ನ್ಯೂಜ್ ಡೆಸ್ಕ್:ಬಿಜೆಪಿ ಸರ್ಕಾರ ಮಂಡಿಸಿದ ಮಧ್ಯಂತರ ಬಜೆಟ್ ನಲ್ಲಿ ಕೋಲಾರಕ್ಕೆ ಯಾವುದೇ ಹೊಸ ರೈಲು ಮಾರ್ಗದ ಪ್ರಸ್ತಾವನೆ ಇಲ್ಲದ್ದು ವಿಶೇಷ ಎನ್ನಬಹುದು,ಕೋಲಾರ ಜಿಲ್ಲೆಗೆ ಹೊಸ ರೈಲು ಹಾಗೂ ಮಾರ್ಗ ಘೋಷಣೆ ಆಗಬಹುದು ಎಂದು ಅವಿಭಜಿತ ಕೋಲಾರ ಜಿಲ್ಲೆಯ ಜನತೆ ನಿರಿಕ್ಷೆ ಹೊಂದಿದ್ದರು,ಕೋಲಾರ ಕೇಂದ್ರೀಕರಿಸಿ ವಿವಿಧ ನಗರಗಳಿಗೆ ರೈಲು ಮಾರ್ಗಗಳ ನಿರ್ಮಾಣದ ಬಗ್ಗೆ ದೇವೆಗೌಡರು ಪ್ರಧಾನಿಯಾದಾಗಿನಿಂದಲೂ ಹೇಳಲಾಗುತ್ತಿದೆ, ಆದರೂ ಅದು ಕಾರ್ಯಯೋಜನೆ ಆಗಿಲ್ಲ.ಸರ್ಕಾರಗಳು ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಒಂದಾಗಿರುವ ರೈಲು ಸೇವೆ ಕುರಿತಾಗಿ ಜಿಲ್ಲೆಯ ಜನತೆಗೆ ಸೌಕರ್ಯಗಳು ಅಷ್ಟೇನೂ ಸಮಾಧಾನಕರವಲ್ಲ ಎನ್ನಬಹುದು.
ವಿಭಜಿತ ಕೋಲಾರ ಜಿಲ್ಲೆಯಲ್ಲಿ ಯಾವುದೆ ನದಿ ನಾಲೆಗಳು ಇಲ್ಲ ಬಯಲುಸೀಮೆ ಜಿಲ್ಲೆಯಾಗಿದ್ದು ಇಲ್ಲಿನ ರೈತರು ಶ್ರಮವಹಿಸಿ ಬಂಗಾರದ ಬೆಳೆ ಬೆಳೆದರು ಉತ್ತಮ ಧರ ಸಿಗದೆ ಪರೆದಾಡುವ ಪರಿಸ್ಥಿತಿ. ಇವರ ಬೇಕು ಬೇಡಗಳ ಅರಿಯದ ರಾಜ್ಯ ಅಥಾವ ಕೇಂದ್ರ ಸರ್ಕಾರಗಳು ಬಜೆಟ್ ಮಂಡಿಸುವಾಗ ಈ ಭಾಗದ ಜನತೆಯ ನಿರೀಕ್ಷೆಗಳೇನು ಎಂಬುದನ್ನು ಪರಿಗಣಿಸದೆ ಇರುವುದು ದುರಂತ ಎಂದು ಜನರ ಆರೋಪ ,ಬೃಹತ್ ಬೆಂಗಳೂರು ಮಹಾನಗರಕ್ಕೆ 50-60 ಕೀ.ಮಿ ದೂರದಲ್ಲಿರುವ ಜಿಲ್ಲೆಗಳಾಗಿದ್ದರು ವಿಶೇಷ ಆದ್ಯತೆಗಳ ಅನಕೂಲ ಇದುವರಿಗೂ ಸಿಕ್ಕಿಲ್ಲ.
