Author: Srinivas_Murthy

ಶ್ರೀನಿವಾಸಪುರ:ವಿದ್ಯಾರ್ಥಿ ಜೀವನದಲ್ಲಿ ಶ್ರಮದಾನದಂತ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡು ಸೇವಾ ಸಂಸ್ಕಾರ ಬೆಳಸಿಕೊಳ್ಳಿ ಎಂದು ತಹಶೀಲ್ದಾರ್ ಶೀರಿನ್ ತಾಜ್ ವಿದ್ಯಾರ್ಥಿಗಳಿಗೆ ಕರೆ ಇತ್ತರು.ಅವರು ಪಟ್ಟಣದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಗಾಂಧಿ ಜಯಂತಿ ಅಂಗವಾಗಿ ನಾಗರಿಕರಿಕರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೋಂಡು ಮಾತನಾಡಿದರು, ಪ್ರಧಾನಮಂತ್ರಿ ಮೋದಿ ವಿಶಿಷ್ಟ ಕಾರ್ಯಕ್ರಮಕ್ಕೆ ಕರೆ ನೀಡಿದ್ದು ಇದಕ್ಕೆ ಸ್ಪಂದಿಸಿರುವ ವಿದ್ಯಾರ್ಥಿನಿಯರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೋಂಡು ಶ್ರಮದಾನ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.ದೇವಾಲಯದ ಆವರಣದಲ್ಲಿ ವರ್ಷಾನುಗಟ್ಟಲೆಯಿಂದ ಬಿದಿದ್ದ ಟ್ರಾಕ್ಟರ್ ಗಟ್ಟಲೆ ಕಸ ಕಡ್ಡಿ ಗಿಡ-ಗಂಟಿಗಳನ್ನು ತಗೆದ ವಿದ್ಯಾರ್ಥಿನಿಯರು ಸ್ವತಃ ತಾವೆ ಪುರಸಭೆ ಟ್ರಾಕ್ಟರ್ ಗೆ ತುಂಬಿದರು.ವಿದ್ಯಾರ್ಥಿನಿಯರ ಶ್ರದಾನಕ್ಕೆ ಮನಸೋತ ತಹಶೀಲ್ದಾರ್ ಶೀರಿನ್ ತಾಜ್ ಹಾಗು ಪುರಸಭೆ ಮುಖ್ಯಾಧಿಕಾರಿ ಸತ್ಯನಾರಯಣ ಅವರು ಸಹ ಸಲಕರಣೆ ಹಿಡಿದು ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಪುರಸಭೆ ಮುಖ್ಯಾಧಿಕಾರಿ ಸತ್ಯನಾರಯಣ ಮಾತನಾಡಿ ಪ್ರಧಾನಮಂತ್ರಿ ಮೋದಿ ಕರೆಯಂತೆ ಗಾಂಧಿ ಜಯಂತಿ ಮುನ್ನಾದಿನದಂದುಸಾರ್ವಜನಿಕ ಸ್ಥಳಗಳಲ್ಲಿ ನಡೆಸುವ ಬೃಹತ್‌ ಸ್ವಚ್ಚತಾ…

