Author: Srinivas_Murthy

ನ್ಯೂಜ್ ಡೆಸ್ಕ್:ವೇಮಗಲ್ ವಿಧಾನಸಭಾ ಕ್ಷೇತ್ರ ಕೋಲಾರ ಜಿಲ್ಲೆಯಲ್ಲೆ ಪ್ರತಿಷ್ಟಿತ ಹಾಗು ಗತ್ತು ಗೈರತ್ತಿನ ಕ್ಷೇತ್ರ ಎಂದೆ ಖ್ಯಾತಿ ಪಡದಿತ್ತು ಅಲ್ಲಿನ ಶಾಸಕ ಭೈರೇಗೌಡರು C. Byre Gowda, ಆರು ಬಾರಿ ಚುನಾಯಿತರಾಗಿ ರಾಜ್ಯ ಕೃಷಿ ಸಚಿವರಾಗಿ ಕೋಲಾರ ಜಿಲ್ಲೆಯಲ್ಲಿ ತಮ್ಮದೆ ಛಾಪು ಮೂಡಿಸಿದ್ದರು.ಕೃಷಿ ಸಚಿವರಾಗಿ ಅವರ ಕಾರ್ಯವೈಖರಿ ರಾಜ್ಯಾದ್ಯಂತ ಪ್ರಖ್ಯಾತಿ ಪಡೆದಿದ್ದು ಭೈರೇಗೌಡರ ಹೆಸರಿಗೆ ವೇಮಗಲ್ ಜತೆಯಾಗಿತ್ತು. ಭೈರೇಗೌಡರ ನಂತರದಲ್ಲಿ ನಡೆದ ವಿದ್ಯಮಾನ್ಯಗಳಲ್ಲಿ ಕೋಲಾರ ಜಿಲ್ಲೆ ವಿಭಜನೆಯಾಗಿ ಚಿಕ್ಕಬಳ್ಳಾಪುರ ಜಿಲ್ಲೆ 2007 ಅಸ್ತಿತ್ವಕ್ಕೆ ಬಂದಿತು.1967 ರಿಂದ ಮೈಸೂರು ರಾಜ್ಯದಲ್ಲಿ ಜನ್ಮ ತಾಳಿದ ವೇಮಗಲ್ Vemagal ವಿಧಾನಸಭಾ ಕ್ಷೇತ್ರ 2008 ಹೊತ್ತಿಗೆ ಕ್ಷೇತ್ರ ಪುನರ್ ವಿಂಗಡನೆಯಲ್ಲಿ ವೇಮಗಲ್ ಕ್ಷೇತ್ರ ಅಸ್ತಿತ್ವವನ್ನೆ ಕಳೆದುಕೊಂಡಿತು.ವೇಮಗಲ್ ವಿಧಾನಸಭಾ ಕ್ಷೇತ್ರದಲ್ಲಿದ್ದ ಸುಗಟೂರು ಹೋಬಳಿ ಶ್ರೀನಿವಾಸಪುರ ಕ್ಷೇತ್ರಕ್ಕೆ ಸೇರ್ಪಡೆಯಾದರೆ ಕೈವಾರ ಹಾಗು ಚಿಂತಾಮಣಿ ಕಸಬಾ ಹೋಬಳಿಗಳು ಜಿಲ್ಲೆ ವಿಭಜನಿಯಿಂದಾಗಿ ಚಿಂತಾಮಣಿಗೆ ಸೇರ್ಪಡೆಯಾಯಿತು ಮುಂದೆ ವೇಮಗಲ್ ಸೇರಿದಂತೆ ನರಸಾಪುರ ಹೋಬಳಿಗಳು ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆಯಾಯಿತು.ವೇಮಗಲ್ ಊರಿನ ಬಗ್ಗೆ ವಿಶೇಷ ಕಾಳಜಿ…

