ಬೆಂಗಳೂರು:ಇತ್ತಿಚಿಗೆ ಬೆಂಗಳೂರಿನಲ್ಲಿ ಉತ್ತರ ಭಾರತೀಯರ ದೌರ್ಜನ್ಯ ಹೆಚ್ಚುತ್ತಿದೆ ಮೊನ್ನೆ ಬಿಟಿಎಸ್ ಕಂಡೆಕ್ಟರ್ ಗೆ ಉತ್ತರ ಭಾರತೀಯನೊಬ್ಬ ಚಾಕುವಿನಿಂದ ತಿವಿದಿರುವ ಘಟನೆ ನಡೆದ ಬೆನ್ನಲ್ಲೆ ಕಬ್ಬನ್ ಪಾರ್ಕ್ ನಲ್ಲಿ ಪೋಟೋ ತೆಗೆಯುವಾಗ ಅಡ್ಡ ಬಂದ ಎಂದು ವ್ಯಕ್ತಿಯೊಬ್ಬನನ್ನು ಉತ್ತರ ಭಾರತೀಯನೊಬ್ಬ ರಕ್ತ ಬರುವಂತೆ ಹಲ್ಲೆ ಮಾಡಿರುವ ಅಮಾನವೀಯ ಘಟನೆ ನಡೆದಿದ್ದು ಅದು ತಡವಾಗಿ ಬೆಳಕಿಗೆ ಬಂದಿದೆ ಈ ಸಂಬಂದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಳೆದ ಸೆ.29ರಂದು ಮಧ್ಯಾಹ್ನ 3.30ಕ್ಕೆ ಹೆಚ್ HAL ಡಿಫೆನ್ಸ್ ವಿಭಾಗದಲ್ಲಿ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುವ ರವಿಕಿರಣ್ ಎಂಬುವರು ಕಬ್ಬನ್ ಪಾರ್ಕ್ ಗೆ ತೆರಳಿದ್ದು ಅವರಷ್ಟಕ್ಕೆ ಅವರು ನಡೆದು ಹೋಗುತ್ತಿದ್ದಂತ ವೇಳೆಯಲ್ಲೇ ಉತ್ತರ ಭಾರತ ಮೂಲಕ ವ್ಯಕ್ತಿಯೊಬ್ಬ ಪೋಟೋ ತೆಗೆದುಕೊಳ್ಳುತ್ತಿದ್ದ ಅಲ್ಲಿಯೇ ರವಿಕಿರಣ್ ಹೋಗಿದ್ದಾರೆ ಇದಕ್ಕೆ ಪೋಟೋ ತೆಗೆಯುವಾಗ ಅಡ್ಡ ಬರ್ತೀಯ ಎಂದು ಗಲಾಟೆ ಶುರುವಾಗಿದೆ. ಕಬ್ಬನ್ ಪಾರ್ಕ್ ಏನು ನಿಮ್ಮಪ್ಪಂದ ಎಂಬುದಾಗಿ ಇಬ್ಬರ ನಡುವೆ ಮಾತಿಗೆ ಚಕಮುಅಕಿ ನಡೆದಿದೆ ನಂತರ ಫೋಟೋ ತಗೆಯುತ್ತಿದ್ದ ಉತ್ತರ ಭಾರತೀಯ ರವಿಕಿರಣ್ ಮೇಲೆ ಹಲ್ಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾನೆ ತೀವ್ರ ಗಾಯಗೊಂಡ ರವಿಕಿರಣ್ ಅಸ್ವಸ್ತರಾಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದ ಬಳಿಕ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



