ಕೋಲಾರ:ಕೋಲಾರ ಜಿಲ್ಲಾ ಕಾಂಗ್ರೆಸ್ ಪಕ್ಷದ ಬಣಗಳ ನಡುವಿನ ಕಿತ್ತಾಟದಿಂದ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರ ಇದು ವರಿಗೂ ಬಗೆಹರಿದಿಲ್ಲ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಗುರುವಾರದಿಂದ ಆರಂಭವಾಗಲಿದ್ದರು ಕೋಲಾರ ಬಿಜೆಪಿ ಅಭ್ಯರ್ಥಿ ಅಯ್ಕೆ ಹೈಕಮಾಂಡ್‌ಗೆ ಬಿಸಿ ತುಪ್ಪವಾಗಿದೆ ಮುನಿಯಪ್ಪ-ರಮೇಶ್‌ಕುಮಾರ್ ಬಣಗಳ ನಡುವಿನ ತಿಕ್ಕಾಟ ಜೋರಾಗಿದ್ದು, ಒಂದು ಬಣದ ಪರ ಅಭ್ಯರ್ಥಿಗೆ ಟಿಕೆಟ್ ಸಿಕ್ಕರೆ ಮತ್ತೊಂದು ಬಣ ವಿರೋಧವಾಗಿ ಕೆಲಸ ಮಾಡುವ ಸಾಧ್ಯತೆಗಳಿವೆ. ಸಚಿವ ಕೆ.ಹೆಚ್.ಮುನಿಯಪ್ಪ ಕುಟುಂಬಕ್ಕೆ ಕಾಂಗ್ರೆಸ್ ಟಿಕೆಟ್ ನೀಡುವುದಕ್ಕೆ ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಶಾಸಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕೋಲಾರ ಭಾಗದ ಕಾಂಗ್ರೆಸ್ ಶಾಸಕರು, ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ಬಗ್ಗೆ ನಡೆದಂತ ಹೈಡ್ರಾಮ ಕೋಲಾರ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರ ಕಾಂಗ್ರೆಸ್ ಪಕ್ಷದಲ್ಲಿ ಕೋಲಾಹಲವನ್ನೆ ಸೃಷ್ಟಿಸಿದಿಯಂತೆ ಇದಕ್ಕೆ ತಾರಕಿಕ ಅಂತ್ಯ ಹಾಡಲು ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಏನು ನಿರ್ಧಾರ ತಗೆದುಕೊಳ್ತಾರೊ ಎಂದು ಕಾಂಗ್ರೆಸ್ ಕಾರ್ಯಕರ್ತರು ಕಾತುರದಿಂದ ಕಾಯುತ್ತಿದ್ದಾರೆ.ಕಾಂಗ್ರೆಸ್ ಜಗಳ ಲಾಭ ಪಡೆಯುವ ನಿಟ್ಟಿನಲ್ಲಿ…
Author: Srinivas_Murthy
ಕೋಲಾರ ಲೋಕಸಭಾ ಟಿಕೆಟ್ ವಿಚಾರ ಕಾಂಗ್ರೆಸ್‌ನಲ್ಲಿ ಬಿಗ್ ಹೈಡ್ರಾಮಾರಾಜೀನಾಮೆಗೆ ಮುಂದಾದ ನಾಲ್ವರು ಶಾಸಕರು, ಇಬ್ಬರು ಪರಿಷತ್ ಸದಸ್ಯರುಶಾಸಕರ ರಾಜೀನಾಮೆ ತಡೆದ ಕೋಲಾರ ಉಸ್ತುವಾರಿ ಸಚಿವ ಭೈರತಿ ಕೋಲಾರ:ಕೋಲಾರ ಕಾಂಗ್ರೆಸ್ ಟಿಕೆಟ್ ಹಂಚಿಕೆ ಕಾಂಗ್ರೆಸ್ ಹೈಕಮಾಂಡ್ ಗೆ ಬಗೆ ಹರಿಯದ ಕಗ್ಗಾಂಟಾಗಿ ಕಾಡುತ್ತಿದೆ ಇವತ್ತು ನಡೆದಂತ ಬೆಳವಣಿಗೆಯಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ ಕುಟುಂಬಕ್ಕೆ ಕಾಂಗ್ರೆಸ್ ಟಿಕೆಟ್ ನೀಡುವುದಕ್ಕೆ ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಶಾಸಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಕೋಲಾರ ಭಾಗದ ಕಾಂಗ್ರೆಸ್ ಶಾಸಕರು, ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲು ಮುಂದಾಗಿದ್ದು ಕೋಲಾರ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರ ಕಾಂಗ್ರೆಸ್ ಪಕ್ಷದಲ್ಲಿ ಕೋಲಾಹಲವನ್ನೆ ಸೃಷ್ಟಿಸಿದೆ, ಪಕ್ಷದೊಳಗೆ ಭುಗಿಲೆದ್ದಿರುವ ಅಸಮಾಧಾನ ಹೋಗಲಾಡಿಸಲು ಸ್ವತಃ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅಖಾಡಕ್ಕಿಳಿದ್ದಾರೆ.ಇವತ್ತು ರಾತ್ರಿ ಹೈವೋಲ್ಟೇಜ್ ಮೀಟಿಂಗ್ಟಿಕೆಟ್ ವಿಚಾರಕ್ಕೆ ಎರಡು ಬಣಗಳ ನಡುವಿನ ತಾರಕ್ಕೇರಿರುವ ಅಸಮಾಧಾನ ಬಗೆ ಹರೆಸಲು ಸಿಎಂ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಮಾರ್ಚ್ 27 ರಂದು ರಾತ್ರಿ ಹೈ ವೋಲ್ಟೇಜ್ ಮೀಟಿಂಗ್…
ಶ್ರೀನಿವಾಸಪುರ:ತಾಲೂಕಿನ ತಾಡಿಗೋಳ್ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವ ಮಂಗಳವಾರ ಸಡಗರದಿಂದ ನಡೆಯಿತು. ಸಾವಿರಾರು ಮಂದಿ ಪಾಲ್ಗೊಂಡು ರಥ ಎಳೆದರು.ಪಾಲ್ಗುಣ ಮಾಸದಲ್ಲಿ ನಡೆಯುವ ರಥೋತ್ಸವಕ್ಕೆ ದೊಡ್ದ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಧನ್ಯರಾದರು.ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು ಬಾಳೆಹಣ್ಣು ಧವನವನ್ನು ರಥಕ್ಕೆ ಅರ್ಪಿಸಿದರು. ದೇವಾಲಯದಲ್ಲಿ ವೀರಾಜಮಾನನಾದ ಶ್ರೀ ಲಕ್ಷ್ಮಿಸಮೇತ ನರಸಿಂಹಸ್ವಾಮಿ ದರ್ಶನ ಪಡೆದು ಪುನಿತರಾದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಮಾರ್ಚ್ 21 ರಿಂದ ಉತ್ಸವಗಳು ಆರಂಭಗೊಂಡು, ಮಾರ್ಚ್ 29ರವರೆಗೆ ನಡೆಯಲಿರುವ ಕಾರ್ಯಕ್ರಮಗಳು ಮಾರ್ಚ್ 21 ರಂದು ಗುರುವಾರ ಅಂಕುರಾರೋಹಣ ಮತ್ತು ಧ್ವಜಾರೋಹಣ ಹಾಗು ರಾತ್ರಿ ಸಿಂಹವಾಹನೋತ್ಸವ, 22 ಶುಕ್ರವಾರ ದಂದು ಹಗಲು ಶೇಷವಾಹನೋತ್ಸವ ರಾತ್ರಿಗೆ ಚಂದ್ರಪ್ರಭ ಉತ್ಸವ,ಮಾರ್ಚ್ 23 ರಂದು ಶನಿವಾರ ರಾತ್ರಿ ಗಜವಾಹನೋತ್ಸವ, ಮಾರ್ಚ್ 24 ರಂದು ಭಾನುವಾರ ಹಗಲು ಹನುಮಂತ ವಾಹನೋತ್ಸವ ರಾತ್ರಿಗೆ ಮೋಹಿನಿ ಉತ್ಸವ,ಮಾರ್ಚ್ 25 ರಂದು ಸೋಮವಾರ ಕಾಶಿಯಾತ್ರೆ ಹಾಗು ದೇವರಿಗೆ ಕಲ್ಯಾಣೋತ್ಸವ ರಾತ್ರಿಗೆ ಗರುಡೋತ್ಸವ,ಮಾರ್ಚ್ 26 ರಂದು ಮಂಗಳವಾರ ರಥೊತ್ಸವ ಅಖಂಡ ಭಜನೆ ಮೊದಲಾದ ಧಾರ್ಮಿಕ ಕಾರ‍್ಯಕ್ರಮಗಳು…
ನ್ಯೂಜ್ ಡೆಸ್ಕ್: ಬೆಂಗಳೂರು ವಕೀಲರ ಸಹಕಾರ ಸಂಘದ ಅಧ್ಯಕ್ಷರಾಗಿ ತಾಲೂಕಿನ ತಿನ್ನಲಿ ಗ್ರಾಮದ ಟಿ.ಎನ್.ಶಂಕರ್ ಆಯ್ಕೆಯಾಗಿದ್ದಾರೆ.ಬೆಂಗಳೂರು ವಕೀಲರ ಸಹಕಾರ ಸಂಘದ ನಿರ್ದೇಶಕರಾಗಿ ಎರಡನೆ ಬಾರಿಗೆ ಆಯ್ಕೆಯಾಗಿದ್ದ ಅವರು ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಪಡೆದು ಅಧ್ಯಕ್ಷರಾಗಿ ಅಯ್ಕೆಯಾಗಿದ್ದಾರೆ. ಟಿ.ಎನ್.ಶಂಕರ್ ವಕೀಲರ ಸಹಕಾರ ಸಂಘದ ಅಧ್ಯಕ್ಷರಾಗಿ ಅಯ್ಕೆಯಾಗಿರುವುದಕ್ಕೆ ಖುಷಿ ಹಾಗು ಹೆಮ್ಮೆ ತರುವಂತ ವಿಷಯವಾಗಿದೆ ಎಂದು ಯಲ್ದೂರು ನ್ಯಾಷನಲ್ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಬೆಂಗಳೂರಿನಲ್ಲಿ ಉದ್ಯಮಿ ಆಗಿರುವ ಲಕ್ಷ್ಮೀಸಾಗರ ಲೋಕನಾಥಗೌಡ ಶುಭಹಾರೈಸಿದ್ದಾರೆ. ಕೋಲಾರ ಹಾಲು ಒಕ್ಕೂಟದ ಮುಳಬಾಗಿಲು ನಿರ್ದೇಶಕ ಹಾಗು ಹೀರಿಯ ವಕೀಲ ಕಾಡೇನಹಳ್ಳಿ ನಾಗರಾಜಗೌಡ ವಕೀಲರ ಸಹಕಾರ ಸಂಘದ ಅಭಿವೃದ್ಧಿಗೆ ಶ್ರಮಿಸುವಂತೆ ಶುಭಕೋರಿದ್ದಾರೆ.
