ಬೆಂಗಳೂರು:ಪತ್ರಕರ್ತರಿಗೆ ಕೋಡುತ್ತಿದ್ದ ರೈಲ್ವೆ ಪಾಸ್ ಯೋಜನೆ ಮತ್ತೆ ಪ್ರಾರಂಭಿಸುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಭೇಟಿಯಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮನವಿ ಮಾಡಿದ್ದಾರೆ.ಈ ಕುರಿತಂತೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆದಿರುವಂತ ಶಿವಾನಂದ ತಗಡೂರು, ಭಾರತ ಸರ್ಕಾರದ ರೈಲ್ವೆ ಮಂತ್ರಾಲಯದ ವತಿಯಿಂದ ಮಾನ್ಯತೆ ಪಡೆದ ಪತ್ರಕರ್ತರಿಗೆ ರೈಲ್ವೆ ಪಾಸ್ ನೀಡುವ ಯೋಜನೆ ಈ ಮೊದಲು ಜಾರಿಯಲ್ಲಿತ್ತು ಇದರಿಂದಾಗಿ ಶೇ.50ರಷ್ಟು ರಿಯಾಯಿತಿ ದರದಲ್ಲಿ ರೈಲು ಪ್ರಯಾಣ ಮಾಡುವ ಸೌಲಭ್ಯವನ್ನು ಪತ್ರಕರ್ತರಿಗೆ ಪಡೆದಿದ್ದರು ನಂತರದಲ್ಲಿ ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರ ರೈಲ್ವೆ ಪಾಸ್ ಸೌಲಭ್ಯವನ್ನು ರದ್ದು ಮಾಡಲಾಗಿದೆ. ಇದರಿಂದಾಗಿ ಕೇಂದ್ರ ಸರ್ಕಾರದಿಂದ ಪತ್ರಕರ್ತರಿಗೆ ಲಭ್ಯವಿದ್ದ ಯೋಜನೆಯು ಇಲ್ಲದಂತಾಗಿದೆ. ಆದುದರಿಂದ ತಾವುಗಳು ಈ ಬಗ್ಗೆ ಮರುಚಿಂತನೆ ನಡೆಸಿ ಮಾನ್ಯತೆ ಪಡೆದಿರುವ ಪತ್ರಕರ್ತರಿಗೆ ಈ ಮೊದಲು ಕೊಡುತ್ತಿದ್ದ ರೈಲ್ವೆ ಪಾಸ್ ಸೌಲಭ್ಯವನ್ನು ಕೂಡಲೇ ಆರಂಭಿಸುವಂತೆ ಮನವಿ ಮಾಡಿದ್ದಾರೆ.
Author: Srinivas_Murthy
ನ್ಯೂಜ್ ಡೆಸ್ಕ್:ಜಗತ್ತಿನ ದೇಶಗಳನ್ನು ನಡಗುಸಿತ್ತಿರುವ ಮಂಕಿಪಾಕ್ಸ್ ರೋಗ ಭಾರತವನ್ನು ಪ್ರವೇಶಿಸಿದೆ ಎನ್ನಲಾಗಿದ್ದು,ಶಂಕಿತ ಪ್ರಕರಣವನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುರುತಿಸಲಾಗಿದೆ.ವಿದೇಶದಿಂದ ದೆಹಲಿಗೆ ಬಂದಿದ್ದ ವ್ಯಕ್ತಿಯೊಬ್ಬರು ಮಂಗನ ಕಾಯಿಲೆಯ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸಿದೆ.ಸಂತ್ರಸ್ತೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.ಮಂಕಿಪಾಕ್ಸ್‌ಗೆ ಸಂಬಂಧಿಸಿದಂತೆ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ ನಂತರ ದೇಶದಲ್ಲಿ ಇದು ಮೊದಲ ಪ್ರಕರಣವಾಗಿದ್ದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ರೋಗಿಯನ್ನು ಗೊತ್ತುಪಡಿಸಿದ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ರೋಗಲಕ್ಷಣಗಳು ಸಾಮಾನ್ಯವಾಗಿ ದದ್ದರಗಳು, ಜ್ವರ ಮತ್ತು ಸ್ನಾಯು ನೋವುಗಳನ್ನು ಒಳಗೊಂಡಿರುತ್ತದೆ.