ಬಂಗಾರಪೇಟೆ-ಕಡಪಾ ರೈಲ್ವೆ ಫೀಡರ್ ರೋಡ್! ರೈಲು ಮಾರ್ಗವಾಗಲಿಲ್ಲ
ಕೋಲಾರ ಜಿಲ್ಲೆಯ ಬಂಗಾರಪೇಟೆ ರೈಲ್ವೆ ಜಂಕ್ಷನ್ ನಿಂದ ಆಂಧ್ರದ ಕಡಪವರಿಗೂ ರೈಲ್ವೆ ಫೀಡರ್ ರಸ್ತೆ ಇದ್ದು ಅದು ಬಹುಷಃ ಬ್ರಿಟಿಷರ ಆಳ್ವಿಕೆಯ ಕಾಲದ್ದು ಎನ್ನುತ್ತಾರೆ ಈ ರಸ್ತೆ ಮಾರ್ಗವನ್ನು ರೈಲು ಮಾರ್ಗವಾಗಿ ಮಾಡಬೇಕು ಎನ್ನುವ ಆಲೋಚನೆಗೆ ಜೀವ ಬಂದಿದ್ದು ದೇವೇಗೌಡರು ಪ್ರಧಾನಿಯಾಗಿದ್ದಾಗ, ಇದನ್ನು ಬೆಂಗಳೂರು-ತಿರುಪತಿಗೆ ಮದನಪಲ್ಲೆ ಮಾರ್ಗವಾಗಿ ರೈಲ್ವೆ ಮಾರ್ಗ ನಿರ್ಮಾಣ ಮಾಡುವ ಮೂಲಕ ಬೆಂಗಳೂರು-ತಿರುಪತಿ ಮಾರ್ಗದ ಪ್ರಯಾಣದ ಅವಧಿ ಕಡಿಮೆ ಮಾಡುವುದು ಮತ್ತು ಆಂಧ್ರದ ರಾಯಲಸೀಮಾ ಪ್ರಾಂತ್ಯವಾದ ಮದನಪಲ್ಲೆ ಮಾರ್ಗವಾಗಿ ಬೆಂಗಳೂರು-ಕಡಪಾ ನೂತನ ಮಾರ್ಗವನ್ನು ನಿರ್ಮಾಣ ಮಾಡುವುದಕ್ಕೆ ಸರ್ವೆ ಕಾರ್ಯಕ್ಕೆ ಚಾಲನೆ ದೊರೆಯಿತು ಕೋಲಾರ.ಶ್ರೀನಿವಾಸಪುರ (ದೊಡಮಲದೊಡ್ಡಿ ಬಳಿ ಟ್ರ್ಯಾಕ್ ಚೆಂಜ್) ಭೈರವೇಶ್ವರ ಶಾಲೆ ಪಕ್ಕದಲ್ಲಿ ರೈಲ್ವೆ ಹಳಿ ಹಾದು ಹೋಗುವುದು ಸೋಮಯಾಜಲಹಳ್ಳಿ ಅಥಾವ ರಾಮಸಮುದ್ರಂ ನಲ್ಲಿ ರೈಲು ನಿಲ್ದಾಣ ನಿರ್ಮಾಣ ಮಾಡುವ ಮೂಲಕ ಮದನಪಲ್ಲೆ ರೋಡ್ ರೈಲ್ವೆ ನಿಲ್ದಾಣವನ್ನು ಜಂಕ್ಷನ್ ಮಾಡುವ ಸಂಬಂಧ ಕಾರ್ಯಯೋಜನೆ ಮಾಡಲಾಯಿತಾದರೂ ಇದ್ದಕ್ಕಿದ್ದಂತೆ ಯಾರು ಏನು ಗೇಮ್ ಚೆಂಜ್ ಮಾಡಿದರೋ ಏನೋ, ನಂತರದ ಬೆಳವಣಿಗೆಯಲ್ಲಿ ಇದ್ದಕ್ಕಿದ್ದಂತೆ ಬೆಂಗಳೂರು-ಮುಳಬಾಗಿಲು-ಚಿತ್ತೂರು ಮಾರ್ಗವಾಗಿ ತಿರುಪತಿಗೆ ತಲುಪುವುದು ಹಾಗೆ ಜೋಲಾರಪೇಟೆ ಜಂಕ್ಷನಿಂದ ಕುಪ್ಪಮ್-ಮುಳಬಾಗಿಲು-ಮದನಪಲ್ಲೆ ಎರಡು ಟ್ರ್ಯಾಕ್ ಗೆ ಸಂಬಂಧಿಸಿದಂತೆ ಹಾಗು ಮುಳಬಾಗಿಲು-ಕೆ.ಬೈಪಲ್ಲಿ ರಸ್ತೆಯ ಸೊನ್ನವಾಡಿಯಲ್ಲಿ ರೈಲ್ವೆ ನಿಲ್ದಾಣ ಮಾಡುವುದು ಕುರಿತಂತೆ ಸರ್ವೆ ಕಾರ್ಯ ನಡೆಯಿತು ಅದು ಸಹ ಮುಂದೆ ಯಾವುದೆ ರೀತಿಯ ಪ್ರಗತಿ ಕಾಣಲಿಲ್ಲ ಎಂದು ಮುಳಬಾಗಿಲು ಜನತೆ ಬೇಸರ ವ್ಯಕ್ತಪಡಿಸುತ್ತಾರೆ. ಮುಳಬಾಗಿಲಿನ ಸೊನ್ನವಾಡಿಯಲ್ಲಿ ರೈಲ್ವೆ ನಿಲ್ಧಾಣ ಆಗುತ್ತದೆ ಎಂಬ ಟಾಕ್ ಕೇಳಿಬರುತ್ತಿದ್ದಂತೆ ಸುತ್ತಮುತ್ತಲ ಭೂಮಿ ಧರ ಏಕಾಏಕಿ ಏರತೊಡಗಿತು ರೀಯಲ್ ಎಸ್ಟೆಟ್ ವ್ಯಾಪಾರ ವ್ಯವಹಾರ ಜೋರಾಯಿತು.
ಶ್ರೀನಿವಾಸಪುರ ಅಥಾವ ಮುಳಬಾಗಿಲು ಮಾರ್ಗವಾಗಿ ಹೊಸ ರೈಲುಮಾರ್ಗಗಳನ್ನು ಆರಂಭಿಸಿದಾದರೆ ತಿರುಪತಿ ವಿಜಯವಾಡ ಹೈದರಾಬಾದ್ ಗಳಿಗೆ ವಾರದಲ್ಲಿ ಎರಡು ಅಥವಾ ಮೂರು ದಿನ ಮಾತ್ರ ಓಡಾಡುವುದು ಸೇರಿದಂತೆ ಚಿತ್ತೂರು-ಬೆಂಗಳೂರು ಅಥಾವ ಮದನಪಲ್ಲೆ-ಬೆಂಗಳೂರು ನಡುವೆ ನಿತ್ಯ ಫಾಸ್ಟ್ ಪ್ಯಾಸೆಂಜರ್ ರೈಲು ಓಡಾಡಿದ್ದೆ ಅದರೆ ಸಹಜವಾಗಿ ವಾಣಿಜ್ಯರಿತ್ಯ ಹಿಂದುಳಿದಿರುವ ಶ್ರೀನಿವಾಸಪುರ ಮತ್ತು ಮುಳಬಾಗಿಲು ನಗರಗಳಲ್ಲಿ ವ್ಯಾಪಾರ ವಹಿವಾಟು ವೃದ್ಧಿಗೆ ಅನುಕೂಲವಾಗತಿತ್ತು.
