ಶಿಕ್ಷಕಿ ವೀಣಾ ಅಮಾನತ್ತು ಮಾಡಿರುವ ಶಿಕ್ಷಣ ಇಲಾಖೆ
ಶ್ರೀನಿವಾಸಪುರ:ಶಾಲ ಶಿಕ್ಷಕರ ನಡುವೆ ಸಾಮರಸ್ಯ ಇಲ್ಲದೆ ಸರ್ಕಾರಿ ಶಾಲೆಯೊಂದು ಶೈಕ್ಷಣಿಕವಾಗಿ ಸೊರಗುತ್ತಿದೆ ಎಂದು ದಳಸನೂರು ಗ್ರಾಮಸ್ಥರು ಆರೋಪಿಸಿರುತ್ತಾರೆ. ಇಲ್ಲಿನ ಶಿಕ್ಷಕರಲ್ಲಿ ಹೊಂದಾವಣಿಕೆ ಇಲ್ಲದೆ ಸರ್ಕಾರಿ ಶಾಲೆಯಲ್ಲಿ ಒಂದೆ ದಿನ 18 ವಿಧ್ಯಾರ್ಥಿಗಳು ವರ್ಗಾವಣೆ ತಗೆದುಕೊಂಡು ಹೊಗಿದ್ದಾರೆ ಇದರಿಂದ ಶಾಲೆ ಮುಚ್ಚುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಪೋಷಕರು ಮತ್ತು ಎಸ್ ಡಿ ಎಂ ಸಿ ಆಡಳಿತ ಮಂಡಳಿ ಸದಸ್ಯರು ಕಳಕಳ ವ್ಯಕ್ತಪಡಿಸುತ್ತಿದ್ದಾರೆ.
ತಾಲೂಕಿನ ಕಸಬಾ ಹೋಬಳಿ ದಳಸನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ ವಿಧ್ಯಾರ್ಥಿಗಳು ಐಎ ಎಸ್, ಐಪಿಎಸ್ ಹಾಗು ಕೆ ಎ ಎಸ್ ಸೇರಿದಂತೆ ರಾಜ್ಯ ಮಟ್ಟದ ಅಧಿಕಾರಿಗಳಾಗಿದ್ದಾರೆ ಆದರೆ ಇಂದು ಶಾಲೆಯ ಪರಿಸ್ಥಿತಿ ಶೋಚನಿಯ ಮಟ್ಟ ತಲುಪಿದೆ ಎಂದು ಗ್ರಾಮಸ್ಥರು ಅಲವತ್ತುಕೊಳ್ಳುತ್ತಾರೆ.
ಹಿಂದೆಲ್ಲ ನ್ಯಾಯ ಪಂಚಾಯಿತಿ ನಡೆದಿತ್ತು
ಇಲ್ಲಿರುವ ಆರು ಮಂದಿ ಶಿಕ್ಷಕರ ನಡುವೆ ಸಾಮರಸ್ಯ ಕೊರತೆ ಇಂದು ನಿನ್ನೆಯದಲ್ಲ ಈ ಹಿಂದೆ ಹಲವಾರು ಬಾರಿ ಇಂತಹ ಪರಿಸ್ಥಿತಿ ನಿರ್ಮಾಣ ಆದಾಗ ಎಸ್.ಡಿ.ಎಂ ಸಿ ಆಡಳಿತ ಮಂಡಳಿ ಮತ್ತು ಗ್ರಾಮಸ್ಥರು ಶಿಕ್ಷಕರನ್ನೂ ಕೂರಿಸಿ ಬುದ್ದಿವಾದ ಹೇಳಿ ಶಾಲಾ ಗೌರವ ಕಾಪಾಡುವಂತೆ ಸೂಚಿಸಿದ್ದರು ನಂತರದಲ್ಲಿ ಮತ್ತದೇ ಚಾಳಿ ಮುಂದುವರೆದಿದೆ ಎಂಬ ಆರೋಪಿಸುತ್ತಾರೆ.
ಶಿಕ್ಷಕಿ ವೀಣಾ ದುಂಡಾವರ್ತನೆ ಕಾರಣನಾ?