ನ್ಯೂಜ್ ಡೆಸ್ಕ್:ವಿಶ್ವವಿಖ್ಯಾತ ನಟ ದಿವಂಗತ ನಂದಮೂರಿ ಎನ್.ಟಿ.ರಾಮರಾವ್ NTR ಕುಟುಂಬದ ಮತ್ತೊಂದು ಕುಡಿ ಚಿತ್ರ ರಂಗಕ್ಕೆ ಅದ್ಧೂರಿಯಾಗಿಯೇ ಎಂಟ್ರಿ ಕೊಡುತ್ತಿದ್ದು ಟಾಲಿವುಡ್ ವಿಶೇಷವಾಗಿ ಎದರು ನೋಡುತ್ತಿದೆ ನಂದಮೂರಿ ಫ್ಯಾಮಿಲಿಯ ನಟಸಿಂಹ ನಂದಮೂರಿ ಬಾಲಕೃಷ್ಣ ಅವರ ಪುತ್ರ ನಂದಮೂರಿ ಮೊಕ್ಷಜ್ಞ ಟಾಲಿವುಡ್‌ಗೆ ಕಾಲಿಡುತ್ತಿದ್ದಾರೆ.ಅದ್ದೂರಿ ಎಂಟ್ರಿಪ್ರಖ್ಯಾತ ನಿರ್ಮಾಪಕ ಸುಧಾಕರ್ ಚೆರುಕುರಿ ಅವರ SLV ಸಿನಿಮಾಸ್ ಮತ್ತು ಲೆಜೆಂಡ್ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ‘ಸಿಂಬಾ’ ಸಿನಿಮಾ ಮೂಲಕ ಮೋಕ್ಷಜ್ಞ ಟಾಲಿವುಡ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ,”ಹನುಮಾನ್” ಸಿನಿಮಾ ಮೂಲಕ ಯಶಸ್ಸು ಪಡೆದ ನಿರ್ದೇಶಕ ಪ್ರಶಾಂತ್ ವರ್ಮಾ ನಂದಮೂರಿ ಮೋಕ್ಷಜ್ಞ ಅವರ ಚೊಚ್ಚಲ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತಿದ್ದು.ನಿರ್ದೇಶಕ ಪ್ರಶಾಂತ್ ವರ್ಮಾ ಹೇಳಿರುವಂತೆ ನಂದಮೂರಿ ಮೋಕ್ಷಜ್ಞ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುವ ಬಹು ದೊಡ್ಡ ಜವಾಬ್ದಾರಿ ನನ್ನ ಮೇಲಿದೆ.ನಂದಮೂರಿ ಬಾಲಕೃಷ್ಣ ಅವರು ನನ್ನ ಮತ್ತು ನನ್ನ ಕಥೆಯ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ಸದಾ ಚಿರಋಣಿ.ಸ್ಕ್ರಿಪ್ಟ್ ನಮ್ಮ ಇತಿಹಾಸದಿಂದ ಸ್ಫೂರ್ತಿ ಪಡೆದಿದೆ, ಚಿನ್ನದ ಗಣಿಯ ಕುರಿತ ಸಿನಿಮಾ ಇದು” ಎಂದಿದ್ದಾರೆ.…
ಶ್ರೀನಿವಾಸಪುರ:ನಕಾಸೆಯಲ್ಲಿನ ದಾರಿಯನ್ನು ಒತ್ತುವರಿಯಾದ ಪರಿಣಾಮ ಕೆಳಗಿನ ತೋಟಗಳಿಗೆ ಹೋಗಲು ದಾರಿಯಿಲ್ಲದ ಪರಿಸ್ಥಿತಿಯಲ್ಲಿ ಮಾವಿನ ತೋಟಗಳ ಮಾಲಿಕರು ಸುಮಾರು ವರ್ಷಗಳಿಂದ ಪರದಾಡುತ್ತಿದ್ದರು ಈ ಬಗ್ಗೆ ದಾರಿಕಾಣದೆ ಮಾವಿನ ತೋಟಗಳ ಮಾಲಿಕರು ತಾಲೂಕು ಆಫಿಸ್ ಅಲೆದಾಡಿ ಅಲವತ್ತು ಕೊಂಡಿದ್ದರು ಸ್ಪಂದನೆ ಇರಲಿಲ್ಲ ಸರ್ವೆ ಇಲಾಖೆ ನಕಾಸೆಯಲ್ಲಿ ದಾರಿ ದಾಖಲೆ ಇದ್ದರೂ ಸಹಾ ಅಕ್ಕ ಪಕ್ಕದ ಜಮೀನು ಮಾಲೀಕರು ಬಂಡಿ ದಾರಿಯನ್ನು ಒತ್ತುವರಿ ಮಾಡಿಕೊಂಡು ಓಬೇನಹಳ್ಳಿ ಹಾಗೂ ಹೆಬ್ಬಟ ಗ್ರಾಮದ ಮಾವಿನ ತೋಟಗಳ ರೈತರು ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಬಂಡಿದಾರಿಯನ್ನು ಒತ್ತುವರಿ ತೆರವುಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಕೋರಿದ್ದರು.ಈ ಹಿನ್ನಲೆಯಲ್ಲಿ ಸರ್ವೇ ಇಲಾಖೆ ಅಧಿಕಾರಿಗಳು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸರ್ವೇ ಮಾಡಿ ಓಬೇನಹಳ್ಳಿ ಗ್ರಾಮದಿಂದ ಗುಂಡಮನತ್ತ ಗ್ರಾಮದ ತನಕ ಮಾವಿನ ತೋಟಗಳಲ್ಲಿ ಬಂಡಿರಸ್ತೆ ಗುರಿತಿಸಿ ಒತ್ತುವರಿ ಮಾಡಿಕೊಂಡಿದ್ದವರ ಒಮ್ಮತ ಪಡೆದು ಯಾರಿಗೂ ತೊಂದರೆಯಾಗದಂತೆ ರಸ್ತೆ ನಿರ್ಮಾಣಕ್ಕೆ ಅನವು ಮಾಡಲಾಗಿದೆ. ರೈತ ರಮೇಶ್ ಮಾತನಾಡಿ ಇದೊಂದು ಐತಿಹಾಸಿಕ ನಿರ್ಣಯವಾಗಿದ್ದು ಅಂದಾಜು…
ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣ ಸೇರಿದಂತೆ ಹಳ್ಳಿಯ ಗಲ್ಲಿಗಳಲ್ಲಿ ಯುವಕರು ತಮ್ಮ ಬಡಾವಣೆಯ ರಸ್ತೆಗಳನ್ನು ಶುಚಿಗೊಳಿಸಿ ಚಪ್ಪರ ಹಾಕಿ ವೇದಿಕೆ ನಿರ್ಮಿಸಿ ಹೂವುಗಳಿಂದ ಅಲಂಕಾರಿಸಿ,ವಿದ್ಯುತ್ ದೀಪಾಲಂಕಾರ ಮಾಡಿ ವಿವಿಧ ನಮೂನೆಯ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಿ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದಲ್ಲದೆ ರುಚಿಕರವಾದ ಸಿಹಿತಿಂಡಿಗಳನ್ನು ತಯಾರಿಸಿ ಪ್ರಸಾದವಾಗಿ ವಿತರಿಸಿ ಯುವ ಸಮುದಾಯ ಸಂಭ್ರಮಿಸಿದ್ದಾರೆ. ಅಯೋಧ್ಯೆ ರಾಮಜನ್ಮಭೂಮಿ ಗಣೇಶಈ ಬಾರಿಯ ವಿಶೇಷ ಎಂದರೆ ಪಟ್ಟಣದ ರಂಗಾರಸ್ತೆ ವೃತ್ತದಲ್ಲಿ ಶ್ರೀ ರಾಮಜನ್ಮಭೂಮಿ ಗಣೇಶ ಪ್ರತಿಷ್ಠಾಪಿಸಿದ್ದು ಅಯೋಧ್ಯೆ ಶ್ರೀರಾಮ ಮಂದಿರದ ಮುಂಭಾಗದಲ್ಲಿ ವೀರಯಜಮಾನನಾಗಿ ಕುಳತಿದ್ದರೆ ಮಂದಿರದ ಮೇಲೆ ಬಿಲ್ಲುಧಾರಿಯಾಗಿ ಶ್ರೀರಾಮಚಂದ್ರನ ಮೂರ್ತಿ ಇದೆ.