ಭಾರತದಲ್ಲಿ ರೈಲ್ವೆ ಅಭಿವೃದ್ಧಿ ಮುಂಚೂಣಿಯಲ್ಲಿದೆ,ದೊಡ್ಡ ದೊಡ್ದ ನಗರಗಳನ್ನು ಸಂಪರ್ಕಿಸವ ಹಳೆ ರೈಲು ಮಾರ್ಗಗಳಲ್ಲಿ ವಂದೇಭಾರತ್ ನಂತಹ ರೈಲುಗಳು ಒಡಾಡುತ್ತಿವೆ ಕೆಲವೆ ದಿನಗಳಲ್ಲಿ ಮಹಾನಗರಗಳನ್ನು ಸಂಪರ್ಕಿಸುವ ಬುಲೇಟ್ ರೈಲುಗಳು ಒಡಾಲಿವೆ ಅದರೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಜನಸಾಮನ್ಯರು ಒಡಾಡಲು ಅನಕೂಲವಾಗುವಂತೆ ಹೊಸ ರೈಲುಮಾರ್ಗಗಳ ಕುರಿತಾಗಿ ಯಾವುದೆ ನಿಲವುಗಳನ್ನು ತಗೆದುಕೊಳ್ಳುವಲ್ಲಿ ಜನಪ್ರತಿನಿಧಿಗಳಿಗೆ ಇರುವ ಸಂಕಷ್ಟವಾದರೂ ಎನು ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಾರೆ.
ಬೆಂಗಳೂರಿನಿಂದ-ಚಿಕ್ಕಬಳ್ಳಾಪುರಕ್ಕೆ ಬರುತ್ತಿರುವ ರೈಲುಗಳ ಬಗ್ಗೆ ಜನರಿಗೆ ಆಸಕ್ತಿ ಇಲ್ಲ!
ಬೆಂಗಳೂರಿನಿಂದ-ಚಿಕ್ಕಬಳ್ಳಾಪುರದ ವರಿಗೂ ನೂತನವಾಗಿ ಹಗಲು ಚಲಿಸುತ್ತಿರುವ ನಾಲ್ಕೈದು ರೈಲುಗಳು ಜನ ಮನ್ನಣೆ ಗಳಿಸುವಲ್ಲಿ ವಿಫಲವಾಗಿದೆ ಬೆಂಗಳೂರು-ಚಿಕ್ಕಬಳ್ಳಾಪುರದಿಂದ-ಬೆಂಗಳೂರಿಗೆ ಬೆಳಿಗ್ಗೆ ಹೋಗಿ ಸಂಜೆ ವಾಪಸ್ಸು ಬರುವಂತ ರೈಲನ್ನು ಬಳಸಿಕೊಳ್ಳಲ್ಲು ಆಸಕ್ತಿ ಇರುವಷ್ಟು ಬೆಂಗಳೂರು-ಚಿಕ್ಕಬಳ್ಳಾಪುರ ನಡುವೆ ಹಗಲು ಒಡಾಡಿದರೆ ಅದನ್ನು ಬಳಸಿಕೊಳ್ಳಲು ಜನರು ಮುಂದಾಗುತ್ತಿಲ್ಲ ಅದೇ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಬಂಗಾರಪೇಟೆ ತಲುಪುವ ಹಾಗಿದ್ದಾರೆ ಚಿಕ್ಕಬಳ್ಳಾಪುರ,ಶಿಡ್ಲಘಟ್ಟ ಚಿಂತಾಮಣಿ,ಶ್ರೀನಿವಾಸಪುರದ ಜನತೆ ರೈಲ್ವೆ ಸೇವೆ ಬಳಲಿಕೊಳ್ಳಲು ತಯಾರಾಗಿದ್ದಾರೆ ಇನ್ನೂ ಒಂದು ಹೆಜ್ಜೆ ರೈಲ್ವೆ ಮುಂದೆ ಇಟ್ಟು ಮದನಪಲ್ಲಿ ಅಥವಾ ಕಡಪಾ ಭಾಗಕ್ಕೆ ತೆರಳಲು ನೂತನ ಮಾರ್ಗದ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತಂದರೆ ಜನತೆ ಮನ್ನಣೆ ನೀಡುತ್ತಾರೆ ಎಂದು ರೈಲ್ವೆ ಬಳಕೆದಾರರ ವೇದಿಕೆ ಸಂಚಾಲಕ ಸಿ.ಎನ್.ವಿ ರಮೇಶ್ ಬಾಬು ಹೇಳುತ್ತಾರೆ.