Read More

ಶ್ರೀನಿವಾಸಪುರ:ಕೆ.ಎಸ್,ಎ.ಎಸ್ ಉಪ ನಿರ್ದೇಶಕರು ರಾಜ್ಯ ಲೆಕ್ಕ ಪತ್ರ ಇಲಾಖೆ ಹಾಲಿ ಕೋಲಾರ ಜಿಲ್ಲಾ ಪಂಚಾಯಿತಿಯ ಲೆಕ್ಕಾಧಿಕಾರಿ ಆಗಿರುವ ಬಿ.ಎಸ್.ಗಂಗಾಧರ್ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ. ಬೆಂಗಳುರು ಕೇಂದ್ರ ವಿಶ್ವ ವಿದ್ಯಾಲಯದ ವಾಣಿಜ್ಯ ವಿಭಾಗದ ಮಾಜಿ ಡಿನ್ ಮತ್ತು ಅಧ್ಯಕ್ಷರು ಅದ ಡಾ.ಎಂ.ಮುನಿರಾಜು ಅವರ ಮಾರ್ಗದರ್ಶನದಲ್ಲಿ ವಾಣಿಜ್ಯ ವಿಭಾಗದಲ್ಲಿ ಲೆಕ್ಕಪತ್ರಗಳು ಮತ್ತು ಲೆಕ್ಕ ಪರಿಶೋಧನೆ ಕುರಿತಾಗಿ ಮಹಾಪ್ರಭಂದನೆ ಮಂಡನೆಗೆ ಬೆಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿ ಗೌರವಿಸಿದೆ.ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ಉಪ ನಿರ್ದೇಸಕರಾಗಿರುವ ಗಂಗಾಧರ್ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಹೋಬಳಿಯ ಬಸನಪಲ್ಲಿ ಎಂಬ ಕುಗ್ರಾಮದ ರೈತಾಪಿ ಕುಟುಂಬದ ಕುಡಿ ಗ್ರಾಮದ ಸುಬ್ಬನ್ನ ಮತ್ತು ಮಲ್ಲಮ್ಮ ಕೃಷಿಕ ದಂಪತಿಯ ತೃತೀಯ ಪುತ್ರ ಆಗಿರುವ ಈಗಲೂ ಆಂಧ್ರ ಗಂಡಿಯಂಚಿನ ಗ್ರಾಮ ಬಸನಪಲ್ಲಿಯಿಂದ ತಾವು ಅಧಿಕಾರಿಯಾಗಿರುವ ತಮ್ಮ ಕಾರ್ಯಕ್ಷೇತ್ರದ ಕೋಲಾರ ಜಿಲ್ಲಾ ಪಂಚಾಯಿತಿ ಕಚೇರಿಗೆ ಹೋಗಿಬರುತ್ತಾರೆ ರಜಾ ದಿನಗಳಲ್ಲಿ ತಮ್ಮ ಜಮೀನಿನಲ್ಲಿ ಕುಟುಂದ ಸದಸ್ಯರೊಂದಿಗೆ ದಿನ ಪೂರ್ತಿ ಕೃಷಿಯಲ್ಲಿ…