ಪ್ರತಿವರ್ಷ ವೈಶಿಷ್ಟಮಯವಾಗಿ ಗಣೇಶಮೂರ್ತಿಗಳನ್ನು ಸ್ಥಾಪಿಸಿ ಗಣೇಶೋತ್ಸವ ಆಚರಿಸುವ ರಾಮಕೃಷ್ಣರಸ್ತೆಯ ಶ್ರೀ ವಿನಾಯಕ ಬಳಗದವರು ಈ ಬಾರಿ ಈಶ್ವರನ ಅವತಾರದ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ ನಂದಿಯ ಮೇಲೆ ಕುಳಿತು ರುದ್ರದೇವನಂತೆ ವಿನಾಯಕ ಕಂಗೊಳಿಸುತ್ತಾನೆ.ಕೆ.ಇ.ಬಿ ಆವರಣದಲ್ಲಿರುವ ಗಣಪತಿ ದೇವಾಲಯದಲ್ಲಿ ನಂದಿ ಮೇಲೆ ಆಸನವಾಗಿರುವ ಶ್ವೇತ ವರ್ಣದ ಗಣೇಶಮೂರ್ತಿ ಪ್ರತಿಷ್ಠಾಪಿಸಿದ್ದಾರೆ.ಬಸ್ಟಾಂಡ್ ಬಳಿ ಮಹಾತ್ಮಾಗಾಂಧಿ ಆಟೋಸ್ಟಾಂಡ್ ನಲ್ಲಿ ಹಸಿರು ಬಣ್ಣದ ಗಣಪತಿಯನ್ನು ಸ್ಥಾಪಿಸಿದ್ದರೆ ಮುಳಬಾಗಿಲು…
ಶ್ರೀನಿವಾಸಪುರ:ಕಸಬಾ ಹೋಬಳಿ ದಳಸನೂರು ಗ್ರಾಮ ಪಂಚಾಯತಿ ಹೂವಳ್ಳಿ ಗ್ರಾಮದ ದಲಿತ ಮುಖಂಡಕೃಷ್ಣಪ್ಪ ಕುಟುಂಬದಿಂದ ನೂರಕ್ಕೂ ಹೆಚ್ಚು ಮಣ್ಣಿನ ಗಣೇಶನಮೂರ್ತಿಗಳನ್ನು ವಿತರಿಸಿದ್ದಾರೆ .ಹೂವಳ್ಳಿಕೃಷ್ಣಪ್ಪ ಅವರ ಮಗ ಬೆಂಗಳೂರಿನ ಉದ್ಯಮಿ ಅಂಬರೀಶ್ ಸಮಾಜ ಸೇವೆ ಹೆಸರಿನಲ್ಲಿ ಕಸಬಾ ಹೋಬಳಿ ಮತ್ತು ತಾಲ್ಲೂಕಿನ ಹಲವು ಗ್ರಾಮಗಳ ಗಣೇಶೋತ್ಸವ ಸಮಿತಿಗಳಿಗೆ ಗಣೇಶನಮೂರ್ತಿಗಳನ್ನು ವಿತರಣೆ ಮಾಡಿದ್ದಾರೆ ಇದು ತಾಲೂಕಿನ ರಾಜಕೀಯದಲ್ಲಿ ಒಂದಷ್ಟು ಸಂಚಲನ ಮೂಡಿಸಿದೆ.ಮುಖಂಡ ಕೃಷ್ಣಪ್ಪ ಮಾತನಾಡಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ವಿಘ್ನ ನೀವಾರಕ ವಿನಾಯಕನನ್ನು ಸಮಸ್ತ ಜನತೆ ಪೂಜಿಸುವ ಮೂಲಕ ನಾಡು ಸುಭಿಕ್ಷವಾಗಿರಲು ಗಣೇಶನ ಕೃಪೆ ಬೇಕು ಇದಕ್ಕಾಗಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಗಣೇಶ ಮೂರ್ತಿಗಳನ್ನು ವಿತರಿಸಿರುವುದಾಗಿ ಹೇಳಿದರು.ಶ್ರೀನಿವಾಸ ಕಲ್ಯಾಣೋತ್ಸವ ಆಯೋಜನೆಕೆಲ ತಿಂಗಳ ಹಿಂದೆ ಹೂವಳ್ಳಿಕೃಷ್ಣಪ್ಪ ತಮ್ಮ ಗ್ರಾಮಕ್ಕೆ ತಿರುಮಲದಿಂದ ಶ್ರೀವೆಂಕಟರಮಣಸ್ವಾಮಿ ವಿಗ್ರಹಗಳನ್ನು ತರಿಸಿ ಲೋಕಕಲ್ಯಾಣಾರ್ಥ ಶ್ರೀನಿವಾಸ ಕಲ್ಯಾಣೋತ್ಸವ ಆಯೋಜಿಸಿ ಜನ ಮೆಚ್ಚುಗೆ ಗಳಿಸಿದ್ದರು.