Read More

ಶ್ರೀನಿವಾಸಪುರ:ಪಟ್ಟಣದ ವಿವಿಧ ರಸ್ತೆಗಳ ಬದಿ ತಿಂಡಿ ಅಂಗಡಿ ಹೋಟೆಲ್ ಗಳನ್ನು ಒಂದೇ ಸೂರಿನಡಿ ತಂದು ವ್ಯಾಪಾರಸ್ಥರಿಗೆ ಅನಕೂಲಮಾಡುವ ಉದ್ದೇಶದಿಂದ ಪುರಸಭೆ ಫುಡ್ ಕೋರ್ಟ್ ನಿರ್ಮಾಣ ಮಾಡಿದೆ ಎಂದು ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್ ಹೇಳಿದರು.ಪಟ್ಟಣದ ಸರ್ಕಾರಿ ಬಾಲಕೀಯರ ಕಾಲೇಜು ಮುಂಭಾಗದಲ್ಲಿ ಪುಡ್ ಕೋರ್ಟ್ ಲೋಕಾರ್ಪಣೆ ಮಾಡಿ ಮಾತನಾಡಿದರು.ಬೀದಿ ಬದಿ ವ್ಯಾಪಾರಸ್ಥರ ಪಟ್ಟಿಯನ್ನು Srinivasapura ಪುರಸಭೆ ಅಧಿಕಾರಿಗಳಿಂದ ಸಿದ್ದಪಡಿಸಲಾಗಿದ್ದು, ಲಾಟರಿ ಮೂಲಕ ಅಂಗಡಿಗಳನ್ನು ಹಂಚಿಕೆ ಮಾಡಲಾಗುವುದು.ಯಾವುದೆ ಷರತ್ತು ಇಲ್ಲದೆ ಅಂಗಡಿ ನೀಡಲಾಗುತ್ತಿದ್ದು ಮೂಲ ಅಂಗಡಿ ಪಡೆದವರು ಮಾತ್ರ ಅಂಗಡಿ ತೆರೆದು ವ್ಯವಹಾರ ಮಾಡಬೇಕು ಬೇರೆವರಿಗೆ ಬಾಡಿಗೆ ಕೊಡುವುದು ಮಾಡಬೇಡಿ ಈ ಬಗ್ಗೆ ಕಟ್ಟುನಿಟ್ಟಾಗಿ ಕ್ರಮ ಜರಿಗಿಸಲಾಗುವುದು ಹಾಗೆ ಈ ಜಾಗ ನಿಮ್ಮ ಸ್ವಂತ ಜಾಗ ಅಲ್ಲ ಎಂದು ಹೇಳಿದರು.ಪಟ್ಟಣದ ಅಭಿವೃದ್ಧಿಗೆ ಆದ್ಯತೆಪಟ್ಟಣದಲ್ಲಿ ಸುಮಾರು 7 ಸಾವಿರ ಮನೆಗಳು ಇದ್ದು ಅದರಲ್ಲಿ ಈಗಾಗಲೇ ನನ್ನ ಅವಧಿಯಲ್ಲಿ 2600 ಮೇಲ್ಟಟ್ಟು ಖಾತೆಗಳನ್ನು ಮಾಡಲಾಗಿದೆ. ನನ್ನ ಆಶಯಗಳಿಗೆ ಸಹಕರಿಸುತ್ತಿರುವ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ ಅವರು. 2018 ರಲ್ಲಿ ಪಟ್ಟಣದ…

