Author: Srinivas_Murthy

ಶ್ರೀನಿವಾಸಪುರ: ಬೀದಿಯಲ್ಲಿ ಕಸ ಹಾಕುವ ವಿಚಾರದಲ್ಲಿ ಗಲಾಟೆ ನಡೆದು ವ್ಯಕ್ತಿಯೊಬ್ಬರು ಅಮಾನುಷವಾಗಿ ಕೊಲೆಯಾಗಿದ್ದು ಮತ್ತೋರ್ವ ವ್ಯಕ್ತಿ ಗಾಯಗೊಂಡ ಘಟನೆ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ  ನಡೆದಿದೆ ಮೃತಪಟ್ಟ ವ್ಯಕ್ತಿಯನ್ನು ಗೌನಿಪಲ್ಲಿ ನಿವಾಸಿ ಶಾಜು ಖಾನ್ (65) ಎಂದು ಗುರುತಿಸಲಾಗಿದೆ.ಗ್ರಾಮದಲ್ಲಿ ವಾಸಿಂ ಎನ್ನುವವರು ಮಟನ್ ಅಂಗಡಿ ಇಟ್ಟುಕೊಂಡಿದ್ದಾರೆ ಅಲ್ಲಿ ಕಸ ಹಾಕುವ ಬಗ್ಗೆ ಮೃತ ಶಾಜುಖಾನ್ ಹಾಗು ವಾಸಿಂ ನಡುವೆ ಮೊದಲಿನಿಂದಲೂ ವೈಮನಸ್ಯ ಇದ್ದು ಇಂದು ಕಸ ಹಾಕುವ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ವಾಸಿಂ ಪರವಾಗಿ ಶಬ್ಬೀರ್ ಎನ್ನುವ ಬೆಂಬಲಕ್ಕೆ ನಿಂತಿದ್ದು ಇದು ಮಾತಿಗೆ ಮಾತು ಬೆಳೆದು ಗಲಾಟೆ ದೊಡ್ಡದಾಗಿದೆ. ವಾಸಿಂ ಮಟನ್ ಕತ್ತರಿಸುವ ಮಚ್ಚಿನಿಂದ ಶಾಜುಖಾನ್ ಮೇಲೆ ಬಿಸಿದ್ದಾನೆ ಮಚ್ಚು ಬೀಸಿದ ರಭಸಕ್ಕೆ ಶಾಜುಖಾನ್ ಕತ್ತುಗೆ ತಗುಲಿದೆ ದೊಡ್ಡದಾಗಿ ಗಾಯವಾಗಿದೆ ತೀವ್ರವಾಗಿ ರಕ್ತ ಸಾವ್ರಾವಾಗಿ ಶಾಜುಖಾನ್ ಪ್ರಾಣ ಬಿಟ್ಟಿದ್ದು ಮೃತನೊಂದಿಗೆ ಇದ್ದ ವ್ಯಕ್ತಿಗೂ ಗಾಯಗಳಾಗಿವೆ.ಗಲಾಟೆ ಸಂದರ್ಭದಲ್ಲಿ ಆರೋಪಿ ವಾಸಿಂ ಹಾಗೂ ಬೆಂಬಲಕ್ಕೆ ನಿಂತಿದ್ದ ಶಬ್ಬಿರ್ ಸ್ಥಳದಿಂದ ಪರಾರಿಯಾಗಿದ್ದಾರೆ.ಗೌನಿಪಲ್ಲಿ…