Read More

ಶ್ರೀನಿವಾಸಪುರ: ಶ್ರೀನಿವಾಸಪುರ ರಾಜ್ಯ ಸಾರಿಗೆ ಸಂಸ್ಥೆ ಘಟಕದ ಉದ್ಯೋಗಿ ಜಿ.ಎಸ್.ಜಗನಾಥ್ ರಾಷ್ಟ್ರ ಮಟ್ಟದ ಅಂತರಾಜ್ಯ ಶೇಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ.ರಾಜ್ಯ ಸಾರಿಗೆ ಸಂಸ್ಥೆ ಚಾಲಕರಾಗಿರುವ ಜಗನಾಥ್ ಅತ್ಯುತ್ತಮ ಶೇಟಲ್ ಬ್ಯಾಡ್ಮಿಂಟನ್ ಆಟಗಾರರಾಗಿದ್ದು ರಾಜ್ಯಮಟ್ಟದ ಹಲವಾರು ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಿ ವಿವಿದ ಹಂತದ ಪದಕ ಹಾಗು ಪ್ರಶಸ್ತಿಗಳ ಪುರಸೃತರಾಗಿದ್ದಾರೆ. ಅವರ ಸಾಧನೆಯ ಪಟ್ಟಿಯಲ್ಲಿ ಮತ್ತೊಂದು ಗರಿಯನ್ನು ಪಡೆದಿರುತ್ತಾರೆ.ಅಖಿಲ ಭಾರತ ರಾಜ್ಯ ಸಾರಿಗೆ ಸಂಸ್ಥೆಗಳ ಒಕ್ಕೂಟವು ದೇಶದಲ್ಲಿನ ಸಾರ್ವಜನಿಕ ಸಾರಿಗೆ ಸಂಸ್ಥೆಯ ನಿಗಮಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಗುಜರಾತ್ ರಾಜ್ಯದ ವಡೋದರಾ ನಗರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ 2023 ಪುರುಷರ ಶೇಟಲ್ ಬ್ಯಾಡ್ಮಿಂಟನ್ ಸ್ಪರ್ದೆಯಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಪ್ರತಿನಿಧಿಯಾಗಿ ಭಾಗವಹಿಸಿದ್ದ ಜಗನಾಥ್ ಉತ್ತಮ ಸಾಧನೆ ಮಾಡಿ ಡಬಲ್ಸ್ ನಲ್ಲಿ ದ್ವೀತಿಯ ಸ್ಥಾನ ಹಾಗು ಸಿಂಗಲ್ಸ್ ನಲ್ಲೂ ದ್ವೀತಿಯ ಸ್ಥಾನ ಗಳಿಸಿ ಪ್ರತ್ಯಕವಾಗಿ ಎರಡು ಬೆಳ್ಳಿಪದಕ ಹಾಗು ದ್ವೀತೀಯ ರನ್ನರ್ ಅಪ್ ಪ್ರಶಸ್ತಿ ಗಳಿಸಿದ್ದಾರೆ.ಸಾರಿಗೆ ಸಂಸ್ಥೆ…

Read More

ಶ್ರೀನಿವಾಸಪುರ:ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕದ ವಿವಿಧ ಕನ್ನಡ ಹಾಗು ಇತರೆ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ರಾಜ್ಯ ಬಂದ್‌ಗೆ ಶ್ರೀನಿವಾಸಪುರದಲ್ಲಿ ಸ್ಪಂದನೆ ಸಿಗದೆ ಬಂದ್ ನಡೆಯಲೆ ಇಲ್ಲ.ಶ್ರೀನಿವಾಸಪುರ ಪಟ್ಟಣದಲ್ಲಿ ಜನ ಸಂಚಾರ ಕಡಿಮೆ ಇತ್ತಾದರು ಶುಕ್ರವಾರ ಎಲ್ಲವೂ ಎಂದಿನಂತೆ ಮಾಮೂಲಾಗಿತ್ತು,ಸ್ಥಳೀಯವಾಗಿ ಯಾವುದೆ ಕನ್ನಡ ಹಾಗು ಇತರೆ ಸಂಘಟನೆಗಳು ಬಂದ್ ನಿರ್ವಹಣೆಗೆ ಮುಂದಾಗದ ಪರಿಣಾಮ ಮುಂಜಾನೆಯಿಂದಲೆ ಅಂಗಡಿ-ಮುಂಗಟ್ಟುಗಳನ್ನು ತೆರೆದಿದ್ದ ವ್ಯಾಪರಸ್ಥರು ವ್ಯಾಪರ ವಹಿವಾಟನ್ನು ನಡೆಸಿಕೊಂಡಿದ್ದರು,ತಿಂಡಿ ಹೋಟೆಲ್‌ಗಳು ಟೀ ಅಂಗಡಿಗಳು ತೆರೆದಿದ್ದವು,ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ಮಾಮೂಲಿನಂತೆ ಸಂಚಿರಿಸಿತಾದರೂ ಜನ ಸಂಚಾರ ಇಲ್ಲದ ಹಿನ್ನಲೆಯಲ್ಲಿ ಮಧ್ಯಾನದ ಹೊತ್ತಿಗೆ ಬಸ್ಸುಗಳ ಓಡಾಟ ನಿಲ್ಲಿಸಲಾಯಿತು.ಬಹುತೇಕ ಖಾಸಗಿ ಶಾಲೆಗಳು ಬಾಗಿಲು ತೆರೆಯಲಿಲ್ಲ, ಬ್ಯಾಂಕ್ ಸೇರಿದಂತೆ ಖಾಸಗಿ ಹಣಕಾಸು ಸಂಸ್ಥೆಗಳು ಕಾರ್ಯನಿರ್ವಹಿದರೆ, ಸದಾ ಗಿಜಗೂಡುತ್ತಿದ್ದ ತಾಲೂಕು ಕಚೇರಿ ಅವರಣದಲ್ಲಿ ಜನ ಸಂಚಾರ ಕಡಿಮೆ ಇದ್ದು ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ಕಡಿಮೆ ಇತ್ತು.ಪಟ್ಟಣದಲ್ಲಿ ಸರ್ಕಾರಿ ಶಾಲ-ಕಾಲೇಜುಗಳು ಬಾಗಿಲು ತೆಗೆತ್ತಿದ್ದಾರೂ ವಿಧ್ಯಾರ್ಥಿಗಳು ಬಾರದ ಹಿನ್ನಲೆಯಲ್ಲಿ…

