ಶ್ರೀನಿವಾಸಪುರ:ತಾಲೂಕಿನಲ್ಲಿ ಅರಣ್ಯ ಇಲಾಖೆ ಒತ್ತುವರಿ ತೆರವು ಕಾರ್ಯಾಚರಣೆ ಸ್ಥಳದಲ್ಲಿ ಹೈಡ್ರಾಮ ನಡೆದು ಕೆಲ ಹೊತ್ತು ಸಂಸದ ಮುನಿಸ್ವಾಮಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಮಾತಿನ ಚಕಮುಖಿ ನಡೆಯಿತು.ಕಂದಾಯ ಇಲಾಖೆ ಹಾಗು ಅರಣ್ಯ ಇಲಾಖೆ ಜಂಟಿ ಸರ್ವೆ ಆಗುವ ವರಿಗೂ ಅರಣ್ಯ ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಸಂಸದ ಮುನಿಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕಾರ್ಯಾಚರಣೆಯ ಸ್ಥಳಕ್ಕೆ ಹೋಗಲು ಮುಂದಾದಾಗ ಅರಣ್ಯ ಇಲಾಖೆ ಹಾಗು ಪೊಲೀಸ್ ಸಿಬ್ಬಂದಿ ಸಂಸದರನ್ನು ಸ್ಥಳದಿಂದ ಕದಲದಂತೆ ಸುತ್ತುವರಿದಿದ್ದರಿಂದ ಸ್ಥಳದಲ್ಲಿ ಕೆಲಹೊತ್ತು ಬೀಗುವಿನ ವಾತಾವರಣ ನಿರ್ಮಾಣವಾಗಿತ್ತು.ನಂತರದಲ್ಲಿ ಕೆಲ ರೈತರು ಕಂದಾಯ ಇಲಾಖೆ ಜಮೀನಿಗಳಿಗೆ ನೀಡಿರುವ ದಾಖಲೆಗಳನ್ನು ಸಂಸದರಿಗೆ ನೀಡಿದಾಗ ಸಂಸದ ಮುನಿಸ್ವಾಮಿ ತಹಶೀಲ್ದಾರ್ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಕಂದಾಯ ಇಲಾಖೆ ನೀಡಿರುವ ದಾಖಲೆಗಳನ್ನು ಇಟ್ಟುಕೊಂಡು ಸಾಗುವಳಿ ಮಾಡುತ್ತಿರುವ ರೈತರ ಜಮೀನು ಅರಣ್ಯ ಇಲಾಖೆಯವರು ಕಿತ್ತುಕೊಳ್ಳುತ್ತಿದ್ದರು ನೀವು ಯಾಕೆ ರೈತರಿಗೆ ಸ್ಪಂದಿಸುತ್ತಿಲ್ಲ ಎಂದು ಪ್ರಶ್ನಿಸಿದರು,ಎಪ್ಪತ್ತು-ಎಂಬತ್ತು ವರ್ಷಗಳಿಂದ ರೈತರು ಜಮೀನು ದಾಖಲೆ ಹೊಂದಿದ್ದರು ಕರುಣೆ ಇಲ್ಲದಂತೆ ಏಕಾಏಕಿ ಮರಗಳನ್ನು ಯಾಕೆ…
Author: Srinivas_Murthy