ರಾಜಕೀಯ ರಂಗ ಪ್ರವೇಶಕ್ಕೆ ವೇದಿಕೆಸಮಾಜಸೇವಕ ಹೂವಳ್ಳಿಅಂಬರೀಶ್ ರಾಜಕೀಯ ರಂಗ ಪ್ರವೇಶಕ್ಕೆ ಎಲ್ಲಾ ವರ್ಗದ ಜನರನ್ನು ತಲುಪಲು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಮದುವೆ…
ನ್ಯೂಜ್ ಡೆಸ್ಕ್:ಛಲ ಇದ್ದರೆ ಮನುಷ್ಯ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಇಲ್ಲೊಬ್ಬ ರೈಲ್ವೆ ಹಮಾಲಿ(ಕೂಲಿ) IAS ಅಧಿಕಾರಿಯಾಗಿರುವುದೆ ಸಾಕ್ಷಿ.ರೈಲ್ವೆ ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕೇರಳದ ಕೂಲಿಯೊಬ್ಬ IAS ಪಾಸ್ ಆದ ಅತ್ಯಂತ ರೊಚಕ ಕಥೆ ಇದು ಇಲ್ಲ ಕೊಡಲಿಲ್ಲ ಸಿಗಲಿಲ್ಲ ಎನ್ನುವ ಯುವ ಸಮುಧಾಯಕ್ಕೆ ಇತನೆ ಪ್ರೇರಣೆ.ಶ್ರೀನಾಥ್ ಕೇರಳದ ಮುನ್ನಾರ್ ಜಿಲ್ಲೆಯ ನಿವಾಸಿ ಎರ್ನಾಕುಲಂ ರೈಲು ನಿಲ್ದಾಣದಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದ 2018 ರಲ್ಲಿ, ತನ್ನ ಗಳಿಕೆಯಿಂದ ಕುಟುಂಬದ ನಿರ್ವಹಣೆ ಸಾಧ್ಯವಾಗದ್ದನ್ನು ಅರಿತುಕೊಂಡು ತನ್ನ ಆರ್ಥಿಕ ಸ್ಥಿತಿ ಮತ್ತು ತನ್ನ ಕುಟುಂಬದ ಭವಿಷ್ಯತ್ತಿಗಾಗಿ ಎರಡು ಪಾಳಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತಾನೆ ಆದರೂ ದಿನಕ್ಕೆ 400 ರಿಂದ 500 ಮಾತ್ರ ಸಿಗುತಿತ್ತು ಇದು ಸಮಸ್ಯೆಯಾಗಿ ಕಾಡತೊಡಗಿದ್ದರಿಂದ ಶ್ರೀನಾಥ್ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಛಲದಿಂದ ಕೇರಳ ಸರ್ಕಾರದ ನೌಕರಿ ಹಿಡಿಯಬೇಕು ಎಂಬ ಹಠಕ್ಕೆ ಬಿದ್ದವನು ಕೋಚಿಂಗ್ ಮುಂದಾಗಿದ್ದಾನೆ ಅಲ್ಲಿ ಭಾರೀ ಬೋಧನಾ ಶುಲ್ಕವನ್ನು ಭರಿಸಲು ಬಯಪಟ್ಟಿದ್ದಾನೆ ಹಾಗೆ ಅಧ್ಯಯನ ಸಾಮಗ್ರಿಗಳನ್ನು ಕೊಳ್ಳಲು…