Read More

ಶ್ರೀನಿವಾಸಪುರ:ಸಂತೆಯಲ್ಲಿ ಟೆಂಪೋ ನಿಲ್ಲಿಸಿದ ವಿಚಾರವಾಗಿ ನಡೆದಂತ ರಗಳೆ ದೊಡ್ಡದಾಗಿ ಮೂತ್ರ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಗಲಾಟೆ ಮಾಡಿಕೊಂಡು ವ್ಯಕ್ತಿಯೊಬ್ಬ ಸಾವನಪ್ಪಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ನಡೆದಿರುತ್ತದೆ ಮೃತ ವ್ಯಕ್ತಿಯನ್ನು ವೆಂಕಟ್ರಾಯಪ್ಪ (55) ಎಂದು ಗುರುತಿಸಲಾಗಿದೆ.ತಾಲೂಕಿನ ಗೌನಿಪಲ್ಲಿ ಸಂತೆ ತಾಲೂಕಿನಲ್ಲೆ ಅತಿ ದೊಡ್ಡ ಸಂತೆಯಾಗಿದ್ದು ಇಲ್ಲಿ ಆಂಧ್ರ ಸೇರಿದಂತೆ ಇತರಡೆಯಿಂದ ಸಂತೆ ವ್ಯಾಪಾರ ಮಾಡಲು ಸೇರುವುದು ಸಾಮಾನ್ಯ ಎಂದಿನಂತೆ ಮಂಗಳವಾರ ಸಂತೆ ಮೈದಾನದಲ್ಲಿ ವಾರದ ಸಂತೆ ನಡೆದಿದೆ ನಂತರದಲ್ಲಿ ವ್ಯಾಪರಸ್ಥರು ಸಂತೆ ಮುಗಿಸಿ ಉಳಿದ ಸರಕು ವಾಪಸ್ಸು ತಗೆದುಕೊಂಡು ಹೋಗುವುದು ಸಾಮನ್ಯ ಅದರಂತೆ ಸಂತೆಯಲ್ಲಿ ವ್ಯಾಪರ ಮಾಡಲು ಬಂದಿದ್ದ ಗೌವನಪಲ್ಲಿ ಗ್ರಾಮದ ವೆಂಕಟ್ರಾಯಪ್ಪನ ಮಗ ಮನೋಹರ್ ಸಂತೆಯಲ್ಲಿ ಉಳಿದ ಸರಕನ್ನು ಮೂಟೆಗೆ ಹಾಕಿ ಕಟ್ಟಿಕೊಂಡು ಅದನ್ನು ತಗೆದುಕೊಂಡು ಹೋಗಲು ಟೆಂಪೋ ತಂದಿರುತ್ತಾನೆ ಅದನ್ನು ರಸ್ತೆಯಲ್ಲಿ ನಿಲ್ಲಿಸಿ ಅಂಗಡಿ ಸರಕನ್ನು ತುಂಬಿಕೊಂಡು ವಾಪಸ್ಸು ಹೋಗುವಾಗ ರಸ್ತೆಯಲ್ಲಿ ಮತ್ತೊಂದು ಟೆಂಪೋ ಅಡ್ದ ಇರುತ್ತದೆ ಯಾರದು ಎಂದು ತಿಳಿಯದೆ ಅಲ್ಲೆ ಕುಳತಿದ್ದ…