Read More

ನ್ಯೂಜ್ ಡೆಸ್ಕ್: ತಿರುಮಲಕ್ಕೆ ಹೋಗುವ ಶ್ರೀವಾರಿ ಮೆಟ್ಟಿಲು ಮಾರ್ಗದಲ್ಲಿ ಆನೆಗಳ ಹಿಂಡು ಸಂಚರಿಸಿದ ಬಗ್ಗೆ ಡ್ರೊನ್ ಕ್ಯಾಮರದಲ್ಲಿ ಚಿತ್ರಣವಾಗಿದ್ದು ಭಕ್ತರಲ್ಲಿ ಆತಂಕ ಮೂಡಿಸಿದೆ.ಸುಮಾರು 11 ಆನೆಗಳಿದ್ದ ಹಿಂಡು ಸ್ಥಳಿಯವಾಗಿ ಬೆಳೆ ಹೊಲಗಳನ್ನು ನಾಶಪಡಿಸಿವೆಯಂತೆ.ಇದಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಶ್ರೀವಾರಿ ಮೆಟ್ಟಿಲು ಮಾರ್ಗದಲ್ಲಿ ತಿರುಮಲಕ್ಕೆ ಹೋಗುವಂತ ಭಕ್ತರಿಗೆ ಎಚ್ಚರಿಕೆ ನೀಡಿದ್ದು ಇದರ ನಡುವೆ ಆಂಧ್ರ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸಹ ಜನರು ಜಾಗರೂಕರಾಗಿರಲು ಸೂಚಿಸಿದ್ದಾರೆ. ಆನೆಗಳ ಚಲನವಲನಗಳನ್ನು ಡ್ರೋನ್ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದ್ದು ಭಕ್ತರು ಜಾಗರೂಕರಾಗಿರಲು ಅಧಿಕಾರಿಗಳು ಎಚ್ಚರಿಸುತ್ತಿದ್ದಾರೆ.ಸುಮಾರು 11 ಆನೆಗಳ ಹಿಂಡು ಸಂಚರಿಸುವ ಬಗ್ಗೆ ಡ್ರೋನ್ ಮೂಲಕ ಚಿತ್ರಣ ಮಾಡುತ್ತಿದ್ದು ಡ್ರೋನ್ ಮರದ ಕೊಂಬೆಗಳಿಗೆ ಡಿಕ್ಕಿ ಹೊಡೆದ ನಂತರ ಡ್ರೋನ್ ಕ್ಯಾಮೆರಾ ಕೆಳಗೆ ಬಿದ್ದಿತು. ಆದಾಗ್ಯೂ, ಆನೆಗಳು ಪಂಪ್ ಹೌಸ್ ಬಳಿಯ ಬೆಳೆ ಹೊಲಗಳನ್ನು ನಾಶಪಡಿಸಿವೆ ಎಂದು ಹೇಳಲಾಗಿದೆ. ಆನೆಗಳ ಗುಂಪನ್ನು ಗಮನಿಸಿದ ಅರಣ್ಯ ಇಲಾಖೆ, ಟಿಟಿಡಿ ಮತ್ತು ಜಾಗೃತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮವಾಗಿ,ಶ್ರೀವಾರಿ ಮೆಟ್ಟಿಲು ಮಾರ್ಗದಲ್ಲಿ…

Read More

ಶ್ರೀನಿವಾಸಪುರ:ಜೀವನಾಡಿ ಮಾವಿಗೆ ಬೆಂಬಲ ಬೆಲೆ ನೀಡಿ ರೈತರ ಹಿತ ಕಾಪಾಡಿದ ಸರ್ಕಾರಗಳಿಗೆ ಹಾಗು ಸಹಕರಿಸಿದ ಶಾಸಕ ಮತ್ತು ಅಧಿಕಾರಿಗಳಿಗೆ ಮಾವು ಬೆಳೆಗಾರರು ಕೃತಜ್ಞತೆ ಸಲ್ಲಿಸಿದ್ದಾರೆ.ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಮಾವು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪರೆಡ್ಡಿ ಹಾಗು ಪಾತಕೋಟೆ ನವೀನ್ ಕುಮಾರ್ ನಷ್ಟದಲ್ಲಿದ್ದ ರೈತರಿಗೂ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಮಾವು ಬೆಳೆಗಾರರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು ಅರಂಭದಲ್ಲಿ ಬೆಳೆಗಾರರ ಪ್ರತಿಭಟನೆಗೆ ಸರ್ಕಾರ ಸೊಪ್ಪು ಹಾಕಿರಲಿಲ್ಲ ನಂತರದಲ್ಲಿ “20 ದಿನಗಳ ಕಾಲ ರೈತರೊಂದಿಗೆ ಹೋರಾಟಗಳು ನಿರಂತರವಾದ ಹಿನ್ನಲೆಯಲ್ಲಿ ರೈತರ ಬೆಳೆಗಾರರ ಪ್ರತಿಭಟನೆ ಕಾವು ಹೆಚ್ಚುತ್ತಿದ್ದಂತೆ ಬೆಡಿಕೆಗೆ ಸ್ಪಂದಿಸಿದ ಸರ್ಕಾರಗಳು ಕಳೆದ ಜೂ.26ರಂದು ಎಕರೆಗೆ 2 ಟನ್‌ ಮಾವಿಗೆ 4 ರೂ. ಪ್ರೋತ್ಸಾಹಧನ ಘೋಷಣೆ ಮಾಡಿ ಒಬ್ಬ ರೈತರಿಗೆ 5 ಎಕರೆವರೆಗೆ ಮಾವಿಗೆ ಬೆಂಬಲ ಬೆಲೆ ಅರ್ಹತೆ ನೀಡಲಾಗಿತ್ತು.ನಂತರದಲ್ಲಿ ಶಾಸಕ ವೆಂಕಟಶಿವಾರೆಡ್ಡಿ ಮಾಜಿ ವಿಧಾನಪರಿಷತ್ ಸದಸ್ಯ ತೂಪಲ್ಲಿಚೌಡರೆಡ್ಡಿ ಮೂಲಕ ರಾಜ್ಯ ಕೃಷಿ ಸಚಿವ ಚಲುವನಾರಯಣಸ್ವಾಮಿ ಅವರೊಂದಿಗೆ ಚರ್ಚಿಸಿ ನಂತರ ಮುಖ್ಯಮಂತ್ರಿ…

Read More

ನ್ಯೂಜ್ ಡೆಸ್ಕ್:ಲ್ಯಾಬ್ ಟೆಕ್ ನಿಷಿಯನ್ ಅರ್ಥಾತ್ ಶಿಕ್ಷಕಿ ತನ್ನ ಕಾಲೇಜಿನ ವಿದ್ಯಾರ್ಥಿಗೆ ಪ್ರೇಮ ಪಾಠ ಹೇಳಿ ಕೊಟ್ಟು ಅವನೊಂದಿಗೆ ಊರು ಬಿಟ್ಟು ಬೆಂಗಳೂರು ಸೇರಿದ್ದರು, ಪೊಲೀಸರ ಕಾರ್ಯಚರಣೆಯಲ್ಲಿ ಸಿಕ್ಕಿಬಿದ್ದ ಇಬ್ಬರು ಪೋಲಿಸರಿಂದ ಪಾಠ ಹೇಳಿಸಿಕೊಂಡು ಕುಟುಂಬಸ್ಥರೊಂದಿಗೆ ತಮ್ಮ ತಮ್ಮ ಮನೆ ಸೇರಿದ್ದಾರೆ.ಇದು ಆಂಧ್ರದ ಚಿತ್ತೂರಿನಲ್ಲಿ Chittoor ನಡೆದಿದ್ದು ಚಿತ್ತೂರಿನ ದುರ್ಗಾನಗರ ಕಾಲೋನಿಯ 20 ವರ್ಷದ ಯುವಕ ಚಿತ್ತೂರು ಬಳಿ ಪುತ್ಥಲಪಟ್ಟು ಹತ್ತಿರ ಇರುವಂತ ಎಂಜಿನಿಯರಿಂಗ್ ಕಾಲೇಜಿನ ಬಿ.ಟೆಕ್ ವಿದ್ಯಾರ್ಥಿ ಅದೆ ಕಾಲಿಜಿನಲ್ಲಿ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 40 ವರ್ಷದ ಮಹಿಳಾ ಉದ್ಯೋಗಿಯೊಂದಿಗೆ ಮೋಹದ ಬಲೆಗೆ ಬಿದ್ದು ಆಕರ್ಷಿತನಾಗಿದ್ದಾನೆ, ಅದು ವಿವಾಹಿತ ಪತಿಯಿಂದ ಬೇರ್ಪಟ್ಟು ಒಂಟಿ ಜೀವನ ಮಾಡುತ್ತಿರುವ ಮಹಿಳೆಯೊಂದಿಗೆ. ಇಬ್ಬರ ನಡುವೆ ವಯಸ್ಸಿನ ಅಂತರ ಲೆಕ್ಕಿಸದೆ ಪ್ರೇಮ ದೂರ ಸಂಬಂಧಕ್ಕೆ ಸಾಗಿದೆ ಸಮಾಜ ನಮ್ಮ ಮದುವೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಭಾವಿಸಿದ ಇಬ್ಬರೂ,ತಾವಿರುವ ಊರು ಸಮಾಜದಿಂದ ದೂರ ಸಾಗಲು ನಿರ್ಧರಿಸಿ ಬೆಂಗಳೂರು ಬಸ್ ಹತ್ತಿದ್ದಾರೆ ಇತ್ತ ಕಾಲೇಜಿಗೆ ಹೋಗಿದ್ದ ಮಗ ಮೂರು…