Read More

ಶ್ರೀನಿವಾಸಪುರ:ಪಟ್ಟಣದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯ ಮೇಲೆ ಪೊಲೀಸರು ದಾಳಿ ನಡೆಸಿ ದಂಧೆಯ ಕಿಂಗ್ ಪಿನ್ ಮಹಿಳೆ ಸೇರಿದಂತೆ ಒಟ್ಟು ನಾಲ್ವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.ಪ್ರಕರಣದ ಕಿಂಗ್ ಪಿನ್ ಆಗಿರುವ ಮಹಿಳೆ ಶ್ರೀನಿವಾಸಪುರ ಪಟ್ಟಣದ ಜನವಸತಿ ಪ್ರದೇಶದ ಹಳೆಯ ಮನೆಯೊಂದರಲ್ಲಿ ದೀರ್ಘಕಾಲದಿಂದ ರಾಜಾರೋಷವಾಗಿ ಅನೈತಿಕ ಚಟುವಟಿಕೆಗಳು ನಡೆಸುತ್ತಿರುವ ಕುರಿತು ಸಾರ್ವಜನಿಕರು ಪೋಲಿಸರಿಗೆ ಸಮಾಚಾರ ನೀಡಿದ್ದರು ಇದರ ಅನ್ವಯ ಪೊಲೀಸರು ಶನಿವಾರ ಸಂಜೆ ಶ್ರೀನಿವಾಸಪುರ ವೃತ್ತ ನಿರೀಕ್ಷಕ (CPI) ಶಂಕರಾಚಾರ್ಯ ಹಾಗೂ ಉಪನಿರೀಕ್ಷಕ (PSI) ಜಯರಾಂ ಅವರ ನೇತೃತ್ವದ ಪೊಲೀಸ್ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.ಪೋಲಿಸ್ ದಾಳಿ ಸಂದರ್ಭದಲ್ಲೂ ದಂದೆಯಲ್ಲಿದ್ದ ಕಿಂಗ್ ಪಿನ್ ಮಹಿಳೆ, ಆಕೆಗೆ ಸಹಕಾರ ನೀಡುತಿದ್ದ ಇಬ್ಬರು ಮಹಿಳೆಯರು ಹಾಗೂ ಒಬ್ಬ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಿದ್ದಾರೆ.ಪೋಲಿಸರ ಕಾರ್ಯಚರಣೆ ನಾಗರಿಕರಿಗೆ ನೆಮ್ಮದಿರಾಮಕೃಷ್ಣ ಬಡಾವಣೆ ಹಾಗು ಪ್ರವಾಸಿ ಮಂದಿರದ ನಡುವಿನ ಹಿಂಬಾಗದ ಗುಂಪು ಮನೆಗಳ ಪ್ರದೇಶದಲ್ಲಿ ಅವ್ಯಾಹುತವಾಗಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಸ್ಥಳೀಯ ಜನರು ಮುಜಗರಕ್ಕೆ ಒಳಗಾಗಿದ್ದು ಹಲವಾರು ಬಾರಿ…