Read More

ಶ್ರೀನಿವಾಸಪುರ:ಪೌರಕಾರ್ಮಿಕರ ಸೇವೆ ಅನನ್ಯ ಅವರನ್ನು ನಾವು ಅತ್ಯಂತ ಗೌವರದಿಂದ ಕಾಣಬೇಕು ಎಂದು ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು.ಅವರು ಶ್ರೀನಿವಾಸಪುರ ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಾಸಿ ಮಾತನಾಡಿದರು,ನಾವು ವಾಸಿಸುವ ಪ್ರದೇಶ ಸ್ವಚ್ಚವಾಗಿರಲು ಪೌರಕಾರ್ಮಿಕರ ಸಲ್ಲಿಸುವ ಸೇವೆ ಶ್ಲಾಘನೀಯ ಇದನ್ನು ಸಮಾಜ ತೀವ್ರವಾಗಿ ಪರಿಗಣಿಸಿಬೇಕಿದೆ ಅವರ ಅಗತ್ಯಗಳ ಕುರಿತಾಗಿ ಜವಾಬ್ದಾರಿಯಾಗಿ ನಾವು ಚಿಂತನೆ ಮಾಡಬೇಕಿದ್ದು ಪೌರಕಾರ್ಮಿಕರಿಗೆ ನಿವೇಶನ,ವಸತಿ ಸೌಕರ್ಯ ಕಸ್ಟ-ಸುಖಗಳಿಗೆ ಸ್ಪಂದಿಸಲು ಸದಾ ಸಹಕಾರ ನೀಡಲು ಬದ್ದರಾಗಿರುವುದಾಗಿ ಹೇಳಿದರು.ಪಟ್ಟಣದ ಅಭಿವೃದ್ಧಿಗೆ ಒತ್ತುಪಟ್ಟಣದ ಸರ್ವತೋಮುಖ ಅಭಿವೃದ್ದಿಗೆ ಸುಮಾರು 25 ಕೋಟಿ ರೂಗಳ ಯೋಜನೆ ಸಿದ್ದವಾಗಿದ್ದು ಉತ್ತಮರಸ್ತೆ. ಚರಂಡಿ, ಕ್ರೀಡಾಂಗಣ, ನಿವೇಶನಗಳ ಹಂಚಿಕೆ, ಕೆರೆಗೆ ನೀರುತುಂಬುವ ಕೆಲಸಗಳು ಸಧ್ಯದಲ್ಲಿ ಚಾಲನೆ ನೀಡಲಾಗುವುದು ಎಂದರು.ಮುಖ್ಯಾಧಿಕಾರಿ ಸತ್ಯನಾರಾಯಣ ಮಾತನಾಡಿ ಪೌರಕಾರ್ಮಿಕರು ಸೂರ್ಯ ಹುಟ್ಟುವ ಮುಂಚೆ ಬೆಳಗಿನ ಜಾವ ಗಾಳಿ,ಮಳೆ,ಚಳಿ, ಲೆಕ್ಕಿಸದೆ ಜನರ ಆರೋಗ್ಯ ದೃಷ್ಠಿಯಿಂದ ಪಟ್ಟಣದ ಸ್ವಚ್ಚತೆಯಲ್ಲಿ ನಿಷ್ಕಲಂಕ ಮನಸ್ಸಿನಿಂದ ಕಾರ್ಯ ನಿರ್ವಹಿಸುತ್ತಿರುವುದರಿಂದ ನಾವು ಇವತ್ತು ನೆಮ್ಮದಿಯ ಜೀವನ ಮಾಡುತ್ತಿದ್ದೆವೆ,ಪೌರಕಾರ್ಮಿಕರ ಆರೋಗ್ಯದ ಬಗ್ಗೆ ಸಮಾಜಕ್ಕೂ ಕಾಳಜಿ ಇರಬೇಕು…