ಶ್ರೀನಿವಾಸಪುರ:ಗುರುವಾರ ನಸುಕಿನ ಜಾವ 4 ಗಂಟೆಯಿಂದಲೇ ಅರಣ್ಯ ಒತ್ತುವರಿ ತೆರವು ಕಾರ್ಯಚರಣೆ ಆರಂಭವಾಗಿದೆ, ಬೆಳ್ಳಂಬೆಳಗ್ಗೆ ಜೆ ಸಿ ಬಿ ಗಳೊಂದಿಗೆ ಆಗಮಿಸಿದ ಕೋಲಾರ ಜಿಲ್ಲಾ ಅರಣ್ಯಾಧಿಕಾರಿ ಏಡುಕೊಂಡಲು ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆಗೆ ಚಾಲನೆ ಕೊಟ್ಟಿದ್ದಾರೆ ಶ್ರೀನಿವಾಸಪುರ ತಾಲ್ಲೂಕಿನ ಕಸಬಾ ಹೋಬಳಿ ಅಲಂಬಗಿರಿ ಅರಣ್ಯ ಪ್ರದೇಶದ ವ್ಯಾಪ್ತಿಯ ಪಾತಪಲ್ಲಿ ಗ್ರಾಮದ ಬಳಿ ಶ್ರೀನಿವಾಸಪುರ-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೆ ಕಾರ್ಯಚರಣೆ ನಡೆಯುತ್ತಿದ್ದು ಬೃಹತ್ ಗಾತ್ರದ ಮಾವಿನ ಮರಗಳನ್ನು ನೆಲಸಮ ಮಾಡಿ ಜಮೀನು ಒತ್ತುವರಿ ತೆರವುಮಾಡುತ್ತಿರುವ ಅರಣ್ಯ ಇಲಾಖೆಯವರು ಹಳ್ಳ ತೋಡಿ ತಮ್ಮ ಗಡಿಯನ್ನು ಗುರುತುಮಾಡುತ್ತಿದ್ದಾರೆ.ಅರಣ್ಯ ಇಲಾಖೆ ಅಧಿಕಾರಿಗಳು ಹೇಳುವಂತೆ ಕಾರ್ಯಚರಣೆ ಮುಂದುವರಿಯಲಿದ್ದು ಶೆಟ್ಟಿಹಳ್ಳಿ,ಪಣಸಚೌಡನಹಳ್ಳಿ,ಆರಮಾಕಲಹಳ್ಳಿ ಸೇರಿದಂತೆ ಈಭಾಗಗಳಲ್ಲಿ ಒತ್ತುವರಿ ತೆರವು ಮುಂದುವರಿಯಲಿದೆ ಎನ್ನುತ್ತಾರೆ. ಅರಣ್ಯಾಧಿಕಾರಿ ಮುಂದೆ ಅಲವತ್ತುಕೊಂಡ ಗ್ರಾಮಸ್ಥರುಅರಣ್ಯ ಒತ್ತುವರಿ ತೆರವು ಕಾರ್ಯಚರಣೆ ಪ್ರಾರಂಭ ವಾಗುತ್ತಿದ್ದಂತೆ ಸುಮುತ್ತಲಿನ ಗ್ರಾಮಸ್ಥರು ಜಮಾವಣೆಗೊಂಡು ಜಿಲ್ಲಾ ಅರಣ್ಯಾಧಿಕಾರಿ ತಮ್ಮ ಅಳಲು ತೊಡಿಕೊಂಡು ಎಪ್ಪತ್ತು-ಎಂಬತ್ತು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಜೀವನ ಮಾಡುತ್ತಿದ್ದು ಇದು ಹೋದರೆ ನಮಗೆ ಜೀವನ ಇಲ್ಲ…
ಶ್ರೀನಿವಾಸಪುರ: ರಸ್ತೆ ಅಭಿವೃದ್ಧಿ ಮೂಲಭೂತ ಸೌಕರ್ಯಗಳಲ್ಲಿ ಒಂದು ಜೊತೆಗೆ ಅಭಿವೃದ್ಧಿಯ ಪ್ರತೀಕ ಪ್ರಗತಿಯ ಹೆಜ್ಜೆ ಆದರೆ ಅದನ್ನು ನಿಗದಿಪಡಿಸಿದ ಅವಧಿಯೊಳಗೆ ಪೂರ್ಣಗೊಳಿಸದಿದ್ದರೆ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತದೆ ಎನ್ನುವ ಅರಿವು ಯಾರಿಗೂ ಇಲ್ಲದಂತಾಗಿದೆ. ಟ್ರಾಫಿಕ್ ಜಾಮ್, ಬದಲಿ ರಸ್ತೆಗಳ ಕೊರತೆ, ಧೂಳು, ಶಬ್ಧ ಮಾಲಿನ್ಯದಂತಹ ಕಿರಿಕಿರಿ ಇದೆಲ್ಲವನ್ನು ಕೇಳುವವರು ಯಾರು?