Read More

ಶ್ರೀನಿವಾಸಪುರ :ರಾತ್ರಿ ಗಸ್ತು ನಿರ್ವಹಿಸುತ್ತಿದ್ದ ಶ್ರೀನಿವಾಸಪುರ ಪೋಲಿಸ್ ಠಾಣೆ ಪೊಲೀಸ್ ಮುಖ್ಯ ಪೇದೆ ರಸ್ತೆ ಅಪಘಾತದಲ್ಲಿ ಸಾವನಪ್ಪಿರುವ ಧಾರುಣ ಘಟನೆ ಶ್ರೀನಿವಾಸಪುರ ಪಟ್ಟಣದ ಹೊರವಲಯದಲ್ಲಿ ನಡೆದಿದೆ.ಶ್ರೀನಿವಾಸಪುರ-ಕೋಲಾರ ರಾಜ್ಯ ಹೆದ್ದಾರಿಯ ಪಣಸಮಾಕಲಹಳ್ಳಿ ಬಳಿ ಘಟನೆ ನಡೆದಿದ್ದು ಮೃತರನ್ನು ಆನಂದ್ ಬಾಬು (45) ಎಂದು ಗುರುತಿಸಲಾಗಿದೆ. ಇವರು ಕಳೆದ ಒಂದೂವರೆ ವರ್ಷದಿಂದ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆನಂದ್ ಬಾಬು ಎಂದಿನಂತೆ ತಮ್ಮ ದ್ವಿಚಕ್ರ ವಾಹನದಲ್ಲಿ ರಾತ್ರಿ ಗಸ್ತು ನಿರ್ವಹಿಸುತ್ತ ಪಣಸಮಾಕಲಹಳ್ಳಿ ಬಳಿ ಹೋಗುತ್ತಿದ್ದಾಗ ಕೋಲಾರದ ಕಡೆಯಿಂದ ಅತಿ ವೇಗ ಹಾಗು ಅಜಾಗುರವಾಗಿ ಬಂದಂತ ಬೊಲೆರೋ ವಾಹನ ಇವರ ಬೈಕ್‌ಗೆ ಬಲವಾಗಿ ಡಿಕ್ಕಿ ಹೊಡೆದು ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದೆ ಪಕ್ಕದ ಹಳ್ಳಕ್ಕೆ ಬಿದ್ದಿದೆ. ಅಪಘಾತದ ತೀವ್ರತೆ ಎಷ್ಟಿತ್ತು ಎಂದರೆ ಬೊಲೆರೋ ವೇಗಕ್ಕೆ ಆನಂದ್ ಬಾಬು ಸ್ಥಳದಲ್ಲೇ ಮೃತಪಟ್ಟರೆ ರಸ್ತೆ ಬದಿ ವಿದ್ಯತ್ ಕಂಬಗಳು ಸಂಪೂರ್ಣ ಧರೆಗೆ ಉರಳಿದೆ.ವಿಷಯ ತಿಳಿಯುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ…

Read More

ಶ್ರೀನಿವಾಸಪುರ:ಬೈಕ್ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಒರ್ವ ವ್ಯಕ್ತಿ ಮೃತಪಟ್ಟ ಘಟನೆ ಚಿಂತಾಮಣಿ-ಹೊಸಕೋಟೆ ಹೆದ್ದಾರಿಯಲ್ಲಿ ನಂದಗುಡಿ ಹೋಬಳಿಯಲ್ಲಿ ಇರುವ ಸುಮಧುರ ಲಾಜಿಸ್ಟಿಕ್ಸ್ ಪಾರ್ಕ್ ಬಳಿ ಬುಧವಾರ ಸಂಜೆ ನಡೆದಿದ್ದು ಮೃತ ವ್ಯಕ್ತಿಯನ್ನು ಶ್ರೀನಿವಾಸಪುರ ಪಟ್ಟಣದ ಕರ್ನಾಟಕ ಬ್ಯಾಂಕ್ ಉಪ ವ್ಯವಸ್ಥಾಪಕ ಶ್ರೀಹರಿ ಎಂದು ಗರುತಿಸಲಾಗಿದೆ,ಮೃತನು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಇರುವ ತನ್ನ ಪತ್ನಿಯನ್ನು ಕಾಣಲು ಬ್ಯಾಂಕ್ ಕೆಲಸ ಮುಗಿಸಿ ಸಂಜೆ ಪಲ್ಸರ್ ಬೈಕ್‌ನಲ್ಲಿ ಮಾಡಿಕೆರೆ ಕ್ರಾಸ್-ಹೆಚ್.ಕ್ರಾಸ್ ಹೊಸಕೋಟೆ ಮೂಲಕ ಹೋಗುತ್ತಿದ್ದ ಚಿಂತಾಮಣಿ-ಹೊಸಕೋಟೆ ಹೆದ್ದಾರಿ ಡಿ:ಶೆಟ್ಟಿಹಳ್ಳಿ ಬಳಿ ಇರುವ ಸಮುಧರ್ ಲಾಜಿಸ್ಟಿಕ್ಸ್ ಪಾರ್ಕ್ ಒಳಗಿನಿಂದ ಲಾಜಸ್ಟಿಕ್ ಲಾರಿಯೊಂದು ಹೋರಬಂದಿದೆ ಅದಕ್ಕಿಂತ ಮುಂಚಿತವಾಗಿ ಹೋಗುವ ಧಾವಂತದಲ್ಲಿ ಎದರುಗಡೆಯಿಂದ ಬರುತ್ತಿದ್ದ ಲಾರಿಯನ್ನು ಗಮನಿಸದೆ ಮುನ್ನುಗ್ಗಿದ್ದು ಲಾರಿಗೆ ಡಿಕ್ಕಿ ಹೊಡೆದಿದೆ ಡಿಕ್ಕಿ ಹೊಡೆದ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿ ಬಿದ್ದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ, ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಹೊಸಕೋಟೆ ಸಂಚಾರಿ ಠಾಣೆಯ ಪೊಲೀಸರು ಬೇಟಿ ನೀಡಿ ಶವವನ್ನು ಆಸ್ಪತ್ರೆಗೆ ಸಾಗಿಸಿ ವಾಹನಗಳನ್ನು…