Read More

ಶ್ರೀನಿವಾಸಪುರ:ರಸ್ತೆಬದಿಯಲ್ಲಿ ವ್ಯಾಪಾರ ಮಾಡುವಂತ ಸಣ್ಣ-ಪುಟ್ಟ ವ್ಯಾಪಾರಸ್ಥರಿಗೆ ಆರ್ಥಿಕ ನೆರವು ಒದಗಿಸುವ ಸಲುವಾಗಿ ಪ್ರಧಾನಿಮಂತ್ರಿ ಮೋದಿ ಸರಕಾರ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಪ್ರಾರಂಬಿಸಿದೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಒಂದಾಗಿರುವ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸಾಗಿದ್ದು, ಇದರ ಸೌಲತ್ತು ಪಡೆದುಕೊಂಡು ಸಣ್ಣ-ಪುಟ್ಟ ವ್ಯಾಪಾರಿಗಳು ಅರ್ಥಿಕವಾಗಿ ಅಭಿವೃದ್ಧಿಯಾಗುವಂತೆ ಸಂಸದ ಮುನಿಸ್ವಾಮಿ ಕರೆ ಇತ್ತರು ಅವರು ಪುರಸಭೆ ಆವರಣದಲ್ಲಿ ಆಯೋಜಿಸಿದ್ದ ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಅನುಷ್ಠಾನಗೊಳಿಸಿರುವ ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ’ (ಪಿಎಂ ಸ್ವನಿಧಿ) ಯೋಜನೆಯಡಿ ಅಯ್ಕೆಯಾಗಿರುವ ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು ಮೀಟರ್‌ ಬಡ್ಡಿ ಮಾಫಿಯಾದಲ್ಲಿ ಬೀದಿ ವ್ಯಾಪಾರಿಗಳು ಸಿಲುಕದೆ ಆತ್ಮವಿಶ್ವಾಸದಿಂದ ವ್ಯಾಪಾರ ವಹಿವಾಟು ಮಾಡಿಕೊಳ್ಳಲು ಪ್ರಧಾನಿ ಮೋದಿ ಅವರು ಪಿಎಂ ಸ್ವನಿಧಿ ಯೋಜನೆ ಪ್ರಾರಂಭಿಸಿರುತ್ತಾರೆಬೀದಿ ಬದಿ, ತಳ್ಳುವಗಾಡಿ, ಸಣ್ಣ ಸಣ್ಣ ವ್ಯಾಪಾರಿಗಳನ್ನು ಗುರುತಿಸಿ ಕೇಂದ್ರ ಸರ್ಕಾರದ ಸವಲತ್ತುಗಳನ್ನು ನೀಡುವ ಸಲುವಾಗಿ ಕಾರ್ಯಕ್ರಮ ರೂಪಿಸಲಾಗಿದೆ. ಬಡತನದಲ್ಲಿದ್ದು ವ್ಯಾಪಾರ…