ಮಳೆ ಬಂದರೆ ಕೆಸರು ಗದ್ದೆಯಾಗುತ್ತದೆ ಮಳೆ ಕಡಿಮೆಯಾದರೆ ಏದ್ದೇಳುವ ದೂಳಿನಿಂದ ಕಣ್ಣೆ ಕಾಣದಷ್ಟು ಎತ್ತರದಲ್ಲಿ ದೂಳು ಎದ್ದೆಳುತ್ತದೆ ಇದು ಶ್ರೀನಿವಾಸಪುರ ಪಟ್ಟಣದ ಪೊಸ್ಟಾಪೀಸ್ ರಸ್ತೆ ಪರಿಸ್ಥಿತಿ,ಈ ರಸ್ತೆಯಲ್ಲೆ ಆಡಳಿತ ವ್ಯವಸ್ಥೆಗೆ ಶಾಪ ಹಾಕುತ್ತ ಜನ ಹಳ್ಳ-ಕೊಳ್ಳದ ರಸ್ತೆಯಲ್ಲೆ ಒಡಾಡುತ್ತಿದ್ದಾರೆ.ಹದಗೆಟ್ಟ ರಸ್ತೆಯಲ್ಲಿ ವಾಹನ ಒಡಾಡಿದರೆ ಏಳುವ ದೂಳಿನಿಂದ ಇಲ್ಲಿ ಅಂಗಡಿ ಮುಂಗಟ್ಟು ಇಟ್ಟುಕೊಂಡಿರುವ ಮಾಲಿಕರ ಪರಿಸ್ಥಿತಿ ಅಧೋಗತಿಯಾಗಿದೆ ದೂಳಿನಿಂದ ಕೆಮ್ಮು ದಮ್ಮು, ವ್ಯಾಧಿಗಳು ಶುರುವಾಗಿದೆ ಅನ್ನುವ ಆರೋಪ ಕೇಳಿಬರುತ್ತಿದೆ.ಇಂದಿರಾಭವನ್ ವೃತ್ತದಿಂದ ಪೋಸ್ಟಾಫೀಸ್ ಹಾಗು ರಾಜಾಜಿ ರಸ್ತೆ ಮೂಲಕ ಚಿಂತಾಮಣಿ ವೃತ್ತದ ವರಿಗೂ ರಸ್ತೆ ಕಾಮಗಾರಿ ಪ್ರಾರಂಭವಾಗಿ ಎಂಟು-ಹತ್ತು ತಿಂಗಳಾಯಿತು ಗುತ್ತಿಗೆ ದಾರರು ಚಿಂತಾಮಣಿ ವೃತ್ತದಿಂದ ಕಾಮಗಾರಿ…
ನಟಸಿಂಹ ನಂದಮೂರಿ ಬಾಲಕೃಷ್ಣ ನಟನೆಯ ಸಿನಿಮಾ ನಾಯಕಿಯಾಗಿ ಕಾಜಲ್ ಅಗರ್ವಾಲ್,ಪ್ರಮುಖ ಪಾತ್ರದಲ್ಲಿ ಶ್ರೀ ಲಿಲಾ ಅನಿಲ್ ರಾವಿಪುಡಿ ನಿರ್ದೇಶನ,ಅರ್ಜುನ್ ರಾಂಪಾಲ್ ವಿಲನ್ ನ್ಯೂಜ್ ಡೆಸ್ಕ್:ಭಗವಂತ ಕೇಸರಿ ತೆಲಗು ಸಿನಿಮಾ ಕ್ಷೇತ್ರದಲ್ಲಿ ಹಾಟ್ ಟಾಪಿಕ್ ಆಗಿದೆ ತೆಲಗು ಸಿನಿಮಾ ರಂಗದ ಹಿರಿಯ ನಾಯಕ ನಟಸಿಂಹ ನಂದಮೂರಿ ಬಾಲಕೃಷ್ಣ ತಮ್ಮ ಹಿಂದಿನ ಫಿಲ್ಮ್ ಕೇರಿಯರ್ ಗಿಂತ ಈಗಿನ ಟ್ರೆಂಡ್ ನಲ್ಲಿ ರಾಕೆಟ್ ವೇಗದಲ್ಲಿ ಸಾಗುತ್ತಿದ್ದಾರೆ. ಅವರ ತೀರಾ ಇತ್ತಿಚಿಗಿನ ಸಿನಿಮಾಗಳಾದ ‘ಅಖಂಡ’ ಮತ್ತು ‘ವೀರ ಸಿಂಹ ರೆಡ್ಡಿ’ ಅವರ ವೃತ್ತಿಜೀವನದಲ್ಲಿ ದೊಡ್ಡ ಬ್ಲಾಕ್‌ಬಸ್ಟರ್ ಹಿಟ್ ಹೊಡದಿವೆ ಇದರಿಂದಾಗಿ ಈಗ ಬಿಡುಗಡೆಯಾಗುತ್ತಿರುವ ‘ಭಗವಂತ ಕೇಸರಿ’ ಸಿನಿಮಾ ಬಗ್ಗೆ ಅವರ ಅಭಿಮಾನಿಗಳು ಹೆಚ್ಚು ಕುತುಹಲದಿಂದ ಕಾಯುತ್ತಿದ್ದಾರೆ ಈ ಹಿನ್ನಲೆಯಲ್ಲಿ ಬಾಲಯ್ಯ ‘ಭಗವಂತ ಕೇಸರಿ’ ಸಿನಿಮಾದ ಫ್ಲ್ಯಾಶ್ ಬ್ಯಾಕ್ ಕಥೆಯಲ್ಲಿ ನಟಸಿಂಹ ನಂದಮೂರಿ ಬಾಲಕೃಷ್ಣ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಲಿದ್ದು ತುಂಬಾ ಪವರ್ ಫುಲ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ದೃಶ್ಯವೆ ಸಿನಿಮಾಗೆ ಜೀವಾಳವಾಗಿ ನಿಲ್ಲುತ್ತದೆ…
ನ್ಯೂಜ್ ಡೆಸ್ಕ್:ಗಂಡನಿಗೆ ಹೃದಯಾಘಾತವಾಗಿದೆ ಎಂದು ನೆರೆಮನೆಯವರನ್ನು ನಂಬಿಸಿರುವ ಪತ್ನಿ ಅವನನ್ನು ಆಸ್ಪತ್ರೆಗೆ ಕರೆದೊಯಿದಿರುವದ್ದಾಳೆ. ಅಲ್ಲಿ ವೈದ್ಯರು ಪರಿಕ್ಷೆಗಳು ನಡೆಸಿ ಸಾವನಪ್ಪಿರುವುದಾಗಿ ಘೋಷಿಸಿದ್ದಾರೆ ಗಂಡನ ಸಾವಿನ ವಿಷಯ ಆತನ ಕುಟುಂಬಸ್ಥರಿಗೆ ತಿಳಿದ ನಂತರ, ಮೃತನ ತಾಯಿ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಪೊಲೀಸರು ರಂಗ ಪ್ರವೇಶ ಮಾಡಿದಾಗ ಕೊಲೆ ಸತ್ಯ ಬಯಲಾಗಿದೆ.ಈ ಘಟನೆ ಆಂಧ್ರದ ಗೋದಾವರಿ ಜಿಲ್ಲೆಯ ಪೆದ್ದಪಲ್ಲಿಯಲ್ಲಿ ನಡೆದಿದ್ದು ಮೃತ ವ್ಯಕ್ತಿಯನ್ನು ಪ್ರವೀಣ್ ಎಂದು ಗುರುತಿಸಲಾಗಿದೆ .ಮೃತ ಪ್ರವೀಣ್ ಹೆಂಡತಿ ಲಲಿತಾ ಗಂಡ ಮಲಗಿದ್ದಾಗ ಮುಖಕ್ಕೆ ತಲೆದಿಂಬು ಹಿಡಿದಿಟ್ಟು ಉಸಿರಾಡದಂತೆ ಮಾಡಿ ಸಾಯಿಸಿದ್ದಾಳೆ, ನಂತರ ಆಸಾಮಿ ಎಲ್ಲಿ ಸತ್ತಿಲ್ಲವೋ ಎಂದು ಶಂಕೆಯಿಂದ ಹಾವಿನಿಂದ ಕಚ್ಚಿಸಿದ್ದಾಳೆ.