ಚಿಂತಾಮಣಿ: ಪ್ರಪಂಚದಾದ್ಯಂತ ರೋಟರಿ ಸಂಸ್ಥೆ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ ಎಂದು ರೋಟರಿ ಸಂಸ್ಥೆ ಬೆಂಗಳೂರು ಉತ್ತರ ಭಾಗದ ಸದಸ್ಯತ್ವ ಯೋಜನಾ ಮುಖ್ಯಸ್ಥರಾದ ತಿರುಮುರುಗಮನ್ ಹೇಳಿದರು.
ಅವರು ಚಿಂತಾಮಣಿ ನಗರದಲ್ಲಿ ರೋಟರಿ ಸಂಸ್ಥೆ ಸ್ಥಾಪನೆ ಮಾಡುವ ಸಲುವಾಗಿ ರಿವಾರ್ಡ್ ಸಂಸ್ಥೆ ಕಚೇರಿಯಲ್ಲಿ ಆಸಕ್ತರಿಂದ ಸಂವಾದ ನಡೆಸಿ ಮಾತನಾಡಿದರು.
ಸಮಾಜದ ವಿವಿಧ ಹುದ್ದೆಗಳಲ್ಲಿರುವ ಮುಖ್ಯಸ್ಥರು ಕೂಡಿ ರೋಟರಿ ಸಂಸ್ಥೆಯನ್ನು ಸೇವಾಭಾವನೆಯಿಂದ ಸ್ಥಾಪಿಸಿದ್ದು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ.ಪ್ರಪಂಚದಾದ್ಯಂತ 36911 ರೋಟರಿ ಕ್ಲಬ್ ಗಳು ಸ್ಥಾಪನೆಯಾಗಿವೆ, ಪ್ರಮುಖವಾಗಿ ಆರೋಗ್ಯಸೇವಾ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿರುವ ರೋಟರಿ ಸಂಸ್ಥೆ ಹೊಸ ಮುನ್ನಡಿ ಬರೆದ ಹೆಮ್ಮೆ ಇದೆ ಪೊಲಿಯೋಗೆ ಮೊಟ್ಟಮೊದಲಬಾರಿಗೆ ಔಷದ ಕಂಡು ಹಿಡಿದು ಪ್ರಪಂಚ ಆರೋಗ್ಯ ಸಂಸ್ಥೆಗೆ ಹಕ್ಕುಸ್ವಾಮ್ಯ ಪಡೆಯದೆ ಫಾರ್ಮುಲಾವನ್ನು ಉಚಿತವಾಗಿ ನೀಡಿದಷ್ಟೆ ಅಲ್ಲದೆ ಅದರ ಡ್ರಾಪ್ಸ್ ತಯಾರಿಕೆಗೆ ಅರ್ಥಿಕ ಸಂಪನ್ಮೂಲ ಒದಗಿಸಿದೆ ಕೀರ್ತಿ ರೋಟರಿ ಸಂಸ್ಥೆಗೆ ಸಲ್ಲುತ್ತದೆ, ಪ್ರಪಂಚದಾದ್ಯಂತ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೋಡುವ ದೃಷ್ಟಿಯಿಂದ ರೋಟರಿ ಸಂಸ್ಥೆ ತಾಲೂಕು ಮಟ್ಟದಲ್ಲೆ ಅಲ್ಲ ಹೋಬಳಿ ಮಟ್ಟದಲ್ಲೂ ಸ್ಥಾಪನೆಯಾಗಬೇಕಿದೆ ಇಂತಹ ಸಂಸ್ಥೆಯಲ್ಲಿ ಸದಸ್ಯತ್ವವನ್ನು ಪಡೆದು ಸಮಾಜ ಸೇವೆ ಮಾಡಲು ಮುಂದಾಗುವಂತೆ ಸಲಹೆ ಇತ್ತರು. ಸಂವಾದ ಸಭೆಯಲ್ಲಿ ಕೆ.ಎಂ.ಎಫ್ ನಿರ್ದೇಶಕ ವೈ.ಬಿ .ಅಶ್ವಥ್ ನಾರಾಯಣ ಬಾಬು, ಸರ್ಕಾರೇತರ ಸಂಸ್ಥೆ ಮುಖ್ಯಸ್ಥರಾದ ಎಸ್.ಎ ಪಾರ್ಥ,ರಿವಾರ್ಡ್ಸ ಸಂಸ್ಥೆ ಹರಿ ಪ್ರಸಾದ್, ಆರ್.ವೆಂಕಟರಾಮರೆಡ್ಡಿ, ಕೈವಾರ ಶ್ರೀನಿವಾಸ, ಪ್ರೊಫೇಷನಲ್ ಕೊರಿಯರ್ ಶ್ರೀನಿವಾಸಮೂರ್ತಿ,ಪತ್ರಕರ್ತ ಎನ್.ಆರ್. ಚಂದ್ರಮೋಹನ್, ಶಂಕರ್, ಜಾನಪದ ಕಲಾವಿದ ಮುನಿರೆಡ್ಡಿ, ಸಾಫ್ಟವೇರ್ ಸಂಸ್ಥೆ ನಳಿನಿ ಇನ್ನು ಹಲವರು ಭಾಗವಹಿಸಿದ್ದರು.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Monday, September 16