Read More

ಶ್ರೀನಿವಾಸಪುರ:ಕಾನೂನಿಗಿಂತ ಯಾರು ದೊಡ್ಡವರಲ್ಲ ಜನರು ಕಾನೂನನ್ನು ಮೀರಿ ವರ್ತಿಸಬಾರದು ಎಂದು ಮುಳಬಾಗಿಲು ಡಿ.ವೈ.ಎಸ್.ಪಿ ನಂದಕುಮಾರ್ ತಿಳಿಸಿದರು. ಅವರು ಶ್ರೀನಿವಾಸಪುರ ತಾಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ಶ್ರೀನಿವಾಸಪುರ ಪೋಲಿಸ್ ಠಾಣೆ ವತಿಯಿಂದ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಕಾನೂನು ಚೌಕಟ್ಟು ಮೀರಿ ನಡೆದುಕೊಳ್ಳಬಾರದು ಹಾಗೆ ಯಾರೆ ತಪ್ಪು ಮಾಡಿದರು ಸ್ಥಳೀಯ ಪೋಲಿಸರು ಸ್ಪಂದಿಸಿ ನ್ಯಾಯ ಕೊಡಿಸುತ್ತಾರೆ.ಯಾವುದೆ ಕಾರಣಕ್ಕೂ ಜನರು ಕಾನೂನು ವಿಚಾರವಾಗಿ ಸೌಹಾರ್ದತೆಯಿಂದ ವರ್ತಿಸಲು ಸೂಚಿಸಿದರು.ಪೋಲಿಸ್ ಇನ್ಸಪೇಕ್ಟರ್ ದಯಾನಂದ್ ಮಾತನಾಡಿ ಗ್ರಾಮಸ್ಥರು ಪೋಲಿಸರೊಂದಿಗೆ ಸೌಜನ್ಯಯುಕ್ತವಾಗಿ ನಡೆದುಕೊಂಡಿದ್ದರೆ ಇಂದು ಗ್ರಾಮದಲ್ಲಿ ಯಾರು ಆತಂಕ ಪಡುವ ಅಗತ್ಯ ಇರುತ್ತಿರಲಿಲ್ಲ ಇಲ್ಲಿ ಯಾರು ಕಾನೂನಿಗಿಂತ ದೊಡ್ಡವರಲ್ಲ ಎಲ್ಲರೂ ಬದ್ದರಾಗಿ ನಡೆದುಕೊಳ್ಳಬೇಕು ಎಂದರು.ಕಳೆದ ಹತ್ತು ಹದಿನೈದು ದಿನಗಳ ಹಿಂದೆ ವ್ಯಕ್ತಿಯೊಬ್ಬ ತನ್ನ ಮೊದಲ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಹಿನ್ನಲೆಯಲ್ಲಿ ಹತ್ಯೆ ಆರೋಪಿಯ ವಿರುದ್ದ ನಂಬಿಹಳ್ಳಿ ಗ್ರಾಮಸ್ಥರು ತಿರುಗಿ ಬಿದ್ದು ಪೋಲಿಸರನ್ನು ಲೆಕ್ಕಿಸದೆ ಉದ್ವೇಗಕ್ಕೆ ಒಳಗಾಗಿ ಪೋಲಿಸರೊಂದಿಗೆ ವಾಗ್ವಾದಕ್ಕೆ ನಿಂತು ಅರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ನಂಬಿಹಳ್ಳಿ ಗ್ರಾಮಸ್ಥರು ಒತ್ತಾಯಿಸಿ…

