ಶ್ರೀನಿವಾಸಪುರ:ತಾಲೂಕಿನ ಅರಕೇರಿಯ ಐತಿಹಾಸಿಕ ಪುಣ್ಯಕ್ಷೇತ್ರ ಶ್ರೀ ನಾಗನಾಥೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿವರ್ಷದಂತೆ ರಥೋತ್ಸವ ಸಾಂಪ್ರದಾಯಕವಾಗಿ ನಡೆಯಿತು.
ತಾಲೂಕಿನ ಅರಕೇರಿ ಶ್ರೀ ನಾಗನಾಥೇಶ್ವರ ದೇವಾಲಯದಲ್ಲಿ ಎರಡು ದಿನಗಳ ಜಾತ್ರಾ ಮಹೋತ್ಸವ ಇಂದು ಶನಿವಾರ ಆರಂಭವಾಯಿತು ಇಂದು ಬೆಳೆಗ್ಗೆ ವಿಶೇಷ ಹೋಮ ಹವನ ಹಾಗು ಗಿರಿಜಾ ಕಲ್ಯಾಣ ನಡೆಯಿತು,ಮಧ್ಯಾಹ್ನ ಶ್ರೀ ನಾಗನಾಥೇಶ್ವರ ಬ್ರಹ್ಮರಥೋತ್ಸವ ಸಂಪ್ರದಾಯದಂತೆ ದೇವಾಲಯದ ಧರ್ಮಾಧಿಕಾರಿ ರಮೇಶಬಾಬು ನೇತೃತ್ವದಲ್ಲಿ ಸಾವಿರಾರು ಭಕ್ತರು ರಥ ಎಳೆದು ಪುನಿತರಾದರು, ವಿಶೇಷ ಪೂಜಾ ಕಾರ್ಯಗಳು ಹಾಗು ಉತ್ಸವಗಳಲ್ಲಿ ಸಾವಿರಾರು ಭಕ್ತರು ಪಾಲ್ಗೋಂಡು ಭಕ್ತಿಭಾವ ಮೆರೆದರು.
ರಥೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ರಾಜಣ್ಣ, ಮುಖಂಡ ಗುಂಜೂರುಶ್ರೀನಿವಾಸರೆಡ್ಡಿ,ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ,ಪುರಸಭೆ ಸದಸ್ಯ ಭಾಸ್ಕರ್,ಮಾಜಿ ಸದಸ್ಯ ಸಿಮೆಂಟ್ ರಮೇಶ್,ಆದ್ಯಾತ್ಮಿಕ ಚಿಂತಕ ಬಾಬಾಅಂಕಲ್ ನಾಗರಾಜ್,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕಲ್ಲೂರುಮಂಜು,ಅತ್ತಿಕುಂಟೆ ರಾಜಶೇಖರೆಡ್ದಿ, ಮುಖಂಡರಾದ,ಲಕ್ಷ್ಮೀಸಾಗರ ಆಶೋಕ್,ಡೈರಿ ಶ್ರೀನಿವಾಸ ಶೆಟ್ಟಿ,ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಗೌಡ,ಜಗದೀಶ್,ಮಾಜಿ ಸದಸ್ಯ ವೆಂಕಟರಮಣಪ್ಪ,ಪುಟ್ಟರಾಜು,ಜೈಕುಮಾರ್ ಸೇರಿದಂತೆ ಮುಂತಾದವರು ಇದ್ದರು. ವೇದ ಬ್ರಹ್ಮ ಉಮಾಶಂಕರ ಶರ್ಮಾ ಅವರ ಮಾರ್ಗದರ್ಷನದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಿತು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



