Author: Srinivas_Murthy

ನ್ಯೂಜ್ ಡೆಸ್ಕ್:ಆಂಧ್ರಪ್ರದೇಶದಲ್ಲಿ ಈಗ ಚುನಾವಣೆ ಹತ್ತಿರ ಬರುತ್ತಿದೆ ಹಾಗಾಗಿ ಅಲ್ಲಿನ ರಾಜಕೀಯದಲ್ಲಿ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿದ್ದು ಟಿಡಿಪಿ ಯುವ ಮುಖಂಡ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಮತ್ತು ಪ್ರಮುಖ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್(P.K) ಹೈದರಾಬಾದ್‌ನಿಂದ ಒಂದೇ ವಿಮಾನದಲ್ಲಿ ವಿಜಯವಾಡಕ್ಕೆ ಬಂದು ಇಬ್ಬರೂ ಒಂದೇ ವಾಹನದಲ್ಲಿ ಉಂಡವಳ್ಳಿಯಲ್ಲಿರುವ ಚಂದ್ರಬಾಬು ನಿವಾಸಕ್ಕೆ ತೆರಳಿ ಚಂದ್ರಬಾಬು ಅವರನ್ನು ಭೇಟಿ ಮಾಡಿದ್ದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.ವೈನಾಟ್ 175 ಅನ್ನುವ ಸ್ಲೋಗನ್ ಗುರಿಯಾಗಿಸಿಕೊಂಡು ಆಡಳಿತಾರೂಢ ಜಗನಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಪ್ರಮುಖ ವಿರೋಧ ಪಕ್ಷವಾಗಿರುವ ತೆಲಗುದೆಶಂ ಪಾರ್ಟಿ ಈಗಾಗಲೇ ಕಾರ್ಯತಂತ್ರ ರೂಪಿಸುತ್ತಿದೆ. ಜೊತೆಗೆ ಜನಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಅಂತಿಮ ಹೋರಾಟಕ್ಕೆ ಮುಂದಾಗಿದೆ.ಪ್ರಶಾಂತ್ ಕಿಶೋರ್ ತಮ್ಮ ಪಕ್ಷಕ್ಕೆ ರಣತಂತ್ರ ರೂಪಿಸದಿದ್ದರೂ ರಾಜಕೀಯ ಸಲಹೆಗಾರರಾಗಲಿ ಎಂದು ಟಿಡಿಪಿ ಬಯಸಿತ್ತು.ಈ ಕ್ರಮದಲ್ಲಿ ಚಂದ್ರಬಾಬು ಜತೆ ಭೇಟಿಗೆ ಒಮ್ಮೆ ಬರುವಂತೆ ಆಹ್ವಾನ ನೀಡಲಾಗಿದ್ದ ಹಿನ್ನಲೆಯಲ್ಲಿ ಪ್ರಶಾಂತ್ ಕಿಶೋರ್ ಚಂದ್ರಬಾಬು ನಿವಾಸಕ್ಕೆ ಆಗಮಿಸಿ ಚಂದ್ರಬಾಬು ಜತೆ ಸುಮಾರು…