Read More

ಶ್ರೀನಿವಾಸಪುರ: ಜಾನುವಾರಗಳಿಗೆ ಸೊಪ್ಪು ಕತ್ತರಿಸಲು ಮರ ಹತ್ತಿದ್ದ ಯುವಕ ವಿದ್ಯುತ್ ಶಾಕ್ ನಿಂದ ಮೃತ ಪಟ್ಟಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ಕೋಟಪಲ್ಲಿ ಗ್ರಾಮದಲ್ಲಿ ಇಂದು ನಡೆದಿದೆ.ವಿದ್ಯತ್ ಅವಘಡದಿಂದ ಮೃತ ಪಟ್ಟ ಯುವಕನನ್ನು ಕೋಟಪಲ್ಲಿ ಗ್ರಾಮದ ಆಕಾಶ್ (16) ಎಂದು ಗುರುತಿಸಲಾಗಿದೆ.ಜಾನುವಾರುಗಳಿಗೆ ಮೇವು ಕತ್ತರಿಸಲು ಮರ ಹತ್ತಿದ್ದ ಬಾಲಕನಿಗೆ ಮರದಲ್ಲಿ ಹಾದು ಹೋಗಿದ್ದ ವಿದ್ಯತ್ ತಂತಿ ತಗುಲಿ ಯುವಕ ಸ್ಥಳದಲ್ಲಿ ಸುಟ್ಟು ಹೋಗಿದ್ದಾನೆ.ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಕೋಲಾರ:ಕೋಲಾರ ಜಿಲ್ಲಾ ಪತ್ರಕರತರ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಕೋಲಾರ ಜಿಲ್ಲಾ ಹಿರಿಯ ಪತ್ರಕರ್ತ ಉದಯವಾಣಿ ವರದಿಗಾರರಾದ ಕೆ.ಎಸ್.ಗಣೇಶ್ ಸತತ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿ ಹ್ಯಾಟ್ರಿಕ್ ಸಾಧಿಸಿದ್ದಾರೆ.ಹಿರಿಯ ಪತ್ರಕರ್ತ ಸಹಕಾರಿ ಧುರೀಣ ಅಬ್ಬಣ್ಣಿಶಂಕರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.ಕೋಲಾರ ನಗರದ ಅಂತರ ಗಂಗೆ ರಸ್ತೆಯಲ್ಲಿರುವ ಪತ್ರಕರ್ತರ ಭವನದಲ್ಲಿ ನಡೆದ ಚುನಾವಣೆ ಸಭೆಯಲ್ಲಿ ಚುನಾವಣಾಧಿಕಾರಿ ಶಿವಶಂಕರ್ ಭಾಗವಹಿಸಿದ್ದರು. ಕೋಲಾರ ಜಿಲ್ಲಾ ಪತ್ರಕರತರ ವಿವಿದೋದ್ದೇಶ ಸಹಕಾರ ಸಂಘಕ್ಕೆ ಒಟ್ಟು ಹತ್ತೊಂಬತ್ತು ಮಂದಿ ನಿರ್ದೇಶಕರು ಆಯ್ಕೆಯಾಗಿದ್ದು ಕೆ.ಎಸ್.ಗಣೇಶ್,ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್,ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿಗೋವಿಂದಗೌಡ,ಅಬ್ಬಣಿಶಂಕರ್,ಮುರಧರ್,ಮುನಿರಾಜು,ಸದಾನಂದ,ಎ.ಜಿ.ಸುರೇಶ್ ಕುಮಾರ್,ರಾಜೇಂದ್ರಸಿಂಹ, ಎಸ್.ರವಿಕುಮಾರ್,ಪಿ.ಎನ್.ದಾಸ್,ಎಂ.ನಾಗರಾಜಯ್ಯ,ಸಿ.ವಿ.ನಾಗರಾಜ್,ಹೆಚ್.ಎಲ್.ಸುರೇಶ್,ಎಂ.ಸೋಮಶೇಕರ್,ವಿ.ಈಶ್ವರ್,ಎಲ್.ರೂಪೇಶ್,ಎಂ.ಲಕ್ಷ್ಮಿ,ಕೆ.ಗೋಪಿಕಾ ಮಲ್ಲೇಶ್ ಆವಿರೋಧವಾಗಿ ಆಯ್ಕೆಯಾಗಿರುತ್ತಾರೆ.2007 ರಲ್ಲಿ ಅರಂಭವಾದ ಪತ್ರಕರತರ ವಿವಿದೋದ್ದೇಶ ಸಹಕಾರ ಸಂಘದಲ್ಲಿ 300 ಕ್ಕೂ ಹೆಚ್ಚು ಷೇರುದಾರ ಸದಸ್ಯರಿದ್ದಾರೆ

Read More