Read More

ನ್ಯೂಜ್ ಡೆಸ್ಕ್:ಕರ್ನಾಟಕದ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.ಕಮಿಷನ್ ಹಣ ಪಡೆಯುತ್ತಿದ್ದ ವೇಳೆ ಶಿರಹಟ್ಟಿ ಶಾಸಕ ಗುತ್ತಿಗೆದಾರರನಿಂದ 5 ಲಕ್ಷ ರೂಪಾಯಿ ಕಮಿಷನ್ ಹಣ ಪಡೆಯುತ್ತಿದ್ದಾಗ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಗದಗ ಜಿಲ್ಲೆಯ ಲಕ್ಷ್ಮೀಶ್ವರ ಪಟ್ಟಣದಲ್ಲಿರುವ ಬಾಲಾಜಿ ಆಸ್ಪತ್ರೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಶಾಸಕ ಡಾ.ಚಂದ್ರು ಲಮಾಣಿ ಹಾಗೂ ಅವರ ಇಬ್ಬರು ಪಿಎ ಗಳಾದ ಮಂಜುನಾಥ್ ಹಾಗೂ ಗುರು ಸೇರಿದಂತೆ ಮೂವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ಲಕ್ಷ್ಮೀಶ್ವರ ಪಟ್ಟಣದಲ್ಲಿರುವ ಶಾಸಕ ಡಾ.ಚಂದ್ರು ಲಮಾಣಿ ಅವರ ಒಡೆತನದ ಬಾಲಾಜಿ ಖಾಸಗಿ ಆಸ್ಪತ್ರೆ ಆಸ್ಪತ್ರೆಯಾಗಿದ್ದು ಶಾಸಕ ಚಂದ್ರು ಲಮಾಣಿ ಸ್ವತಃ ವೈದ್ಯರು ಕೂಡಾ ಆಗಿದ್ದಾರೆ. ಈಗ ಕಮಿಷನ್ ಹಣಕ್ಕೆ ಕೈಯೊಡ್ಡಿದಾಗಲೇ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