ಗೋದಾವರಿ ಮಾರ್ಕಂಡೇಯ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು ಪತ್ರಕರ್ತನಾಗಿ ವೃತ್ತಿ ಆರಂಭಿಸಿದ ಪ್ರವೀಣ್ ಎಂಬಾತ ಕಾಲಾಂತರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ನಂತರದಲ್ಲಿ ಬಿಲ್ಡರ್ ಆಗಿದ್ದಾನೆ ಜೀವನ ಹೀಗೆ ಸಾಗಿರುವಾಗ ಪ್ರವೀಣ್ ಮಹಿಳೆಯೊಬ್ಬಳ ಸಹವಾಸಕ್ಕೆ ಬಿಳುತ್ತಾನೆ ಅದು ವಿವಾಹೇತರ ಸಂಬಂಧವಾಗಿದ್ದ ಕಾರಣ…
ಶ್ರೀನಿವಾಸಪುರ:ಒಂದು ಕಾಲವಿತ್ತು ನಮ್ಮ ಹಿರಿಯರು ಗಾಣದಿಂದ ತೆಗೆದ ಎಣ್ಣೆಯಲ್ಲಿಯೇ ಅಡುಗೆ ಮಾಡುತ್ತಿದ್ದರು ಬದಲಾದ ಕಾಲಘಟ್ಟದಲ್ಲಿ ಆಧುನಿಕತೆಯ ಭರಾಟೆಯಲ್ಲಿ ಗಾಣಗಳು ಮಾಯವಾಗಿ ಪಾಕೆಟ್ ಆಯಿಲ್ ಗಳು ಬಂದವು.ಆದರೆ ಈಗ scene reverse ಅಗಿದೆ, ಮಾರುಕಟ್ಟೆಯಲ್ಲಿ ಸಿಗುತ್ತಿರುವ ಅಡುಗೆ ರೀಫೈಂಡ್ ಪಾಕೆಟ್ ಆಯಿಲ್ ಕಲಬೆರಕೆಯಿಂದ ಕೂಡಿರುತ್ತದೆ.ರೀಫೈನ್ಡ್ ಆಯಿಲ್ ಅಂತ ಶಾಪ್ ಗಳಿಂದ ತರುವಂತ ಯಾವುದೆ ಎಣ್ಣೆ ಶುದ್ಧವಲ್ಲ,ರಾಸಾಯನಿಕ ಮಿಶ್ರಿತವಾಗಿರುತ್ತದೆ ಸದ್ದಿಲ್ಲದೆ ಮನುಷ್ಯನನ್ನು ಅನಾರೋಗ್ಯಕ್ಕೆ ಈಡುಮಾಡುತ್ತದೆ ಎಂದು ಜನ ಹೇಳುತ್ತಾರೆ ಇದನ್ನು ಆಹಾರ ತಂತ್ರಜ್ಞರು ದೃಡಪಡಿಸುತ್ತಿದ್ದಾರೆ.ಈ ಎಲ್ಲಾ ಗೊಂದಲ ಗೌಜಲುಗಳ ಸಹವಾಸ ನಮಗೆ ಬೇಡ ಎಂದು ಜನ ಮತ್ತೆ ಗಾಣದ ಎಣ್ಣೆ ಬಳಸಲು ಮುಂದಾಗುತ್ತಿದ್ದಾರೆ ಇದರ ಪರಿಣಾಮ ಎಣ್ಣೆ ತೆಗೆಯುವ ಉದ್ಯಮಗಳು ಹಳ್ಳಿ ಸಣ್ಣ ಪುಟ್ಟ ಪಟ್ಟಣಗಳಲ್ಲೂ ಆರಂಭವಾಗುತ್ತಿವೆ.ನಿರುದ್ಯೋಗಿ ಯುವಕರು ಯುವತಿಯರು ಗಾಣದಿಂದ ಎಣ್ಣೆ ತೆಗೆಯುವ ಉದ್ಯಮವನ್ನು ಸ್ಥಾಪಿಸಿ ಯಶಸ್ವಿಯಾಗುತ್ತಿದ್ದಾರೆ, ಇಂತಹ ಯಶ್ವಸಿ ಯುವ ಉದ್ಯಮಿಯ ಪಟ್ಟಿಯಲ್ಲಿ ಶ್ರೀನಿವಾಸಪುರ ತಾಲೂಕಿನ ಕೊಡಿಚರವು ಗ್ರಾಮದ ಗಣೇಶ್ ಎಂಬುವರು ಬಾಬಾ ಆಯಿಲ್ ಮಿಲ್ ಗಾಣದ ಎಣ್ಣೆ ಘಟಕ ಪ್ರಾರಂಭಿಸಿ…