Read More

ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕಿನಾದ್ಯಂತ ಇಂದು ವೈಕುಂಠ ಏಕಾದಶಿ ಸಂಭ್ರಮ,ಸಡಗರ ಭಕ್ತಿ ಭಾವನೆ ಮನೆ ಮಾಡಿತ್ತು ತಾಲೂಕಿನಲ್ಲಿರುವ ಬಹುತೇಕ ವೈಷ್ಣವ ದೇವಾಲಯಗಳಲ್ಲಿ ವಿಶೇಷ ಪೂಜೆ ಅಭಿಷೇಕಗಳು ಕೆಲವೊಂದಡೆ ಹೋಮ ಹವನ ನಡೆಯಿತು. ಭಕ್ತಾದಿಗಳು ಮುಂಜಾನೆಯಿಂದಲೆ ಸರದಿ ಸಾಲಿನಲ್ಲಿ ನಿಂತು ದೇವರ ಕೃಪೆಗೆ ಪಾತ್ರರಾದರು.ಧರ್ನುಮಾಸದ ಶುಕ್ಲಪಕ್ಷದಲ್ಲಿ ಬರುವ ಈ ವೈಕುಂಠ ಏಕಾದಶಿ ವಿಷ್ಣು ದೇವರಿಗೆ ಅತ್ಯಂತ ಪ್ರಿಯವಾದ ದಿನವಾಗಿದ್ದು.ವೈಕುಂಠ ಏಕಾದಶಿಯಂದು ದೇವತೆಗಳು ಭೂಲೋಕಕ್ಕೆ ಬಂದು ಬ್ರಹ್ಮಾಂಡ ನಾಯಕ ವಿಷ್ಣುವನ್ನು ಪೂಜಿಸುತ್ತಾರೆ ಎಂದು ಪುರಾಣಗಳಲ್ಲಿ ಬಿಂಬಿತವಾದಂತೆ ವೈಕುಂಠ ಏಕಾದಶಿ ದಿನದಂದು ವೈಷ್ಣವ ದೇವಾಲಯಗಳಲ್ಲಿ ಉತ್ತರ ದ್ವಾರದ ಮೂಲಕ ಭಗವಾನ್ ವಿಷ್ಣುವಿನ ದರ್ಶನ ಮಾಡಿದರೆ ಪುಣ್ಯ ಪ್ರಾಪ್ತಿ ಲಭ್ಯವಾಗಲಿದೆ ಎಂಬ ನಂಬಿಕೆಯಲ್ಲಿ ಭಕ್ತರು ಮುಂಜಾನೆಯಿಂದಲೇ ಸರದಿ ಸಾಲಿನಲ್ಲಿ ನಿಂತು ವೈಷ್ಣವ ದೇವಾಲಯಗಳಲ್ಲಿ ದೇವರ ದರ್ಶನ ಪಡೆದು ಪುನೀತರಾದರು.ತಾಲೂಕಿನ ವೈಷ್ಣವ ದೇವಾಲಯಗಳಾದ ಗನಿಬಂಡೆ ಶ್ರೀನಿವಾಸ ದೇವರು,ತಾಡಿಗೋಳ್ ಶ್ರೀ ಲಕ್ಷ್ಮೀನರಸಿಂಹ ದ್ವಾರಸಂದ್ರ ಶ್ರೀ ನಾರಸಿಂಹ ದೇವರ ಗುಡಿ,ವಲ್ಲಬಾಯ್ ರಸ್ತೆಯ ಶ್ರೀ ಕೋದಂಡರಾಮದೇವಾಲಯ,ಯಲ್ದೂರು ಪುರಾಣ ಪ್ರಸಿದ್ಧ ಶ್ರೀ ಕೋದಂಡರಾಮರ ದೇವಸ್ಥಾನ, ಸರೋಜಿನಿರಸ್ತೆಯ ಶ್ರೀ…