Read More

ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದ ಡಿವಿಜಿ ರಸ್ತೆಯಲ್ಲಿರುವ ಶ್ರೀನಿವಾಸಪುರ PLD ಅಧ್ಯಕ್ಷರ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.ಪಟ್ಟಣದ ವೆಂಕಟೇಶ್ವರ ಬಡಾವಣೆಯ ಡಿವಿಜಿ ರಸ್ತೆಯಲ್ಲಿರುವ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್ ರವರ ಮನೆ ಇದ್ದು ಇವರು ಕುಟುಂಬ ಸಮೇತರಾಗಿ ಮೂರು ದಿನಗಳ ಹಿಂದೆ ಮೈಸೂರಿಗೆ ನೆಂಟರ ಮನೆಗೆ ತೆರಿಳಿದ್ದಾಗ ಕಳ್ಳತನ ನಡದಿರುತ್ತದೆ.ಶ್ವಾನ ದಳ ಬೆರಳಚ್ಚು ತಜ್ಞರ ಭೇಟಿಅಶೋಕ್ ಕುಟುಂಬ ಕಳ್ಳತನದ ಮಾಹಿತಿ ತಿಳಿದು ಮೈಸೂರಿನಿಂದ ವಾಪಾಸ್ಸಾಗುತ್ತಿದ್ದು ಸ್ಥಳಕ್ಕೆ ಪೊಲೀಸ್ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ಪರಿಶೀಲನೆ ನಡೆಸಿದ್ದಾರೆ, ಮನೆ ಮಾಲಿಕ ಅಶೋಕ್ ಬಂದ ನಂತರ ಕಳ್ಳತನವಾಗಿರುವ ವಡವೆ ಹಣದ ಮಾಹಿತಿ ತಿಳಿಯಲಿದೆ.ಸಹಾಯಕ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಗದೀಶ್,ಶ್ರೀನಿವಾಸಪುರ ಪೊಲೀಸ್ ಠಾಣಾಧಿಕಾರಿ ಗೊರವನಕೊಳ್ಳ ಅವರು ಅಶೋಕ್ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ.ದಿಂಬಾಲ್ ಅಶೋಕ್ ಮನೆ ಬಾಗಿಲು ತೆಗೆದಿರುವುದನ್ನು ಕಂಡ ಪಕ್ಕದ ಮನೆಯರು ಅನುಮಾನ ಗೊಂಡು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ,ಕಳ್ಳರು ಚಾಲಾಕಿತನದಿಂದ ಕಳ್ಳತನ ಮಾಡಿದ್ದು ದಿಂಬಾಲ್ ಅಶೋಕ್…