Read More

ನ್ಯೂಜ್ ಡೆಸ್ಕ್: ಇಂಜಿನಿಯರ್ ಅಥವಾ ಡಾಕ್ಟರ್ ಆಗುವ ಕನಸು ಕಾಣುವ ಇಂದಿನ ಯುವ ಸಮುದಾಯಕ್ಕೆ ಸವಾಲು ಎನ್ನುವಂತೆ ಈ ಯುವಕ ತನ್ನ 15ನೇ ವಯಸ್ಸಿಗೆ ಹೈನುಗಾರಿಕೆ ಆರಂಭಿಸಿದ್ದಾನೆ ಈಗ ಅವನಿಗೆ 18 ವರ್ಷ ವಯಸ್ಸು ಅಂದು ತಾನು ಆಯ್ಕೆ ಮಾಡಿಕೊಂಡಿದ್ದ ಹೈನುಗಾರಿಕೆ ವ್ಯವಹಾರ ಇಂದು ತಿಂಗಳಿಗೆ 5 ರಿಂದ 6 ಲಕ್ಷ ರೂಪಾಯಿ ದುಡಿಯುತ್ತಿದೆ.ಅದನ್ನು ಸಕಾರ ಗೊಳಿಸಿ ಯಶಸ್ವಿಯಾದ ಯುವಕ ಪಂಜಾಬ್‌ನ ಸೋಹಲ್‌ಪ್ರೀತ್ ಸಿಂಗ್ ಸಿಧು.ಇಂದಿನ ಯುವ ಸಮುದಾಯ what next ಮುಂದೇನು ಎಂಬ ಪ್ರಶ್ನೆಯೊಂದಿಗೆ ಹಲವಾರು ಕನಸುಗಳನ್ನು ಕಟ್ಟಿಕೊಳ್ಳುತ್ತಾರೆ. ಇನ್ನೂ ಕೆಲವರು ವಿದೇಶದಲ್ಲಿ ವ್ಯಾಸಾಂಗ ಮಾಡಿ ಅಲ್ಲೆ ಉದ್ಯೋಗ ಆರಸಿಕೊಳ್ಳುವ ಆಲೋಚನೆಯಲ್ಲಿ ಇರುತ್ತಾರೆಪಂಜಾಬ್‌ನ ಈ ಯುವಕ ಯಾವ ಐಟಿ ಬಿಟಿಗೂ ಕಡಿಮೆ ಇಲ್ಲದಂತೆ ಹಸು ಹಾಗು ಎಮ್ಮೆ ಸಾಕಾಣಿಕೆಯಿಂದ ಪ್ರತಿ ತಿಂಗಳು 5 ರಿಂದ 6 ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದಾನೆ. ತನ್ನ 15 ನೇ ವಯಸ್ಸಲ್ಲಿ ಓಂದು ಜಾನವಾರದೊಂದಿಗೆ ಡೈರಿ ಫಾರ್ಮ್ ಆರಂಭಿಸಿದ ಸಿದ್ದು ಅದರಿಂದ ಬಂದ ಪ್ರತಿ ರೂಪಾಯಿಯನ್ನು…