ಇಲ್ಲಿ ಶಿಕ್ಷಕಿಯಾಗಿರುವ ವೀಣಾ ಇತರೆ ಶಿಕ್ಷಕರೊಂದಿಗೆ ಸಾಮಾರಸ್ಯದಿಂದ ವರ್ತಿಸದೆ ಮೊಂಡುತನ ಪ್ರದರ್ಶಿಸುತ್ತಿರುವುದೆ ವಿವಾದಕ್ಕೆ ಕಾರಣವಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ, ಶಾಲ ಸಮಯದಲ್ಲಿ ಪಾಠ ಪ್ರವಚನ ಮಾಡದೆ ಶಿಕ್ಷಕಿ ವೀಣಾ ವಿದ್ಯಾರ್ಥಿಗಳ ಮುಂದೆ ಮನೆಯಿಂದ ತಂದಿರುವ ತಿಂಡಿ ತಿನಿಸು ತಿನ್ನುತ್ತ ಕೂರುವುದು ಇಲ್ಲದಿದ್ದರೆ ಏರು ಧನಿಯಲ್ಲಿ ಮೊಬೈಲ್ ನಲ್ಲಿ ಮಾತನಾಡುವುದು,ಇತರೆ ಸಹದ್ಯೋಗಿ ಶಿಕ್ಷಕರೊಂದಿಗೆ ಜಗಳ ಕಾಯುವುದು ಸೇರಿದಂತೆ ಅವರ ವರ್ತನೆಯಿಂದ ಬೆಸೆತ್ತ ಶಿಕ್ಷಕರು ಶಿಕ್ಷಣ ಇಲಾಖೆಗೆ ವೈಯುಕ್ತಿಕವಾಗಿ ದೂರು ನೀಡಿದ್ದರು ಈ ಮೆರೆಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸುವಾಗ ಅವರೊಂದಿಗೂ ದೌರ್ಜನ್ಯವಾಗಿ ವರ್ತಿಸಿದ್ದರು ಈ ಹಿಂದೆ ಶಿಕ್ಷಕಿ ವೀಣಾ ತಾಲೂಕಿನ ಎದರೂರು ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಇಂತಹದೆ ವರ್ತನೆಯಿಂದ 2012 ರಲ್ಲಿ ಅಮಾನತ್ ಶಿಕ್ಷೆಗೆ ಒಳಗಾಗಿದ್ದರು ನಂತರದಲ್ಲಿ ಅಮಾನತ್ ತೆರವಾದ ನಂತರ ದಳಸನೂರು ಶಾಲೆಗೆ ಬಂದರು ಅಂದಿನಿಂದಲೂ ಅವರ ನಡವಳಿಕೆ ಹೀಗೆ ಮುಂದುವರದಿದೆ ಇದಕ್ಕೆ ವಿಧ್ಯಾರ್ಥಿಗಳ ಪೋಷಕರು,ಎಸ್.ಡಿ.ಎಂ ಸಿ ಆಡಳಿತ ಮಂಡಳಿ ಮತ್ತು ಗ್ರಾಮಸ್ಥರು ತೀವ್ರ ಬೇಸರ ವ್ಯಕ್ತಪಡಿಸುತ್ತಾರೆ. ಶಾಲ ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡಿರುವ ವರದಿ ಆಧರಿಸಿ ಕೋಲಾರ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಶಿಕ್ಷಕಿ ವೀಣಾ ಅವರನ್ನು ಅಮಾನತ್ತು ಮಾಡಿರುತ್ತಾರೆ.
Breaking News
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
- ಚಿಂತಾಮಣಿ ಎಪಿಎಂಸಿ ಅಂಗಡಿಯಲ್ಲಿ ಲಕ್ಷಾಂತರ ಹಣ ಎಗರಿಸಿದ ಖದೀಮರು
- ಹಳೆ ವಸ್ತುಗಳ ಗುಜರಿ ವ್ಯಾಪಾರಿಗೆ ಲಾಟರಿಯಲ್ಲಿ ಕೋಟಿಗಟ್ಟಲೆ ದುಡ್ಡು!
- ಪತ್ರಕರ್ತರ ರೈಲ್ವೆ ಪಾಸ್ ಸೌಲಭ್ಯ ಆರಂಭಿಸಲು ಮನವಿ
- ದೇಶದ ಮೊದಲ MPAX ಪ್ರಕರಣ ಪತ್ತೆ!
- ನಂದಮೂರಿ ಬಾಲಕೃಷ್ಣ ಮಗ ಮೊಕ್ಷಜ್ಞ ಸಿನಿಮಾ ರಂಗಕ್ಕೆ ಎಂಟ್ರಿ
Friday, September 13