ಬೆಂಗಳೂರಿನ ಬ್ಯಾಡರಳ್ಳಿಯಲ್ಲಿ ಘಟನೆಜೀವ ಉಳಿಸಿದ ಪೋಲಿಸ್ ಶ್ರೀನಿವಾಸಪುರದವರು ನ್ಯೂಜ್ ಡೆಸ್ಕ್: ನೀರಿನ ತೊಟ್ಟಿಗೆ ಬಿದ್ದು ಪ್ರಾಣಾಪಯದಲ್ಲಿದ್ದ ಮಗುವೊಂದನ್ನು ಪೊಲೀಸ್ ಅಧಿಕಾರಿ ರಕ್ಷಿಸಿದ ಘಟನೆ ಬೆಂಗಳೂರು ನಗರದ ಮಾಗಡಿ ರಸ್ತೆ ಬ್ಯಾಡರಹಳ್ಳಿಯ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ನಡೆದಿದೆ.ಇವತ್ತು ದಿನ ಹೇಗಿದೆ ಅಂದರೆ ದೂರು ನೀಡಲು ಪೋಲಿಸ್ ಠಾಣೆಗೆ ಹೋದರೆ ಸಾರ್ವಜನಿಕರನ್ನು ಪೋಲಿಸರು ಸೌಜನ್ಯವಾಗಿ ಮಾತನಾಡುವ ಪರಿಸ್ಥಿತಿ ಇಲ್ಲದಂತ ವಾತವರಣ ಪೋಲಿಸ್ ಠಾಣೆಗಳಲ್ಲಿ ನಿರ್ಮಾಣವಾಗಿದೆ ಅಷ್ಟೊಂದು ಒತ್ತಡದಲ್ಲಿ ಪೋಲಿಸ್ ಇಲಾಖೆಯಲ್ಲಿ ಅಧಿಕಾರಿಗಳು ಪೋಲಿಸ್ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಇಂತಹ ಒತ್ತಡದಲ್ಲೂ ಪೋಲಿಸ್ ಅಧಿಕಾರಿಯೊಬ್ಬರು ಪ್ರಾಣಾಪಯದಲ್ಲಿದ್ದ ಮಗುವಿನ ಪ್ರಾಣ ಉಳಿಸಿ ಮಾನವೀಯತೆ ಮೆರೆದಿದ್ದಾರೆ.ಮಗು ಜೀವ ಉಳಿಸಿದ ಪೋಲಿಸ್ ಅಧಿಕಾರಿ ಶ್ರೀನಿವಾಸಪುರದವರುಮಗುವನ್ನು ಕಾಪಾಡಿದ ಪೋಲಿಸ್ ಅಧಿಕಾರಿ ಶ್ರೀನಿವಾಸಪುರ ತಾಲೂಕಿನ ಗೌವನಪಲ್ಲಿ ಪಂಚಾಯಿತಿಯ ಆದಿರಾಜಪಲ್ಲಿ ಗ್ರಾಮದ ಎ.ಆರ್. ನಾಗರಾಜ್ ಅವರು ಬೆಂಗಳೂರಿನ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆ ಪಿಎಸ್‌ಐ ಆಗಿದ್ದಾರೆ.ಮಗುವನ್ನು ರಕ್ಷಿಸಿದ್ದು ಹೇಗೆ?ಬ್ಯಾಡರಹಳ್ಳಿಯ ಬಿಇಎಲ್ ಲೇಔಟ್‌ನಲ್ಲಿ ಮಾರ್ಚ್ 6 ರಂದು ಮಧ್ಯಾಹ್ನನದ ವೇಳೆ ಮಗು ನೀರಿನ ಸಂಪಿನಲ್ಲಿ ಬಿದ್ದಿದೆ ದಯವಿಟ್ಟು…
