ನ್ಯೂಜ್ ಡೆಸ್ಕ್:ಪ್ರಿಯತಮೆಯೊಂದಿಗೆ ವಿವಾಹಕ್ಕೆ ಅಡ್ಡಿಪಡಿಸಿದ ಎಂದು ಪ್ರಿಯತಮೆಯ ತಂದೆಯ ಮೇಲೆ ಪಾಗಲ್ ಪ್ರೇಮಿ ಗುಂಡು ಹಾರಿಸಿರುವ ಘಟನೆ ನಡೆದಿದೆ.
ಇದರಿಂದ ಪ್ರಿಯತಮೆಯ ತಂದೆ ರೇವಂತ್ ಆನಂದ್ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೈದರಾಬಾದ್ ನಗರದಲ್ಲಿ ನಡೆದಿದೆ.ಘಟನೆಯ ವಿವರಕ್ಕೆ ಹೋದರೆ ಹೈದರಾಬಾದ್ ನಗರದ ಅಂಬರ್ ಪೇಟೆಯ ಭಾಗದ ಬಲ್ವಿಂದರ್ ಸಿಂಗ್ (25) ಹಾಗೂ ಸರೂರ್ನಗರ ವ್ಯಾಪ್ತಿಯ ವೆಂಕಟೇಶ್ವರ ಕಾಲೋನಿಯ ಯುವತಿ (23) ಕೆಲ ದಿನಗಳಿಂದ ಪ್ರಿತಿಸುತ್ತಿದ್ದರು.ವಿಷಯ ತಿಳಿದುಕೊಂಡ ಯುವತಿ ತಂದೆ ಇದನ್ನು ವಿರೋಧಿಸಿ ಯುವತಿಯನ್ನು ಅಮೆರಿಕಕ್ಕೆ ಕಳುಹಿಸಿದ್ದಾರೆ ಇದನ್ನು ತಿಳಿದುಕೊಂಡ ಪ್ರೇಮಿ ಬಲ್ವಿಂದರ್ ಸಿಂಗ್ ಬಾಲಕಿಯ ತಂದೆ ರೇವಂತ್ ಆನಂದ್ ಜತೆ ವಾಗ್ವಾದಕ್ಕೆ ಇಳಿದಿದ್ದಾನೆ. ಮಾತಿಗೆ ಮಾತು ಬೆಳದಿದೆ ತನ್ನೊಂದಿಗೆ ತಂದಿದ್ದ ಏರ್ ಗನ್ ನಿಂದ ಯುವತಿ ತಂದೆ ರೇವಂತ್ ಆನಂದ್ ಮೇಲೆ ಗುಂಡು ಹಾರಿಸಿದ್ದಾನೆ.ಗುಂಡು ರೇವಂತ್ ಆನಂದ್ ಕಣ್ಣಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದಾರೆ. ರೇವಂತ್ ಆನಂದ್ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