Read More

ಪ್ಲಾಸ್ಟಿಕ್ ಮುಟ್ಟುಗೋಲು ಹಾಕಲು ಬಂದ ಪುರಸಭೆ ಸಿಬ್ಬಂದಿ ಉತ್ಪಾದನೆ ಹಂತದಲ್ಲಿಯೇ ತಡೆಯಿರಿ ಮೊಂಡುವಾದ ಜಗಳಕ್ಕೆ ನಿಂತ ಅವರೆಕಾಯಿ ಚಿಲ್ಲರೆ ವ್ಯಾಪಾರಸ್ಥರು ಶ್ರೀನಿವಾಸಪುರ:ಅವರೆಕಾಯಿ ಚಿಲ್ಲರೆ ವ್ಯಾಪಾರಸ್ಥರು ಬಳಸುತ್ತಿದ್ದ ಪ್ಲಾಸ್ಟಿಕ್ ಕವರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಬಂದ ಪುರಸಭೆ ಸಿಬ್ಬಂದಿ ವಿರುದ್ದ ವ್ಯಾಪಾರಸ್ಥರು ಜಗಳ ಕಾದ ಪ್ರಸಂಗ ನಡೆಯಿತು.ಶ್ರೀನಿವಾಸಪುರ ಪಟ್ಟಣದ ಎಂ.ಜಿ.ರಸ್ತೆಯಲ್ಲಿ ಅವರೆಕಾಯಿ ಚಿಲ್ಲರೆ ವ್ಯಾಪಾರಸ್ಥರು ಯಥೇಚ್ಚವಾಗಿ ಪ್ಲಾಸ್ಟಿಕ್ ಕವರಗಳನ್ನು ಬಳಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪುರಸಭೆ ಅಧಿಕಾರಿಗಳು ಇಂದು ವ್ಯಾಪಾರಸ್ಥರಿಂದ ಕವರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಬಂದಾಗ ವ್ಯಾಪರಸ್ಥರು ವಿರೋಧ ವ್ಯಕ್ತಪಡಿಸಿ ಪುರಸಭೆ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ನಿಂತು ಪ್ಲಾಸ್ಟಿಕ್ ಕವರಗಳನ್ನು ಉತ್ಪಾದನೆ ಹಂತದಲ್ಲೆ ತಡೆಯಿರಿ ಎಂದು ವಾದಮಂಡಿಸಿದರು ಇದಕ್ಕೆ ಸಿಬ್ಬಂದಿ ಬಾಲಕೃಷ್ಣ ಉತ್ತರಿಸಿ ಸುಪ್ರೀಂಕೋರ್ಟ್‌ ಆದೇಶ ಹಿನ್ನೆಲೆಯಲ್ಲಿ ಪ್ಲ್ಯಾಸ್ಟಿಕ್‌ ಕ್ಯಾರಿಬ್ಯಾಗ್‌, ಕಪ್‌, ಲೋಟಾ, ಪ್ಲೇಟ್‌ಗಳ ಬಳಕೆಯನ್ನು ತಡೆಯುವಂತೆ ರಾಜ್ಯ ಪೌರಾಡಳಿತ ನಿರ್ದೇಶನಾಲಯ ಸೂಚನೆ ನೀಡಿದೆ. ಪ್ಲ್ಯಾಸ್ಟಿಕ್‌ ಬಳಕೆಯಿಂದ ತ್ಯಾಜ್ಯದ ಪ್ರಮಾಣ ಹೆಚ್ಚಿ ಪರಿಸರದ ಮೇಲೆ ಪ್ರತಿಕೂಲ ಪರಿಣಾಮಬೀರುತ್ತದೆ. ಈ ಹಿಂದೆಯೇ ಪುರಸಭೆ ವತಿಯಿಂದ ಪ್ಲ್ಯಾಸ್ಟಿಕ್‌ ನಿಷೇಧ…