Read More

ಬೆಂಗಳೂರು: ಸಿಲಿಕಾನ್ ವ್ಯಾಲಿ ದೇಶದ ಐಟಿ ರಾಜಧಾನಿ ಎಂದೆಲ್ಲಾ ಪ್ರಸಿದ್ಧವಾದ ಬೆಂಗಳೂರಿನಲ್ಲಿ ಅನೇಕ ಬಹುರಾಷ್ಟ್ರೀಯ ಕಂಪನಿಗಳು, ಸ್ಟಾರ್ಟ್‌ಅಪ್‌ಗಳು ಮತ್ತು ದೊಡ್ಡ ಉದ್ಯಮಿಗಳು ನೆಲೆಸಿದ್ದಾರೆ ಆರ್ಥಿಕ ಅಭಿವೃದ್ಧಿ ತನ್ನದೆ ಆದ signature iconic ಆಗಿರುವ ಬೆಂಗಳೂರು ನಗರದಲ್ಲಿ “ಬಿಲಿಯನೇರ್ಸ್ ಸ್ಟ್ರೀಟ್” ಎಂಬ ರಸ್ತೆ ಇದೆ.ಈ ರಸ್ತೆಯಲ್ಲಿ ವಾಸಿಸುವಂತ ಬಹುತೇಕ ಉದ್ಯಮಿಗಳ ವ್ಯಾಪಾರ ಉದ್ಯಮ ದೇಶ ವಿದೇಶಗಳಲ್ಲಿ ಇದೆ.ಆ ರಸ್ತೆ ಇರುವುದು ಬೆಂಗಳೂರಿನ ಕೋರಮಂಗಲದ 3 ನೇ ಬ್ಲಾಕ್ ಪ್ರದೇಶದಲ್ಲಿದ್ದು ಇದನ್ನು “ಬಿಲಿಯನೇರ್ಸ್ ಸ್ಟ್ರೀಟ್” ಎನ್ನುತ್ತಾರೆ.ಸರ್ಕಾರಿ ದಾಖಲೆಗಳ ಪ್ರಕಾರ ಅಧಿಕೃತವಾಗಿ ಬಿಲಿಯನೇರ್ಸ್ ಸ್ಟ್ರೀಟ್ ಹೆಸರು ಅಲ್ಲ, ಆದರೆ ಇಲ್ಲಿ ವಾಸಿಸುವ ದೇಶದ, ಐಟಿ ಕ್ಷೇತ್ರದಲ್ಲಿ ಕೋಟ್ಯಂತರ ಅಲ್ಲ ಬಿಲಿಯನ್ Billions ಸಂಪಾದಿಸಿದವರು ಹಾಗೂ ಖ್ಯಾತ ಉದ್ಯಮಗಳ chairmans, ceo, co-founders, md ಗಳಂತಹ ಹುದ್ದೆಗಳಲ್ಲಿ ಇರುವ ಆರ್ಥಿಕ ದಿಗ್ಗಜರು ವಾಸಿಸುತ್ತಿರುವುದರಿಂದ ಹೆಸರು ಬಂದಿದೆ ಅಷ್ಟೆ ಅಲ್ಲ ಅಲ್ಲ ವಿಶಿಷ್ಟ ಸ್ಥಾನಮಾನ ಸಿಕ್ಕಿದೆ.ಈ ರಸ್ತೆ ಇಷ್ಟೊಂದು ದುಬಾರಿಯಾಗಲು ಪ್ರಮುಖ ಕಾರಣ ಐಟಿ ಉದ್ಯಮಗಳು ಎಲೆಕ್ಟ್ರಾನಿಕ್ ಸಿಟಿ,…

Read More

ಶ್ರೀನಿವಾಸಪುರ:ತಾಲೂಕಿನ ಸರಕಾರಿ ನೌಕರರ ಸಂಘದ ಕಟ್ಟಡದ ಬಾಡಿಗೆ ಹಣದ ವಿಚಾರವಾಗಿ ಹಾಲಿ-ಮಾಜಿ ಅಧ್ಯಕ್ಷರುಗಳ ನಡುವೆ ಆರೋಪ ಪ್ರತ್ಯಾರೋಪ ಹಾದಿ ಬಿದಿ ರಂಪವಾಗಿದೆ.ನೌಕರರ ಸಂಘದಲ್ಲಿ ಹಣಕಾಸು ಅವ್ಯವಹಾರ,ಹಣ ದುರುಪಯೋಗ ಆಗಿದೆ ಎಂದು ಹಾಲಿ ಅಧ್ಯಕ್ಷ ಬೈರೇಗೌಡರು ದೂರಿದರೆ ಅದಕ್ಕೆ ಮಾಜಿ ಅಧ್ಯಕ್ಷ ಬಂಗವಾದಿನಾಗರಾಜ್ ಅವರು ನನ್ನ ಅವಧಿಯಲ್ಲಿ ಕಪ್ಪುಚುಕ್ಕೆ ಇಲ್ಲದಂತೆ ಕಾರ್ಯನಿರ್ವಹಿಸಿ ತಾ.ಸಂಘದಲ್ಲಿ ಜವಾಬ್ದಾರಿಯಿಂದ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ ಎಂದು ಪ್ರತ್ಯೂತ್ತರ ನೀಡಿದ್ದಾರೆ. ಹಾಲಿ ಮತ್ತು ಮಾಜಿ ಅಧ್ಯಕ್ಷರ ನಡುವಿನ ಕಿತ್ತಾಟ ತಾರಕಕ್ಕೇರಿದೆ.ಹಾಲಿ ಮತ್ತು ಮಾಜಿ ಅಧ್ಯಕ್ಷರ ಇಬ್ಬರು ವೃತ್ತಿಯಲ್ಲಿ ಶಿಕ್ಷಕರು.ವೃತ್ತಿ ಮರೆತಂತಿರುವ ಇಬ್ಬರು ನಾನ-ನೀನಾ ಎಂದು ತೀರಾ ವೈಯುಕ್ತಿಕ ನಿಂದನೆಗೆ ಇಳಿಯುವ ಮೂಲಕ ವೃತ್ತಿ ಬದುಕಿನಲ್ಲಾಗಿದ್ದ ತಂಟೆ ತಕರಾರು ಹುಳುಕುಗಳನ್ನು ಪರಸ್ಪರ ಆರೋಪಿಸಿಕೊಂಡು ಸಮಾಜದ ಮುಂದೆ ಬೆತ್ತಲಾಗಿದ್ದಾರೆಮಾಜಿ ಅಧ್ಯಕ್ಷ ನಾಗರಾಜ್ ಶಿಕ್ಷಕ ವೃತ್ತಿಯಿಂದ ವಯೋ ನಿವೃತ್ತರಾಗಿದ್ದರೆ,ಹಾಲಿ ಅಧ್ಯಕ್ಷ ಬೈರೇಗೌಡ ತಾ.ಮುದಿಮಡಗು ಪ್ರೌಡಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಜನಾರ್ಧನ್ ನಮಗೆನೂ ಗೊತ್ತಿಲ್ಲ ನಾಗರಾಜ್ ನಿವೃತ್ತರಾದಾಗ ಅನಿವಾರ್ಯವಾಗಿ ಅಧ್ಯಕ್ಷನಾದೆ ಎನ್ನುತ್ತಾರೆ.ಇವೆಲ್ಲದರ ನಡುವೆ ನಿಕಟಪೂರ್ವ…