ಶ್ರೀನಿವಾಸಪುರ:ಪೋಲಿಸರೆಂದು ನಂಬಿಸಿ ವೃದ್ಧೆಯ ಮಾಂಗಲ್ಯ ಸರ ಅಪಹರಿಸಿರುವ ಘಟನೆ ಪಟ್ಟಣದ ಜನಬಿಡದಿ ವೃತ್ತ ಆಗಿರುವ ಪವನ್ ಆಸ್ಪತ್ರೆ ಬಳಿ ನಡೆದಿದೆ.ಕಲ್ಲೂರು ಗ್ರಾಮದ ವೃದ್ದೆ ವೆಂಕಟಲಕ್ಷ್ಮಮ್ಮ ಮನೆಗೆ ಸರಕು ಖರೀದಿಸಲು ಆಸ್ಪತ್ರೆ ವೃತ್ತದ ಬಳಿ ನಡೆದು ಹೋಗುತ್ತಿರುವಾಗ ಅಪರಿಚಿತರು ವೆಂಕಟಲಕ್ಷ್ಮಮ್ಮನನ್ನು ಪರಿಚಿತರಂತೆ ಮಾತನಾಡಿ ಕಳ್ಳತನಗಳು ಹೆಚ್ಚಾಗುತ್ತಿವೆ ಮಾಂಗಲ್ಯ ಸರ ತೆಗೆದು ಬ್ಯಾಗ್ ನಲ್ಲಿ ಇಟ್ಟು ಕೊಳ್ಳಿ ಎಂದು ವೃದ್ದೆ ಕತ್ತಿನಲ್ಲಿದ್ದ ಬಂಗಾರದ ಸರವನ್ನು ತೆಗಿಸಿ ಬ್ಯಾಗ್ ನಲ್ಲಿ ಇಡಿಸಲು ಸಹಾಯ ಮಾಡುವರಂತೆ ಮಾಡಿ ಸರವನ್ನು ಎಗರಿಸಿದ್ದಾರೆ, ಇದಾದ ನಂತರ ಬ್ಯಾಗಲ್ಲಿ ಬಂಗಾರದ ಸರ ಇರುವುದನ್ನು ಖಾತ್ರಿ ಪಡಿಸಿಕೊಳ್ಳಲು ವೃದ್ದೆ ಪರಿಚಯಸ್ಥರ ಅಂಗಡಿ ಬಳಿ ಹೋಗಿ ಬ್ಯಾಗ್ ತಗೆದು ನೋಡಿದಾಗ ಮಾಂಗಲ್ಯ ಸರ ಇಲ್ಲದನ್ನು ನೋಡಿ ಗಾಭರಿಯಾಗಿದ್ದಾರೆ ಕೂಡಲೆ ಪರಿಚಯಸ್ಥರ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶ್ರೀನಿವಾಸಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ವೃದ್ದೆ ಹೇಳುವಂತೆ ಪೊಲೀಸರೆಂದು ನಂಬಿಸಿ ಪರಿಚಯಸ್ಥರಂತೆ ನಟಿಸಿ ನಾನು ಧರಿಸಿದ್ದ 40ಗ್ರಾಂ ಮಾಂಗಲ್ಯ ಚೈನು…
ಶ್ರೀನಿವಾಸಪುರ:ಆಕಸ್ಮಿಕ ಬೆಂಕಿ ತಗುಲಿ ಟನ್ ಗಟ್ಟಲೆ ಹಳೆ ಪ್ಲಾಸ್ಟಿಕ್ ಇದ್ದ ಗುಜರಿ ಅಂಗಡಿ ಧಗಧಗನೇ ಹೊತ್ತಿ ಉರಿದ ಘಟನೆ ಶ್ರೀನಿವಾಸಪುರ ಪಟ್ಟಣದಲ್ಲಿ ಮಂಗಳವಾರ ತಡ ಸಂಜೆ ಸುಮಾರು 9 ಗಂಟೆ ರಾತ್ರಿಯಲ್ಲಿ ನಡೆದಿದೆ.ಶ್ರೀನಿವಾಸಪುರ ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಹಳೆ ಮಾವಿನಕಾಯಿ ಮಂಡಿ ಮುಂಬಾಗದಲ್ಲಿ ಜಾವೀದ್ ಪಾಷ ಎನ್ನುವರಿಗೆ ಸೇರಿದ ಹಳೆಯ ಪ್ಲಾಸ್ಟಿಕ್ ಗೋದಾಮು ಇದ್ದು ಅಲ್ಲೆ ನಾನಾ ರೀತಿಯ ಹಳೆಯ ಗುಜರಿ ಸಾಮಾನುಗಳನ್ನು ತಗೆದುಕೊಳ್ಳುತ್ತಿದ್ದ ಅಂಗಡಿ ಇತ್ತು ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ಇಡೀ ಅಂಗಡಿಗೆ ವ್ಯಾಪಿಸಿ ಗೋದಾಮು ಬೆಂಕಿಗೆ ಆಹುತಿಯಾಗಿದೆ. ಬೆಂಕಿ ಕೆನ್ನಾಲಿಗೆಗೆ ಗೋದಾಮಿನಲ್ಲಿದ್ದ ಲಕ್ಷಾಂತರ ಮೌಲ್ಯದ ಪ್ಲಾಸ್ಟಿಕ್ ರೀಸೈಕ್ಲಿಂಗ್ ಉಪಕರಣಗಳು ಮಿಷನರಿಗಳು ಸುಟ್ಟು ಭಸ್ಮವಾಗಿವೆ.