Read More

ನ್ಯೂಜ್ ಡೆಸ್ಕ್:ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅನಾಥ ಹೆಣ್ಣುಮಕ್ಕಳಿಬ್ಬರಿಗೆ ಮದುವೆ ಮಾಡಿಸಿ ಅಪರೂಪದ ಕೆಲಸ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.ಉಡುಪಿಯಲ್ಲಿ 1976 ರಲ್ಲಿ ಆರಂಭವಾಗಿದ್ದ ಸರ್ಕಾರಿ ಮಹಿಳಾ ನಿಲಯದಲ್ಲಿ ಬೆಳೆದಂತ ಅನಾಥ ಹೆಣ್ಣುಮಕ್ಕಳಿಬ್ಬರಿಗೆ ಮದುವೆ ಮಾಡಿಸಿದ ಜಿಲ್ಲಾಧಿಕಾರಿಯವರ ಸಾಮಾಜಿಕ ಕಳಕಳಿಗೆ ಸಾರ್ವಜನಿಕವಾಗಿ ಸರ್ವತ ಮೆಚ್ಚುಗೆ ವ್ಯಕ್ತವಾಗಿದೆ.ಹೆತ್ತವರು ಯಾರು ಎಂಬುದನ್ನು ಅರಿಯದ ತುಮಕೂರು ಮೂಲದ ಶೀಲಾ (32) 2019 ರಲ್ಲಿ ಹಾಗು ಭದ್ರಾವತಿ ಮೂಲದ ಕುಮಾರಿ (21) 2020 ರಲ್ಲಿ ಇಬ್ಬರು ನಿಟ್ಟೂರಿನ ರಾಜ್ಯ ಸರಕಾರಿ ಮಹಿಳಾ ನಿಲಯಕ್ಕೆ ಬಂದು ಆಶ್ರಯ ಪಡೆದಿದ್ದರು.ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬೇಳಂಜೆ ದೇವಸ್ಥಾನದ ಅರ್ಚಕ ಸತ್ಯನಾರಾಯಣ ಶ್ರೀಧರ ಭಟ್ ಎಂಬವರು ಕುಮಾರಿ ಅವರನ್ನು ಮದುವೆಯಾಗಿ ಮನೆ ತುಂಬಿಸಿಕೊಂಡರೆ,ಶಿಲಾ ಅವರನ್ನು ಮೊಳಹಳ್ಳಿಯ ಕೃಷಿಕ ಗಣೇಶ ಶಾಸ್ತ್ರಿ ಅವರು ಮದುವೆ ಮಾಡಿಕೊಂಡು ಹೊಸ ಬಾಳಿಗೆ ಜೊತೆಯಾಗಿದ್ದಾರೆ.ಅನಾಥಾಶ್ರಮದ ಹೆಣ್ಣುಮಕ್ಕಳನ್ನು ಮದುವೆಯಾಗುವ ಮೂಲಕ ಹೆಣ್ಣು ಸಿಕ್ಕಿಲ್ಲವೆಂದು ಮಾನಸಿಕ ಖಿನ್ನತೆಗೆ ಒಳಗಾಗುವ ಯುವಕರಿಗೆ ಈ ಮದುವೆ ಉತ್ತಮ ಸಂದೇಶ ಸಿಗಲಿದೆ ಯುವಕರ ಮದುವೆ…

Read More

ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೋನಾ ಟೆಸ್ಟಿಂಗ್ ಕೇಂದ್ರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಮಹತ್ವದ ಸಭೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿನ ಸ್ಥಿತಿಗತಿ ಸಿದ್ಧತೆಗಳ ಅವಲೋಕನ. ನ್ಯೂಜ್ ಡೆಸ್ಕ್:ಜನರಿಂದ ದೂರವಾಗಿದ್ದ ಕೊರೋನಾ ಮತ್ತೆ ವಕ್ಕರಿಸಿದ್ದು ಈಗ ತನ್ನ ಆರ್ಭಟ ಶುರು ಮಾಡಿಕೊಂಡಿದೆ.ರಾಜ್ಯದಲ್ಲಿ 20 ಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಮೂರು ಮಂದಿ ಮೃತಪಟ್ಟಿದ್ದಾರೆ.ರಾಜ್ಯದಲ್ಲಿ 22 ಕ್ಕೂ ಹೆಚ್ಚು ಮಂದಿಗೆ ಕೊರೋನಾ ಪಾಸಿಟಿವ್ ಇರುವ ಬಗ್ಗೆ ವರದಿಯಾಗಿದೆ, ಕೊರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.ಈ ಪೈಕಿ 72 ಮಂದಿ ಹೋಮ್‌ ಐಸೋಲೇಷನ್‌ನಲ್ಲಿ ಇರಲು ಸೂಚಿಸಲಾಗಿದ್ದು 20 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಐಸಿಯುನಲ್ಲಿ 7 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಕೇರಳದಲ್ಲಿ ಕೋವಿಡ್-19 ಜೆಎನ್-1 ರೂಪಾಂತರಿ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೈಗೊಳ್ಳಬೇಕಾದ ಅಗತ್ಯ ಮುಂಜಾಗ್ರತೆ ಹಾಗೂ ಪೂರ್ವಭಾವಿ ಕ್ರಮಗಳ ಕುರಿತು ರಾಜ್ಯ ಆರೋಗ್ಯ ಇಲಾಖೆ ಅಗ್ಗಿಂದ್ದಾಗೆ ಮಾರ್ಗಸೂಚಿಗಳನ್ನು ಪ್ರಕಟಿಸುತ್ತಿದೆ.ಕೇರಳ ಆಂಧ್ರ ಹಾಗೂ ತಮಿಳುನಾಡು ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಭಾಗದ ಜಿಲ್ಲೆಗಳಲ್ಲಿ ಅಗತ್ಯ ಸಂಖ್ಯೆಯ…