ಶ್ರೀನಿವಾಸಪುರ:ಪಟ್ಟಣದಲ್ಲಿ ನೆಲೆಸಿರುವ ಶ್ರೀ ಗಣೇಶ ಹಾಗು ಶ್ರೀ ಸತ್ಯನಾರಯಣಸ್ವಾಮಿ ಸಮೇತ ಶ್ರೀವರದ ಬಾಲಂಜನೇಯ ದೇವಾಲಯದ ಬ್ರಹ್ಮರಥೋತ್ಸವವು ಸೋಮವಾರ ಕಾಮನಹುಣ್ಣಿಮೆ ಅಥಾವ ಹೋಳಿಹುಣ್ಣಿಮೆಯಂದು ಭಕ್ತ ಸಾಗರದ ನಡುವೆ ಸಂಭ್ರಮ ಸಡಗರದಿಂದ ನೇರವೇರಿತು.ಪ್ರತಿ ವರ್ಷ ಪಾಲ್ಗುಣ ಮಾಸದ ಹೋಳಿಹುಣ್ಣಿಮೆಯಂದು ಬ್ರಹ್ಮರಥೋತ್ಸವ ನಡೆಯುತ್ತದೆ. ಅದರಂತೆ ಸೋಮವಾರ ನಡೆದ ಬ್ರಹ್ಮರಥೋತ್ಸವ ಕಾರ‍್ಯಕ್ರಮದಲ್ಲಿ ಸಾವಿರಾರು ಭಕ್ತರು ಭಕ್ತಿ ಶ್ರದ್ದೆಯಿಂದ ಹನುಮಂತ ದೇವರಿಗೆ ಜೈಕಾರ ಹಾಕುತ್ತ ಗೋವಿಂದ ನಾಮಗಳನ್ನು ಹೇಳುತ್ತ,ಪರಂಪರೆಯಂತೆ ಬಾಳೆಹಣ್ಣು,ಧವನವನ್ನು ರಥಕ್ಕೆ ಎಸೆದು ರಥೋತ್ಸವದ ಮೆರಗನ್ನ ಹೆಚ್ಚಿಸಿ,ರಥವನ್ನು ಎಳೆದು ಧನ್ಯರಾದರು.ನಂತರದಲ್ಲಿ ಭಕ್ತರು ತೇರಿನ ಚಕ್ರಕ್ಕೆ ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು.ಮುಂಜಾನೆಯೆ ದೇವರ ಕೈಂಕರ್ಯ ಆರಂಭಮುಂಜಾನೆಯೆ ದೇವಾಲಯದಲ್ಲಿ ಕಳಶ ಸ್ಥಾಪಿಸಿ ವೇದ ಮಂತ್ರ ಪಾರಾಯಣ ಮಾಡಿ ಮೂಲ ವಿಗ್ರಹಗಳಿಗೆ ಜಲಾಭಿಷೇಕ, ಪಂಚಾಮೃತ ಅಭಿಷೇಕಾಧಿಗಳನ್ನು ನೇರವೇರಿಸಿ,ಕುಂಕುಮಾರ್ಚನೆ,ವಿಶೇಷ ಹೂವಿನ ಅಲಂಕಾರ ಹಾಗೂ ಆಭರಣ ಅಲಂಕಾರ ಮಾಡಲಾಗಿದ್ದು ಸರತಿ ಸಾಲಿನಲ್ಲಿ ಬಂದಂತ ಭಕ್ತರಿಗೆ ದೇವರ ದರ್ಶನದ ವ್ಯವಸ್ಥೆ ಮಾಡಲಾಗಿತ್ತು.ಭಾನುವಾರ ಸಂಜೆ ದೇವಾಲಯದ ಆವರಣದಲ್ಲಿ ನಡೆದ ಶ್ರೀ ಸೀತಾರಾಮರ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲೂ ಜನರು ಭಕ್ತಿಯಿಂದ ಪಾಲ್ಗೊಂಡಿದ್ದರು.ರಥಕ್ಕೆ…
ಶ್ರೀನಿವಾಸಪುರ: ಕಾಂಗ್ರೆಸ್ ಮುಖಂಡ ದಲಿತ ನಾಯಕ ಶ್ರೀನಿವಾಸನ್ ಕೊಲೆ ಆರೋಪದಲ್ಲಿ ಬಂದಿತರಾಗಿರುವಂತ ವ್ಯಕ್ತಿಗಳ ಸಂಬಂಧಿಕರು ಜಗಜೀವನ ಪಾಳ್ಯದಲ್ಲಿ ನಮ್ಮೊಂದಿಗೆ ವಾಸಿಸುವುದು ಬೇಡ ಎಂದು ಜಗಜೀವನ ಪಾಳ್ಯ ಮತ್ತು ದಯಾನಂದ ರಸ್ತೆ ನಿವಾಸಿಗರು ಪೋಲಿಸರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿರುತ್ತಾರೆ.ಶ್ರೀನಿವಾಸನ್ ಅವರ ಕೊಲೆ ಆರೋಪದಲ್ಲಿ ಬಂದಿತರಾಗಿರುವ ವ್ಯಕ್ತಿಗಳ ಕುಟುಂಬಗಳ ಸದಸ್ಯರು ಹಾಗು ಬಂಧುಗಳು ಕೊಲೆಯಾದ ನಂತರದಲ್ಲಿ ಪರಾರಿಯಾಗಿದ್ದರು ದಿನಗಳದಂತೆ ಇತ್ತಿಚಿಗೆ ಕೆಲವರು ಒಬ್ಬೊಬ್ಬರಾಗಿ ಬರುತ್ತಿದ್ದು ಅವರಿಂದ ವಾರ್ಡ್ ನಂ 20 ರ ಜಗಜೀವನ ಪಾಳ್ಯ ಮತ್ತು ದಯಾನಂದ ರಸ್ತೆಯ ಜನರ ನಡುವೆ ಸೌಹಾರ್ದತೆ ಕದಡುತ್ತದೆ ಮತ್ತು ಕೊಲೆ ಕುರಿತಂತೆ ಪ್ರತ್ಯಕ್ಷ ಸಾಕ್ಷಿ ಗಳಿಗೆ ಮತ್ತು ಅವರ ಸಂಬಂಧಿಕರಿಗೆ ಅಪಾಯ ಆಗುವಂತ ಆತಂಕದ ಪರಿಸ್ಥಿತಿ ಏರ್ಪಡುತ್ತಿದ್ದು ಕೊಲೆ ಆರೋಪಿಯ ಸಂಬಂದಿಕರು ಜಗಜೀವನ ಪಾಳ್ಯ ಹಾಗೂ ದಯಾನಂದ ಭಾಗದಲ್ಲಿ ಬರುವುದು ಒಡಾಡುವುದು ಬೇಡ ಮತ್ತು ಅವರು ಇಲ್ಲಿ ಇರಲು ಅವಕಾಶ ಮಾಡಿಕೊಡಬಾರದು ಈ ಬಗ್ಗೆ ಪೋಲಿಸರು ಮದ್ಯಸ್ಥಿಕೆ ವಹಿಸಿ ಅವರಿಗೆ ತಿಳುವಳಿಕೆ ಮೂಡಿಸಬೇಕು ಎಂದು ಒತ್ತಾಯಿಸಿ…
ಶಿಕ್ಷಕಿ ವೀಣಾ ಅಮಾನತ್ತು ಮಾಡಿರುವ ಶಿಕ್ಷಣ ಇಲಾಖೆಶ್ರೀನಿವಾಸಪುರ:ಶಾಲ ಶಿಕ್ಷಕರ ನಡುವೆ ಸಾಮರಸ್ಯ ಇಲ್ಲದೆ ಸರ್ಕಾರಿ ಶಾಲೆಯೊಂದು ಶೈಕ್ಷಣಿಕವಾಗಿ ಸೊರಗುತ್ತಿದೆ ಎಂದು ದಳಸನೂರು ಗ್ರಾಮಸ್ಥರು ಆರೋಪಿಸಿರುತ್ತಾರೆ. ಇಲ್ಲಿನ ಶಿಕ್ಷಕರಲ್ಲಿ ಹೊಂದಾವಣಿಕೆ ಇಲ್ಲದೆ ಸರ್ಕಾರಿ ಶಾಲೆಯಲ್ಲಿ ಒಂದೆ ದಿನ 18 ವಿಧ್ಯಾರ್ಥಿಗಳು ವರ್ಗಾವಣೆ ತಗೆದುಕೊಂಡು ಹೊಗಿದ್ದಾರೆ ಇದರಿಂದ ಶಾಲೆ ಮುಚ್ಚುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಪೋಷಕರು ಮತ್ತು ಎಸ್ ಡಿ ಎಂ ಸಿ ಆಡಳಿತ ಮಂಡಳಿ ಸದಸ್ಯರು ಕಳಕಳ ವ್ಯಕ್ತಪಡಿಸುತ್ತಿದ್ದಾರೆ.