ಅಗ್ನಿಶಾಮಕ ದಳದ ಹರ ಸಾಹಸಸ್ಥಳಕ್ಕೆ 3 ಅಗ್ನಿಶಾಮಕ ವಾಹನಗಳ 10 ಕ್ಕೂ ಹೆಚ್ಚು ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದು ವೀಪರಿತವಾದ ಗಾಳಿ ಇದ್ದ ಹಿನ್ನಲೆಯಲ್ಲಿ ಅಗ್ನಿ ಜ್ವಾಲೆ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಎರಡು ಗಂಟೆಗಳ ಕಾಲ…
ನ್ಯೂಜ್ ಡೆಸ್ಕ್:ಆಂಧ್ರದ ಚಿತ್ತೂರು ಜಿಲ್ಲೆಯ ವೆಂಕಟಗಿರಿ ಕೋಟ (ವಿ.ಕೋಟ) ಮಂಡಲ ಕೇಂದ್ರ ಮುಳಬಾಗಿಲು ನಗರಕ್ಕೆ ಇಪ್ಪತೈದು ಕೀ.ಮಿ ದೂರದ ಊರು ಮಂಡಲ ಕೇಂದ್ರದಲ್ಲಿ ನಡೆದ ಸಣ್ಣ ಜಗಳ ಬಿರುಗಾಳಿಯಾಗಿ ಮಾರ್ಪಟ್ಟಿದೆ. ಪರಿಸ್ಥಿತಿ ಉದ್ವಿಗ್ನಗೊಂಡಿದ್ದರಿಂದ ಪೊಲೀಸರು ವಿ.ಕೋಟ ಪಟ್ಟಣದಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದಾರೆ.ಅಂಗಡಿ, ವ್ಯಾಪಾರ ಕೇಂದ್ರಗಳು ಶಿಕ್ಷಣ ಸಂಸ್ಥೆಗಳು ಸೇರಿದಂತೆ ಸರ್ಕಾರಿ ಕಚೇರಿಗಳು ಮುಚ್ಚಲಾಗಿದೆ ಚಿತ್ತೂರು ಜಿಲ್ಲಾಧಿಕಾರಿ ಸುಮಿತ್ ಕುಮಾರ್ ಹಾಗೂ ಎಸ್ಪಿ ಮಣಿಕಂಠ ಚಂದೋಲು ವಿ.ಕೋಟದಲ್ಲಿ ವಾಸ್ತವ್ಯ ಹೂಡಿ ಕಾಲಕಾಲಕ್ಕೆ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.ಬಿಗುವಿನ ವಾತಾವರಣ ನಿರ್ಮಾಣವಾಗಿರುವ ವಿ.ಕೋಟೆ ಪಟ್ಟಣದಲ್ಲಿ ಶಾಂತಿ ಸಭೆಗಳನ್ನು ಕರೆದ ಜಿಲ್ಲಾಡಳಿತ ಎರಡು ಕಡೆಯವರಾನ್ನು ಸಮಾಧಾನ ಪಡೆಸುವಂತ ಕೆಲಸವನ್ನು ಮಾಡುತ್ತಿದೆ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲು ಅಧಿಕಾರಿಗಳು ಎರಡೂ ಕಡೆಯ ಜನರನ್ನು ಕರೆದು ಶಾಂತಿ ಸಭೆಗಳ ಮೂಲಕ ಮಾತುಕತೆ ನಡೆಸುತ್ತಿದ್ದಾರೆ. CREATOR: gd-jpeg v1.0 (using IJG JPEG v62), quality = 82 CREATOR: gd-jpeg v1.0 (using IJG JPEG v62), quality = 82 ಸೋಮವಾರ…