Read More

ಕೊರೋನಾ ಹೊಸ ರೂಪಾಂತರಿ JN.1 ಶೀತ, ಜ್ವರ ಕೆಮ್ಮು ಇದ್ದವರು ಕೊರೊನಾ ಪರೀಕ್ಷೆ ಕೇರಳದಲ್ಲಿ ಅತಿ ಹೆಚ್ಚು ಸಕ್ರಿಯಾ ನ್ಯೂಜ್ ಡೆಸ್ಕ್:ಭಾರತದಲ್ಲಿ ಕೋವಿಡ್ 19 ಸಕ್ರಿಯವಾಗಿದ್ದು, ನೂತನ ರೂಪಾಂತರಿ JN.1 ವೈರಸ್‌ನಿಂದ ಕೇರಳದಲ್ಲಿ ಒಬ್ಬರು ಮೃತಪಟ್ಟು ಕೊರೋನಾ ಸೋಂಕು ಹರಡುತ್ತಿದ್ದು, ರಾಜ್ಯದ ಜನರಲ್ಲೂ ಆತಂಕ ಸೃಷ್ಟಿಸಿದೆ. ಕೆರಳದಲ್ಲಿ ಕೊರೋನಾ ದಿಂದ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದ ದೃಢಪಡಿಸಿದೆ.ಇದರಿಂದ ದೇಶದ ಜನರು ಆತಂಕಗೊಂಡಿದ್ದಾರೆ. ಕರ್ನಾಟಕದಲ್ಲಿ ಕೊರೋನಾ ಪ್ರಕರಣಗಳು ಏರಿಕೆಯಾಗಿದೆ. ಕರ್ನಾಟಕದ ರಾಮನಗರ ಜಿಲ್ಲೆಯಲ್ಲಿ ಮೊದಲ ಕೊರೋನಾ ಕೇಸ್ ಪತ್ತೆಯಾಗಿದೆ.ಮಂಡ್ಯ ಜಿಲ್ಲೆಯ ಮದ್ದೂರಿನ ವೃದ್ಧರೊಬ್ಬರಿಗೆ ಕೋವಿಡ್ ಪಾಸಿಟಿವ್ ವರದಿಯಾದ ಬಳಿಕ ರಾಮನಗರ ಜಿಲ್ಲೆ ಬಿಡದಿ ಹೋಬಳಿ ಬೈರಮಂಗಲ ನಿವಾಸಿ 22 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನಿಗೆ ಸೋಂಕು ಲಕ್ಷಣಗಳು ಇರುವುದು ದೃಢಪಟ್ಟಿದೆ.ಇಂದು ನಡೆಸಲಾದ ರ್‍ಯಾಂಡಮ್ ಟೆಸ್ಟ್ ನಲ್ಲಿ ಅಮೃತ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗೆ ಕೊರೋನಾ ಸೋಂಕು ಬಂದಿರುವುದು ದೃಢವಾಗಿದೆ ಎಂದು ರಾಮನಗರ ಜಿಲ್ಲೆ ಆರೋಗ್ಯ ಇಲಾಖೆ ಅಧಿಕಾರಿ ಕಾಂತರಾಜು ತಿಳಿಸಿದ್ದಾರೆ.ಬೈರಮಂಗಲ ಗ್ರಾಮದಲ್ಲಿನ ಪ್ರಾಥಮಿಕ…