ಈಗ್ಗೆ ನಾಲ್ಕು ವರ್ಷಗಳ ಹಿಂದೆ ಬೆಂಗಳೂರು ಕೆ.ಎಸ್.ಆರ್. ನಿಂದ ಚಿಕ್ಕಬಳ್ಳಾಪುರ-ಚಿಂತಾಮಣಿ-ಶ್ರೀನಿವಾಸಪುರ-ಬಂಗಾರಪೇಟೆ ರೌಂಡ್ ಟ್ರಿಪ್ ರೈಲು ಮಾರ್ಗವಾಗಿ ಡೆಮು ರೈಲು ಪ್ರಾರಂಭಿಸಿದರಾದರೂ ಅದನ್ನು ಮುಂದುವರೆಸಲಿಲ್ಲ, ಚಿಕ್ಕಬಳ್ಳಾಪುರದಿಂದ ಬಾಗೇಪಲ್ಲಿ,ಚಿಲಮತ್ತೂರು,ಗೋರೆಂಟ್ಲ ಮಾರ್ಗವಾಗಿ ಸತ್ಯಸಾಯಿ ಪುಟ್ಟಪರ್ತಿ103 ಕೀ.ಮಿ ರೈಲು ಮಾರ್ಗದ ಯೋಜನೆಗೆ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಇದಕ್ಕೆ ಚಾಲನೆ ಸಿಕ್ಕಿತ್ತು ನಂತರದಲ್ಲಿ ನೆನೆಗುದಿಗೆ ಬಿದ್ದಿತು, ಚಿಕ್ಕಬಳ್ಳಾಪುರ-ಪುಟ್ಟಪರ್ತಿ ನೂತನ ರೈಲು ಮಾರ್ಗದಿಂದ ಹೈದರಾಬಾದ್-ಚನ್ಯೆ ನಡುವೆ ಹತ್ತಿರದ ಮಾರ್ಗ ನಿರ್ಮಿಸಿದಂತಾಗುತ್ತದೆ ಈ ಬಗ್ಗೆ ನಮ್ಮ ಜನಪ್ರತಿನಿಧಿಗಳಿಗೆ ಯಾರಿಗೂ ಅಸಕ್ತಿ ಇಲ್ಲ ಎಂದು ಯುವಮುಖಂಡ ಕಾರ್ ಬಾಬು ಹೇಳುತ್ತಾರೆ.
Breaking News
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
- ಚಿಂತಾಮಣಿ ಎಪಿಎಂಸಿ ಅಂಗಡಿಯಲ್ಲಿ ಲಕ್ಷಾಂತರ ಹಣ ಎಗರಿಸಿದ ಖದೀಮರು
- ಹಳೆ ವಸ್ತುಗಳ ಗುಜರಿ ವ್ಯಾಪಾರಿಗೆ ಲಾಟರಿಯಲ್ಲಿ ಕೋಟಿಗಟ್ಟಲೆ ದುಡ್ಡು!
- ಪತ್ರಕರ್ತರ ರೈಲ್ವೆ ಪಾಸ್ ಸೌಲಭ್ಯ ಆರಂಭಿಸಲು ಮನವಿ
- ದೇಶದ ಮೊದಲ MPAX ಪ್ರಕರಣ ಪತ್ತೆ!
- ನಂದಮೂರಿ ಬಾಲಕೃಷ್ಣ ಮಗ ಮೊಕ್ಷಜ್ಞ ಸಿನಿಮಾ ರಂಗಕ್ಕೆ ಎಂಟ್ರಿ
Friday, September 13