Read More

ನ್ಯೂಜ್ ಡೆಸ್ಕ್:ತೆಲಗು ರಾಜ್ಯಗಳಲ್ಲಿ ಸ್ಟಾರ್ ಹೀರೋಗಳ ಸಿನಿಮಾ ಬಿಡುಗಡೆಗೆ ಕಾದು ಕುಳಿತ ಅಭಿಮಾನಿಗಳು ತಮ್ಮ ನಟನ ಸಿನಿಮಾ ಯಶಸ್ವಿಯಾಗಿ ಪ್ರದರ್ಶನವಾಗಲಿ ಎಂದು ಹರಕೆ ಹೊತ್ತು ಪುಜೆ ಹೋಮ ಹವನ ನಡೆಸುವುದು ಸಾಮನ್ಯ ಆದರೆ ಇಲ್ಲೊಬ್ಬ ತೆಲಗು ಸಿನಿಮಾಗಳ ಖ್ಯಾತ ನಿರ್ಮಾಪಕ ಬಂಡ್ಲ ಗಣೇಶ್ Bandla Ganesh ತಾವು ಅಭಿಮಾನಿಸುವ ರಾಜಕೀಯ ನಾಯಕನ ಶ್ರೇಯಸ್ಸು ಕೋರಿ ಹರಕೆ ಹೊತ್ತು ಹೈದರಾಬಾದ್ ನಿಂದ ತಿರುಮಲ ಶ್ರೀ ವೇಂಕಟೇಶ್ವರನ ಸನ್ನಿಧಾನಕ್ಕೆ ಇಪ್ಪತ್ತು ಮೂರು ದಿನಗಳ ಪಾದಯಾತ್ರೆ ಕೈಗೊಂಡು ಅದನ್ನು ಯಶಸ್ವಿಯಾಗಿ ಪೊರೈಸಿದ್ದಾರೆ.ಆಂಧ್ರದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ವೈಎಸ್‌ಆರ್‌ಸಿಪಿ ಜಗನ್ ರೆಡ್ಡಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಅಲ್ಲಿನ ವಿರೋಧ ಪಕ್ಷದ ನಾಯಕ ಚಂದ್ರಬಾಬುನಾಯ್ಡು ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು, ಆ ಸಂದರ್ಭದಲ್ಲಿ ಚಂದ್ರಬಾಬು ಅವರು ಸುರಕ್ಷಿತವಾಗಿ ಜೈಲಿನಿಂದ ಹೊರಬಂದರೆ, ಹೈದರಾಬಾದ್‌ನಿಂದ ತಿರುಮಲಕ್ಕೆ ಕಾಲನಡಿಗೆಯಲ್ಲಿ ಬಂದು ದರ್ಶನ ಪಡೆಯುವುದಾಗಿ ನಿರ್ಮಾಪಕ ಬಂಡ್ಲ ಗಣೇಶ್ ಪ್ರತಿಜ್ಞೆ ಮಾಡಿ ಹರಕೆ ಹೊತ್ತಿದ್ದರು.ನಂತರದಲ್ಲಿ ಜೈಲಿನಿಂದ ಹೊರ ಬಂದ ಚಂದ್ರಬಾಬುನಾಯ್ಡು N Chandrababu Naidu…