Read More

ನ್ಯೂಜ್ ಡೆಸ್ಕ್: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಸಮಯದಲ್ಲಿ ಪ್ರಧಾನಿ ಮೋದಿ ಅವರನ್ನ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿ ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದ್ದಾರೆ.ಬರ ಪರಿಹಾರಕ್ಕೆ ಸಂಬಂದಿಸಿದಂತೆ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಬರ ಪರಿಹಾರಕ್ಕೆ ಕೇಂದ್ರದಿಂದ ಒಂದು ಪೈಸೆಯೂ ಬಿಡುಗಡೆಯಾಗಿಲ್ಲ ಎಂದು ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು ಈಗ ಪ್ರಧಾನಿ ಭೇಟಿ ಮಾಡಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೊಂದಿಗೆ ನವದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ವಿವರಿಸಿ,ಶೀಘ್ರವೇ 18,177.44 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.ರಾಜ್ಯದಲ್ಲಿ 236 ರಲ್ಲಿ 223 ತಾಲ್ಲೂಕುಗಳಲ್ಲಿ ಬರ ಆವರಿಸಿದೆ,196 ತಾಲ್ಲೂಕುಗಳಲ್ಲಿ ಬರದ ತೀವ್ರತೆ ಜಾಸ್ತಿ ಇದೆ.ಜಾನುವಾರುಗಳ ಸಂರಕ್ಷಣೆಗಾಗಿ ಸಹಕಾರ…

Read More

ಬೆಂಗಳೂರು: ಕನ್ನಡದ ಖ್ಯಾತ ನಟ ಸಾಹಸಸಿಂಹ ವಿಷ್ಣುವರ್ಧನ್​ ಅವರ ಪುಣ್ಯಭೂಮಿ ಮತ್ತು ಸ್ಮಾರಕಕ್ಕೆ ಸಂಬಂಧಿಸಿದಂತೆ ವಿಷ್ಣುವರ್ಧನ್ ಅಭಿಮಾನಿಗಳು ಅನೇಕ ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಲೆ ಬಂದಿದ್ದಾರೆ ಆದರೂ ಸರ್ಕಾರ ಇತ್ತ ಗಮನ ಹರಿಸದೆ ನಿರ್ಲಕ್ಷ್ಯ ಧೋರಣೆ ತೊರುತ್ತಿದೆ ಇದನ್ನು ವಿರೋಧಿಸಿ ವಿಷ್ಣು ಅಭಿಮಾನಿಗಳು ಮತ್ತೆ ಗರಂ ಆಗಿದ್ದಾರೆ. ಡಾ. ವಿಷ್ಣುವರ್ಧನ್‌ ಅವರ ಸ್ಮಾರಕವನ್ನು ಮೈಸೂರಿಗೆ ಸ್ಥಳಾಂತರ ಮಾಡಿದ್ದು ಗೊತ್ತೇ ಇದೆ. ವಿಷ್ಣು ಅಂತ್ಯಸಂಸ್ಕಾರ ಆಗಿರುವ ಅಭಿಮಾನ್‌ ಸ್ಟುಡಿಯೋದ ಸ್ಥಳದಲ್ಲಿಯೇ ಪುಣ್ಯಭೂಮಿ ಇರಬೇಕು ಎಂದು ಅವರ ಅಭಿಮಾನಿಗಳು ಪಟ್ಟು ಹಿಡಿದು ಕುಳಿತಿದ್ದಾರೆ. ಅದರಂತೆ, ಪ್ರತಿ ವರ್ಷವೂ ‘ಸಾಹಸ ಸಿಂಹ’ ಅವರ ಹುಟ್ಟುಹಬ್ಬ ಹಾಗೂ ಪುಣ್ಯಸ್ಮರಣೆಯನ್ನು ಅಭಿಮಾನ್‌ ಸ್ಟುಡಿಯೋದ ಡಾ. ವಿಷ್ಣು ಪುಣ್ಯಭೂಮಿಯಲ್ಲಿಯೇ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.ಆದರೆ ಇತ್ತಿಚಿಗೆ ಅಭಿಮಾನ್‌ ಸ್ಟುಡಿಯೋದ ಮಾಲಿಕರು ವಿಷ್ಣುವರ್ಧನ್​ ಅವರ ಅಂತ್ಯ ಸಂಸ್ಕಾರ ನಡೆದ ಅಭಿಮಾನ್‌ ಸ್ಟುಡಿಯೋದ ಒಳಗೆ ಪ್ರವೇಶಿಸಲು ಅಭಿಮಾನಿಗಳಿಗೆ ನಿರ್ಬಂಧಗಳನ್ನು ಹೇರುತ್ತಿದ್ದಾರೆ ಸ್ಟುಡಿಯೋದ ಮಾಲೀಕರ ವರ್ತನೆಯಿಂದ ಕಂಗಾಲಾಗಿರುವ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ,ಪುಣ್ಯಭೂಮಿ ಜಾಗದಲ್ಲಿ ಅಭಿಮಾನ್‌…

