ಶ್ರೀನಿವಾಸಪುರ: ಶ್ರೀನಿವಾಸಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-69ರಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಡು ಜಿಂಕೆಯೊಂದು ಮೃತಪಟ್ಟಿದೆ. ಬಾರಿ ಗಾತ್ರದ ಜಿಂಕೆಯೊಂದು ರಸ್ತೆ ದಾಟುವಾಗ ಚಿಂತಾಮಣಿ ಕಡೆ ಹೊರಟಿದ್ದ ಕಾರಿನ ಮೇಲೆ ಬಿದ್ದು ಜಿಂಕೆ ಸ್ಥಳದಲ್ಲಿಯೇ ಮೃತಪಟ್ಟಿದೆ. ತಿರುಪತಿ ದರುಶನ ಮುಗಿಸಿ ಚಿಕ್ಕಬಳ್ಳಾಪುರದ ಕಡೆ ಹೋರಟಿದ್ದ ಕಾರು ಕಲ್ಲೂರು ಅರಣ್ಯ ಇಲಾಖೆ ಸಸ್ಯ ಕ್ಷೇತ್ರದ ಬಳಿ ಹೋಗುತ್ತಿದ್ದಾಗ ವಾಹನದ ಮೇಲೆ ಬಾರಿ ಗಾತ್ರದ ವಸ್ತು ಬಿದ್ದಂತಾಗಿ ಕಾರು ನಿಯಂತ್ರಣ ತಪ್ಪಿದಂತಾಯಿತು ತಕ್ಷಣ ಕಾರು ನಿಲ್ಲಿಸಿ ನೋಡಿದಾಗ ರಸ್ತೆ ಬದಿ ಜಿಂಕೆ ಸತ್ತುಬಿದ್ದಿದೆ ಎಂದು ಕಾರು ಚಾಲಕ ಚಿರಂಜಿವಿ ಹೇಳುತ್ತಾರೆ.
ಕಾರು ಹಾಗು ಜಿಂಕೆ ಶವ ವಶಕ್ಕೆ ಪಡೆದ ಅರಣ್ಯ ಇಲಾಖೆ
ಸಾರ್ವಜನಿಕರು ಅಪಘಾತ ಸುದ್ಧಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದಾಗ ಅರಣ್ಯ ರಕ್ಷಕ ಅನಿಲ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೆಲಧಿಕಾರಿಗಳ ಸೂಚನೆಯಂತೆ ಕಾರನ್ನು ವಶಕ್ಕೆ ಪಡೆದು,ಜಿಂಕೆ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ತಗೆದುಕೊಂಡು ಹೋದರು.ಅರಣ್ಯ ಅಧಿಕಾರಿಗಳು ಹೇಳುವಂತೆ ಕಲ್ಲೂರು ಅರಣ್ಯದಲ್ಲಿ ಜಿಂಕೆಗಳು ದೊಡ್ಡ ಸಂಖ್ಯೆಯಲ್ಲಿದ್ದು ಮಳೆ ಹಿನ್ನಲೆಯಲ್ಲಿ ರಸ್ತೆ ದಾಟಲು ಅರಣ್ಯದಿಂದ ಹೊರಗೆ ಬಂದಿರಬಹುದು ಎಂದು ಶಂಕಿಸಿದ್ದಾರೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