Read More

ನ್ಯೂಜ್ ಡೆಸ್ಕ್: ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಹಾಗು ಅವರ ಮಗನನ್ನು ಆಂಧ್ರದ ನರಸರಾವ್‌ಪೇಟೆಯಲ್ಲಿ ಹಾಡು ಹಗಲೆ ಅಪಹರಿಸಿ ಧಾರುಣವಾಗಿ ಕೊಲೆ ಮಾಡಲಾಗಿದೆ. ಮೃತರನ್ನು ಬೆಂಗಳೂರಿನ ಚಿನ್ನಸಂದ್ರ ಕಾಡುಗೋಡಿ ನಿವಾಸಿಗಳಾದ ಕೆ. ವೀರಸ್ವಾಮಿರೆಡ್ಡಿ ಮತ್ತು ಅವರ ಮಗ ಕೆ.ವಿ. ಪ್ರಶಾಂತ್ ರೆಡ್ಡಿ(35) ಎಂದು ಗುರಿತಿಸಲಾಗಿದೆ. ಚೆಕ್ ಬೌನ್ಸ್ ಪ್ರಕರಣದ ವಿಚಾರಣೆಗೆ ಆಂಧ್ರದ ನರಸರಾವ್‌ಪೇಟೆಗೆ ಹೋಗಿದ್ದರು. ಮೃತ ವೀರಸ್ವಾಮಿರೆಡ್ಡಿ ಮೂಲತಃ ಆಂಧ್ರದ ಬಾಪಟ್ಲ ಜಿಲ್ಲೆಯ ಸಂತಮಾಗಲೂರಿನವರು ಎನ್ನಲಾಗಿದ್ದು ಕುಟುಂಬ ಸಮೇತ ಬೆಂಗಳೂರಿಗೆ ವಲಸೆ ಬಂದು ವೈಟ್‌ಫೀಲ್ಡ್ ಪ್ರದೇಶದಲ್ಲಿ ನೆಲೆಸಿದ್ದರು. ಸ್ಥಳಿಯವಾಗಿ ರಿಯಲ್ ಎಸ್ಟೇಟ್ ವ್ಯಾಪಾರ ಹಾಗು ರಾಜಕೀಯವಾಗಿ ಭಾರತೀಯ ಜನತಾ ಪಕ್ಷದಲ್ಲಿ ಇದ್ದು ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಭಾವಿ ಮಾಜಿ ಶಾಸಕ ಅರವಿಂದ ಲಿಂಬಾವಳಿ ಆಪ್ತ ವರ್ಗದಲ್ಲಿ ಗುರುತಿಸಿಕೊಂಡು ಮಗ ಸ್ಥಳೀಯ ಯುವ ಮೊರ್ಚಾ ಅಧ್ಯಕ್ಷರಾಗಿ ಪ್ರಭಾವಿಗಳಾಗಿದ್ದರು ಮುಂದಿನ ಬಿಬಿಎಂ ಚುನಾವಣೆಯಲ್ಲಿ ಸ್ಪರ್ದಿಸಲು ತಯಾರಿ ಮಾಡಿಕೊಂಡಿದ್ದರಂತೆ.ಚೌಕ್ ಬೌನ್ಸ್ ವ್ಯವಹಾರ ಪ್ರಾಣಕ್ಕೆ ಮುಪ್ಪಾಯಿತ?ಚೆಕ್ ಬೌನ್ಸ್ ಪ್ರಕರಣದಲ್ಲಿ ಆಂಧ್ರದದಲ್ಲಿ ವಿಚಾರಣೆ ಎದುರಿಸುತ್ತಿದ್ದ ವೀರಸ್ವಾಮಿರೆಡ್ಡಿ ಅದಕ್ಕಾಗಿ…

Read More

ಶ್ರೀನಿವಾಸಪುರ:ತಾಲೂಕಿನ ಪ್ರಮುಖ ರಾಜಕಾರಣಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ ಅವರ ಜನ್ಮ ದಿನವನ್ನು ತಾಲೂಕಿನಲ್ಲಿ ಜೆಡಿಎಸ್ ಕಾರ್ಯಕರ್ತರು ಆಚರಿಸಿದರು.ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಜೆಡಿಎಸ್ ಕಾರ್ಯಕರ್ತರು ಮತ್ತು ತೂಪಲ್ಲಿನಾರಯಣಸ್ವಾಮಿ ಅಭಿಮಾನಿಗಳು ಅವರಿಗೆ ಆಯುರ್ ಆರೋಗ್ಯ ಕರುಣಿಸಲಿ ಸಾರ್ವಜನಿಕ ಜೀವನದಲ್ಲಿ ಉತ್ತಮ ರಾಜಕೀಯ ಸ್ಥಾನಮಾನ ಸಿಗಲಿ ಎಂದು ಪ್ರಾರ್ಥಿಸಿದರು. ನಂತರ ಅವರ ಸಮ್ಮುಖದಲ್ಲಿ ಬೃಹತ್ ಗಾತ್ರದ ಕೆಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.ತಾಲೂಕಿನ ಲಕ್ಷ್ಮೀಪುರ ಕ್ರಾಸ್ ನಲ್ಲಿ ಸಂಜೆ ಮಳೆ ಎನ್ನದೆ ಸೇರಿದ್ದ ನೂರಾರು ಕಾರ್ಯಕರ್ತರು ತೂಪಲ್ಲಿನಾರಯಣಸ್ವಾಮಿ ಅವರಿಗೆ ಜೈಕಾರ ಹಾಕುತ್ತ ಪಟಾಕಿ ಸಿಡಿಸಿ ನಂತರ ಕೆಕ್ ಕತ್ತರಿಸಿ ಹಳ್ಳಿಗಳಲ್ಲಿ ಬಡ ಮಹಿಳೆಯರಿಗೆ ಸೀರೆ ವಿತರಿಸಿ ತೂಪಲ್ಲಿನಾರಯಣಸ್ವಾಮಿ ಜನುಮದಿನವನ್ನು ಆಚರಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಪೂಲುಶಿವಾರೆಡ್ಡಿ.ಬಿ.ಎಲ್.ದುರ್ಗಾ, ಅವಲಕುಪ್ಪರಾಮಚಂದ್ರ, ಶ್ರೀನಿವಾಸರೆಡ್ಡಿ ದಿಂಬಾಲಶಂಕರರೆಡ್ಡಿ ಮುಂತಾದವರು ಇದ್ದರು.

