ ರಾಜಸ್ವ ನಿರೀಕ್ಷಕ ಗುರುರಾಜ್ ರಾವ್ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ರೋಣೂರು ಚಂದ್ರಶೇಖರ್, ಸೇರಿದಂತೆ ಮುಂತಾದವರು…

Read More

ಶ್ರೀನಿವಾಸಪುರ:ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಂ ಶ್ರೀನಿವಾಸನ್ ಕೊಲೆ ಅರೋಪದಲ್ಲಿ ಬಂದಿತನಾಗಿರುವ ಆರೋಪಿಯ ತಾಯಿ ಪುರಸಭೆ ಸದಸ್ಯೆಯಾಗಿದ್ದು ಆಕೆ ಪುರಸಭೆ ಸದಸ್ಯೆಯಾಗಿ ಮುಂದುವರೆಯಬಾರದು ಈ ತಕ್ಷಣ ರಾಜಿನಾಮೆ ನೀಡಬೇಕು ಮತ್ತು ಆಕೆ ತನ್ನ ಮನೆಗೆ ಪುರಸಭೆ ವತಿಯಿಂದ ಅಕ್ರಮ ಬಿಲ್ ಮಾಡಿಕೊಂಡಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ಅಗ್ರಹಿಸಿ ವಾರ್ಡ್ ನಂ 20 ನಿವಾಸಿಗರು ಪುರಸಭೆ ಸದಸ್ಯೆ ಲೀಲಾವತಿ ಶ್ರೀನಿವಾಸ್ ಮನೆ ಮುಂದೆ ಪ್ರತಿಭಟನಾ ಧರಣಿ ನಡೆಸಿದರು. ದಲಿತ ಸಮುದಾಯದ ಪ್ರಭಾವಿ ಕಾಂಗ್ರೇಸ್ ಮುಖಂಡ,ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಂ ಶ್ರೀನಿವಾಸನ್ ಕಳೆದ ಅಕ್ಟೋಬರ್ ನಲ್ಲಿ ತಮ್ಮ ತೋಟದ ಮನೆ ಬಳಿ ಬರ್ಬರವಾಗಿ ಕೊಲೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿದಂತೆ ಕೆಲವೆ ಗಂಟೆಗಳ ಅವಧಿಯಲ್ಲಿ ಪೊಲೀಸರು ಆರೋಪಿಗಳನ್ನು ಬಂದಿಸಿದ್ದರು, ಬಂದಿತ ಆರೋಪಿಗಳಲ್ಲಿ ಶ್ರೀನಿವಾಸಪುರ ಪಟ್ಟಣದ ವಾರ್ಡ್ ನಂ 20 ಪುರಸಭೆ ಸದಸ್ಯೆ ಲೀಲಾವತಿ ಶ್ರೀನಿವಾಸ್ ರವರ ಮಗ ಚಂದನ್ ಸಹ ಆರೋಪಿಯಂದು ಪೋಲಿಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ, ಕೊಲೆ ಘಟನೆ ನಡೆದ ನಂತರದಲ್ಲಿ…

Read More

ಶ್ರೀನಿವಾಸಪುರ:ಡಾ ಬಿಆರ್ ಅಂಬೇಡ್ಕರ್ ಅವರು ನಮಗೆ ನೀಡಿದ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ.ನಾವು ವಿದೇಶಿ ಆಳ್ವಿಕೆಯಿಂದ ಮುಕ್ತರಾಗಿ ಸ್ವಾತಂತ್ರ್ಯಗೊಂಡು ಆಧುನಿಕವಾಗಿ ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ನಿರ್ಮಾಣವಾಗಲು ಸಂವಿಧಾನ ಸಹಕಾರಿಯಾಗಿದೆ,ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮೂಲಭೂತ ಹಕ್ಕುಗಳು ನಮ್ಮ ಸಂವಿಧಾನ ನಮಗೆ ನೀಡಿರುವ ಬಹುದೊಡ್ಡ ಕೊಡುಗೆಗಳಾಗಿವೆ ಎಂದು ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು.ಮುಳಬಾಗಿಲು ತಾಲೂಕಿನಿಂದ ಆಗಮಿಸಿದ ಸಂವಿಧಾನ ಜಾಗೃತಿ ಜಾಥವನ್ನು ತಾಲೂಕಿನ ಗಡಿಯಲ್ಲಿ ಅಂಬೇಡ್ಕರ್ ಪುಥ್ಥಳಿಗೆ ಮಾಲಾರ್ಪಣೆ ಮಾಡಿ ಅದ್ಧೂರಿಯಾಗಿ ಸ್ವಾಗತಿಸಿದ ಅವರು ನಂತರ ಲಕ್ಷ್ಮೀಸಾಗರದ ಶತಶೃಂಗ ಶಾಲಾ ಆವರಣದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು ಭಾರತೀಯ ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜನವರಿ 26 ರಿಂದ ಫೆಬ್ರವರಿ 23ರ ವರೆಗೆ ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥ ಸಂಚರಿಸಲಿದ್ದು ನಮ್ಮ ತಾಲೂಕಿಗೂ ಆಗಮಿಸಿದೆ ಅತ್ಯಂತ ಹೆಮ್ಮೆಯಿಂದ ನಾವೆಲ್ಲ ಸ್ವಾಗತಿಸಿದ್ದೇವೆ ತಾಲೂಕಿನಾದ್ಯಂತ ಸಂಚರಿಸಲು ಸಹಕಾರ ಮಾಡಿಕೊಡುವ ಮೂಲಕ ಸಂವಿಧಾನದ ಮೌಲ್ಯಗಳು ಮತ್ತು ಆಶಯಗಳ ಕುರಿತಾಗಿ ಎಲ್ಲರಿಗೂ ಅರಿವು ಮೂಡಿಸೋಣ…

Read More