ತಾಲೂಕಿನ ಕಸಬಾ ಹೋಬಳಿ ದಳಸನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ ವಿಧ್ಯಾರ್ಥಿಗಳು ಐಎ ಎಸ್, ಐಪಿಎಸ್ ಹಾಗು ಕೆ ಎ ಎಸ್ ಸೇರಿದಂತೆ ರಾಜ್ಯ ಮಟ್ಟದ ಅಧಿಕಾರಿಗಳಾಗಿದ್ದಾರೆ ಆದರೆ ಇಂದು ಶಾಲೆಯ ಪರಿಸ್ಥಿತಿ ಶೋಚನಿಯ ಮಟ್ಟ ತಲುಪಿದೆ ಎಂದು ಗ್ರಾಮಸ್ಥರು ಅಲವತ್ತುಕೊಳ್ಳುತ್ತಾರೆ.ಹಿಂದೆಲ್ಲ ನ್ಯಾಯ ಪಂಚಾಯಿತಿ ನಡೆದಿತ್ತುಇಲ್ಲಿರುವ ಆರು ಮಂದಿ ಶಿಕ್ಷಕರ ನಡುವೆ ಸಾಮರಸ್ಯ ಕೊರತೆ ಇಂದು ನಿನ್ನೆಯದಲ್ಲ ಈ ಹಿಂದೆ ಹಲವಾರು ಬಾರಿ ಇಂತಹ ಪರಿಸ್ಥಿತಿ ನಿರ್ಮಾಣ ಆದಾಗ ಎಸ್.ಡಿ.ಎಂ…
ಬಂಗಾರಪೇಟೆ:ಭಾರತದ ಖ್ಯಾತ ನೃತ್ಯ ನಿರ್ದೇಶಕ ನಟ ನಿರ್ಮಾಪಕ ಇಂಡಿಯನ್ ಮೈಕಲ್ ಜಾಕ್ಸನ್ ಎಂದು ಹೆಸರು ಪಡೆದಿರುವ ಕರ್ನಾಟಕದವರೆ ಆದ ಪ್ರಭುದೇವ ಕೋಲಾರ ಜಿಲ್ಲೆಯ ಬಂಗಾರಪೇಟೆ ಹತ್ತಿರ ಜೀಯೋನಿ ಗಾಲ್ಫ್ ಕ್ಲಭ್ ಬಳಿ ವಿಲ್ಲಾ ಖರಿದಿಸಿದ್ದು ಈ ಸಂಬಂಧ ಬಂಗಾರಪೇಟೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿ ಜಮೀನು ನೊಂದಣಿ ಪ್ರಕ್ರಿಯೆ ಮುಗಿಸಿ ಹೋಗಿದ್ದಾರೆ.ತಲೆಗೆ ಕ್ಯಾಪ್ ಧರಿಸಿ ಮುಖಕ್ಕೆ ಸ್ಕಾರ್ಪ್ ಹಾಕಿಕೊಂಡು ಬಂದ ಪ್ರಭುದೇವಕನ್ನಡದ ನಟ ಪ್ರಭುದೇವ ಬಂಗಾರಪೇಟೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಲು ತಮ್ಮನ್ನು ಜನತೆ ಗುರುತು ಹಿಡಿಯಬಾರದು ಎಂದು ತಲೆಗೆ ಕ್ಯಾಪ್ ಧರಿಸಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದರಾದರೂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೊಂದಣಿ ಪ್ರಕ್ರಿಯೆಲ್ಲಿ ತೊಡಗಿದ್ದಾಗ ಜನರು ಗುರುತು ಹಿಡಿದು ಪ್ರಚಾರವಾಗಿ ಸಾಕಷ್ಟು ಸಂಖ್ಯೆಯಲ್ಲಿ ಜನ ಜಮಾವಣೆ ಗೊಂಡ ಪರಿಣಾಮ ಒಂದಷ್ಟು ಜನರಿಗೆ ಸೆಲ್ಫಿ ನೀಡಿ ಜನ ಜಂಗುಳಿ ಮಧ್ಯದಿಂದ ಕಾರಿನತ್ತ ತೆರಳಿ ಕಾರು ಏರಿ ಹೋಗಿದ್ದಾರೆ. ವಿಶೇಷ ಏನು ಅಂದ್ರೆ, ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದ ಪ್ರಭುದೇವ ಜೊತೆಗೆ…