Read More

ಶ್ರೀನಿವಾಸಪುರ:ಮಾಜಿ ಸ್ಪೀಕರ್ ರಮೇಶ್ ಕುಮಾರ್ ರಾಜ್ಯ ಕಂಡ ಹಿರಿಯ ಮುತ್ಸದಿ ರಾಜಕಾರಣಿ ಸಮಾಜದ ಎಲ್ಲಾ ವರ್ಗದ ಜನರ ಒಲವು ಪ್ರೀತಿ ಗಳಿಸಿದ್ದಾರೆ ಅವರ ಬಗ್ಗೆ ಮಾತನಾಡುವಾಗ ವಿವೇಚನೆಯಿಂದ ಮಾತನಾಡಬೇಕು ಎಂದು ಕೋಮುಲ್ ನಿರ್ದೇಶಕ ಕಲ್ಲೂರುಮಂಜುನಾಥರೆಡ್ಡಿ ಶಾಸಕ ವೆಂಕಟಶಿವಾರೆಡ್ದಿಗೆ ಟಾಂಗ್ ನೀಡಿದರು.ಇಂದು ಪತ್ರಿಕಾಘೋಷ್ಠಿ ನಡೆಸಿ ಮಾತನಾಡಿದ ಅವರು ಇತ್ತಿಚಿಗೆ ಹಾಲಿ ಶಾಸಕ ವೆಂಕಟಶಿವಾರೆಡ್ಡಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುವಾಗ ರಮೇಶ್ ಕುಮಾರ್ ವಿರುದ್ದ ಅಸಭ್ಯಕರವಾಗಿ ಮಾತನಾಡಿದ್ದಾರೆ ಇದು ಸರಿಯಲ್ಲ, ಸಾರ್ವಜನಿಕ ಜೀವನದಲ್ಲಿ ಯಾರಿಗೂ ಗೌರವ ತರುವುದಿಲ್ಲ ರಾಜಕೀಯ ಏನೆ ಇರಲಿ ಟೀಕಿಸುವಾಗ ಭಾಷೆ ಹಿತಮಿತವಾಗಿ ಇರಬೇಕು, ವೆಂಕಟಶಿವಾರೆಡ್ಡಿ ಜೆಡಿಎಸ್ ಪಕ್ಷದಿಂದ ಗೆದ್ದು ಕ್ಷೇತ್ರದ ಶಾಸಕರಾಗಿದ್ದಾರೆ ಅವರ ಬಗ್ಗೆ ನಮಗೆ ಗೌರವ ಇದೆ ಅವರು ತಾಲೂಕಿನ ಅಭಿವೃದ್ಧಿ ಮಾಡಲು ಕಾಂಗ್ರೆಸ್ ಪಕ್ಷದ ಮುಖಂಡರು ಅಡ್ಡಿ ಪಡಿತ್ತಿದ್ದಾರೆ ಎನ್ನುವ ಆರೋಪ ಸುಳ್ಳು ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸಂಪೂರ್ಣವಾದ ಸಹಕಾರ ಇರುತ್ತದೆ ಎಂದರು.ವಿಷಾಧ ವ್ಯಕ್ತಪಡಿಸುತ್ತೇನೆ ಸಂಜಯ್ ರೆಡ್ಡಿಮಾತಿನ ಭರದಲ್ಲಿ ಶಾಸಕ ವೆಂಕಟಶಿವಾರೆಡ್ಡಿ ಅವರನ್ನು ಶ್ರೀನಿವಾಸಪುರ…