Read More

ಶ್ರೀನಿವಾಸಪುರ:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಜಾರಿಗೊಳಿಸಿದ್ದು ಪ್ರತಿ ಗ್ರಾಮೀಣ ಪ್ರದೇಶದ ಜನರಿಗೂ ಕಾರ್ಯಕ್ರಮಗಳು ತಲುಪುತ್ತಿದೆ ಈ ನಿಟ್ಟಿನಲ್ಲಿ ಕಾರ್ಯಕ್ರಮಗಳು ಹಾಗು ಯೋಜನೆಗಳ ಕುರಿತಾಗಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನ ಆಯೋಜಿಸಲಾಗಿದೆ ಎಂದು ಸಂಸದ ಮುನಿಸ್ವಾಮಿ ಹೇಳಿದರು.ಅವರು ಶ್ರೀನಿವಾಸಪುರ ತಾಲ್ಲೂಕಿನ ಚಲ್ದಿಗಾನಹಳ್ಳಿ ಗ್ರಾಮದಲ್ಲಿ ವಿಕಸಿತ ಸಂಕಲ್ಪ ಯಾತ್ರೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಕೇಂದ್ರ ಸರ್ಕಾರ ನಾಗರಿಕರ ಅಭಿವೃದ್ಧಿಗೆ ನೂರಾರು ಯೋಜನೆಗಳನ್ನು ರೂಪಿಸಿದೆ ಈ ಯೋಜನೆಗಳ ಲಾಭವನ್ನು ಪಡೆದ ಫಲಾನುಭವಿಗಳು ದೇಶದ ಪ್ರತಿ ಮನೆಯಲ್ಲೂ ಇದ್ದಾರೆ. ಮೋದಿ ಸರ್ಕಾರದ ಯೋಜನೆಗಳು ದೇಶದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವುದೇ ನಮ್ಮ ಕೇಂದ್ರ ಸರಕಾರದ ಗುರಿಯಾಗಿದೆ ಎಂದರು.ಕೇಂದ್ರದ ಸರ್ಕಾರದ ಮುದ್ರಾಯೋಜನೆ, ಜನಧನ್ ಯೋಜನೆ, ಪಿ.ಎಂ ವಿಶ್ವಕರ್ಮ ಯೋಜನೆ, ಉಜ್ವಲ ಸ್ಕೀಂ ಸೇರಿದಂತೆ ವಿವಿಧ ಯೋಜನೆಗಳ ಮಾಹಿತಿಯನ್ನು ಎಲ್‌ಇಡಿ ಪರದೆಯ ವಾಹನಗಳ ಮೂಲಕ ಗ್ರಾಮ ಪಂಚಾಯಿತಿ ಹಾಗೂ ನಗರ ಪ್ರದೇಶದಲ್ಲಿ ಸಂಚರಿಸಿ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಸರ್ಕಾರದ…