ಶ್ರೀನಿವಾಸಪುರ: ಶ್ರೀನಿವಾಸಪುರ ಪಟ್ಟಣದಲ್ಲಿರುವ ಸಾಯಿಬಾಬಾ ಮಂದಿರದಲ್ಲಿ ಬುಧವಾರ ತಡ ರಾತ್ರಿ ನುಗ್ಗಿರುವ ಕಳ್ಳರು,ಸಾಯಿಬಾಬ ವಿಗ್ರಹದ ಮೇಲಿನ ಆಭರಣಗಳನ್ನು ಮತ್ತು ಹುಂಡಿಯನ್ನು ದೋಚಿದ್ದಾರೆ. ದೇವಾಲಯದ ಪ್ರವೇಶ ದ್ವಾರ ಬೀಗ ಹೊಡೆದು ದೇವಾಲಯಕ್ಕೆ ನುಗ್ಗಿರುವ ಕಳ್ಳರು ವಿಗ್ರಹದ ಮೇಲಿದ್ದ ಸುಮಾರು 1 ಕೆಜಿ ತೂಕದ ಬೆಳ್ಳಿಯ ಕಡಗಗಳು ಒನ್ ಗ್ರಾಮ್ ಬೆಳ್ಳಿ ವಡವೆಗಳು ಮತ್ತು ಹುಂಡಿಯನ್ನು ಹೊತ್ತೈದಿದ್ದಾರೆ ಎಂದು ದೇವಾಲಯ ಸಮಿತಿ ಸದಸ್ಯರು ತಿಳಿಸಿದ್ದಾರೆ.ಹುಂಡಿಯಲ್ಲಿ ದೊಡ್ಡ ಮೊತ್ತದ ಹಣ ಇತ್ತೆಂದು ಹೇಳುತ್ತಾರೆ ಈ ಸಂಬಂದ ಶ್ರೀನಿವಾಸಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು ಸ್ಥಳಕ್ಕೆ ಶ್ವಾನ ದಳ ಕರೆಸಿದ್ದ ಪೋಲಿಸರು ಪರಶೀಲನೆ ನಡೆಸಿದ್ದು ಪೋಲಿಸ್ ಶ್ವಾನ ದೇವಾಲಯದ ಹಿಂಬಾಗದಲ್ಲಿರುವ ಕಬರ್ಸ್ಥಾನ್ ಮೂಲಕ ನಲ್ಲಪಲ್ಲಿ ರಸ್ತೆಯಲ್ಲಿರುವ ಜಮೀನುಗಳ ವರಿಗೂ ತೆರಳಿ ವಾಪಸ್ಸು ಆಗಿದೆ.
ನ್ಯೂಜ್ ಡೆಸ್ಕ್:ಸೈಬರ್ ಅಪರಾಧಿಗಳು ದಿನೆ-ದಿನೆ ಹೊಸ ಹೊಸ ಮಾರ್ಗಗಳಲ್ಲಿ ಜನರನ್ನು ವಂಚಿಸಿ ಹಣ ಎಗರಿಸುವುದು ಸಾಮಾನ್ಯವಾಗುತ್ತಿದೆ ಇದು ಪೊಲೀಸ್ ವ್ಯವಸ್ಥೆಗೆ ಸವಾಲಾಗಿದೆ, ಸಾಮಜಿಕ ಜಾಲತಾಣಗಳ ಮೂಲಕ ಸೈಬರ್ ಕ್ರಿಮಿನಲ್‌ಗಳು ಯಾಮರಿಸಿ ಜನರಿಂದ ನಾಜೂಕಾಗಿ ದುಡ್ಡು ಎಗರಿಸುತ್ತಾರೆ ಹಣ ಕಳೆದುಕೊಂಡವರು ಸಮಾಜದಲ್ಲಿ ಅಪಹಾಸ್ಯಕ್ಕೆ ಒಳಗಾಗುತ್ತೆವೆ ಎಂದು ಯಾರಿಗೆ ಹೇಳಿಕೊಳ್ಳದೆ ನಲಗುತ್ತಿದ್ದಾರೆ.ಸೈಬರ್ ವಂಚನೆ ಅಪರಾಧಗಳ ಕುರಿತಾಗಿ ಪೋಲಿಸ್ ಇಲಾಖೆ ಜನರನ್ನು ಜಾಗೃತಿ ಗೊಳಿಸುತ್ತಿದ್ದರು ಸದ್ದಿಲ್ಲದೆ ಸಾವುಕಾರರಾಗಲು ಹೋರಟಿರುವ ಜನ ನಿತ್ಯ ನಿರಂತರವಾಗಿ ಸೈಬರ್ ಅಪರಾಧಿಗಳ ತಂತ್ರಗಳಿಗೆ ಒಳಗಾಗಿ ಹಣ ಕಳೆದುಕೊಳ್ಳುವುದು ನಿಂತಿಲ್ಲ, ಸಾಮಾಜಿಕ ಜಾಲ ತಾಣಗಳಲ್ಲಿ ಯಾರೆ ಆಗಲಿ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ ಪರಿಚಯ ಇಲ್ಲದವರೊಂದಿಗೆ ಜಾಲ ತಾಣಗಳಲ್ಲಿ ಚಾಟಿಂಗ್ ಹಾಗು ಸಂಭಾಷಣೆ ನಡೆಸಬೇಡಿ ಹಣದ ವ್ಯವಹಾರ ಮಾಡಬೇಡಿ ಸಾಮಾಜಿಕ ಜಾಲತಾಣಗಳಲ್ಲಿ ಆದಷ್ಟು ಜಾಗರೂಕರಾಗಿರಿ ಎಂದೆಲ್ಲ ಪೋಲಿಸ್ ಇಲಾಖೆ ಹೆಚ್ಚರಿಕೆಯ ಗಂಟೆ ಬಾರಿಸುತ್ತಿದ್ದರು ಸೈಬರ್ ವಂಚನೆಗೆ ಒಳಗಾಗುವ ಆಸೆ ಬುರಕ ಜನರ ಕಾರ್ಯಚರಣೆ ನಿಲ್ಲದಾಗಿದೆ.ವಂಚನಗೆ ಜನಸಾಮನ್ಯರೆ ಅಲ್ಲ ಸರ್ಕಾರಿ ಅಧಿಕಾರಿಗಳು ನೌಕರರು ಒಳಗಾಗುತ್ತಿದ್ದಾರೆ, ಕೋಲಾರದಲ್ಲೂ…
ಕೋಲಾರ: ಕೋಲಾರ ಪತ್ರಿಕೆ ಸಂಪಾದಕ ಅವಿಭಜಿತ ಕೋಲಾರ ಜಿಲ್ಲೆಯ ಹಿರಿಯ ಪತ್ರಕರ್ತರಾಗಿದ್ದ ಕೆ.ಪ್ರಹ್ಲಾದರಾವ್ ಅವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಪತ್ರಕರ್ತರ ಭವನದಲ್ಲಿ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತರು, ರಾಯರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿ, ನುಡಿನಮನ ಸಲ್ಲಿಸಿದರು.ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ‘ಕೋಲಾರ ಪತ್ರಿಕೆಯ ನಂಬರ್ ಒನ್ ಸ್ಥಾನವನ್ನು ಕಸಿಯಲು ಯಾರಿಂದಲೂ ಸಾಧ್ಯವಾಗಿಲ್ಲ. ಕೋಲಾರ ಪತ್ರಿಕೋದ್ಯಮದ ದಂತಕತೆ ರಾಯರು. ಅವರ ಸಾಹಸ ಹಾಗೂ ಧೈರ್ಯ ಮೆಚ್ಚುವಂಥದ್ದು. ಸೇವೆ ಎಂದೇ ಭಾವಿಸಿದ್ದರು. ಆದರೆ, ಈಗಿನ ಪತ್ರಿಕೋದ್ಯಮದಲ್ಲಿ ಹೊಟ್ಟೆಪಾಡು ದೊಡ್ಡದಾಗಿದೆ’ ಎಂದರು.’ಶಿಸ್ತಿನ ಜೀವನ ನಡೆಸಿದರು. ಯಾರ ವಿರೋಧ ಕಟ್ಟಿಕೊಂಡವರಲ್ಲ. ಕೋಲಾರ ಪತ್ರಿಕೆಯ ನಿರಂತರತೆ ಅದ್ಭುತ. ಒಂದೂ ದಿನ ನಿಲ್ಲಲಿಲ್ಲ. ಸಾಹಿತ್ಯಕವಾಗಿ ಹಾಗೂ ಸಾಮಾಜಿಕವಾಗಿ ವೇದಿಕೆ ಸೃಷ್ಟಿ ಮಾಡಿ ಸಾಹಿತಿಗಳನ್ನು ಕೋಲಾರ ಪತ್ರಿಕೆ ಬೆಳೆಸಿದೆ’ ಎಂದು ಹೇಳಿದರು.ಕೋಲಾರ ಪತ್ರಿಕೋದ್ಯಮಕ್ಕೆ ಹಾದಿ ತೋರಿದವರು ಪ್ರಹ್ಲಾದ ರಾವ್, ಪತ್ರಿಕೋದ್ಯಮದಲ್ಲಿ ಚಾಪು ಮೂಡಿಸಿದರು. ಆ ಪತ್ರಿಕೆ ಆತ್ಮ, ಉಸಿರು ಆಗಿತ್ತು. ಆ ಪತ್ರಿಕೆ…