Read More

ನ್ಯೂಜ್ ಡೆಸ್ಕ್:ಜಾತಕದಲ್ಲಿ ರಾಹು-ಕೇತುಗಳ ದಶಾ-ಮಹಾದಶಾ ಇದ್ದರೆ, ಸಾಲಾಗಿ ಸಮಸ್ಯೆಗಳು ಬರುತ್ತದೆ. ರಾಹು ಕೇತುವಿನ ದೃಷ್ಟಿಯಿಂದ ಆರ್ಥಿಕ ಮತ್ತು ಸಾಮಾಜಿಕ ಜೊತೆಗೆ ಮಾನಸಿಕವಾಗಿಯೂ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದ್ದು ಈ ಕಾರಣಕ್ಕೆ ಜಾತಕದಲ್ಲಿ ದೋಷ ಕಂಡು ಬಂದಾಕ್ಷಣ ಪರಿಹಾರ ಕ್ರಮ ತೆಗೆದುಕೊಳ್ಳಬೇಕು ಇದಕ್ಕಾಗಿ ರಾಹು-ಕೇತು ಶಾಂತಿ ಮಾಡಿಸಿದರೆ ಪರಿಹಾರವಾಗುತ್ತದೆ ಎನ್ನುತ್ತಾರೆ ಶಾಸ್ತ್ರಜ್ಞರು.ಶ್ರೀಕಾಳಹಸ್ತಿಯಲ್ಲಿ ರಾಹು ಕೇತು ಪೂಜೆಯನ್ನು ಮಾಡಿದರೆ ಉತ್ತಮ ಫಲಿತಾಂಶಗಳು ಸಿಗುತ್ತವೆ ಎಂಬುದು ನಂಬಿಕೆ. ರಾಹು ಕೇತು ಪೂಜೆಯಿಂದ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಮತ್ತು ಶಾಂತಿ, ಆರೋಗ್ಯ ಮತ್ತು ಸಂಪತ್ತನ್ನು ತರುತ್ತದೆ ಎಂದು ನಂಬಲಾಗಿದೆ. ಈ ರಾಹುಕೇತು ಪೂಜೆಯನ್ನು ಮಾಡಿದರೆ, ಮದುವೆ ವಿಳಂಬ ಇತ್ಯಾದಿಗಳಿಗೆ ತ್ವರಿತ ಪರಿಹಾರ ನೀಡುತ್ತದೆ ಎಂದು ನಂಬಲಾಗಿದೆ.ರಾಹು ಕೇತು ಪೂಜೆ ಸಮಸ್ಯೆಗಳಿಗೂ ಪರಿಹಾರರಾಹು ಕೇತು ದೋಷದಿಂದ ಮಾನಸಿಕ ಒತ್ತಡ, ಆರ್ಥಿಕ ಸಂಕಷ್ಟ, ದೀರ್ಘಕಾಲದ ಆರೋಗ್ಯ ಸಮಸ್ಯೆಗಳು, ಮಾನಸಿಕ ಒತ್ತಡ, ಭಯ, ರೋಗಗಳು, ಕೆಲಸದಲ್ಲಿ ಅಭಿವೃದ್ಧಿ ಕೊರತೆ,ಕೆಲಸಗಳು ನಿಧಾನಗತಿ,ವ್ಯವಹಾರದಲ್ಲಿ ನಷ್ಟ, ವಿವಾಹ ವಿಳಂಬ, ವೈವಾಹಿಕ ಜೀವನದಲ್ಲಿ ತೊಂದರೆಗಳು,ಅತಿಯಾದ ಕೋಪ,ಕೌಟುಂಬಿಕ…

Read More