Read More

ಶ್ರೀನಿವಾಸಪುರ:ಲೋಕಸಭೆಯಲ್ಲಿ ನಡೆದಿರುವ ಘಟನೆ ಭದ್ರತಾ ವೈಫಲ್ಯದಿಂದ ಆಗಿದೆ ಎಂದು ಒಪ್ಪಿಕೊಳ್ಳುತ್ತೇವೆ. ಇದು ಪ್ರಧಾನಿ ಮೋದಿ ಅವರ ಜನಪ್ರಿಯತೆ ಸಹಿಸಲಾರದೆ ನಡೆಸಿರುವ ಕೃತ್ಯವಾಗಿದೆ ಇತ್ತಿಚಿನ ವಿಧಾನಸಭೆ ಚುನಾವಣೆ ಫಲಿತಾಂಶ ಸಹಿಸಲು ಸಾಧ್ಯವಾಗದೆ ಬಿಜೆಪಿ ಮೇಲೆ ಗೂಬೆ ಕೂರಿಸುವ ಪಿತೂರಿ ಭಾಗವಾಗಿದೆ ಎಂದು ಸಂಸದ ಮುನಿಸ್ವಾಮಿ ಹೇಳಿದರು.ಶ್ರೀನಿವಾಸಪುರ ತಾಲ್ಲೂಕಿನ ಚಲ್ದಿಗಾನಹಳ್ಳಿಯಲ್ಲಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಲೋಕಸಭೆಯಲ್ಲಿ ನಡೆದ ಕೃತ್ಯಕ್ಕೆ ತನಿಖೆ ನಡೆಯುತ್ತಿದ್ದು, ಪ್ರತಾಪಸಿಂಹ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರನ್ನೂ ತನಿಖೆಗೆ ಒಳಪಡಿಸಲಾಗುತ್ತದೆ. ತಪ್ಪೆಸಗಿದ್ದರೆ ಪ್ರತಾಸಿಂಹ ಅವರಿಗೂ ಶಿಕ್ಷೆ ಆಗುತ್ತದೆ ಎನ್ನುವ ಮಾಹಿತಿ ಬಿಚ್ಚಿಟ್ಟರು.ಸಂಸತ್ತಿನ ಮೇಲೆ ಈ ಹಿಂದೆ ದಾಳಿ ನಡೆದ ದಿನದಂದೆ ಲೋಕಸಭೆ ಒಳಗೆ ಆಗುಂತಕರು ನುಗ್ಗಿರುವುದರ ಹಿಂದೆ ಉಗ್ರಗಾಮಿಗಳ,ನಕ್ಸಲ ಕೈವಾಡವಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಈ ಘಟನೆ ನಡೆದಾಗ ನಾನೂ ಪ್ರತ್ಯಕ್ಷದರ್ಶಿಯಾಗಿದ್ದೆ ಒಳಗೆ ನುಗ್ಗಿದವರನ್ನು ಹಿಡಿಯಲು ಸಂಸದ ನಳಿನ್‌ ಕುಮಾರ್‌ ಕಟೀಲ್‌,ಆಂಧ್ರದ ಸಂಸದ ಗೋರಂಟ್ಲ ಮಾಧವ್ ಹಾಗೂ ನಾನು ಸೇರಿದಂತೆ ಆಗುಂತಕರನ್ನು ಹಿಡಿದು ಬದ್ರತಾ ಸಿಬ್ಬಂದಿಗೆ ಒಪ್ಪಿಸಿದೆವು ಎಂದ ಅವರು ಲೋಕಸಭೆ ಭದ್ರತೆಯಲ್ಲಿ…

Read More