ನ್ಯೂಜ್ ಡೆಸ್ಕ್: ತೆಲಂಗಾಣದಲ್ಲಿ ಚುನಾವಣಾ ಸಮಯ ಶುರುವಾಗುತ್ತಿದೆ ಇನ್ನೆರಡು ಮೂರು ತಿಂಗಳಲ್ಲಿ ತೆಲಂಗಾಣದಲ್ಲಿ ಚುನಾವಣೆ ನಡೆಯಲಿದೆ,ಅಲ್ಲಿನ ರಾಜಕೀಯದಲ್ಲಿ ಆಡಳಿತಾರೂಡ ಭಾರತ ರಾಷ್ಟ್ರೀಯ ಪಕ್ಷ(ಬಿ.ಅರ್.ಎಸ್) ಪಕ್ಷ ಪ್ರಭಾವಿಯಾಗಿದೆ ಮೂರನೇ ಬಾರಿ ಗೆದ್ದು ಹ್ಯಾಟ್ರಿಕ್ ಸಾಧಿಸಿಸಲು ತನ್ನದೆ ರಣತಂತ್ರ ರೂಪಿಸುತ್ತಿದೆ.ಇದನ್ನು ಎದುರಿಸಲು ಕಾಂಗ್ರೆಸ್ ಹಾಗು ಬಿಜೆಪಿ ಪೈಪೋಟಿಗೆ ಬಿದ್ದಿವೆ.ಬಿ.ಅರ್.ಎಸ್ ಪಕ್ಷದ ರಾಜಕೀಯ ರಣತಂತ್ರ ಭೇದಿಸಲು, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣರಾದ ರಾಜಕೀಯ ತಂತ್ರಗಾರ ಸುನಿಲ್ ಕನಗೊಲ್ ಅವರೆ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದ ಪೊಲಿಟಿಕಲ್ ಸ್ಟಾಟಜಿ ಮಾಡುತ್ತಿದ್ದು, ಕರ್ನಾಟಕ ಕಾಂಗ್ರೆಸ್ ಗೆಲುವಿನ ಉಚಿತ ಯೋಜನೆಗಳ ಪಟ್ಟಿಯನ್ನು ತೆಲಂಗಾಣದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನ ಮಾಡಿದ ಸಭೆಯಲ್ಲಿ ಉಚಿತ ಗ್ಯಾರಂಟಿ ಘೋಷಣೆಗಳನ್ನು ಘೋಷಿಸಿದೆ ಇದರ ಪರಿಣಾಮ ಇತ್ತಿಚಿಗೆ ಇತರೆ ಪಕ್ಷಗಳ ಮುಖಂಡರು ಪ್ರಮುಖ ಕಾರ್ಯಕರ್ತರು ತೆಲಂಗಾಣ ಕಾಂಗ್ರೆಸ್ ನತ್ತ ವಲಸೆ ಆರಂಭಿಸಿದ್ದಾರೆ,ಜಂಪಿಂಗ್ ಸ್ಟಾರ್ ಗಳು ಕ್ಯೂ ಕಟ್ಟಿ ನಿಂತಿದ್ದಾರೆ ಈ ಬಲದಿಂದಲೇ ಚುನಾವಣೆ ಎದುರಿಸಿ ಗೆಲ್ಲಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದ್ದು ತೆಲಂಗಾಣದಲ್ಲಿ ಕಾಂಗ್ರೆಸ್…