Read More

ನ್ಯೂಜ್ ಡೆಸ್ಕ್:ಕೆನಡಾ ದೇಶದಲ್ಲಿ  ಕೆಲಸ ಮಾಡುತ್ತಿದ್ದ ನೆಲಮಂಗಲ ತಾಲ್ಲೂಕು, ತ್ಯಾಮಗೊಂಡ್ಲು ಪಟ್ಟಣದ ನಿವಾಸಿ ಚಂದನ್ ಕುಮಾರ್ (37) ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಮೃತ ಚಂದನ್ ಕುಮಾರ್ ಕಳೆದ ಆರು ವರ್ಷಗಳಿಂದ ಕೆನಡಾದಲ್ಲಿ ನೆಲೆಸಿ, ಎಲ್ ಅಂಡ್ ಟಿ (L&T) ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು ಎನ್ನಲಾಗಿದೆ. ಫೆಬ್ರವರಿ 8 ರಂದು ಚಂದನ್ ಕೆನಡಾದ ವುಡ್​ಬೈನ್ ಮಾಲ್ ಬಳಿ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ದುಷ್ಕರ್ಮಿಗಳು ಗುಂಡಿನ ಸುರಿಮಳೆ ಸುರಿಸಿದ್ದಾರೆ ಈ ಸಂದರ್ಭದಲ್ಲಿ, ತೀವ್ರವಾಗಿ ಗಾಯಗೊಂಡಿದ್ದ ಚಂದನ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಅಲ್ಲಿ ಕೊನೆಯುಸಿರು ಎಳೆದಿದ್ದಾರೆ ಎಂದು ತಿಳಿದುಬಂದಿದೆ! ಏಕಾಏಕಿ ನಡೆದಿರುವ ಗುಂಡಿನ ದಾಳಿಗೆ ನಿಖರವಾದ ಕಾರಣ ಏನು ಎತ್ತ ಎಂದು ಸದ್ಯಕ್ಕೆ ತಿಳಿದು ಬಂದಿಲ್ಲ.ಗುಂಡಿನ ದಾಳಿ ನೋಡಿದ ಸ್ಥಳೀಯರು ಹೇಳುವಂತೆ ಶೂಟೌಟ್ ನಡೆದ ಸಂದರ್ಭದಲ್ಲಿ ಅದನ್ನು  ಕಣ್ಣಾರೆ ನೋಡಿದ ಸ್ಥಳೀಯರು ಗಾಬರಿಗೊಂಡಿದ್ದು, ಮಾಲ್​ ಹೊರಗೆ ತಮ್ಮ ಕಾರಿನಲ್ಲಿ ಕುಳಿತು ಮೊಬೈಲ್​ನಲ್ಲಿ ಮಾತನಾಡುತ್ತಿದ್ದ ಓರ್ವ ವ್ಯಕ್ತಿಗೆ…

Read More