ಮೈತ್ರಿ ಕೂಟದಲ್ಲಿ ಬಿರಕು!ತ್ರಿಕೋನ ಸ್ಪರ್ದೆ ಇರುತ್ತದ?ಕಾಂಗ್ರೆಸ್ ಅಭ್ಯರ್ಥಿ ಫೈನಲ್ ಆಗಿಲ್ಲ. ಕೋಲಾರ:ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಯಾವ ಪಕ್ಷವೂ ಅಭ್ಯರ್ಥಿಯನ್ನು ಫೈನಲ್ ಮಾಡಿಲ್ಲ ಎನ್ನಲಾಗುತ್ತಿದೆ ಆರಂಬಂದಿದಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿರುವ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಹೊರತು ಪಡಿಸಿದರೆ ಉಳಿದ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ನಿರಂತರವಾಗಿ ಚುನಾವಣೆ ಗೆದ್ದಿರುತ್ತಾರೆ. ಹಾಗಾಗಿ ಕೋಲಾರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಬದ್ರಕೋಟೆ ಎನ್ನಬಹುದು. 1984 ರಲ್ಲಿ ಜನತಾ ಪಕ್ಷದ ಅಭ್ಯರ್ಥಿ ವಿ.ವೆಂಕಟೇಶ್ ಹಾಗು ಕಳೆದ 2019 ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಗೆದ್ದಿದ್ದು ಹೊರತು ಪಡಿಸಿದರೆ ಬಹುತೇಕ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿರುವುದು ಇಲ್ಲಿ ಇತಿಹಾಸ.1952 ರಲ್ಲಿ ದೊಡ್ಡತಿಮ್ಮಯ್ಯ ಎನ್ನುವ ಕಾಂಗ್ರೆಸ್ ಅಭ್ಯರ್ಥಿ ಗೆಲವಿನಿಂದ ಆರಂಭವಾದ ಕಾಂಗ್ರೆಸ್ ವಿಜಯ 1957,1962 ಮೂರು ಅವಧಿಗೆ ಸಂಸದರಾಗಿದ್ದರು ನಂತರ 1967 ರಲ್ಲಿ ಗೆಲವು ಸಾಧಿಸಿದ ಜಿವೈ ಕೃಷ್ಣನ್ 1971,1977,1980 ನಾಲ್ಕು ಬಾರಿ ಸಂಸದರಾಗಿದ್ದರು ನಂತರದಲ್ಲಿ ಜಿವೈ ಕೃಷ್ಣನ್ ವಿರುದ್ದ ಸ್ಚಪಕ್ಷೀಯರೆ ಅಸಮಧಾನಗೊಂಡ ಪರಿಣಾಮ 1984 ರಲ್ಲಿ ಜನತಾ…


